ಕೃಷ್ಣಪಟ್ಟಣಂ ನಲ್ಲಿ ಮಾರಕ ಕೊರೋನಾಗೆ ಆಯುರ್ವೇದಿಕ್ ಔಷಧಿ: ಈ ಬಗ್ಗೆ ಅಚ್ಚರಿಯ ಆದೇಶ ಹೊರಡಿಸಿದ ICMR, ಮುಗಿಬಿದ್ದ ಸಾವಿರಾರು ಜನ

in Helath-Arogya/Kannada News/News 1,449 views

ನೆಲ್ಲೂರು, ಆಂಧ್ರಪ್ರದೇಶ: ಕೋವಿಡ್ 19 ಸೋಂಕು ಗುಣಪಡಿಸಲು ಇಡೀ ಜಗತ್ತು ಆಧುನಿಕ ಔಷಧಿಯ ಮೂಲಕ ಪರಿಹಾರ ಕಂಡುಹಿಡಿಯಲು ಹೆಣಗಾಡುತ್ತಿದ್ದರೆ, ಮತ್ತೊಂದೆಡೆ ಆಂಧ್ರಪ್ರದೇಶದ ನೆಲ್ಲೂರು ಜಿಲ್ಲೆಯ ಸುತ್ತಮುತ್ತಲಿನ ಸಾವಿರಾರು ಜನರು ಆಯುರ್ವೇದ ಔಷಧಕ್ಕೆ ಆದ್ಯತೆ ನೀಡಿದ್ದು,  50 ಸಾವಿರಕ್ಕೂ ಅಧಿಕ ಜನರು ಔಷಧಕ್ಕಾಗಿ ಮುಗಿಬೀಳುತ್ತಿರುವ  ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವರದಿಯಾಗಿದೆ.

ಯಾವುದೇ ಶುಲ್ಕ ಇಲ್ಲದೇ ಉಚಿತವಾಗಿ ಕೋವಿಡ್ ಗುಣಪಡಿಸುವ ಔಷಧ ನೀಡಲಾಗುತ್ತದೆ ಎಂಬ ಭರವಸೆ ಹಿನ್ನೆಲೆಯಲ್ಲಿ ನೆಲ್ಲೂರ್ ನ ಮುತ್ತುಕೂರ್ ಮಂಡಲದ ಕೃಷ್ಣಪಟ್ಟಣಂ ಗ್ರಾಮದಲ್ಲಿ ಆಯುರ್ವೇದ ಚಿಕಿತ್ಸೆ ಪಡೆಯಲು ಸಾವಿರಾರು ಮಂದಿ ಸೇರುತ್ತಿದ್ದಾರೆ ಎಂದು ವರದಿ ವಿವರಿಸಿದೆ.

Advertisement

ಕೋವಿಡ್ ಗುಣಪಡಿಸಲು ಉಚಿತ ಆಯುರ್ವೇದ ಔಷಧ ಸಿಗುತ್ತಿದೆ ಎಂಬ ವಿಷಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆಯೇ ಜಿಲ್ಲಾಡಳಿತ ಸೂಕ್ತ ಕ್ರಮ ಜರಗಿಸಲು ಮುಂದಾಗಿತ್ತು. ಅದರಂತೆ ಅಧಿಕಾರಿಗಳ ತಂಡವನ್ನು ಗ್ರಾಮಕ್ಕೆ ಕಳುಹಿಸಿಕೊಟ್ಟಿತ್ತು. ಆದರೆ ಆಯುರ್ವೇದ ಚಿಕಿತ್ಸೆ ಬಗ್ಗೆ ಜನರು ಪಾಸಿಟಿವ್ ಅಭಿಪ್ರಾಯ ವ್ಯಕ್ತಪಡಿಸಿದ್ದರಿಂದ ಅಧಿಕಾರಿಗಳು ವಾಪಸ್ ಆಗಿದ್ದು, ಈ ಬಗ್ಗೆ ಜಿಲ್ಲಾಧಿಕಾರಿಗೆ ಶೀಘ್ರವಾಗಿ ಪೂರ್ಣ ವರದಿ ಸಲ್ಲಿಸುವುದಾಗಿ ತಿಳಿಸಿದ್ದಾರೆ.

