ಕನಸಲ್ಲಿ ದರ್ಶನ ಕೊಟ್ಟ ಶ್ರೀರಾಮ, ರಾಮಲಲ್ಲಾ ದರ್ಶನ ಪಡೆಯಲು 700 ಕಿ.ಮೀ ಪಾದಯಾತ್ರೆ ಅಯೋಧ್ಯೆಗೆ ಹೊರಟ ಮುಸ್ಲಿಂ ಮಹಿಳೆ

in Uncategorized 3,399 views

ಭಗವಾನ್ ಶ್ರೀರಾಮ (Lord Ram) ಕನಸಿನಲ್ಲಿ ಕಾಣಿಸಿಕೊಂಡಿದ್ದು ಜನವರಿ 22 ರಂದು ಅಯೋಧ್ಯೆ ರಾಮ ಮಂದಿರದ (Ayodhya Ram Mandir) ‘ಪ್ರಾಣ ಪ್ರತಿಷ್ಠೆ’ ಕಾರ್ಯಕ್ರಮಕ್ಕೆ ಹಾಜರಾಗುವಂತೆ ಸೂಚಿಸಿದ್ದಾನೆ ಎಂದಿರುವ ಮುಸ್ಲಿಂ ಮಹಿಳೆಯೊಬ್ಬರು (Muslim Women) ಪದಾಯಾತ್ರೆ ಹೊರಟಿದ್ದಾರೆ. ಶಬ್ನಮ್ ಖಾನ್ (Shabnam Khan) ಸುಮಾರು 700 ಕಿಲೋಮೀಟರ್ ದೂರವನ್ನು ಕಾಲ್ನಡಿಗೆಯಲ್ಲಿ ಕ್ರಮಿಸುತ್ತಿದ್ದು, ಈಗಾಗಲೇ 400 ಕಿಲೋಮೀಟರ್ ಪ್ರಯಾಣ ಮಾಡಿದ್ದಾರೆ.

Advertisement

ಮುಸ್ಲಿಂ ಆಗಿದ್ದರೂ ಭಗವಾನ್ ರಾಮನ ಮೇಲಿನ ಅಚಲ ಭಕ್ತಿಯಿಂದಾಗಿ ಈ ಪ್ರಯಾಣ ಸಾಧ್ಯವಾಗುತ್ತಿದೆ ಎಂದು ಅವರು ಹೇಳಿಕೊಂಡಿದ್ದಾರೆ. ಸದ್ಯ ಉತ್ತರ ಪ್ರದೇಶದ ಹರ್ದೋಯಿ ತಲುಪಿರುವ ಶಬ್ನಮ್, ನನ್ನ ಕನಸಿನಲ್ಲಿ ಭಗವಾನ್ ರಾಮ ಕಾಣಿಸಿಕೊಂಡ. ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣವಾಗದಿದ್ದಾಗ ಅದಕ್ಕಾಗಿ ಹೋರಾಟ ಮಾಡುತ್ತಿದ್ದೆ. ಈಗ ಮಂದಿರ ಸಿದ್ಧವಾಗಿರುವಾಗ ನೀನೇಕೆ ಬರುತ್ತಿಲ್ಲ ಎಂದು ರಾಮ ಪ್ರಶ್ನಿಸಿದ್ದ. ಇದರ ನಂತರ ನಾನು ಅಯೋಧ್ಯೆಗೆ ಪ್ರಯಾಣ ಬೆಳೆಸಿದೆ ಎಂದು ತಿಳಿಸಿದ್ದಾರೆ.

ಮಾನವ ಹಕ್ಕುಗಳ ಹೋರಾಟಗಾರ್ತಿಯಾಗಿರುವ ಶಬ್ನಮ್ ಜನವರಿ 3 ರಂದು ಪೂರ್ವ ದೆಹಲಿಯ ಮಯೂರ್ ವಿಹಾರ್‌ನಿಂದ ಪ್ರಯಾಣವನ್ನು ಪ್ರಾರಂಭಿಸಿದರು. ಶಬ್ನಮ್ ಸೋಮವಾರ ಉತ್ತರ ಪ್ರದೇಶದ ಹರ್ದೋಯಿ ತಲುಪಿದ್ದು, ಅಲ್ಲಿ ಆಕೆಗೆ ಭವ್ಯ ಸ್ವಾಗತ ದೊರೆತಿದೆ.

