ಇಕರಾ ನಿಂದ ಇಶಿಕಾ ಆಗಿ ಹಿಂದೂ ಯುವಕನನ್ನ ಮಂದಿರದಲ್ಲಿ ಶಾಸ್ರ್ತೋಕ್ತವಾಗಿ ಮದುವೆಯಾಗಿ ಹಿಂದೂ ಧರ್ಮಕ್ಕೆ ಘರ್‌ವಾಪಸಿ ಮಾಡಿದ ಮುಸ್ಲಿಂ ಯುವತಿ: ಶಾಸಕರಿಂದ ಶುಭಾಷಯಗಳ ಸುರಿಮಳೆ

in Uncategorized 10,675 views

ಮಧ್ಯಪ್ರದೇಶದ ಮಂದಸೌರ್‌ನಲ್ಲಿ ಮುಸ್ಲಿಂ ಯುವತಿಯೊಬ್ಬಳು ಹಿಂದೂ ಯುವಕನನ್ನು ಮದುವೆಯಾಗುವ ಮೂಲಕ ಸನಾತನ ಧರ್ಮವನ್ನು ಸ್ವೀಕರಿಸಿದ್ದಾಳೆ. ವಧುವಿನ ಹೆಸರು ಇಕ್ರಾ, ಈಗ ಈಕೆ ಇಶಿಕಾ ಆಗಿ ತನ್ನ ಹೆಸರನ್ನ ಬದಲಿಸಿಕೊಂಡಿದ್ದಾಳೆ. ಶುಕ್ರವಾರ ಇಕ್ರಾ ಗಾಯತ್ರಿ ದೇವಸ್ಥಾನದಲ್ಲಿ ಸಂಪೂರ್ಣ ವಿಧಿವಿಧಾನಗಳ ಮೂಲಕ ಘರ್‌ವಾಪಸಿ ಮಾಡಿದಳು. ಈ ಮದುವೆಯ ನಂತರ ಈಗ ಇಶಿಕಾ ತನ್ನ ಕುಟುಂಬ ಸದಸ್ಯರು ತನಗೆ ಜೀವ ಬೆದರಿಕೆ ಅಥವ ತನ್ನ ಜೀವಕ್ಕೆ ಅಡ್ಡಿಪಡಿಸಬಾರದು ಎಂದು ಒತ್ತಾಯಿಸಿದ್ದಾಳೆ.

Advertisement

ಈ ಮದುವೆಯನ್ನು ಮಾಡಿದ ಚೈತನ್ಯ ಸಿಂಗ್ ರಜಪೂತ್ ಅವರೂ ಮಾತನಾಡಿದ್ದಾರೆ. ವರನ ಹೆಸರು ರಾಹುಲ್ ವರ್ಮಾ, ಅವರು ಮೂಲತಃ ಮಂದಸೌರ್‌ನವರು ಎಂದು ಅವರು ಹೇಳಿದರು. ಚೈತನ್ಯ ಪ್ರಕಾರ, ರಾಹುಲ್ ರಾಜಸ್ಥಾನದ ಜೋಧ್‌ಪುರದಲ್ಲಿ ಕುಟುಂಬದೊಂದಿಗೆ ವಾಸಿಸುತ್ತಿದ್ದಾರೆ ಮತ್ತು ಅಧ್ಯಯನದ ಜೊತೆಗೆ ಡ್ಯಾನ್ಸ್ ಕ್ಲಾಸ್ ಗಳನ್ನೂ ನಡೆಸುತ್ತಿದ್ದಾರೆ. ಯುವತಿ ಇಕ್ರಾ ರಾಹುಲ್ ವರ್ಮಾ ಅವರ ನೆರೆಹೊರೆಯವರು ಎಂದು ಹೇಳಲಾಗಿದ್ದು, ಅಲ್ಲಿಂದ ಇಬ್ಬರ ಪ್ರೀತಿ ಪ್ರಾರಂಭವಾಯಿತು.

