ಲಖನೌ: ಮದುವೆ ಎಂದರೆ ಹೆಣ್ಣು ಮಕ್ಕಳು ಅದೆಷ್ಟು ಕನಸು ಕಟ್ಟಿರುತ್ತಾರೆ.. ಅದೇ ರೀತಿ ಸಾಕಷ್ಟು ಕನಸಿನೊಂದಿಗೆ ಹಸೆ ಮಣೆ ಏರಲು ಸಿದ್ಧವಾಗಿದ್ದ ವಧುವಿಗೆ ಮದುವೆ ದಿನವೇ ಕನಸಿನ ಅರಮನೆಗೆ ಬೆಂಕಿ ಬಿದ್ದ ಘಟನೆ ಉತ್ತರ ಪ್ರದೇಶದ ಮಹಾರಾಜಗಂಜ್ನಲ್ಲಿ ನಡೆದಿದೆ. ಒಂದು ವಿಡಿಯೋ ನೋಡಿದ ವರ ಮದುವೆಯನ್ನೇ ಕ್ಯಾನ್ಸಲ್ ಮಾಡಿಕೊಂಡು ಹೋಗಿದ್ದಾನೆ.
ಆ ಹುಡುಗ ಹೈದರಾಬಾದ್ನಲ್ಲಿ ಕೆಲಸ ಮಾಡುತ್ತಿದ್ದ. ಯಾವುದೋ ಮದುವೆಗೆ ಹೋದಾಗ ಹುಡುಗಿಯೊಬ್ಬಳನ್ನು ನೋಡಿ ಪ್ರೀತಿಸಲು ಆರಂಭಿಸಿದ್ದ. ಪ್ರೀತಿ ಹೆಮ್ಮರವಾಗಿ ಬೆಳೆದು, ಕುಟುಂಬಸ್ಥರ ಒಪ್ಪಿಗೆಯೊಂದಿಗೆ ಮೇ 16ಕ್ಕೆ ಮದುವೆಯೂ ನಿಶ್ಚಯವಾಗಿತ್ತು. ಆದರೆ ಮದುವೆಯ ದಿನ ಬೆಳಗ್ಗೆ ವರ, ವಧುವಿಗೆ ಕರೆ ಮಾಡಿದ್ದಾನೆ. ನಾನು ನಿನ್ನನ್ನು ಮದುವೆಯಾಗುವುದಿಲ್ಲ ಎಂದು ಫೋನ್ ಕಟ್ ಮಾಡಿದ್ದಾನೆ. ಇದನ್ನು ಕೇಳಿದ ವಧು ಅಲ್ಲೇ ತಲೆ ತಿರುಗಿ ಬಿದ್ದಿದ್ದಾಳೆ. ಎಚ್ಚರವಾದ ನಂತರ ವರ ಹೇಳಿದ ವಿಚಾರವನ್ನು ತಿಳಿಸಿ ಕಣ್ಣೀರು ಸುರಿಸಿದ್ದಾಳೆ.
ಇದರಿಂದಾಗಿ ಸಿಟ್ಟಿಗೆದ್ದ ಕುಟುಂಬಸ್ಥರು ತಕ್ಷಣ ಆಕೆಯನ್ನು ಕರೆದುಕೊಂಡು, ಮದುವೆ ಆಮಂತ್ರಣ ಪತ್ರಿಕೆ ಹಿಡಿದು ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದಾರೆ. ಪೊಲೀಸರು ಎರಡೂ ಕಡೆಯವರನ್ನು ಕರೆಸಿ ನಡೆದ ವಿಚಾರವನ್ನು ಸವಿಸ್ತಾರವಾಗಿ ತಿಳಿಸುವಂತೆ ತಿಳಿಸಿದ್ದಾರೆ.
ಯುವಕ, ಯುವತಿ ಪ್ರೀತಿಯಲ್ಲಿದ್ದಾಗ, ಯುವಕ ಆಕೆಗೆ ಒಂದು ಸ್ಕೂಟಿಯನ್ನು ಕೊಡಿಸಿದ್ದನಂತೆ. ಕೆಲಸ ಮಾಡಬೇಕು ಎನ್ನುವ ಆಸೆಯಲ್ಲಿದ್ದ ಅವಳಿಗೆ ಲಂಚ ಕೊಟ್ಟು ಕೆಲಸ ಸೇರಲು ಸಹಾಯ ಮಾಡಿದ್ದ. 1.25 ಲಕ್ಷ ರೂಪಾಯಿ ಲಂಚ ನೀಡಲೆಂದು ಕೊಟ್ಟಿದ್ದನಂತೆ. ಗೋರಕ್ಪುರದ ಒಬ್ಬ ವ್ಯಕ್ತಿಗೆ ಲಂಚ ನೀಡಿ ಕೆಲಸ ಗಿಟ್ಟಿಸಿಕೊಳ್ಳಲಾಗಿತ್ತು. ಆದರೆ ಈ ಮಧ್ಯೆ ಲಂಚ ಪಡೆದ ವ್ಯಕ್ತಿ ಹಾಗೂ ಯುವತಿ ಹೆಚ್ಚು ಸ್ನೇಹ ಬೆಳೆಸಿಕೊಂಡಿದ್ದಾರೆ. ಕೆಲ ಖಾಸಗಿ ಕ್ಷಣಗಳನ್ನೂ ಕಳೆದಿದ್ದಾರೆ. ಅದರ ವಿಡಿಯೋ ಮಾಡಿಕೊಂಡಿದ್ದ ಆತ ಅದನ್ನು ಆಕೆಯ ಪ್ರಿಯತಮನಿಗೆ ಮದುವೆಯ ದಿನವೇ ಕಳುಹಿಸಿಕೊಟ್ಟಿದ್ದಾನೆ. ಅದರಿಂದ ಸಿಟ್ಟಿಗೆದ್ದ ವರ ಮದುವೆ ಕ್ಯಾನ್ಸಲ್ ಮಾಡಿದ್ದಾನೆ. ಎರಡೂ ಕಡೆಯವರ ಮನ ಒಲಿಸಲು ಪೊಲೀಸರು ಸಾಕಷ್ಟು ಪ್ರಯತ್ನ ಪಟ್ಟರು ಅದು ಸಾಧ್ಯವಾಗಿಲ್ಲ ಎನ್ನಲಾಗಿದೆ.