ಜನವರಿ 22 ರಂದು ಅಯೋಧ್ಯೆಯ ರಾಮ ಮಂದಿರದ ಪ್ರಾಣ ಪ್ರತಿಷ್ಠೆ ಸಮಾರಂಭದಲ್ಲಿ ಪಾಲ್ಗೊಳ್ಳಲು ಅಯೋಧ್ಯೆಗೆ ಹೋಗುತ್ತಿದ್ದೇನೆ ಎಂದು ಶಬ್ನಮ್ ಹೇಳಿದ್ದಾರೆ. ಸುದೀರ್ಘ ಯಾತ್ರೆಯ ಆಯಾಸವನ್ನು ಭಗವಾನ್ ರಾಮನ ಮೇಲಿನ ಭಕ್ತಿಯು ಮರೆಯಿಸಿದೆ ಎಂದು ಅವರು ಹೇಳಿದ್ದಾರೆ.

ಶಬ್ನಮ್ ಅವರಂತೆ, ಹಲವಾರು ರಾಮ ಭಕ್ತರು ದೇಶದ ವಿವಿಧ ಭಾಗಗಳಿಂದ ಅಯೋಧ್ಯೆಗೆ ಕಾಲ್ನಡಿಗೆಯಲ್ಲಿ ರಾಮ ಮಂದಿರದ ಪ್ರಾಣ ಪ್ರತಿಷ್ಠೆ ಸಮಾರಂಭಕ್ಕೆ ತೆರಳುತ್ತಿದ್ದಾರೆ.

ಅಯೋಧ್ಯೆಯಲ್ಲಿ ಭರದಿಂದ ಸಾಗುತ್ತಿರುವ ಸಿದ್ಧತೆ

ಈ ಮಧ್ಯೆ, ಜನವರಿ 22ರ ಪ್ರಾಣ ಪ್ರತಿಷ್ಠೆ ಕಾರ್ಯಕ್ರಮಕ್ಕೆ ಅಯೋಧ್ಯೆಯಲ್ಲಿ ಸಿದ್ಧತೆಗಳು ಭರದಿಂದ ಸಾಗಿವೆ. ಒಂದೆಡೆ, ರಾಮಲಲ್ಲಾನ ಮೂರ್ತಿಯನ್ನು ಟ್ರಸ್ಟ್ ಅಂತಿಮಗೊಳಿಸಿದ್ದು, ಸೋಮವಾರವಷ್ಟೇ ಅಧಿಕೃತ ಘೋಷಣೆ ಮಾಡಿದೆ. ಈ ಮಧ್ಯೆ, ರಾಮಲಲ್ಲಾನ ಗರ್ಭ ಗೃಹದ ಚಿನ್ನದ ಬಾಗಿಲುಗಳ ಸ್ಥಾಪನೆ ಕಾರ್ಯ ಪೂರ್ಣಗೊಂಡಿದೆ. ಭಗವಾನ್ ಶ್ರೀ ರಾಮಲಲ್ಲಾ ಅವರ ಗರ್ಭಗೃಹದ ಚಿನ್ನದ ಬಾಗಿಲುಗಳ ಸ್ಥಾಪನೆಯೊಂದಿಗೆ, ನೆಲ ಮಹಡಿಯ ಎಲ್ಲಾ ಚಿನ್ನದ ಬಾಗಿಲುಗಳ ಸ್ಥಾಪನೆಯ ಕಾರ್ಯವು ಪೂರ್ಣಗೊಂಡಿದೆ ಎಂದು ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ತಿಳಿಸಿದೆ.

Advertisement
Share this on...