ಭಾರತದೇಶವನ್ನು ಕಾಡುತ್ತಿದ್ದ ಅಸ್ಪೃಶ್ಯತೆ ಎಂಬ ಅನಿಷ್ಟವನ್ನು ಮೂಲೋತ್ಪಾಟನೆ ಮಾಡಿದ ಮಹಾಪುರುಷ ಅಂಬೇಡ್ಕರ್. ಸ್ವತಂತ್ರ ಭಾರತದ ಸಂವಿಧಾನ ರಚಿಸಿದ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್. ಅನ್ಯಾಯ, ಶೋಷಣೆ, ಅಸ್ಪೃಶ್ಯತೆ ಮೊದಲಾದ ಸಾಮಾಜಿಕ ಅನಿಷ್ಟಗಳ ವಿರುದ್ದ ಹೋರಾಡಿ ಜಯಗಳಿಸಿದ ವ್ಯಕ್ತಿ. ಅಶಕ್ತ ದಲಿತ ಸಮೂಹದ ನೋವಿನ ಮಾರ್ದನಿ ಎಂದೇ ಪ್ರಸಿದ್ದರಾಗಿದ್ದರು. ಮೇಲಾಗಿ ಮಾನವತಾವಾದಿ ಸಂವಿಧಾನ ಶಿಲ್ಪಿ ಎಂದು ಪರಿ ಗಣಿತರಾದವರು. ಇವರು ಭಾರತ ದೇಶದ ನಾಯಕರಲ್ಲ ಅವರು ವಿಶ್ವದ ನಾಯಕರಾಗಿದ್ದು, ಮಾತ್ರವಲ್ಲದೇ ಅವರ ಹುಟ್ಟಿದ ದಿನವನ್ನು 143 ರಾಷ್ಟ್ರಗಳಲ್ಲಿ ಆಚರಣೆ ಮಾಡುವ ಮೂಲಕ ವಿಶೇಷ ಗೌರವ ನೀಡಲಾಗುತ್ತಿರುವ ಮಹಾನ್ ವ್ಯಕ್ತಿ.
ಭಾರತದ ಸಂವಿಧಾನ ಶಿಲ್ಪಿ ಎಂದೇ ಹೆಸರು ವಾಸಿಯಾದ ಡಾ.ಬಿ.ಆರ್ ಅಂಬೇಡ್ಕರ್ ಭಾರತ ದೇಶಕ್ಕೆ ನೀಡಿದ ಕೊಡುಗೆ ಅಪಾರ. ಹಾಗಾಗಿ ಇದನ್ನೆಲ್ಲ ಸ್ಮರಿಸಬೇಕಾದದ್ದು ನಮ್ಮೆಲ್ಲರ ಕರ್ತವ್ಯವಾಗಿದೆ. ಅಷ್ಟೆ ಅಲ್ಲದೇ, ಅಸ್ಪೃಶ್ಯ ಚೇತನರಿಗೆ ಒಂದು ದನಿಕೊಟ್ಟು ನವ ಭಾರತ ನಿರ್ವಣಕ್ಕೆ ಕಂಕಣತೊಟ್ಟ ಬಾಬಾ ಸಾಹೇಬ್ ಅವರ ವಿಚಾರಗಳು ಇಂದಿಗೂ ನಮಗೆ ಅಗತ್ಯವಾಗಿದೆ.
