ದೇಶದಲ್ಲಿ ನರೇಂದ್ರ ಮೋದಿಜೀ ನೇತೃತ್ವದ ಸರ್ಕಾರ ಬಂದ ನಂತರ ಇಡೀ ವಿಶ್ವದಲ್ಲೇ ಭಾರತದ ಪ್ರಭಾವದ ಜೊತೆ ಜೊತೆಗೆ ಮಹತ್ವ ಕೂಡ ಹೆಚ್ಚಾಗಿದೆ. ದೇಶವು ನರೇಂದ್ರ ಮೋದಿಜೀಯವರ ಶ್ರಮದಿಂದ ದೇಶದ ಘನತೆ ದಿನದಿಂದ ದಿನಕ್ಕೆ ವಿಶ್ವದಲ್ಲಿ ಏರುತ್ತಲೇ ಸಾಗುತ್ತಿದೆ.
ಒಂದು ಕಾಲದಲ್ಲಿ ಭಾರತವೆಂದರೆ ಹಾವಾಡಿಗರ ದೇಶವೆಂದು ಕರೆಯುತ್ತಿದ್ದ ರಾಷ್ಟ್ರಗಳೆಲ್ಲಾ ಇಂದು ಭಾರತವೆಂದರೆ ರೆಡ್ ಕಾರ್ಪೇಟ್ ಸ್ವಾಗತ ನೀಡುತ್ತಿವೆ. ಈ ಮಹತ್ವದ ಬದಲಾವಣೆಗಳಿಗೆ ಭಾಷ್ಯ ಬರೆದದ್ದು ಮತ್ಯಾರೂ ಅಲ್ಲ ಅದು ನಮ್ಮ ನಿಮ್ಮೆಲ್ಲರ ನೆಚ್ಚಿನ ನಾಯಕ ನರೇಂದ್ರ ಮೋದಿಜೀಯವರಿಂದ.
ಅಪ್ಪಟ ದೇಶಪ್ರೇಮಿಯಾದ ನರೇಂದ್ರ ಮೋದಿಜೀ ತಾವು ಗುಜರಾತಿನ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದಾಗಿನಿಂದ ಕೂಡ ಭಾರತೀಯ ಸೇನೆಯ ಬೆಂಬಲಕ್ಕೆ ಸದಾ ನಿಲ್ಲುವ ವ್ಯಕ್ತಿಯಾಗಿದ್ದಾರೆ. ಗುಜರಾತ್ ಮುಖ್ಯಮಂತ್ರಿಯಾಗಿ ನರೇಂದ್ರ ಮೋದಿಜೀ ಅಧಿಕಾರ ಸ್ವೀಕರಿಸಿದ ತಕ್ಷಣ ಕೈಗೊಂಡ ಕ್ರಮವೆಂದರೆ ಹಿಂದೆ ಒಂಟೆಗಳ ಮೂಲಕ ನೀರು ತರಬೇಕಿದ್ದ ಸ್ಥಿತಿಯನ್ನ ಬದಲಿಸಿ ನರ್ಮದಾ ನದಿಯ ಮೂಲಕ ಭಾರತೀಯ ಸೇನೆಗೆ ನೀರುಣಿಸುವ ಮಹತ್ತರವಾದ ಕಾರ್ಯವನ್ನ ಮಾಡಿ ಭಾರತೀಯ ಸೇನೆಯ ಪಾಲಿಗೆ ಆಧುನಿಕ ಭಗೀರಥ ಎನಿಸಿಕೊಂಡಿದ್ದರು.