ವಧು ಮತ್ತು ವರ ಇಬ್ಬರೂ ವಯಸ್ಕರು ಮತ್ತು ಅವರು ಈಗಾಗಲೇ ಉದಯಪುರ ನ್ಯಾಯಾಲಯದಲ್ಲಿ ಮದುವೆ ಒಪ್ಪಂದ ಮಾಡಿಕೊಂಡಿದ್ದಾರೆ ಎಂದು ಚೈತನ್ಯ ಸಿಂಗ್ ತಿಳಿಸಿದರು. ಈಗ ಇಬ್ಬರೂ ಮಂದಸೌರ್‌ನಲ್ಲಿ ವೈದಿಕ ಪದ್ಧತಿಯಂತೆ ಗಾಯತ್ರಿ ಮಂದಿರದಲ್ಲಿ ಮದುವೆಯಾಗಿದ್ದಾರೆ ಆದರೆ ರಾಜಸ್ಥಾನದ ಪೊಲೀಸರು ಯುವಕನ ಕುಟುಂಬ ಸದಸ್ಯರಿಗೆ ಕಿರುಕುಳ ನೀಡುತ್ತಿದ್ದಾರೆ ಎಂದು ಅವರು ಹೇಳಿದರು.

ಚೈತನ್ಯ ಅವರ ಪ್ರಕಾರ, ಯುವತಿಯ ಕುಟುಂಬವು ರಾಹುಲ್ ವಿರುದ್ಧ ಜೋಧ್‌ಪುರದಲ್ಲಿ ಎಫ್‌ಐಆರ್ ದಾಖಲಿಸಿದೆ ಮತ್ತು ಇದರಿಂದಾಗಿ, ರಾಜಸ್ಥಾನ ಪೊಲೀಸರು ಮೊದಲು ರಾಹುಲ್‌ನ ತಾಯಿ ಮತ್ತು ನಂತರ ರಾಹುಲ್‌ನ ಸಹೋದರನನ್ನು ಪೊಲೀಸ್ ಠಾಣೆಗೆ ಕರೆಸಿ ಕಿರುಕುಳ ನೀಡುತ್ತಿದ್ದಾರೆ ಎಂದು ತಿಳಿಸಿದ್ದಾರೆ.

ಮಂದಸೌರ್ ಬಿಜೆಪಿ ಶಾಸಕ ಯಶಪಾಲ್ ಸಿಸೋದಿಯಾ ಕೂಡ ಇಕ್ರಾ ಮತ್ತು ರಾಹುಲ್ ದಾಂಪತ್ಯಕ್ಕೆ ಶುಭ ಹಾರೈಸಿದ್ದಾರೆ.

ಮೀಡಿಯಾ ರಿಪೋರ್ಟ್ಸ್ ಗಳ ಪ್ರಕಾರ, ಇಶಿಕಾ (ಮೊದಲ ಇಸ್ಲಾಮಿಕ್ ಹೆಸರು ಇಕ್ರಾ) 9 ನೇ ತರಗತಿಯವರೆಗೆ ಓದಿದ್ದು ಈಗ 19 ವರ್ಷ. ಸ್ವಂತ ಇಚ್ಛೆಯಿಂದಲೇ ಈ ಹೆಜ್ಜೆ ಇಟ್ಟಿದ್ದೇನೆ ಎಂದು ಇಶಿಕಾ ಹೇಳಿದ್ದಾಳೆ. ತನ್ನ ಕುಟುಂಬ ಸದಸ್ಯರು ತನ್ನ ಪತಿ ಮತ್ತು ತಮ್ಮ ದಾಂಪತ್ಯಕ್ಕೆ ಯಾವ ತೊಂದರೆಯೂ ಕೊಡಬಾರದು ಎಂದು ಬಯಸುವುದಾಗಿ ಯುವತಿ ಹೇಳಿದ್ದಾಳೆ.

