ಶುಕ್ರವಾರ (ಸೆಪ್ಟೆಂಬರ್ 9, 2022) ಬಿಜೆಪಿಯ ಮಾಜಿ ವಕ್ತಾರೆ ನೂಪುರ್ ಶರ್ಮಾ ಅವರನ್ನು ಬಂಧಿಸುವಂತೆ ಕೋರಿ ಸಲ್ಲಿಸಲಾದ ಮನವಿಯನ್ನು ಆಲಿಸಲು ಸುಪ್ರೀಂ ಕೋರ್ಟ್ ನಿರಾಕರಿಸಿದೆ. ಮುಖ್ಯ ನ್ಯಾಯಮೂರ್ತಿ ಯು.ಯು ಲಲಿತ್, ನ್ಯಾಯಮೂರ್ತಿ ರವೀಂದ್ರ ಭಟ್ ಮತ್ತು ನ್ಯಾಯಮೂರ್ತಿ ಪಿ.ಎಸ್ ನರಸಿಂಹ ಅವರನ್ನೊಳಗೊಂಡ ಪೀಠವು ಸೆಕ್ಷನ್ 32 ರ ಅಡಿಯಲ್ಲಿ ಸಲ್ಲಿಸಲಾದ ಅರ್ಜಿಯ ವಿಚಾರಣೆಗೆ ನಿರಾಕರಿಸಿ, ಅರ್ಜಿದಾರರಿಗೆ ಅದನ್ನು ಹಿಂಪಡೆಯಲು ಸೂಚಿಸಿದೆ.
ಮುಖ್ಯ ನ್ಯಾಯಮೂರ್ತಿ ಯುಯು ಲಲಿತ್ ಅವರು, “ಇದು ನಿಮಗೆ ಸರಳವೆಂದು ತೋರುತ್ತದೆ, ಆದರೆ ಇದು ದೂರಗಾಮಿ ಪರಿಣಾಮಗಳನ್ನು ಹೊಂದಿದೆ. ನಿರ್ದೇಶನ ನೀಡುವಾಗ ನ್ಯಾಯಾಲಯ ಎಚ್ಚರಿಕೆ ವಹಿಸಬೇಕು. ಅರ್ಜಿಯನ್ನು ಹಿಂಪಡೆಯುವಂತೆ ಸೂಚಿಸುತ್ತೇವೆ’’ ಎಂದರು. ಬಳಿಕ ಈ ಅರ್ಜಿಯನ್ನು ವಜಾಗೊಳಿಸಲಾಯಿತು. ವಕೀಲ ಅಬು ಸೊಹೈಲ್, ವಕೀಲ ಚಾಂದ್ ಖುರೇಷಿ ಮೂಲಕ ಸಲ್ಲಿಸಿದ ಅರ್ಜಿಯಲ್ಲಿ, ಘಟನೆಯ ಬಗ್ಗೆ “ಸ್ವತಂತ್ರ, ವಿಶ್ವಾಸಾರ್ಹ ಮತ್ತು ನಿಷ್ಪಕ್ಷಪಾತ ತನಿಖೆ” ಗೆ ನಿರ್ದೇಶನವನ್ನು ಕೋರಿದ್ದರು.
ದೇಶಾದ್ಯಂತ ಹಿಂಸಾಚಾರ ನಡೆಸಿದ್ದ ಮುಸಲ್ಮಾನರು
ನೂಪುರ್ ಶರ್ಮಾ ಅವರು ಪ್ರವಾದಿ ಮೊಹಮ್ಮದ್ ವಿರುದ್ಧ ಅವಹೇಳನಕಾರಿ ಹೇಳಿಕೆಗಳನ್ನು ನೀಡಿದ್ದಾರೆ ಮತ್ತು ಮುಸ್ಲಿಂ ಸಮುದಾಯದ ಭಾವನೆಗಳಿಗೆ ನೋವುಂಟು ಮಾಡಿದ್ದಾರೆ ಎಂದು ಆರೋಪಿಸಲಾಗಿತ್ತು. ಇದರಿಂದಾಗಿ ದೇಶಾದ್ಯಂತ ಮತಾಂಧ ಮುಸ್ಲಿಮರಿಂದ ಹಿಂಸಾಚಾರ ನಡೆದಿತ್ತು. ನೂಪುರ್ ಶರ್ಮಾ ಅವರನ್ನು ಬೆಂಬಲಿಸಿದವರನ್ನು ಉದಯಪುರ ಮತ್ತು ಅಮರಾವತಿಯಲ್ಲಿ ಕೊ.ಲ್ಲಲಾಗಿತ್ತು. ಅದೇ ಸಮಯದಲ್ಲಿ, ನೂಪುರ್ ಶರ್ಮಾ ವಿರುದ್ಧ ಅನೇಕ ಪ್ರಕರಣಗಳು ದಾಖಲಾಗಿದ್ದವು ಮತ್ತು ಅವರಿಗೆ ಜೀವ ಬೆದರಿಕೆ ಕೂಡ ಹಾಕಲಾಗಿತ್ತು. ಜುಲೈ 2022 ರಲ್ಲಿ, ಶರ್ಮಾ ಅವರು ತಮ್ಮ ವಿರುದ್ಧದ ಹಲವು ರಾಜ್ಯಗಳಲ್ಲಿ ದಾಖಲಾಗಿದ್ದ ಪ್ರಕರಣಗಳನ್ನು ಒಟ್ಟಿಗೆ ಸೇರಿಸಿ ದೆಹಲಿಗೆ ವರ್ಗಾಯಿಸುವಂತೆ ಕೋರಿ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ನ್ಯಾಯಮೂರ್ತಿ ಸೂರ್ಯಕಾಂತ್ ಮತ್ತು ಪರ್ದಿವಾಲಾ ಅವರಿದ್ದ ವಿಭಾಗೀಯ ಪೀಠವು ವಿಚಾರಣೆ ನಡೆಸಿತ್ತು.