ಸ್ನೇಹಿತರೇ, ನಿಮಗೆಲ್ಲರಿಗೂ ತಿಳಿದಿರುವಂತೆ, ಭಾರತದ ಸಂವಿಧಾನವನ್ನ ಕಾಗದದ ಮೇಲೆ ಕೈಯಿಂದ ಬರೆಯಲಾಗಿರುವ ವಿಶ್ವದ ಏಕೈಕ ಸಂವಿಧಾನ ಪುಸ್ತಕವಾಗಿದೆ. ಸಂವಿಧಾನವನ್ನು ಬರೆಯಲು ಶಾಯಿಯನ್ನ ಬಳಸಲಾಗಿತ್ತು. ಭಾರತದ ಸಂವಿಧಾನವನ್ನು ರಚಿಸಿ ಅದನ್ನ ದೇಶದಲ್ಲಿ ಜಾರಿಗೆ ತರುವಂತೆ ಮಾಡಿದ್ದ ಭೀಮರಾವ್ ಅಂಬೇಡ್ಕರ್ ರವರು ಕೆಳಜಾತಿಯವರಾದರೂ ಕೂಡ ದೇಶಕ್ಕೆ ಸರ್ವಶ್ರೇಷ್ಠ ಸಂವಿಧಾನ ನೀಡಿದ ಹೆಗ್ಗಳಿಕೆ ಅವರದ್ದು. ಅವರು ತಮ್ಮ ಸರ್ವಸ್ವವನ್ನೂ ತ್ಯಾಗ ಮಾಡಿದ್ದಕ್ಕಾಗೇ ಇಂದು ಭಾರತವಷ್ಟೇ ಅಲ್ಲದೆ ಇಡೀ ಜಗತ್ತಿಗೆ ಅವರ ಹೆಸರು ಗೊತ್ತು.
ಆದರೆ ಸ್ನೇಹಿತರೇ ನಮ್ಮ ದೇಶದ ಸಂವಿಧಾನದ ಮೂಲ ಪ್ರತಿಯನ್ನು ಗ್ಯಾಸ್ ಚೇಂಬರ್ ನಲ್ಲಿ ಯಾಕೆ ಇಡಲಾಗಿದೆ ಅನ್ನೋ ಮಾಹಿತಿ ನಿಮಗೆ ಗೊತ್ತಿದೆಯಾ? ಅಮೇರಿಕಾ ತನ್ನ ಸಂವಿಧಾನದ ಮೂಲ ಪ್ರತಿಯನ್ನ ಗ್ಯಾಸ್ ಚೇಂಬರ್ ನಲ್ಲೇ ಸಂರಕ್ಷಿಸಿಟ್ಟಿದೆ. ಅಮೇರಿಕಾದಂತೆಯೇ 1994 ರಲ್ಲಿ ಭಾರತವೂ ಕೂಡ ಸಂವಿಧಾನದ ಮೂಲ ಪ್ರತಿಯನ್ನು ಗ್ಯಾಸ್ ಚೇಂಬರ್ ನಲ್ಲಿ ಇಡಲು ನಿರ್ಧರಿಸಿತು.
ಇದರ ನಂತರ ಭಾರತದ ‘ನ್ಯಾಷನಲ್ ಫಿಸಿಕಲ್ ಲ್ಯಾಬೊರೇಟರಿ‘ ಮತ್ತು ಅಮೆರಿಕದ ಗೆಟ್ಟಿ ಇನ್ಸ್ಟಿಟ್ಯೂಟ್ ನಡುವಿನ ಒಪ್ಪಂದದ ನಂತರ ಭಾರತದಲ್ಲಿ ಇದೇ ರೀತಿಯ ಗ್ಯಾಸ್ ಚೇಂಬರ್ ನಿರ್ಮಿಸಲಾಯಿತು.
ಈ ಮೊದಲು ಅಂದರೆ 1994 ಕ್ಕೂ ಮುಂಚೆ ಭಾರತದ ಸಂವಿಧಾನದ ಮೂಲ ಪ್ರತಿಯನ್ನು ಫಾಲೊಲೆನ್ ಬಟ್ಟೆಯಲ್ಲಿ ಸುತ್ತಿ ಒಂದು ನೆಫ್ಥಲೀನ್ ಬಾಲ್ಸ್ ಗಳೊಂದಿಗೆ ಇರಿಸಲಾಗಿತ್ತು. ಈ ಕಾಗದಗಳನ್ನು ಸಂರಕ್ಷಿಸಲು ನಾನ್-ರಿಯಾಕ್ಟಿವ್ ಗ್ಯಾಸ್ನ ಅವಶ್ಯಕತೆಯಿತ್ತು. ಅದೇ ನೈಟ್ರೋಜನ್ ಗ್ಯಾಸ್. ಈ ಹಿಂದೆ ಈ ಗ್ಯಾಸ್ ಚೇಂಬರ್ನ್ನ ಹೀಲಿಯಂ ಗ್ಯಾಸ್ ನಿಂದ ನಿರ್ಮಿಸಲಾಗಿತ್ತು.