ಇದನ್ನೂ ಓದಿ:

ಹಿಂದೂ ಯುವಕನನ್ನ ಪ್ರೀತಿಸಿದ್ದಕ್ಕೆ ಮನೆಯವರಿಂದ ಕೊ.ಲೆ ಯತ್ನ: ಮನೆ ಬಿಟ್ಟು ಬಂದು ಹಿಂದೂ ಸಂಪ್ರದಾಯದ ಪ್ರಕಾರ ಸಪ್ತಪದಿ ತುಳಿದು ಜೀನತ್ ನಿಂದ ಜ್ಯೋತಿ ಆದ ಮುಸ್ಲಿಂ ಯುವತಿ

ಬರೇಲಿ: ಉತ್ತರ ಪ್ರದೇಶದ ಬರೇಲಿ ಜಿಲ್ಲೆಯಲ್ಲಿ ಅಚ್ಚರಿಯ ಘಟನೆಯೊಂದು ಬೆಳಕಿಗೆ ಬಂದಿದೆ. ಇಲ್ಲಿ ಮುಸ್ಲಿಂ ಯುವತಿಯೊಬ್ಬಳು ತಾನು ಪ್ರೀತಿಸಿದ ಹಿಂದೂ ಯುವಕನ ಜೊತೆ ಜೀವನ ನಡೆಸಲು ತನ್ನ ಮನೆಬಿಟ್ಟು ದೇವಸ್ಥಾನಕ್ಕೆ ಹೋಗಿ ತನ್ನ ಪ್ರಿಯಕರನೊಂದಿಗೆ ಮದುವೆಯಾಗಿದ್ದಾಳೆ ಮದುವೆಯ ನಂತರ ಈಕೆ ತನ್ನ ಹೆಸರನ್ನೂ ಸಹ ಬದಲಾಯಿಸಿಕೊಂಡಿದ್ದಾಳೆ. ಇದಾದ ಬಳಿಕ ಯುವತಿಯ ಕುಟುಂಬಸ್ಥರು ಆಕೆಯ ಜೀವ ತೆಗೆಯಲು ಮುಂದಾಗಿದ್ದಾರೆ. ಇದೀಗ ಈ ಜೋಡಿಗೆ ನಿರಂತರವಾಗಿ ಬೆದರಿಕೆ ಹಾಕಲಾಗುತ್ತಿದೆ.

ಮತ್ತೊಂದೆಡೆ ಕುಟುಂಬಸ್ಥರು ಯುವತಿ ಅಪ್ರಾಪ್ತೆ ಎಂದು ಪ್ರಕರಣ ದಾಖಲಿಸಿದ್ದಾರೆ. ಪೊಲೀಸರು ಇದೀಗ ಯುವಕನ ಕುಟುಂಬದ ಮೇಲೆ ಒತ್ತಡ ಹೇರುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ ಈಗ ಯುವತಿ ತನ್ನ ಆಧಾರ್ ಕಾರ್ಡ್ ತೋರಿಸಿ ವಿಡಿಯೋವೊಂದನ್ನ ಪೋಸ್ಟ್ ಮಾಡಿದ್ದು, ರಕ್ಷಣೆ ನೀಡುವಂತೆ ಉನ್ನತಾಧಿಕಾರಿಗಳಿಗೆ ಮನವಿ ಮಾಡಿದ್ದಾಳೆ. ಯುವಕ ಹಾಗೂ ಯುವತಿ ಒಂದೇ ಗ್ರಾಮದವರಾದ ಕಾರಣ ಗ್ರಾಮದಲ್ಲಿ ಪರಿಸ್ಥಿತಿ ಉದ್ವಿಗ್ನವಾಗಿದೆ.