ನಂತರ ಭಾರತದ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದ ನರೇಂದ್ರ ಮೋದಿಜೀ ಭಾರತೀಯ ಸೇನೆಗೆ ಬಲ ತುಂಬುವ ಹಾಗು ಮಾನಸಿಕ ಆತ್ಮಸ್ಥೈರ್ಯವನ್ನೂ ತುಂವುವ ಕೆಲಸ ಮಾಡುತ್ತ ಸೇನೆಗೆ ಬೇಕಿರುವ ಪ್ರತಿಯೊಂದು ಸೌಲಭ್ಯಗಳನ್ನೂ ನೀಡುವಲ್ಲಿ ಯಶಸ್ವಿಯಾಗಿದ್ದಾರೆ. ಈ ಹಿಂದೆ ಹಳೆಯ ರೈಫಲ್ಗಳು, ಮಿಸೈಲ್ಗಳು, ಆಧುನಿಕ ಶಸ್ತ್ರಾಸ್ತ್ರಗಳನ್ನೇ ಇಟ್ಟುಕೊಂಡು ಪಾಪಿ ಪಾಕಿಸ್ತಾನ, ಭಯೋತ್ಪಾದಕರು, ಚೀನಾದ ವಿರುದ್ಧ ಸೆಣೆಸುತ್ತಿದ್ದ ಭಾರತೀಯ ಸೇನೆಗೆ ಮೋದಿಜೀ ಆಶಾಕಿರಣವಾಗಿ ಬಂದು ಸೇನೆಗೆ ಅತ್ಯಾಧುನಿಕ ಶಸ್ತ್ರಾಸ್ತ್ರಗಳು, ಮಿಸೈಲ್ಗಳು, ಯುದ್ಧ ವಿಮಾನಗಳನ್ನ ನೀಡಿ ಸೇನೆಯ ಆತ್ಮಸ್ಥೈರ್ಯ ಹಾಗು ಬಲವನ್ನ ನೂರ್ಮಡಿಗೊಳಿಸಿದ್ದರು.
ಈ ಹಿಂದೆ ಅಟಲ್ ಬಿಹಾರಿ ವಾಜಪೇಯಿ ಹಾಗು ಲಾಲ್ಬಹದ್ದೂರ್ ಶಾಸ್ತ್ರೀಜೀ ಯನ್ನ ಬಿಟ್ಟರೆ ಯುದ್ಧಭೂಮಿಯಲ್ಲಿ ಅಥವ ಸೇನಾನೆಲೆಗಳಲ್ಲಿ ಭಾರತೀಯ ಸೇನೆಯ ಕುಂದುಕೊರತೆಗಳನ್ನ ಕೇಳಲು ಯಾವ ಪ್ರಧಾನಿಯೂ ಹೋಗಿರಲಿಲ್ಲ ಆದರೆ ನರೇಂದ್ರ ಮೋದಿಜೀ ಮಾತ್ರ ದೀಪಾವಳಿಯಂದು ರಜೆ ತೆಗೆದುಕೊಂಡು ಆರಾಮಾಗಿ ಮನೇಲಿರಬಹುದೆಂದು ಯೋಚನೆ ಮಾಡದೆ ಸೈನಿಕರ ಜೊತೆ ದೀಪಾವಳಿ ಆಚರಿಸಿ ಬಂದದ್ದು ನಮಗೆಲ್ಲಾ ತಿಳಿದ ವಿಷಯವೇ.
ಭಾರತೀಯ ಸೇನೆ ಈ ಹಿಂದೆಂದಿಗಿಂತಲೂ ನರೇಂದ್ರ ಮೋದಿ ನೇತೃತ್ವದ ಸರ್ಕಾರದಲ್ಲಿ ಬಲಿಷ್ಟವಾಗಿದೆ. ಸೈನಿಕರಿಗೆ ಬುಲೆಟ್ಪ್ರೂಫ್ ಜಾಕೆಟ್, ಹಲವಾರು ದಶಕಗಳಿಂದ ನೆನೆಗುದಿಗೆ ಬಿದ್ದಿದ್ದ ಒಂದು ಶ್ರೇಣಿ ಒಂದು ಪಿಂಚಣಿ (OROP- One Rank One Pension) ಯೋಜನೆಯನ್ನೂ ಜಾರಿಗೊಳಿಸಿ ಮಾಜಿ ಸೈನಿಕರ ಮುಖದಲ್ಲಿ ಮಂದಹಾಸ ಮೂಡುವಂತೆ ಮಾಡಿದ್ದರು. ಇದೇ ಕಾರಣಕ್ಕೋ ಏನೋ ನರೇಂದ್ರ ಮೋದಿಜೀ ಎಂದರೆ ಭಾರತೀಯ ಸೇನಿಕರಿಗೆ ಎಲ್ಲಿಲ್ಲದ ಅಭಿಮಾನ, ಪ್ರೀತಿ.
