ಗದಗ:
ಅದರಂತೆ, ಅಫ್ಗಾನ್‌ನಲ್ಲಿದ್ದ ಭಾರತದ 200 ಯೋಧರನ್ನು ಆ.17ರಂದು ಏರ್‌ಲಿಫ್ಟ್ ಮಾಡಲಾಗಿದ್ದು, ಅದರಲ್ಲಿ ಗದಗ ಜಿಲ್ಲೆಯ ಯೋಧ ರವಿ ನೀಲಗಾರ ಕೂಡ ಇದ್ದರು. ಆ ತಂ ಕ ದ ನೆಲದಿಂದ ಸುರಕ್ಷಿತ ತಾಯ್ನಾಡಿಗೆ ಮರಳಿದ ಸುದ್ದಿಯನ್ನು ಕೇಳಿ ಯೋಧನ ಕುಟುಂಬದವರು ಸಂತಸ ವ್ಯಕ್ತಪಡಿಸಿದ್ದಾರೆ.
12 ವರ್ಷಗಳಿಂದ ಐಟಿಬಿಪಿಯಲ್ಲಿ ಯೋಧರಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ರವಿ, ಎರಡು ವರ್ಷಗಳಿಂದ ಅಫ್ಗಾನಿಸ್ತಾನದ ಕಾಬೂಲ್‌ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ಕಾಬೂಲ್ ತಾಲಿಬಾನ್‌ಗಳ ವಶವಾಗುತ್ತಿದ್ದಂತೆ 200 ಯೋಧರು ಅಲ್ಲಿಂದ ಭಾರತದತ್ತ ಮರಳಲು ವಿಮಾನ ಏರಲು ಮುಂದಾಗಿದ್ದಾರೆ. ಈ ವೇಳೆ ಯೋಧರ ಮೇ ಲೆ ತಾಲಿಬಾನಿಗಳು ದಾ ಳಿ ಗೆ ಯತ್ನಿಸಿದ್ದಾರೆ. ಯೋಧ ರವಿ ಸೇರಿದಂತೆ ಕೆಲವರ ಬ್ಯಾಗ್ ಕ ಸಿ ದುಕೊಂಡಿದ್ದಾರೆ ಎನ್ನಲಾಗಿದೆ.
ಯೋಧ ರವಿ ನೀಲಗಾರ ಅಫ್ಗಾನಿಸ್ತಾನದಿಂದ ದೆಹಲಿಗೆ ಬಂದಿಳಿದ ಮಾಹಿತಿ ಲಭಿಸುತ್ತಿದ್ದಂತೆ ಯೋಧನ ಸ್ವಗ್ರಾಮ ಬಳಗಾನೂರಿನಲ್ಲಿ ಸಂಭ್ರಮ ಮನೆ ಮಾಡಿದೆ.
ಗದಗ ಜಿಲ್ಲೆಯ ಬಳಗಾನೂರು ಗ್ರಾಮದ ರವಿ ನೀಲಗಾರ ಸಹ ಅಫ್ಘನ್ ದೇಶದಿಂದ ತಾಯ್ನಾಡಿಗೆ ಮರಳಿ ಬಂದಿದ್ದಾರೆ. ಹನ್ನೆರಡು ವರ್ಷಗಳ ಹಿಂದೆಯೇ ITBP (ಇಂಡೋ ಟೆಬೆಟಿಯನ್ ಬಾರ್ಡರ್ ಪೊಲೀಸ್) ಪಡೆಗೆ ಆಯ್ಕೆಯಾಗಿರೋ ರವಿ, ಎರಡು ವರ್ಷಗಳಿಂದ ಅಫ್ಘನ್ ಗಡಿಯಲ್ಲಿ ಕಮಾಂಡರ್ ಆಗಿ ಸೇವೆ ಸಲ್ಲಿಸುತ್ತಿದ್ರು. ಆದ್ರೆ ತಾಲಿಬಾನಿಗಳ ಅ ಟ್ಟ ಹಾ ಸ ಶುರುವಾಗಿದ್ದೇ ತಡ ಭಾರತೀಯ ಸೈನ್ಯವನ್ನ ಭಾರತ ಸರ್ಕಾರ ತವರಿಗೆ ಕರೆಸಿಕೊಂಡಿದೆ. ಹೀಗೆ ಯೋಧ ರವಿ ನೀಲಗಾರ ಸಹ ತವರಿಗೆ ಬಂದಿದ್ದು, ತಮ್ಮ ಕುಟುಂಬದ ಜೀವವೊಂದು ಜೀ ವ ನ್ಮ ರ ಣ ದ ಹೋ ರಾ ಟ ನಡೆಸಿ ಬ ದು ಕಿ ಬಂದಿರೋ ಕಥೆಯನ್ನು ಅವರ ಕುಟುಂಬದ ಸದಸ್ಯರು ಕ ಣ್ಣೀ ರು ಹಾಕುತ್ತಾ ಹಂಚಿಕೊಂಡಿದ್ದಾರೆ.
