ಬಿಗ್ ಬ್ರೇಕಿಂಗ್: ರಾಜನೀತಿಯ ರಣತಂತ್ರಜ್ಞ ಪ್ರಶಾಂತ್ ಕಿಶೋರ್ ಮನೆ ಉಡೀಸ್, ಕಾರಣವೇನು ಗೊತ್ತಾ?

in Kannada News/News 427 views

ಪ್ರಶಾಂತ್ ಕಿಶೋರ್ ಈ ಹೆಸರನ್ನ ನೀವೆಲ್ಲಾ ಕೇಳಿಯೇ ಇರುತ್ತೀರ, ಒಂದು ಕಾಲದಲ್ಲಿ ಅಂದರೆ 2014 ರಲ್ಲಿ ಬಿಜೆಪಿಯ ಪರವಾಗಿ ಕೆಲಸ ಮಾಡಿ ಪ್ರಧಾನಿ ನರೇಂದ್ರ ಮೋದಿಯವರನ್ನ ಪ್ರಧಾನಿಯನ್ನಾಗಿ ಮಾಡಲು ರಣತಂತ್ರ ಹೆಣೆದವರು ಪ್ರಶಾಂತ್ ಕಿಶೋರ್ ಆಗಿದ್ದರು. ಮೂಲತಃ ಬಿಹಾರದವರಾದ ಪ್ರಶಾಂತ್ ಕಿಶೋರ್ ಬಳಿಕ ನಿತಿಶ್ ಕುಮಾರ್ ರವರ ಜೆಡಿಯೂ ಪಕ್ಷಕ್ಕೆ ಸೇರ್ಪಡೆಯಾಗಿದ್ದರು. ಬಳಿಕ ಪಕ್ಷ ವಿರೋಧಿ ನೀತಿಗಳ ಆಧಾರದ ಮೇಲೆ ಅವರನ್ನ ಪಕ್ಷದಿಂದ ಹೊರಹಾಕಲಾಗಿತ್ತು.

Advertisement

ಈಗ ಪ್ರಶಾಂತ್ ಕಿಶೋರ್ ಮತ್ತೆ ಸುದ್ದಿಯಲ್ಲಿದ್ದಾರೆ, ಪಶ್ಚಿಮ ಬಂಗಾಳದ ರಾಜಕೀಯದಲ್ಲಿ ಸದ್ಯ ಪ್ರಶಾಂತ್ ಕಿಶೋರ್ ಹೆಸರು ಚರ್ಚೆಯಲ್ಲಿದೆ, ಅವರು ಮಮತಾ ಬ್ಯಾನರ್ಜಿ ಪರವಾಗಿ ರಣತಂತ್ರ ರೂಪಿಸುತ್ತಿದ್ದಾರೆ. ಕೆಲ ಸಮಯದ ಹಿಂದೆ ನಿತಿಶ್ ಕುಮಾರ್ ರವರ ಆಪ್ತರಲ್ಲಿ ಕೂಡ ಒಬ್ಬರಾಗಿದ್ದರು. ಆದರೆ ಇದೀಗ ಬಂದಿರುವ ಸುದ್ದಿಯ ಪ್ರಕಾರ ಬಕ್ಸಾರ್‌ನ ಅಹಿರೌಲಿಯಲ್ಲಿರುವ ಪ್ರಶಾಂತ್ ಕಿಶೋರ್ ಅವರ ಪೂರ್ವಜರ ಮನೆಯಿದೆ. ಇಂದು ಬಿಹಾರ್ ಸರ್ಕಾರವು ಅವರ ಮನೆಯ ಮೇಲೆ ಬುಲ್ಡೋಜರ್ ಹತ್ತಿಸಿದೆ.10 ನಿಮಿಷಗಳಲ್ಲಿ, ಪ್ರಶಾಂತ್ ಕಿಶೋರ್ ಅವರ ಮನೆಯ ಗಡಿ ಗೋಡೆ ಮತ್ತು ಬಾಗಿಲುಗಳೆಲ್ಲವೂ ತೆರವುಗೊಳಿಸಲಾಗಿದೆ‌‌. ಇದು ಮಾತ್ರವಲ್ಲ, ಪ್ರಶಾಂತ್ ಕಿಶೋರ್ ಪ್ರಭಾವವನ್ನ ತಿಳಿದ ನೂರಾರು ಜನರು ಕೂಡ ಅಲ್ಲಿ ಆಗುತ್ತಿದ್ದದ್ದನ್ನೆಲ್ಲಾ ಗನಿಸುತ್ತಿದ್ದರು.