ಪ್ರಧಾನಿಯೆಂದರೆ ಅಚ್ಚುಮೆಚ್ಚು ಎನ್ನುವ ಭಾರತೀಯ ಸೇನೆಗೆ ಮೋದಿಜೀಯವರೇ ಆತ್ಮಸ್ಥೈರ್ಯ ಒಂದು ಕಡೆ ತುಂಬುತ್ತಿದ್ದರೆ ಇತ್ತ ಈ ಮಧ್ಯೆ ಅಂತರಾಷ್ಟ್ರೀಯ ಮಟ್ಟದ ಸರ್ವೇಕ್ಷಣೆಯೊಂದು ಜಾರಿಯಾಗಿದ್ದು ಆ ಸರ್ವೇ ರಿಪೋರ್ಟನ್ನ ನೋಡಿದ ಬಳಿಕ ದೇಶದ ಜನತೆ ಎದೆಯುಬ್ಬಿಸಿ ನಿಲ್ಲುವುದು ಶತಸಿದ್ಧ. ಈ ಸರ್ವೇಕ್ಷಣೆಯ ನಂಬರ್ ನಲ್ಲಿ ಪಾಕಿಸ್ತಾನ ಭಾರತದ ಅಕ್ಕಪಕ್ಕವೂ ಇಲ್ಲದೇ ಮೂಲೆಯಲ್ಲಿ ಡಸ್ಟಬಿನ್ ಇರೋ ಜಾಗದಲ್ಲಿ ಹೋಗಿ ಬಿದ್ದಿದೆ. ಅಷ್ಟಕ್ಕೂ ಏನದು ರಿಪೋರ್ಟ್ ಗೊತ್ತಾ?
‘ಗ್ಲೋಬಲ್ ಫೈರ್ ಪವರ್’ ಸಂಸ್ಥೆ ವತಿಯಿಂದ ಸುಮಾರು 136 ರಾಷ್ಟ್ರಗಳ ರಿಪೋರ್ಟ್ ತಯಾರು ಮಾಡಲಾಗಿದ್ದು ಆ ಸರ್ವೇ ಆಯಾ ರಾಷ್ಟ್ರಗಳು ಹೊಂದಿರುವ ಸೈನ್ಯ ಶಕ್ತಿಯ ಆಧಾರದ ಮೇಲೆ ರ್ಯಾಂಕಿಂಗ್ ಗಳನ್ನ ನೀಡಲಾಗಿದೆ. ಈ ರ್ಯಾಂಕಿಂಗ್ ಪಟ್ಟಿಯಲ್ಲಿ ಭಾರತದ ನೆರೆಯ ರಾಷ್ಟ್ರವಾದ ಚೀನಾ 3 ನೆಯ ಸ್ಥಾನದಲ್ಲಿ, ನೇಪಾಳ 101 ನೆಯ ಸ್ಥಾನ, ಭೂತಾನ್ 136 ಹಾಗು ಬಾಂಗ್ಲಾದೇಶ 56 ನೆಯ ಸ್ಥಾನದಲ್ಲಿ ಜಾಗ ಪಡೆದುಕೊಂಡಿವೆ.