ಮಾಹಿತಿಯ ಪ್ರಕಾರ, ಮುಸ್ಲಿಂ ಯುವತಿಯೊಬ್ಬಳು ಹಿಂದೂ ಯುವಕನನ್ನು ವಿವಾಹವಾದ ಪ್ರಕರಣವು ಕ್ಯಾಂಟ್ ಪೊಲೀಸ್ ಠಾಣೆ ವ್ಯಾಪ್ತಿಯ ಗ್ರಾಮದಿಂದ ವರದಿಯಾಗಿದೆ. ವಾಸ್ತವವಾಗಿ, ಜೀನತ್ ತನ್ನದೇ ಗ್ರಾಮದ ಹಿಂದೂ ಯುವಕನನ್ನು ಪ್ರೀತಿಸುತ್ತಿದ್ದಳು. ಇದಾದ ನಂತರ ಇಬ್ಬರೂ ದೇವಸ್ಥಾನದಲ್ಲಿ ವಿವಾಹವಾದರು. ಮದುವೆಯ ನಂತರ ಜೀನತ್ ತನ್ನ ಹೆಸರನ್ನು ಜ್ಯೋತಿ ಶರ್ಮಾ ಎಂದು ಬದಲಾಯಿಸಿಕೊಂಡಿದ್ದಾಳೆ. ಈ ವಿಷಯ ಯುವತಿಯ ಮನೆಯವರಿಗೆ ತಿಳಿದಾಗ ಈ ಜೋಡಿಗೆ ಬೆದರಿಕೆ ಹಾಕಿದ್ದಾರೆ.

ಜೀನತ್ ಮನೆಯವರು ಧಮಕಿ ಹಾಗು ಬೆದರಿಸಲಾರಂಭಸಿದಾಗ ಈ ಜೋಡಿ ಓಡಿ ಹೋಗಿದ್ದಾರೆ. ಇದಾದ ನಂತರ, ಯುವತಿಯ ತಾಯಿ ಕ್ಯಾಂಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದು, ತನ್ನ ಮಗಳು ಅಪ್ರಾಪ್ತೆ ಎಂದು ಹೇಳಿದ್ದಾಳೆ. ಸ್ಥಳೀಯ ಪೊಲೀಸರು ಯುವಕನ ಕುಟುಂಬಸ್ಥರ ಮೇಲೆ ಒತ್ತಡ ಹೇರುತ್ತಿದ್ದಾರೆ ಎಂದು ಆರೋಪಿಸಲಾಗಿದೆ. ಇದರಿಂದ ಹತಾಶಳಾದ ಜೀನತ್ ನಿಂದ ಜ್ಯೋತಿ ಶರ್ಮಾ ಆದ ಯುವತಿ ತನ್ನ ಆಧಾರ್ ಕಾರ್ಡ್ ನ ವೀಡಿಯೋವನ್ನು ವೈರಲ್ ಮಾಡಿದ್ದು, ರಕ್ಷಣೆ ನೀಡುವಂತೆ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಮನವಿ ಮಾಡಿದ್ದಾಳೆ. ಯುವಕ ಹಾಗೂ ಯುವತಿ ಒಂದೇ ಗ್ರಾಮದವರಾದ ಕಾರಣ ಗ್ರಾಮದಲ್ಲಿ ಪರಿಸ್ಥಿತಿ ಉದ್ವಿಗ್ನವಾಗಿದೆ.

ಸಂಪೂರ್ಣ ಪ್ರಕರಣದ ವಿವರ

ಕ್ಯಾಂಟ್ ಪೊಲೀಸ್ ಠಾಣೆ ವ್ಯಾಪ್ತಿಯ ಹಳ್ಳಿಯೊಂದರ ನಿವಾಸಿಯಾದ ಜೀನತ್, ತನ್ನ ತಂದೆ 3 ವರ್ಷಗಳ ಹಿಂದೆ ನಿಧನರಾದರು. ಅವಳು 6 ಒಡಹುಟ್ಟಿದವರಲ್ಲಿ ಎರಡನೆಯವಳು. ತಂದೆಯ ಮರಣದ ನಂತರ, ತನ್ನದೇ ಸಮುದಾಯದ ಯುವಕ ಮನೆಗೆ ಭೇಟಿ ನೀಡಲು ಪ್ರಾರಂಭಿಸಿದ. ಯುವಕ ತನ್ನೊಂದಿಗೆ ಅನುಚಿತವಾಗಿ ವರ್ತಿಸುತ್ತಿದ್ದ ಎಂದು ಜೀನತ್ ಹೇಳುತ್ತಾಳೆ. ಈ ಬಗ್ಗೆ ತಾಯಿಗೆ ದೂರು ನೀಡಿದಾಗ ತಾಯಿ ಕೂಡ ಅದೇ ಯುವಕನಿಗೆ ಬೆಂಬಲ ನೀಡಿ ಇವನನ್ನೇ ಮದುವೆಯಾಗು ಎಂದು ಹೇಳಿದ್ದಾಳೆ.