ಈಕೆಯೇ ಈ ಘಟನೆಗಳಿಗೆಲ್ಲಾ ಕಾರಣ: ನ್ಯಾಯಮೂರ್ತಿ ಸೂರ್ಯಕಾಂತ್
ಈ ಅರ್ಜಿಯ ವಿಚಾರಣೆ ವೇಳೆ ನ್ಯಾಯಮೂರ್ತಿ ಸೂರ್ಯ ಕಾಂತ್ ಅವರು, “ಇಡೀ ದೇಶದ ಭಾವನೆಗಳನ್ನು ಕೆರಳಿಸಿರುವ ರೀತಿ ಹಾಗು ದೇಶದಲ್ಲಿ ಸದ್ಯ ನಡೆಯುತ್ತಿರುವ ಎಲ್ಲ ಘಟನೆಗಳಿಗೂ ಈ ಮಹಿಳೆಯೇ ಕಾರಣ. ಪ್ರವಾದಿ ಮೊಹಮ್ಮದ್ ಬಗ್ಗೆ ಪ್ರತಿಕ್ರಿಯಿಸಲು ಅವರಿಗೆ ಯಾವುದೇ ಹಕ್ಕಿಲ್ಲ ಮತ್ತು ಸಾಮಾನ್ಯ ನಾಗರಿಕರಿಗೆ ಲಭ್ಯವಿರುವ ನ್ಯಾಯಾಂಗ ಅಧಿಕಾರವನ್ನು ಕಳೆದುಕೊಂಡಿದ್ದಾರೆ” ಎಂದು ನ್ಯಾಯಾಲಯ ಹೇಳಿತ್ತು.
ಸುಪ್ರೀಂಕೋರ್ಟ್‌ನ ಈ ಹೇಳಿಕೆ ವಿರೋಧಿಸಿ ನಡೆದಿದ್ದ ಆನ್‌ಲೈನ್ ಅಭಿಯಾನ
ಸುಪ್ರೀಂ ಕೋರ್ಟ್ ತನ್ನ ಲಿಖಿತ ಆದೇಶದಲ್ಲಿ ಈ ಹೇಳಿಕೆಯನ್ನು ಸೇರಿಸದಿದ್ದಕ್ಕೆ ಹಾಗು ಕೇವಲ ಮೌಖಿಕ ಟೀಕೆ ಮಾಡಿದ್ದಕ್ಕೆ ದೇಶಾದ್ಯಂತ ಪ್ರತಿಭಟನೆಗಳು ಭುಗಿಲೆದ್ದವು. 15 ನಿವೃತ್ತ ನ್ಯಾಯಾಧೀಶರು, 77 ನಿವೃತ್ತ ಅಧಿಕಾರಿಗಳು ಮತ್ತು 25 ಮಾಜಿ ಮಿಲಿಟರಿ ಅಧಿಕಾರಿಗಳು ನ್ಯಾಯಾಧೀಶರ ಹೇಳಿಕೆಗಳ ವಿರುದ್ಧ ಬಹಿರಂಗ ಪತ್ರವನ್ನು ನೀಡಿದ್ದು, ಇದು “ದುರದೃಷ್ಟಕರ ಮತ್ತು ತಪ್ಪು ಉದಾಹರಣೆ ನೀಡುವ” ಎಂದು ಹೇಳಿದ್ದರು. ಅದೇ ಸಮಯದಲ್ಲಿ, ಈ ನ್ಯಾಯಾಧೀಶರ ವಿರುದ್ಧ ದೋಷಾರೋಪಣೆಗಾಗಿ ಆನ್‌ಲೈನ್ ಅಭಿಯಾನವನ್ನು ಸಹ ಪ್ರಾರಂಭಿಸಲಾಗಿತ್ತು. ನಂತರ, ಅದೇ ಪೀಠ, ಅವರಿಗೆ ಬಂಧನದಿಂದ ಮುಕ್ತಿ ನೀಡಿ, ಎಲ್ಲಾ ಎಫ್‌ಐಆರ್‌ಗಳನ್ನು ದೆಹಲಿಗೆ ವರ್ಗಾಯಿಸಲು ಆದೇಶಿಸಿತ್ತು.