ನವದೆಹಲಿ: ಅನುರಾಗ್ ಕಶ್ಯಪ್ ನಿರ್ದೇಶನದ ದೊಬಾರಾ (Do Baara) ಚಿತ್ರವು ಶೀಘ್ರದಲ್ಲೇ ಚಿತ್ರಮಂದಿರಗಳಿಗೆ ಬರಲು ಸಿದ್ಧವಾಗಿದೆ. ಆಗಸ್ಟ್ 19 ರಂದು, ತಾಪ್ಸಿ ಪನ್ನು ಮತ್ತು ಪಾವೈಲ್ ಗುಲಾಟಿ ದೊಬಾರಾ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ದೊಬಾರಾ ಸ್ಪ್ಯಾನಿಷ್ ಚಲನಚಿತ್ರ ಮಿರಾಜ್‌ನ ರಿಮೇಕ್ ಆಗಿದೆ. ಚಿತ್ರದ ಪ್ರಚಾರದಲ್ಲಿ ನಿರಂತರವಾಗಿ ತೊಡಗಿಸಿಕೊಂಡಿರುವ ಸ್ಟಾರ್‌ಕಾಸ್ಟ್ ಚಿತ್ರದ ಪ್ರೊಮೋಷನ್‌ನಲ್ಲಿ ಬ್ಯುಸಿಯಾಗಿದೆ. ಇಂತಹ ಪರಿಸ್ಥಿತಿಯಲ್ಲಿ, ಡಿಸ್ಟ್ರಿಬ್ಯೂಟರ್ ಮತ್ತು ಸ್ಟಾರ್‌ಕಾಸ್ಟ್ ನಿಂದಲೂ ಎಂತೆಂಥಾ ಹೇಳಿಕೆಗಳು ಬರುತ್ತಿವೆಯೆಂದರೆ ಇದರಿಂದ ಜನ ಮತ್ತಷ್ಟು ಆಕ್ರೋಶಭರಿತರಾಗಿದ್ದಾರೆ. ಇತ್ತೀಚೆಗಷ್ಟೇ ಚಿತ್ರದ ಪ್ರಚಾರದ ವೇಳೆ ನಿರ್ದೇಶಕ ಅನುರಾಗ್ ಕಶ್ಯಪ್ ಇಂಥದ್ದೊಂದು ಮಾತು ಹೇಳಿದ್ದು, ಇದಾದ ಬಳಿಕ ಮತ್ತೊಮ್ಮೆ ಅವರ ಮೇಲೆ ಜನ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದಲ್ಲದೆ, ಸಾರ್ವಜನಿಕರು ನಿರ್ದೇಶಕ ಅನುರಾಗ್ ಕಶ್ಯಪ್ ಮಾತ್ರವಲ್ಲದೆ ನಟಿ ತಾಪ್ಸಿ ಪನ್ನು ಅವರನ್ನೂ ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದಾರೆ. ಅನುರಾಗ್ ಕಶ್ಯಪ್ ಮತ್ತು ತಾಪ್ಸಿ ಪನ್ನು ತಮ್ಮ ಮುಂಬರುವ ಚಿತ್ರದ ಬಗ್ಗೆ ಏನೆಂದಿದ್ದಾರೆ ಎಂಬುದರ ಕುರಿತು ನಾವು ಇಲ್ಲಿ ಮಾಹಿತಿಯನ್ನು ನೀಡುತ್ತೇವೆ. ಇದರ ಹೊರತಾಗಿ ಈ ವರ್ಷದ ಯಶಸ್ವಿ ಚಿತ್ರ ದಿ ಕಾಶ್ಮೀರ್ ಫೈಲ್ಸ್‌ನಿಂದ ಅನುರಾಗ್ ಕಶ್ಯಪ್‌ಗೆ ಏನು ಸಮಸ್ಯೆ ಎಂಬುದನ್ನೂ ನಿಮಗೆ ತಿಳಿಸಲಿದ್ದೇವೆ.