ಯುದ್ಧವಿಮಾನಗಳನ್ನ ಅತಿ ಹೆಚ್ಚು ಹೊಂದಿರುವ ರಾಷ್ಟ್ರಗಳ ಸಾಲಿನಲ್ಲಿ ಅಮೇರಿಕಾ ನಂಬರ್ 1 ಸ್ಥಾನದಲ್ಲಿದೆ. ರಷ್ಯಾ ಯುದ್ಧ ಟ್ಯಾಂಕರ್ ಸಾಲಿನಲ್ಲಿ ಹಾಗು ಉತ್ತರ ಕೋರಿಯಾ ಕ್ಷಿಪಣಿಗಳ ಸಾಲಿನಲ್ಲಿ ಎಲ್ಲ ರಾಷ್ಟ್ರಗಳಿಗಿಂತ ಮುಂದಿವೆ. ಆದರೆ ಭಾರತ ಎಷ್ಟನೇ ಸ್ಥಾನದಲ್ಲಿದೆ ಅನ್ನೋದು ಮಾತ್ರ ಖಂಡಿತ ನಿಮಗೆ ಶಾಕ್ ಕೊಡೋದು ಗ್ಯಾರಂಟಿ.
ಈ ಸರ್ವೇ ರಿಪೋರ್ಟಿನ ರ್ಯಾಂಕಿಂಗ್ನ ಪ್ರಕಾರ ಸೇನಾಬಲದ ತಾಕತ್ತಿನಲ್ಲಿ ಭಾರತಕ್ಕೆ ನಾಲ್ಕನೆ ಸ್ಥಾನ ಲಭಿಸಿದೆ. ಭಾರತದ ನೆರೆಯ ರಾಷ್ಟ್ರ ಚೀನಾ ಮೂರನೆ ಸ್ಥಾನವನ್ನ ಪಡೆದಿದೆ. ಭೂತಾನ್, ನೇಪಾಳ, ಬಾಂಗ್ಲಾದೇಶದ ಕ್ರಮಸಂಖ್ಯೆ ಬಗ್ಗೆ ಹೇಳಿದಿರಿ ಆದರೆ ಆ ದರಿದ್ರ ಪಾಕಿಸ್ತಾನದ ರ್ಯಾಂಕಿಂಗ್ ಎಷ್ಟಂತ ಹೇಳಲೇ ಇಲ್ಲ ಅಂದುಕೊಳ್ಳುತ್ತಿದ್ದೀರ ಅಲ್ಲವೇ?
ಯೆಸ್ ಅದನ್ನ ನಿಮಗೆ ಹೇಳಲೇಬೇಕು, ಭಾರತವೆಂದರೆ ಸದಾ ವಿಷಕಕ್ಕುವ, ಭಾರತವನ್ನ ಸರ್ವನಾಶ ಮಾಡಿಬಿಡುತ್ತೇವೆ ಅಂತ ಸದಾ ಕನಸು ಕಾಣುವ, ಭಯೋತ್ಪಾದಕರ ಫ್ಯಾಕ್ಟರಿಯಾಗಿರುವ ಪಾಕಿಸ್ತಾನ ಈ ಹಿಂದೆ ನಡೆಸಿದ್ದ ಸರ್ವೇ ಯಲ್ಲಿ 13 ನೆಯ ಸ್ಥಾನ ಪಡೆದಿದ್ದರೆ ಈ ಬಾರಿ ನಡೆದ ಸರ್ವೇಕ್ಷಣೆಯಲ್ಲಿ ಅದು ಮತ್ತೆ 4 ಅಂಕಿಗಳ ಕುಸಿತ ಕಂಡು 17 ನೆಯ ಸ್ಥಾನಕ್ಕಿಳಿದಿದೆ.
