ದಶಕಗಳ ಕನಸು ಅಂತೂ ನನಸಾಗುವ ಸಮಯ ಬಂದೇ ಬಿಟ್ಟಿದೆ. ಅಂತೂ ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣವಾಗಿದೆ. ಶ್ರೀರಾಮನ ವಿಗ್ರಹ ಪ್ರತಿಷ್ಠಾಪನೆಯಾಗುವವರೆಗೂ ಚಪ್ಪಲಿ ಹಾಕುವುದಿಲ್ಲ, ಮಾತನಾಡುವುದಿಲ್ಲ ಎಂದು ಮೌನ ಧೀಕ್ಷೆ ತೊಟ್ಟಿದ್ದ ಮೌನಿ ಬಾಬಾ ಜನವರಿ 22ರಂದು ಮೌನ ಮುರಿದು ರಾಮ ಎನ್ನಲಿದ್ದಾರೆ.
ರಾಮ ಮಂದಿರ ನಿರ್ಮಾಣ ಕುರಿತು ದೇಶದ ಜನತೆ ಸಂತಸಪಟ್ಟಿದೆ. ಪ್ರತಿಯೊಬ್ಬರೂ ತಮ್ಮ ಮನೆಯ ದೇವರ ಮಂಟಪದಲ್ಲಿ ರಾಮನಿರಲಿ ಎಂದು ಬಯಸುತ್ತಾರೆ. ರಾಮಲಲ್ಲಾನ ದರ್ಶನಕ್ಕೆ ದೇಶದ ಮೂಲೆ ಮೂಲೆಗಳಿಂದ ಭಕ್ತರು ಆಗಮಿಸುತ್ತಿದ್ದಾರೆ. ಕೆಲವರು ಸಾವಿರಾರು ಮೈಲಿಗಳಿಂದ ಕಾಲ್ನಡಿಗೆಯಲ್ಲಿ ಬಂದಿದ್ದಾರೆ. ರಾಮಲಲ್ಲಾನ ಪ್ರತಿಷ್ಠಾಪನೆಗೆ ಎಲ್ಲರೂ ಕಾತುರದಿಂದ ಕಾಯುತ್ತಿದ್ದಾರೆ.
ಯಾರು ಈ ಮೌನಿ ಬಾಬಾ?
ರಾಮಮಂದಿರ ನಿರ್ಮಾಣಕ್ಕಾಗಿ ಋಷಿಮುನಿಗಳು ಮತ್ತು ಸಂತರು ಅನೇಕ ತ್ಯಾಗಗಳನ್ನು ಮಾಡಿದ್ದಾರೆ. ಆ ಸಂತರಲ್ಲಿ ಮಧ್ಯಪ್ರದೇಶದ ಮೌನಿ ಬಾಬಾ ಅವರ ಹೆಸರೂ ಸೇರಿದೆ. ಮೋಹನ್ ಗೋಪಾಲ್ ದಾಸ್ ಎಂದು ಕರೆಯಲ್ಪಡುವ ಮೌನಿ ಬಾಬಾ ಅಯೋಧ್ಯೆಯಲ್ಲಿ ಬಾಬರಿ ಮಸೀದಿಯನ್ನು ತೆಗೆದುಹಾಕುವ ಕಾರ್ಮಿಕರೊಂದಿಗೆ ಇದ್ದರು.
ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣವಾಗುವವರೆಗೆ ಮತ್ತು ರಾಮಲಲ್ಲಾ ಸಿಂಹಾಸನದಲ್ಲಿ ಕುಳಿತುಕೊಳ್ಳುವವರೆಗೂ ಮೌನವಾಗಿರುತ್ತೇನೆ ಎಂದು ಹೇಳಿದ್ದರು. ರಾಮಮಂದಿರ ನಿರ್ಮಾಣದ ನಂತರವೇ ಅವರು ಮೌನ ಮುರಿಯುತ್ತಾರೆ. ಜನವರಿ 22 ರಂದು ರಾಮಮಂದಿರದ ಉದ್ಘಾಟನಾ ಸಮಾರಂಭ ನಡೆಯಲಿದೆ.
ಪ್ರಾಣ ಪ್ರತಿಷ್ಠೆಯ ನಂತರ, ಮೌನಿ ಬಾಬಾ ಭಗವಂತ ರಾಮನ ಹೆಸರನ್ನು ತೆಗೆದುಕೊಳ್ಳುವ ಮೂಲಕ ತಮ್ಮ ಮೌನವನ್ನು ಮುರಿಯುತ್ತಾರೆ.
ರಾಮಮಂದಿರದ ಪ್ರತಿಷ್ಠಾಪನೆಯ ಆಹ್ವಾನಕ್ಕಾಗಿ ಮೌನಿ ಬಾಬಾ ಕಾಯುತ್ತಿದ್ದಾರೆ. ಉದ್ಘಾಟನಾ ಸಮಾರಂಭಕ್ಕೆ ಪ್ರಧಾನಿ ಮೋದಿ ಆಹ್ವಾನ ಕಳುಹಿಸಬಹುದು ಎಂದು ನಂಬಿದ್ದಾರೆ.
ಪ್ರಾಣ ಪ್ರತಿಷ್ಠಾನಕ್ಕೆ ಆಮಂತ್ರಣ ಸಿಗುತ್ತದೆ ಎಂಬ ನಿರೀಕ್ಷೆಯಲ್ಲಿ ಪ್ರತಿದಿನ ಎಸ್ಪಿ ಕಚೇರಿ ಮತ್ತು ಡಿಎಂ ಕಚೇರಿಗೆ ಭೇಟಿ ನೀಡುತ್ತಾರೆ. ಈ ಸಂಬಂಧ ಡಿಎಂ ಮತ್ತು ಎಸ್ಪಿಗೂ ಪತ್ರ ಬರೆದಿದ್ದಾರೆ. ಮೌನಿ ಬಾಬಾ ಸ್ಲೇಟಿನಲ್ಲಿ ಬರೆಯುವ ಮೂಲಕ ಎಲ್ಲಾ ಪ್ರಶ್ನೆಗಳಿಗೆ ಉತ್ತರಗಳನ್ನು ಹೇಳುತ್ತಾರೆ.