ಹೌದು ಆಂಧ್ರಪ್ರದೇಶದ ನೆಲ್ಲೂರು ಜಿಲ್ಲೆಯ ಕೃಷ್ಣಪಟ್ಟಣಂನಲ್ಲಿ ಆಯುರ್ವೇದ ವೈದ್ಯರು ಕೊರೊನಾಗೆ ನೀಡುತ್ತಿರುವ  ಔಷಧಿಯ ಪರಿಣಾಮಕಾರಿ ಬಗ್ಗೆ ವೈಜ್ಞಾನಿಕ ಅಧ್ಯಯನ ನಡೆಸುವಂತೆ ಸಿಎಂ ವೈ.ಎಸ್​ ಜಗನ್ ಮೋಹನ್ ರೆಡ್ಡಿ ಐಸಿಎಂಆರ್​ಗೆ (ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ) ಆದೇಶ ನೀಡಿದ್ದಾರೆ.

ಇಲ್ಲಿನ ಆಯುರ್ವೇದ ವೈದ್ಯ ಬಿ.ಆನಂದಯ್ಯ ಅನ್ನೋರು ಕೊರೊನಾ ಚಿಕಿತ್ಸೆಗಾಗಿ ಕಳೆದ ಏಪ್ರಿಲ್ 1 ರಿಂದ ಔಷಧಿ ನೀಡುತ್ತಿದ್ದಾರೆ. ಇದನ್ನ ಪಡೆಯಲು ಜನರು ಮುಗಿ ಬೀಳುತ್ತಿದ್ದಾರೆ. ನಿನ್ನೆ ಕೊರೊನಾ ಮಾರ್ಗಸೂಚಿಯನ್ನ ಮರೆತು ಸುಮಾರು 10 ಸಾವಿರಕ್ಕೂ ಹೆಚ್ಚು ಮಂದಿ ಈ ಔಷಧಿಯನ್ನ ಪಡೆಯಲು ವೈದ್ಯರ ನಿವಾಸದ ಮುಂದೆ ಜಮಾಯಿಸಿದ್ದರು.

ಇಲ್ಲಿನ ಆಯುರ್ವೇದ ವೈದ್ಯ ಬಿ.ಆನಂದಯ್ಯ ಅನ್ನೋರು ಕೊರೊನಾ ಚಿಕಿತ್ಸೆಗಾಗಿ ಕಳೆದ ಏಪ್ರಿಲ್ 1 ರಿಂದ ಔಷಧಿ ನೀಡುತ್ತಿದ್ದಾರೆ. ಇದನ್ನ ಪಡೆಯಲು ಜನರು ಮುಗಿ ಬೀಳುತ್ತಿದ್ದಾರೆ. ನಿನ್ನೆ ಕೊರೊನಾ ಮಾರ್ಗಸೂಚಿಯನ್ನ ಮರೆತು ಸುಮಾರು 10 ಸಾವಿರಕ್ಕೂ ಹೆಚ್ಚು ಮಂದಿ ಈ ಔಷಧಿಯನ್ನ ಪಡೆಯಲು ವೈದ್ಯರ ನಿವಾಸದ ಮುಂದೆ ಜಮಾಯಿಸಿದ್ದರು.