ಬಕ್ಸಾರ್‌ನ ಅಹಿರೌಲಿಯಲ್ಲಿ NH 84 ಪಕ್ಕದಲ್ಲಿ ಅವರ ಪೂರ್ವಜರ ಮನೆ ಇದೆ. ಇದು ಅವರ ತಂದೆಯ ದಿವಂಗತ ಶ್ರೀಕಾಂತ್ ಪಾಂಡೆ ನಿರ್ಮಿಸಿದ್ದಾಗಿದ್ದು ಇದರ ಮೇಲೆ ಅಲ್ಲಿ ಆಡಳಿತ ಮಂಡಳಿ ಕ್ರಮ ಕೈಗೊಂಡಿದೆ. ಪ್ರಶಾಂತ್ ಕಿಶೋರ್ ಈ ಮನೆಯಲ್ಲಿ ವಾಸಿಸದಿದ್ದರೂ, ಈ ಪೂರ್ವಜರ ಮನೆ ಅವರಿಗೇ ಸೇರಿದ್ದಾಗಿದೆ.

ನಿಮ್ಮ ಮಾಹಿತಿಗಾಗಿ ತಿಳಿಸುವ ವಿಷಯವೇನೆಂದರೆ ಪ್ರಶಾಂತ್ ಕಿಶೋರ್ ರವರ ಪೂರ್ಜರ ಮನೆಯನ್ನ ಯಾವುದೋ ರಾಜಕೀಯ ಕಾರಣಗಳಿಂದಾಗಿ ಅದರ ಮೇಲೆ ಕಾರ್ಯಾಚರಣೆ ನಡೆಸಲಾಗಿಲ್ಲ.‌ ಸ್ಥಳೀಯ ಅಧಿಕಾರಿಗಳು ಹೇಳುವ ಪ್ರಕಾರ NH 84 ರಸ್ತೆಯನ್ನು ಅಗಲೀಕರಣಗೊಳಿಸಲು ಸರ್ಕಾರ ಅಲ್ಲಿನ ಭೂಮಿಯನ್ನ ಸ್ವಾಧೀನ ಪಡಿಸಿಕೊಂಡಿದೆ. ಈಗ ನ್ಯಾಶನಲ್ ಹೈವೇಯನ್ನ ಅಗಲೀಕರಣಗೊಳಿಸಲು ಅಲ್ಲಿನ ಭೂಮಿಯನ್ನ ಖಾಲಿ ಮಾಡಲು ಅಧಿಕಾರಿಗಳು ಅಭಿಯಾನ ನಡೆಸಿದ್ದು ಇದೇ ಕಾರಣದಿಂದಾಗಿ ಪ್ರಶಾಂತ್ ಕಿಶೋರ್ ರವರ ಪೂರ್ವಜರ ಮನೆಯ ಗೋಡೆಯನ್ನ ಬೀಳಿಸಲಾಗಿದೆ.

ಆದರೆ, ಇದೆಲ್ಲವೂ ನಡೆಯುತ್ತಿರುವಾಗ, ಅಲ್ಲಿ ನೆರೆದಿದ್ದ ಜನರು ಈ ಸಂಪೂರ್ಣ ಕ್ರಿಯೆಯನ್ನು ನೋಡುತ್ತಿದ್ದರು, ಜನರಲ್ಲಿ ಎಲ್ಲಾ ರೀತಿಯ ಚರ್ಚೆಗಳು ನಡೆಯಲಾರಂಭಿಸಿದವು. ಏತನ್ಮಧ್ಯೆ, ಭೂಸ್ವಾಧೀನಕ್ಕೆ ಬದಲಾಗಿ ಸರ್ಕಾರವು ಭೂಮಾಲೀಕರಿಗೆ ಪರಿಹಾರವನ್ನು ನೀಡಿದೆ ಎಂದು ಸ್ಥಳೀಯ ಜನರು ಹೇಳಿದ್ದಾರೆ ಆದರೆ ಪ್ರಶಾಂತ್ ಕಿಶೋರ್ ಯಾವುದೇ ಪರಿಹಾರವನ್ನು ತೆಗೆದುಕೊಂಡಿಲ್ಲ. ಇದರ ಹೊರತಾಗಿಯೂ, ಆಡಳಿತವು ಇಂದು ಅವರ ಗೋಡೆಯನ್ನು ನೆಲಸಮ ಮಾಡಿದೆ. ಆದರೆ, ಆಡಳಿತ ಅಧಿಕಾರಿಗಳು ಮತ್ತು ನೌಕರರು ಈ ಇಡೀ ವಿಷಯದ ಬಗ್ಗೆ ಏನನ್ನೂ ಹೇಳಲು ಸಿದ್ಧರಿಲ್ಲ.

Advertisement
Share this on...