ಮದುವೆಗಂತ ನಡೆದುಕೊಂಡೇನೋ ಬಂದಿದ್ದರು ಆದರೆ ಪಾಪ ಅದೃಷ್ಟ ಚೆನ್ನಾಗಿರಲಿಲ್ಲ ಅನ್ಸತ್ತೆ ಹೋಗುವಾಗ ಮಾತ್ರ ಎಲ್ಲರೂ….

in Kannada News/News 1,596 views

ಭೋಪಾಲ್: ಲಾಕ್‍ಡೌನ್ ನಿಮಯ ಮೀರಿ ಮದುವೆಗೆ ಖುಷಿಯಿಂದ ಹೋದ ಅತಿಥಿಗಳಿಗೆ ಫುಲ್ ಶಾಕ್ ಕೊಟ್ಟ ಪೊಲೀಸರು ವಿಭಿನ್ನವಾದ ಶಿಕ್ಷೆಯನ್ನು ನೀಡಿರುವ ಘಟನೆ ಮಧ್ಯಪ್ರದೇಶದ ಭಿಂಡ್‍ನಲ್ಲಿ ನಡೆದಿದೆ.

ಮಧ್ಯಪ್ರದೇಶದ ಉಮಾರಿ ಎಂಬ ಹಳ್ಳಿಯಲ್ಲಿ ಮದುವೆ ನಡೆಯುತ್ತಿತ್ತು. ಈ ವಿವಾಹದಲ್ಲಿ ಸುಮಾರು 300 ಮಂದಿ ಸೇರಿದ್ದರು. ಈಗ ಯಾವುದೇ ಮದುವೆ, ಶುಭಸಮಾರಂಭ ನಡೆಯಬೇಕೆಂದರೂ ಜಿಲ್ಲಾಡಳಿತದ ಅನುಮತಿ ಬೇಕು. ಹಾಗಾಗಿ ಸಹಜವಾಗಿಯೇ ಜಿಲ್ಲಾಡಳಿತ, ಪೊಲೀಸರು ಒಂದು ಗಮನ ಇಟ್ಟಿರುತ್ತಾರೆ. ಅಂತೆಯೇ ಇಲ್ಲಿಯೂ ಸಹ ಕೊರೊನಾ ಲಾಕ್‍ಡೌನ್ ನಿಯಮ ಪಾಲನೆಯಾಗಿದೆಯೇ ಎಂದು ಪರಿಶೀಲನೆ ನಡೆಸಲು ಪೊಲೀಸರು ಬಂದಿದ್ದರು. ಪೊಲೀಸರು ಸ್ಥಳಕ್ಕೆ ಬಂದಾಗ ಅಲ್ಲಿ 300ಕ್ಕೂ ಹೆಚ್ಚು ಮಂದಿ ಸೇರಿದ್ದು ಕಂಡುಬಂತು.

Advertisement

ಪೊಲೀಸರನ್ನು ನೋಡುತ್ತಿದ್ದಂತೆ ಅನೇಕರು ತಪ್ಪಿಸಿಕೊಂಡು ಓಡಿದರೂ, ಮತ್ತೊಂದಷ್ಟು ಮಂದಿ ಸಿಕ್ಕಿಬಿದ್ದರು. ಹೀಗೆ ಸಿಕ್ಕಿಬಿದ್ದವರಿಗೆ ಪೊಲೀಸರು ಕಪ್ಪೆಯಂತೆ ಜಿಗಿಯುತ್ತಾ ಹೋಗವ ಶಿಕ್ಷೆಯನ್ನು ನೀಡಿದ್ದಾರೆ. 17 ಮಂದಿ ಪುರುಷರು ಕಪ್ಪೆಯಂತೆ ಜಿಗಿದಿರುವ ವೀಡಿಯೋ ವೈರಲ್ ಆಗಿದೆ.

ಮಧ್ಯಪ್ರದೇಶದಲ್ಲಿ 7 ಲಕ್ಷಕ್ಕೂ ಅಧಿಕ ಕೊರೊನಾ ಕೇಸ್‍ಗಳಿದ್ದು, ಕಳೆದ 24 ಗಂಟೆಯಲ್ಲಿ 5,065 ಪ್ರಕರಣಗಳು ದಾಖಲಾಗಿವೆ. ಇಲ್ಲಿಯವರೆಗೆ ಆ ರಾಜ್ಯದಲ್ಲಿ 7227 ಮಂದಿ ಮೃತಪಟ್ಟಿದ್ದಾರೆ.

ಮುಂದಿನ ಸುದ್ದಿ:

ಸಂಬಂಧದಲ್ಲಿ ಅಣ್ಣನೇ ಆದ ವ್ಯಕ್ತಿಯನ್ನ ಮದುವೆಯಾದ ಯುವತಿ, ಬಳಿಕ ಕುಟುಂಬಸ್ಥರು ಮಾಡಿದ್ದೇನು ಗೊತ್ತಾ?