ಇದೀಗ ಈ ಔಷಧಿ ಕೊರೊನಾ ವಿರುದ್ಧ ಹೋರಾಡುತ್ತಿದೆ ಅಂತಾ ಹೇಳಲಾಗುತ್ತಿದ್ದು, ಈ ಸಂಬಂಧ ಆಂಧ್ರಪ್ರದೇಶ ಸರ್ಕಾರ ವೈಜ್ಞಾನಿಕ ವರದಿಗೆ ಶಿಫಾರಸು ಮಾಡಿದೆ. ಕೃಷ್ಣಪಟ್ಟಣಂ ಕೊರೊನಾ ಔಷಧಿಯ ಕುರಿತು ಅಧ್ಯಯನ ನಡೆಸಲು ತಜ್ಞರ ತಂಡವನ್ನ ಕಳುಹಿಸಲು ನಿರ್ಧರಿಸಲಾಗಿದೆ. ಈ ತಜ್ಞರ ತಂಡ ಸ್ಥಳಕ್ಕೆ ಆಗಮಿಸಿ ಅಧ್ಯಯನ ನಡೆಸಲಿದೆ. ಇನ್ನು ಸಿಎಂ ಜಗನ್ ಮೋಹನ್ ರೆಡ್ಡಿ ಅವರು ನಿನ್ನೆ ಉನ್ನತಾಧಿಕಾರಿಗಳ ಸಭೆ ನಡೆಸಿ ಈ ನಿರ್ಧಾರಕ್ಕೆ ಬಂದಿದ್ದಾರೆ ಎಂದು ತಿಳಿದುಬಂದಿದೆ.

ಈ ಬಗ್ಗೆ ಐಎಸ್​​ಆರ್​ಪಿ ಶಾಸಕ ಕೆ ಗೋವರ್ಧನ್ ರೆಡ್ಡಿ ನೀಡಿರುವ ಮಾಹಿತಿ ಪ್ರಕಾರ.. ಈ ಔಷಧಿ ಮಿರಾಕಲ್ ಕ್ಯೂರ್​ ( ಆಗಿದೆ. ಈ ಔಷಧಿಯನ್ನ ಪಡೆದ ಹಲವು ಕೊರೊನಾ ರೋಗಿಗಳು ಗುಣಮುಖರಾಗಿದ್ದಾರೆ. ಬೊನಿಗಿ ಆನಂದಯ್ಯ ಅವರ ಮೆಡಿಸಿನಲ್ ಕೆಲಸ ಮಾಡುತ್ತಿದೆ. ಕೊರೊನಾ ರೋಗಿಗಳನ್ನ ಗುಣಪಡಿಸಲು ಐದು ಔಷಧಿಗಳ ಕಾಂಬಿನೇಷನ್ ಕಂಡು ಹಿಡಿದಿದ್ದಾರೆ. ಅದಕ್ಕಾಗಿಯೇ ಕೃಷ್ಣಪಟ್ಟಣಂಗೆ ಅದೆಷ್ಟೋ ಮಂದಿ ಬರುತ್ತಿದ್ದಾರೆ ಅಂತಾ ತಿಳಿಸಿದ್ದಾರೆ.

ಇನ್ನು, ಆಂಧ್ರಪ್ರದೇಶ ರಾಜ್ಯ ಆಯುಷ್ ಇಲಾಖೆಯ ಆಯುರ್ವೇ ತಜ್ಞ ವೈದ್ಯರ ತಂಡ ಈಗಾಲೇ ಕೃಷ್ಣಪಟ್ಟಣಂಗೆ ಭೇಟಿ ನೀಡಿ ಔಷಧಿ ಬಗ್ಗೆ ಮಾಹಿತಿ ಪಡೆದುಕೊಂಡಿದೆ. ಅಲ್ಲದೇ ಸರ್ಕಾರಕ್ಕೂ ವರದಿಯನ್ನ ಸಲ್ಲಿಸಿದೆ. ಔಷಧಿಯ ತಯಾರಿಕೆ, ಚಿಕಿತ್ಸೆಯ ಪ್ರಕ್ರಿಯೆ ಹಾಗೂ ಔಷಧಿ ಪಡೆದುಕೊಂಡ ನಂತರದ ಪರಿಣಾಮಗಳ ಬಗ್ಗೆ ವೈಜ್ಞಾನಿಕ ಅಧ್ಯಯನದ ಅಗತ್ಯ ಇದೆ ಅಂತಾ ಆಯುಷ್ ಇಲಾಖೆ ತಿಳಿಸಿತ್ತು. ಅದರಂತೆ ಆಂಧ್ರ ಸರ್ಕಾರ ಇದೀಗ ಐಸಿಎಂಆರ್​ಗೆ ಅಧ್ಯಯನ ನಡೆಸಲು ಸೂಚನೆ ನೀಡಿದೆ.