ದೊಬಾರಾ ಚಿತ್ರ ಅಷ್ಟೇನೂ ಚರ್ಚೆಗೆ ಗ್ರಾಸವಾಗಿರಲಿಲ್ಲ, ಆದರೆ ನಿರ್ದೇಶಕ ಮತ್ತು ನಟಿಯ ಸಂದರ್ಶನದ ನಂತರ, ಈ ಚಿತ್ರದ ಚರ್ಚೆಗಳು ಹೆಚ್ಚಿವೆ. ಈ ಚಿತ್ರದ ನಿರ್ದೇಶಕ ಅನುರಾಗ್ ಕಶ್ಯಪ್ ಮತ್ತು ನಟಿ ತಾಪ್ಸಿ ಪನ್ನು ಹೇಳಿರುವ ವಿಚಾರ ಸಂಚಲನ ಮೂಡಿಸಿದೆ. #boycottlaalsinghchaddha ಹಲವು ತಿಂಗಳುಗಳಿಂದ ಟ್ರೆಂಡಿಂಗ್‌ನಲ್ಲಿದೆ ಮತ್ತು ಇದೀಗ ಅನುರಾಗ್ ಕಶ್ಯಪ್ ಅವರ ಈ ಹೇಳಿಕೆಯ ನಂತರ #dobaaraa ಕೂಡ ಟ್ರೆಂಡಿಂಗ್ ಆಗಿದೆ. ಅನುರಾಗ್ ಕಶ್ಯಪ್ ಮತ್ತು ತಾಪ್ಸಿ ಪನ್ನು ಬಾಯ್‌ಕಾಟ್ ಟ್ರೆಂಡ್ ಕುರಿತು ಮಾತನಾಡಿದಾಗ, ಅನುರಾಗ್ ಕಶ್ಯಪ್ ಈ ವಿಷಯವನ್ನು ಸಾರಾಸಗಟಾಗಿ ನಿರಾಕರಿಸಿದರು ಮತ್ತು “ಹೇ ಇದು ಬಾಯ್‌ಕಾಟ್ ಅಲ್ಲ, ಯಾರು ಆ ಜನರು!. ನಮ್ಮ ಚಿತ್ರವನ್ನು ಬಾಯ್‌ಕಾಟ್ ಮಾಡಿ ತೋರಿಸಲಿ. ಹೇಗಿದ್ದರೂ ನಮ್ಮ ಚಿತ್ರ 100 ಕೋಟಿ ಬಿಸಿನೆಸ್ ಮಾಡಲ್ಲ. 100 ಕೋಟಿ ಬಜೆಟ್ ಚಿತ್ರ ಮಾಡಿದವರಿಗೆ ಬಾಯ್‌ಕಾಟ್ ಭಯ ಇರುತ್ತೆ. ನಮ್ಮ ಚಿತ್ರ ಒಟ್ಟು 32 ಕೋಟಿವರೆಗೆ ಕಲೆಕ್ಷನ್ ಮಾಡುತ್ತೆ. ನಾವು ಅದಕ್ಕೆ ಹೆದರುವುದಿಲ್ಲ, ಆದರೆ ಬಾಯ್‌ಕಾಟ್ ನ ನಂತರವೂ ನಮ್ಮ ಚಿತ್ರ ಬಾಕ್ಸ್ ಆಫೀಸ್‌ನಲ್ಲಿ ಹೇಗೆ ಬ್ಯಾಟ್ ಮಾಡುತ್ತೆ ಅನ್ನೋದನ್ನ ನೋಡಬೇಕಿದೆ” ಎಂದಿದ್ದರು.
ಅನುರಾಗ್ ಕಶ್ಯಪ್ ಅವರ ಈ ಹೇಳಿಕೆಯಿಂದ ಪ್ರೇಕ್ಷಕರ ಭಾವನೆಗಳಿಗೆ ಅನುರಾಗ್ ಕಶ್ಯಪ್ ಗೇಲಿ ಮಾಡುತ್ತಿದ್ದಾರೆ ಅಥವಾ ಪ್ರೇಕ್ಷಕರನ್ನು ಗೇಲಿ ಮಾಡುತ್ತಿದ್ದಾರೆ ಎಂದು ಪ್ರೇಕ್ಷಕರು ಭಾವಿಸುತ್ತಿದ್ದಾರೆ. ಅಂದಿನಿಂದ ಪ್ರೇಕ್ಷಕರು ಅವರ ಸಿನಿಮಾವನ್ನೂ ಬಾಯ್‌ಕಾಟ್ ಮಾಡುತ್ತಿದ್ದಾರೆ. ಇದಲ್ಲದೇ, ತಾಪ್ಸಿ ಪನ್ನು ಸಂದರ್ಶನದಲ್ಲಿ ಪ್ರೇಕ್ಷಕರಿಗೆ ಒಂದು ರೀತಿಯಲ್ಲಿ ಸವಾಲು ಹಾಕುತ್ತ, “ಬಾಯ್ಕಾಟ್ ಮಾಡುವುದನ್ನು ಮುಂದುವರಿಸಿ, ನಮ್ಮ ಚಿತ್ರವನ್ನೂ ಬಾಯ್‌ಕಾಟ್ ಲಿಸ್ಟ್ ನಲ್ಲಿ ಸೇರಿಸಬೇಕು. ಲಾಲ್ ಸಿಂಗ್ ಚಡ್ಡಾ ಮತ್ತು ರಕ್ಷಾಬಂಧನ ಬಾಯ್‌ಕಾಟ್ ಪಟ್ಟಿಯಲ್ಲಿ ನಾವು ಕೂಡ ಸೇರಲು ಬಯಸುತ್ತೇವೆ” ಎಂದಿದ್ದಾರೆ.