ಚತ್ರಾ: ಸಹೋದರಿಯೊಬ್ಬರು ತನ್ನ ಹಿರಿಯ ಸಹೋದರನನ್ನು ಮದುವೆಯಾಗಿ ಸಪ್ತಪದಿ ತುಳಿದಿರುವ ಘಟನೆ ಖರಿಕಾ ಗ್ರಾಮದಲ್ಲಿ ನಡೆದಿದೆ. ಖರಿಕಾದ ಸುಖದೇವ್ ರಾಮ್‌ನ 25 ವರ್ಷದ ಮಗಳು ಸಬಿತಾ ಅಲಿಯಾಸ್ ಕಿರಣ್ ಕುಮಾರಿ ಅವರು ಲಖನ್ ರಾಮ್ ಅವರ ಪುತ್ರ ರಾಜ್‌ದೀಪ್ ಕುಮಾರ್​ನನ್ನು ಪ್ರೀತಿಸುತ್ತಿದ್ದಳು. ಸಂಬಂಧದಲ್ಲಿ ಇಬ್ಬರೂ ಸಹೋದರ ಮತ್ತು ಸಹೋದರಿಯಾಗಿದ್ದಾರೆ.

ಇನ್ನು ಇವರ ಪ್ರೀತಿಯನ್ನು ಎರಡು ಕುಟುಂಬಗಳು ನಿರಾಕರಿಸಿದ್ದು, ಇಬ್ಬರಿಗೂ ಬುದ್ಧಿ ಹೇಳಿದ್ದರು. ಆದರೂ ಸಹ ಇಬ್ಬರು ತಮ್ಮ ಪ್ರೇಮವನ್ನು ಮುಂದುವರಿಸಿದ್ದರು. ನಾಲ್ಕು ತಿಂಗಳ ಹಿಂದೆ ಇಬ್ಬರೂ ಮದುವೆಯಾಗಿದ್ದಾರೆ. ನಂತರ ಮನವೊಲಿಸುವ ಪ್ರಯತ್ನ ಮಾಡಿದ್ದಾರೆ. ಹಿರಿಯರು ಒಪ್ಪದ ಕಾರಣ ಈ ವಿಷಯ ಸ್ಥಳೀಯ ಪೊಲೀಸ್ ಠಾಣೆಯ ಮೆಟ್ಟಿಲೇರಿತ್ತು.

ಅಲ್ಲಿಯೂ ಸಹ ಸಾ-ಯು-ವುದಾಗಲಿ, ಜೀವಿಸುವುದಾಗಲಿ ಅದು ನನ್ನ ಪತಿ ರಾಜ್‌ದೀಪ್‌ನೊಂದಿಗೆ ಎಂದು ಹೇಳಿದ್ದಾಳೆ. ಈ ಮಾತುಗಳನ್ನು ಕೇಳಿದ ಆಕೆಯ ಕುಟುಂಬವು ಶಾಕ್​ಗೆ ಒಳಪಟ್ಟಿತು. ಇನ್ನು ಯುವತಿಯ ಪೋಷಕರು ಆಕೆಯ ಫೋಟೋವನ್ನು ಶ-ವ-ಯಾತ್ರೆ ಮಾಡಿ ಮಗಳು ತಮ್ಮ ಪಾಲಿಗೆ ಸ-ತ್ತ-ಳೆಂದು ಅಂತ್ಯಕ್ರಿಯೆ ಮಾಡಿದರು. ಕೊನೆಯ ವಿಧಿಗಳನ್ನು ನೆರವೇರಿಸುವ ಮೂಲಕ ಮಗಳ ಜೊತೆಯಿದ್ದ ಎಲ್ಲಾ ಸಂಬಂಧಗಳನ್ನು ಆ ಕುಟುಂಬ ಕೊನೆಗೊಳಿಸಿತು.

ಇದನ್ನೂ ಓದಿ: ಇನ್ನೇನು ತಾಳಿ ಕಟ್ಟಬೇಕು ಆಗಲೇ ಮಂಗಳಸೂತ್ರವನ್ನ ಕದ್ದೊಯ್ದ ಪುರೋಹಿತ: ಬಳಿಕ ನಡೆದದ್ದೇ ಥ್ರಿಲ್ಲಿಂಗ್ ಸ್ಟೋರಿ

ಹೈದರಾಬಾದ್​: ದೇವರ ಸ್ಥಾನದಲ್ಲಿ ನಿಂತು ವೇದ-ಮಂತ್ರಗಳನ್ನು ಪಠಿಸುವ ಮೂಲಕ ನವಜೋಡಿಯನ್ನು ಮದುವೆ ಬಂ-ಧ-ನದಲ್ಲಿ ಒಂದು ಮಾಡುವಂತಹ ಸೇತುವೆಯಾಗಿ ಕೆಲಸ ಮಾಡುವ ಪುರೋಹಿತನೇ ಅಡ್ಡದಾರಿ ಹಿಡಿದ ಪ್ರಸಂಗವೊಂದು ಬೆಳಕಿಗೆ ಬಂದಿದೆ.