ಈ ಸಂದರ್ಭದಲ್ಲಿ ಜೀನತ್ ಗ್ರಾಮದ ಸಚಿನ್ ಶರ್ಮಾ ಎಂಬ ಯುವಕನನ್ನು ಪ್ರೀತಿಸುತ್ತಿದ್ದಳು. ಸಚಿನ್ ಜೀನತ್‌ಗೆ ಮದುವೆಯ ಪ್ರಸ್ತಾಪ ಮಾಡಿದಾಗ, ಆಕೆಯೂ ಒಪ್ಪಿಕೊಂಡಳು. ಇದಾದ ನಂತರ ಜೀನತ್ ತನ್ನ ದಾಖಲೆಗಳನ್ನೆಲ್ಲಾ (ಆಧಾರ್ ಕಾರ್ಡ್‌ನೊಂದಿಗೆ) ಮನೆಯಿಂದ ಓಡಿಹೋಗಿ ದೇವಸ್ಥಾನದಲ್ಲಿ ಸಚಿನ್ ಶರ್ಮಾ ಜೊತೆ ವಿವಾಹವಾದಳು. ಮದುವೆಯ ನಂತರ ಜೀನತ್ ತನ್ನ ಹೆಸರನ್ನು ಜ್ಯೋತಿ ಶರ್ಮಾ ಎಂದು ಬದಲಾಯಿಸಿಕೊಂಡಳು.

ತಾಯಿ ಹಾಗು ಕುಟುಂಬಸ್ಥರಿಂದ ಬೆದರಿಕೆಯ ಆರೋಪ

ಜೀನತ್‌ನಿಂದ ಜ್ಯೋತಿಯಾದ ಯುವತಿ ಹೇಳುವ ಪ್ರಕಾರ ತನ್ನ ತಾಯಿ ಮತ್ತು ಇತರ ಕುಟುಂಬ ಸದಸ್ಯರು ಸಚಿನ್, ಅವರ ಕುಟುಂಬ ಮತ್ತು ತನಗೂ ಬೆದರಿಕೆ ಹಾಕಿದ್ದಾರೆ ಎಂದು ಹೇಳಿದ್ದಾಳೆ. ಆಕೆ ಮನೆಗೆ ಹಿಂತಿರುಗದಿದ್ದಾಗ ಕ್ಯಾಂಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ನಾನು ಮತಾಂತರಗೊಂಡಿಲ್ಲ ನಮಗೆ ಯಾವ ಧರ್ಮದಲ್ಲಿ ನಂಬಿಕೆ ಇದೆಯೋ ಆ ಧರ್ಮವನ್ನ ಅನುಸರಿಸುತ್ತೇನೆ. ಪೊಲೀಸರು ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿದ್ದಾಳೆ.

ಕೆಲವು ಹಿಂದೂ ಸಂಘಟನೆಗಳಿಗೆ ಈ ವಿಷಯ ತಿಳಿದಾಗ, ಅವರ ಮಧ್ಯಸ್ಥಿಕೆಯಲ್ಲಿ ಪೊಲೀಸರು ಆಧಾರ್ ಕಾರ್ಡ್‌ನೊಂದಿಗೆ ನ್ಯಾಯಾಲಯಕ್ಕೆ ಹಾಜರಾಗಿ ಹೇಳಿಕೆ ದಾಖಲಿಸಿಕೊಳ್ಳುವಂತೆ ಬಾಲಕಿಯನ್ನು ಕೇಳಿದ್ದಾರೆ. ಸದ್ಯ ಈ ಜೋಡಿಯ ವಿಡಿಯೋ ವೈರಲ್ ಆಗಿದ್ದು, ರಕ್ಷಣೆ ನೀಡುವಂತೆ ಪೊಲೀಸ್ ವರಿಷ್ಠರಿಗೆ ಮನವಿ ಮಾಡಿದ್ದಾರೆ.

Advertisement
Share this on...