ಇದಲ್ಲದೆ, ಇದನ್ನು ಹೇಳುವಾಗ ತಾಪ್ಸಿ ಕೂಡ ನಗುತ್ತಿರುವುದನ್ನು ಕಂಡಬರುತ್ತದೆ, “ನಾವೂ ಬಾಲಿವುಡ್‌ನ ಭಾಗವಾಗಿದ್ದೇವೆ, ನಮಗೂ ಬಾಯ್‌ಕಾಟ್ ಮಾಡಿ” ಎಂದಿದ್ದಾರೆ. ಇಷ್ಟೆಲ್ಲಾ ಮಾತಾಡ್ತಾರಲ್ಲ, ಸಿನಿಮಾ ಬಾಯ್‌ಕಾಟ್ ಬಗ್ಗೆ ಮಾತನಾಡುವವರು ಮೊನ್ನೆ ಸಿನಿಮಾ ನೋಡಲು ಬಂದಿದ್ದಾರಾ ಎಂದು ಅನುರಾಗ್ ಕಶ್ಯಪ್ ತೀಕ್ಷ್ಣ ವ್ಯಂಗ್ಯವಾಡಿದ್ದಾರೆ. ಈ ಸಮಯದಲ್ಲಿ, ತಾಪ್ಸಿ ಮತ್ತು ಅನುರಾಗ್ ಕಶ್ಯಪ್ ಬಾಯ್‌ಕಾಟ್ ಮಾಡುವವರನ್ನ ವ್ಯಂಗ್ಯವಾಡಿದರು. ಇದರಿಂದಾಗಿ ಅನುರಾಗ್ ಕಶ್ಯಪ್ ತಮ್ಮದೇ ಪ್ರೇಕ್ಷಕರನ್ನು ಗೇಲಿ ಮಾಡುತ್ತಿದ್ದಾರೆ ಎಂದು ಪ್ರೇಕ್ಷಕರು ಭಾವಿಸುತ್ತಾರೆ.
IMPORTANT:
The vicious, GENOCIDE-DENIER lobby of Bollywood has started their campaign against #TheKashmirFiles for #Oscars, under the leadership of the maker of #Dobaaraa. pic.twitter.com/1Np8K0lo27
— Vivek Ranjan Agnihotri (@vivekagnihotri) August 17, 2022
ಇದಕ್ಕೂ ಮೊದಲಿನ ಸಂದರ್ಶನವೊಂದರಲ್ಲಿ ಅನುರಾಗ್ ಕಶ್ಯಪ್ ಆಸ್ಕರ್ ನಾಮಿನೇಷನ್‌ಗಾಗಿ ಭಾರತ ‘ಕಾಶ್ಮೀರ ಫೈಲ್ಸ್’ ಕಳುಹಿಸಬಾರದು, RRR ಚಲನಚಿತ್ರವನ್ನು ಕಳುಹಿಸಬಹುದು ಎಂದು ಸಹ ಹೇಳಿದ್ದರು. ಈ ಹೇಳಿಕೆಯ ನಂತರ ಚಲನಚಿತ್ರ ನಿರ್ಮಾಪಕ ವಿವೇಕ್ ಅಗ್ನಿಹೋತ್ರಿ ಕೂಡ ಟ್ವೀಟ್ ಮಾಡುತ್ತ, “ಬಾಲಿವುಡ್‌ನ ಕೆಟ್ಟ, ನರಮೇಧ ನಿರಾಕರಣೆ ಲಾಬಿ #TheKashmirFiles’ #Oscars ನಾಮನಿರ್ದೇಶನದ ವಿರುದ್ಧ #Dobaaraa ಚಿತ್ರದ ನಿರ್ಮಾಪಕರ ನೇತೃತ್ವದಲ್ಲಿ ತನ್ನ ಅಭಿಯಾನವನ್ನು ಪ್ರಾರಂಭಿಸಿದೆ” ಎಂದಿದ್ದರು. ಇದಾದ ಕೆಲವೇ ದಿನಗಳಲ್ಲಿ, ವಿವೇಕ್ ಅವರ ಈ ಟ್ವೀಟ್ ವೈರಲ್ ಆಗಿದ್ದು, ಜನರು ಅದಕ್ಕೆ ನೀಡಿದ ಪ್ರತಿಕ್ರಿಯೆಯನ್ನು ನೀವೂ ಕೆಳಗೆ ನೋಡಬಹುದು
@vivekagnihotri every Indian respects you. These filthy – Anurag Kashyap are facing boycott themselves. What they will predict?
With blessings of every Indian you are already a oscar or best film award winner.
Legacy is created over years n good name is ever remembered.#Oscars https://t.co/JNuhpdCprW— Winner takes it All (@garimarene) August 18, 2022
@anuragkashyap72 Be a human, don't be pigshit which you always were. https://t.co/Qz2rdKN4wp
— Madhava Indian (@MadhavanIndian) August 18, 2022
TKF for the Oscarshttps://t.co/JIUouRnrHr
— Bahubali (@www_me7) August 18, 2022
Vicious @anuragkashyap72 Doesn't care about the #HindusUnderAttack #HindusGenocide in #Kashmir ! His hatred for Hindus is evident in his condescension for #KashmirFiles ! #BoycottDobaara @vivekagnihotri @BJP4India @narendramodi @amitmalviya @myogiadityanath @AnupamPKher https://t.co/sf0jZB3Bjv
— rj anirudh chawla (@rjanirudhchawla) August 17, 2022