ಬೋಗಿನಿ ಆನಂದಯ್ಯ ಉಚಿತ ಆಯುರ್ವೇದ ಚಿಕಿತ್ಸೆ ನೀಡುವುದಾಗಿ ತಿಳಿಸಿದ್ದು, ಸಂಘಟಕರ ಹೇಳಿಕೆ ಪ್ರಕಾರ ದಿನದಿಂದ ದಿನಕ್ಕೆ ಔಷಧ ತೆಗೆದುಕೊಳ್ಳುವವರ ಸಂಖ್ಯೆ ಹೆಚ್ಚಳವಾಗುತ್ತಿದೆ. ಈಗಾಗಲೇ 20ಸಾವಿರಕ್ಕೂ ಅಧಿಕ ಮಂದಿಗೆ ಔಷಧ ಹಂಚಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

ನಾವು ಔಷಧಕ್ಕಾಗಿ ಗಿಡಮೂಲಿಕೆಯನ್ನು ಉಪಯೋಗಿಸುತ್ತಿದ್ದೇವೆ. ಇದು ಕೋವಿಡ್ ಮುಂಜಾಗ್ರತಾ ಹಾಗೂ ಗುಣಪಡಿಸಲು ಉಪಯೋಗವಾಗುತ್ತಿದೆ. ಕಳೆದ ಒಂದು ತಿಂಗಳಿನಿಂದ ಆಯುರ್ವೇದ ಔಷಧ ನೀಡುತ್ತಿದ್ದೇನೆ. ನನ್ನ ಮಗ ಆರಂಭಿಕವಾಗಿ ಒಂದು ಲಕ್ಷ ರೂ. ನೀಡಿದ್ದ, ಇದೀ ಗ ಗಿಡಮೂಲಿಕೆ ಹಾಗೂ ಇತರ ಅಗತ್ಯವಸ್ತುಗಳಿಗಾಗಿ ಜನರು ದೇಣಿಗೆ ನೀಡುತ್ತಿದ್ದಾರೆ ಎಂದು ಆನಂದಯ್ಯ ತಿಳಿಸಿದ್ದಾರೆ.

ಆಯುರ್ವೇದ ಔಷಧ ನೀಡುತ್ತಿದ್ದ ಸ್ಥಳಕ್ಕೆ ಜಿಲ್ಲಾ ಪಂಚಾಯತ್ ಅಧಿಕಾರಿ ಧನಲಕ್ಷ್ಮೀ, ಆರ್ ಡಿಒ ಸುವರ್ಣಮ್ಮ, ನೆಲ್ಲೂರ್ ಗ್ರಾಮೀಣ ಡಿಎಸ್ ಪಿ ವೈ.ಹರನಾಥ್ ರೆಡ್ಡಿ ಮತ್ತು ಆಯುಷ್ ವೈದ್ಯರು ಭೇಟಿ ನೀಡಿದ್ದರು. ಅಲ್ಲದೇ ಸ್ಯಾಂಪಲ್ಸ್ ಅನ್ನು ಪಡೆದುಕೊಂಡಿದ್ದರು.

ಔಷಧಕ್ಕೆ ಉಪಯೋಗಿಸುವ ಗಿಡಮೂಲಿಕೆಯ ಮಾಹಿತಿ ಸಂಗ್ರಹಿಸಲಾಗಿದೆ. ಈ ಕುರಿತ ವರದಿಯನ್ನು ಜಿಲ್ಲಾಧಿಕಾರಿಗೆ ನೀಡಲಾಗುವುದು ಎಂದು ಆಯುಷ್ ವೈದ್ಯರು ತಿಳಿಸಿದ್ದಾರೆ. ಜನರು ಔಷಧ ತೆಗೆದುಕೊಳ್ಳುವಾಗ ಕೋವಿಡ್ ನಿಯಮ ಪಾಲಿಸುವಂತೆ ಧನಲಕ್ಷ್ಮಿ ತಿಳಿಸಿದ್ದಾರೆ.

Advertisement
Share this on...