ಮದುವೆ ಮಂಟಪದಲ್ಲಿ ವಧು-ವರರ ಎದುರೇ ಪುರೋಹಿತನೊಬ್ಬ ಮಂಗಳಸೂತ್ರವನ್ನು ಎಗರಿಸಿದ ಘಟನೆ ಮೇದಕ್​ ಜಿಲ್ಲೆಯ ತುಪ್ರಾನ್​ ಪ್ರದೇಶದಲ್ಲಿ ನಡೆದಿದೆ. ಸಂತ್ರಸ್ತರು ದೂರು ನೀಡಿದ ಬಳಿಕ ಈ ಪ್ರಕರಣ ಬೆಳಕಿಗೆ ಬಂದಿದೆ.

ಜ್ಞಾನೇಂದರ್ ದಾಸ್​ಗೂ ತುಪ್ರಾನ್​ ಮುನ್ಸಿಪಾಲಿಟಿಯಲ್ಲಿ ವಾಸವಿದ್ದ ಯುವತಿಗೂ ಮದುವೆ ನಿಶ್ಚಯವಾಗಿತ್ತು. ಅದಕ್ಕಾಗಿ ಗಜ್ವೆಲ್ ಮೂಲದ ಪುರೋಹಿತರನ್ನು ಆಯ್ಕೆ ಮಾಡಿಕೊಂಡಿದ್ದರು. ಅದರಂತೆಯೇ ಮದುವೆ ಸಂಭ್ರಮ ನಡೆಯುವಾಗ ಮಂತ್ರ ಹೇಳುತ್ತಲೇ ವಧು-ವರ ಮತ್ತು ಸಂಬಂಧಿಕರ ಗಮನವನ್ನು ಬೇರೆಡೆಗೆ ಸೆಳೆದು ಪುರೋಹಿತ ಮಂಗಳಸೂತ್ರವನ್ನು ಎತ್ತಿಕೊಂಡು ತನ್ನ ಜೇಬಿನಲ್ಲಿಟ್ಟುಕೊಂಡಿದ್ದಾನೆ. ಈ ದೃಶ್ಯವು ಅಲ್ಲಿಯೇ ವಿಡಿಯೋ ರೆಕಾರ್ಡಿಂಗ್ ಮಾಡುತ್ತಿದ್ದ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಇದಾದ ಬಳಿಕ ವರ ತಾಳಿ ಕಟ್ಟಲು ಮುಂದಾದಾಗ ಮುಂದಿನ ವಿಧಾನಗಳನ್ನು ಅನುಸರಿಸದೇ ತರಾತುರಿಯಲ್ಲಿ ಪುರೋಹಿತ ಮದುವೆ ಮಂಟಪವನ್ನು ಖಾಲಿ ಮಾಡಿದ್ದಾನೆ. ಇತ್ತ ಪುರೋಹಿತರು ಹೋಗುತ್ತಿದ್ದಂತೆ ಅನುಮಾನ ಬಂದು ಪರಿಶೀಲನೆ ಮಾಡಿದಾಗ ಅಲ್ಲಿ ಮಂಗಳಸೂತ್ರ ನಾಪತ್ತೆಯಾಗಿರುವುದನ್ನು ನೋಡಿ ವಧು-ವರ ಶಾಕ್​ ಆಗಿದ್ದಾರೆ.

ತಮ್ಮ ಅನುಮಾನ ನಿಜವಾದಾಗ ತಕ್ಷಣ ವಧು-ವರ ಪುರೋಹಿತರಿಗೆ ಕರೆ ಮಾಡಿದ್ದಾರೆ. ಆದರೆ, ಅವರ ಫೋನ್​ ಸ್ವಿಚ್​ ಆಫ್​ ಆಗಿತ್ತು. ತಕ್ಷಣ ಗಜ್ವೆಲ್​ನಲ್ಲಿರುವ ಅವರ ಮನೆಗೆ ಹೋದಾಗ ಪುರೋಹಿತರ ತಾಯಿ ಉಡಾಫೆ ಉತ್ತರ ನೀಡಿದ್ದಾರೆ. ಇದಾದ ಬಳಿಕ ಮದುವೆ ರೆಕಾರ್ಡಿಂಗ್​ ವಿಡಿಯೋವನ್ನು ವೀಕ್ಷಿಸಿದಾಗ ಪುರೋಹಿತನ ನಿಜಬಣ್ಣ ಬಯಲಾಗಿದೆ. ಬಳಿಕ ಸಂತ್ರಸ್ತರು ಠಾಣೆಗೆ ತೆರಳಿ ದೂರು ದಾಖಲಿಸಿದ್ದಾರೆ.

ಇದೀಗ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ವಿಡಿಯೋ ತುಣುಕನ್ನು ವಶಕ್ಕೆ ಪಡೆದುಕೊಂಡು ತನಿಖೆ ಆರಂಭಿಸಿದ್ದಾರೆ. ಇತ್ತ ಪುರೋಹಿತರೊಬ್ಬರು ಮಂಗಳಸೂತ್ರವನ್ನೇ ಕಳ್ಳತನ ಮಾಡಿದ ಸುದ್ದಿ ಕೇಳಿ ಅನೇಕರು ಶಾಕ್​ಗೆ ಒಳಗಾಗಿದ್ದಾರೆ.

Advertisement
Share this on...