ಮುಂದಿನ ಸುದ್ದಿ: ಕೊರಳಿಗೆ ಹಾರ ಹಾಕುತ್ತಿದ್ದಂತೆಯೇ ಪ್ರಾಣ ಬಿಟ್ಟ ಯುವತಿ: ಶ-ವವನ್ನ ರೂಮಲ್ಲಿಟ್ಟು ವಧುವಿನ ತಂಗಿಯ ಜೊತೆ ಮದುವೆ.! ಕಾರಣವೇನು ಗೊತ್ತಾ?
ಲಖನೌ: ಮದುವೆ ವೇದಿಕೆ ಮೇಲಿದ್ದ ವಧು ಇನ್ನೇನು ಸಪ್ತಪದಿ ತುಳಿದು ನಂತರ ಗಂಡನ ಮನೆಗೆ ತೆರಳಬೇಕು ಎನ್ನುವಷ್ಟರಲ್ಲಿ ಹೃದಯಾಘಾತವಾಗಿ ಸಾವನ್ನಪ್ಪಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. ಅದಾದ ನಂತರ ಅದೇ ಮಂಟಪದಲ್ಲಿ ವಧುವಿನ ತಂಗಿಯನ್ನೇ ವರ ಮದುವೆಯಾಗಿ ಕರೆದುಕೊಂಡು ಹೋಗಿರುವುದಾಗಿ ಹೇಳಲಾಗಿದೆ.
ಉತ್ತರಪ್ರದೇಶದ ಸಮಸ್ಪುರ ಹೆಸರಿನ ಗ್ರಾಮದಲ್ಲಿ ಇಂತದ್ದೊಂದು ಘಟನೆ ನಡೆದಿದೆ. ಸುರಭಿ ಹೆಸರಿನ ಯುವತಿಗೆ ಮಂಜೇಶ ಹೆಸರಿನ ಯುವಕನೊಂದಿಗೆ ಮೇ 25ಕ್ಕೆ ಮದುವೆ ನಡೆಯುವುದಿತ್ತು. ಆ ದಿನ ರಾತ್ರಿ ಮುಹೂರ್ತವಿದ್ದಿದ್ದರಿಂದ ವರನ ಕಡೆಯ ದಿಬ್ಬಣ ವಧುವಿನ ಮನೆಗೆ ಸೇರಿತ್ತು. ವಧು ವರರಿಬ್ಬರೂ ವೇದಿಕೆಯನ್ನು ಹತ್ತಿ ವರಮಾಲೆಯನ್ನೂ ಬದಲಾಯಿಸಿಕೊಂಡಿದ್ದರು. ಅವರಿಬ್ಬರು ಇನ್ನೇನು ಸಪ್ತಪದಿ ತುಳಿಯುಬೇಕು ಎನ್ನುವಷ್ಟರಲ್ಲಿ ಸುರಭಿ ಅಲ್ಲಿಯೇ ಕು-ಸಿ-ದು ಬಿ ದ್ದಿ ದ್ದಾ ಳೆ.
ತಕ್ಷಣ ಕುಟುಂಬಸ್ಥರು ಆಕೆಯನ್ನು ಹತ್ತಿರದ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ ಆಕೆ ಅದಾಗಲೇ ಹೃದಯಾಘಾತದಿಂದ ಸಾ ವ ನ್ನ ಪ್ಪಿ ದ್ದಾಗಿ ವೈದ್ಯರು ತಿಳಿಸಿದ್ದಾರೆ. ಆಕೆಯನ್ನು ವಾಪಾಸು ಮನೆಗೆ ಕರೆದುಕೊಂಡು ಬರಲಾಗಿದೆ. ಕುಟುಂಬಸ್ಥರು ಒಪ್ಪಿ ಆಕೆಯ ತಂಗಿಯನ್ನು ಮಂಜೇಶನಿಗೆ ಮದುವೆ ಮಾಡಿಕೊಡಲು ನಿರ್ಧರಿಸಿದ್ದಾರೆ.
ಸುರಭಿಯ ಮೃ#ತ-ದೇ ಹ ವನ್ನು ಮನೆಯ ಕೋಣೆಯಲ್ಲಿ ಮಲಗಿಸಿ, ಮದುವೆ ಕಾರ್ಯಕ್ರಮವನ್ನು ಮುಂದುವರಿಸಲಾಗಿದೆ. ಶಾಸ್ತ್ರೋಸ್ತ್ರವಾಗಿ ಮದುವೆ ಮಾಡಿ ಮೃ ತ ಳ ತಂಗಿಯನ್ನು ಗಂಡನ ಮನೆಗೆ ಕಳುಹಿಸಿಕೊಟ್ಟ ನಂತರ ಆಕೆಯ ಅಂತ್ಯಸಂಸ್ಕಾರ ಮಾಡಲಾಗಿರುವುದಾಗಿ ಹೇಳಲಾಗಿದೆ.