ಈ ವೇಳೆ ಗದಗ ಸೈನಿಕ ರವಿ ನೀಲಗಾರ ಅನುಭವಿಸಿದ ಕ ಷ್ಟ ಅಷ್ಟಿಷ್ಟಲ್ಲ. ಯೋಧರ ಹತ್ತಿರವಿದ್ದ ಎಲ್ಲ ಲಗೇಜ್ ಗಳನ್ನೂ ತಾಲಿಬಾನಿಗಳು ಕ ಸಿ ದು ಕೊಂಡಿದ್ದಾರೆ. ಅಲ್ಲದೇ ಯೋಧ ರವಿ ತನ್ನ ಮನೆಗೆಂದು ಖರೀದಿಸಿದ್ದ ಹೊಸ ಟಿವಿಯನ್ನೂ ಸಹ ತಾಲಿಬಾನಿ ಉ ಗ್ರ ರು ಕ ಸಿ ದು ಕೊಂಡು ವಿ ಕೃ ತಿ ಮೆ ರೆ ದಿ ದ್ದಾರೆ. ಹೀಗಾಗಿ ಜೀ ವ ಉಳಿದ್ರೆ ಸಾಕು ಅಂತ ಕೈಯಲ್ಲಿದ್ದ ಎಲ್ಲವನ್ನೂ ತಾಲಿಬಾನಿಗಳಿಗೆ ಒಪ್ಪಿಸಿ ಯೋಧ ಫ್ಲೈಟ್ ಹತ್ತಿದರು. ಈ ಭ ಯಾ ನ ಕ ಹಾಗೂ ಭೀ ಕ ರ ಘಟನೆಯನ್ನ ಯೋಧ ರವಿ ತಮ್ಮ ಕುಟುಂಬ ಸದಸ್ಯರ ಎದುರು ಎಳೆ ಎಳೆಯಾಗಿ ಬಿಚ್ಚಿಟ್ಟಿದ್ದಾರೆ. ನಮ್ಮ ಊರಿನ ಮಗ ಸೇಫ್ ಆಗಿ ವಾಪಾಸ್ ಬಂದಿರೋದಕ್ಕೆ ನಮಗೆ ಜೀವ ಮರಳಿ ಬಂದಂತಾಗಿದೆ ಎನ್ನುತ್ತಿದ್ದಾರೆ ಯೋಧನ ಸಂಬಂಧಿಕರು.
‘ಯೋಧ ರವಿ ಅವರ ಮಡದಿ ಮಗನ ವಿದ್ಯಾಭ್ಯಾಸಕ್ಕಾಗಿ ರವಿ ಅವರ ತಾಯಿಯೊಂದಿಗೆ ಹುಲಕೋಟಿಯಲ್ಲಿ ಬಾಡಿಗೆ ಮನೆಯಲ್ಲಿದ್ದಾರೆ. ರವಿ ಸದ್ಯಕ್ಕೆ ದೆಹಲಿಯಲ್ಲಿ ಕ್ವಾರಂಟೈನ್ ಆಗಿದ್ದು, ಅವಧಿ ಮುಗಿದ ಬಳಿಕ ಹುಲಕೋಟಿಗೆ ಬರಲಿದ್ದಾರೆ’ ಎಂದು ಯೋಧನ ಅತ್ತಿಗೆ ಶೈಲಾ ನೀಲಗಾರ ತಿಳಿಸಿದ್ದಾರೆ.
ಕ್ವಾರಂಟೈನ್‍ನಲ್ಲಿರುವ ಯೋಧ ರವಿ ನೀಲಗಾರ ಅವರೊಂದಿಗೆ ಬಳಗಾನೂರಿನಲ್ಲಿರುವ ರವಿ ಸಹೋದರ, ಅತ್ತಿಗೆ ವಿಡಿಯೊ ಕಾಲ್ ಮೂಲಕ ಕ್ಷೇಮ ವಿಚಾರಿಸಿದ್ದಾರೆ ಎಂದು ರವಿಯ ಹತ್ತಿರದ ಸಂಬಂಧಿ ಮಹಾದೇವ ಮಾಹಿತಿ ನೀಡಿದ್ದಾರೆ.