ಆಯಾ ದೇಶಗಳ ಆರ್ಥಿಕ ಸ್ಥಿರತೆ ಹಾಗು ಆಯಾ ರಾಷ್ಟ್ರಗಳ ರಕ್ಷಣಾ ಬಜೆಟ್ ಇಂಡೆಕ್ಸ್ ನ್ನ ಗಮನದಲ್ಲಿಟ್ಟುಕೊಂಡು ಈ ರ್ಯಾಂಕಿಂಗ್ ಪಟ್ಟಿಯನ್ನ ತಯಾರಿಸಲಾಗಿದ್ದು ಇದರ ಜೊತೆ ಜೊತೆಗೆ ಆಯಾ ರಾಷ್ಟ್ರಗಳ ಹತ್ತಿರವಿರುವ ಯುದ್ಧ ಟ್ಯಾಂಕರ್ಗಳು, ಕ್ಷಿಪಣಿಗಳು, ಯುದ್ಧ ವಿಮಾನಗಳು ಹಾಗು ಸೇನಾಬಲ ದ ಆಧಾರವನ್ನೂ ಈ ಸರ್ವೇಕ್ಷಣೆಯಲ್ಲಿ ನಮೂದಿಸಲಾಗಿದೆ.
ಈ ಸರ್ವೇಕ್ಷಣೆಯ ಇಂಡೆಕ್ಸ್ ನಲ್ಲಿ ಆಯಾ ದೇಶಗಳ ಪರಮಾಣು ಶಕ್ತಿ ಹಾಗು ರಾಜಕೀಯ ನೇತೃತ್ವವನ್ನ ಸೇರಿಸಲಾಗಿಲ್ಲ.
ಪಾಕಿಸ್ತಾನ ಈ ಹಿಂದೆ ಭಾರತಕ್ಕಿಂತ 9 ಸ್ಥಾನ ಹಿಂದೆ ಅಂದರೆ 13 ನೆಯ ಸ್ಥಾನದಲ್ಲಿತ್ತು ಆದರೆ ಈಗ ಪಾಕಿಸ್ತಾನ ಭಾರತಕ್ಕಿಂತ 13 ಸ್ಥಾನಕ್ಕಿಂತ ಕೆಳಗೆ ಬಿದ್ದಿದ್ದು ಇದೀಗ 17 ನೆಯ ಸ್ಥಾನಕ್ಕೆ ತೃಪ್ತಿಪಟ್ಟುಕೊಳ್ಳಬೇಕಾಗಿದೆ. ಭಾರತೀಯ ಸೇನೆಯ ಬಗೆಗಿನ ಈ ಅಂಕಿಅಂಶಗಳು ಹಾಗು ರ್ಯಾಂಕಿಂಗ್ ನಾವು ಭಾರತೀಯರೆಂದು ಹೇಳಿಕೊಳ್ಳಲು ಗರ್ವವೆನಿಸುವ ಸಂಗತಿಯಾಗಿದೆ. ಭಾರತೀಯ ಸೇನೆಗೆ ಸಿಕ್ಕಿರುವ ಈ ರ್ಯಾಂಕಿಂಗ್ ಸೇನೆಯ ಮನೋಬಲವನ್ನ ಹೆಚ್ಚಿಸುವುದರಲ್ಲಿ ಯಾವ ಸಂಶಯವೂ ಇಲ್ಲ. ಹುಟ್ಟು ದೇಶಭಕ್ತರಾದ ಮೋದಿಜೀ ಸೇನೆಯ ಮೇಲೆ ಅಪಾರ ಪ್ರೀತಿ ಹೊಂದಿದವರಾಗಿದ್ದು ಸೇನೆಯ ಮನೋಬಲ ಕುಗ್ಗದಂತೆ ಸದಾ ಸೇನೆಯ ಜೊತೆಗೇ ನಿಂತಿರುವುದು ಕೂಡ ಸೈನಿಕರ ಆತ್ಮಸ್ಥೈರ್ಯ ಹೆಚ್ಚುವಂತೆ ಮಾಡಿದೆ.