ರಾಮಾಯಣ ರಚಿಸಿದ ಮಹರ್ಷಿ ವಾಲ್ಮೀಕಿ ಹುಟ್ಟಿ ಬೆಳೆದು ಮೋಕ್ಷ ಪಡೆದ ಸ್ಥಳ ನಮ್ಮ ಕರ್ನಾಟಕದಲ್ಲೇ ಇದೆ: ಎಲ್ಲಿ ಗೊತ್ತಾ?

in Uncategorized 3,770 views

ಅಯೋದ್ಯೆಯಲ್ಲಿ ಶ್ರೀರಾಮನ ವಿಗ್ರಹ ಪ್ರತಿಷ್ಠಾಪನೆಗೆ ದಿನಗಣನೆ ಶುರುವಾಗಿದ್ದು, ರಾಮಾಯಣದ ಜೊತೆ ಸಂಬಂಧ ಹೊಂದಿರುವ ಕರ್ನಾಟಕದ ಅನೇಕ ಸ್ಥಳಗಳ ಪರಿಚಯ ಈಗಾಗಲೇ ಮಾಡಿಕೊಡಲಾಗಿದೆ. ಈ ನಡುವೆ, ಅಯೋದ್ಯೆಯ ಶ್ರೀರಾಮ ಚರಿತೆಯನ್ನು ತಮ್ಮ ರಾಮಾಯಣ ಮಹಾಕಾವ್ಯದ ಮೂಲಕ ಪ್ರಪಂಚಕ್ಕೆ ಮನದಟ್ಟು ಮಾಡಿಕೊಟ್ಟ ವಾಲ್ಮೀಕಿ ಮಹರ್ಷಿ ಹುಟ್ಟಿ ಬೆಳೆದು, ತಮ್ಮ ಬಾಲ್ಯ, ಯೌವನ ಹಾಗೂ ವೃತ್ತಿ ಸೇರಿದಂತೆ ಮೊಕ್ಷ ಪಡೆದ ಸ್ಥಳ ಕರ್ನಾಟಕದಲ್ಲೇ ಇದೆ ಎಂಬುದು ಮತ್ತೊಂದು ಹೆಮ್ಮೆಯ ಸಂಗತಿಯಾಗಿದೆ.

Advertisement

ಚಿಕ್ಕಬಳ್ಳಾಪುರ: ಅಯೋದ್ಯೆಯಲ್ಲಿ (Ayodhya) ಶ್ರೀರಾಮನ ಮೂರ್ತಿ ಪ್ರತಿಷ್ಠಾಪನೆಯ ಜೊತೆಗೆ ಶ್ರೀರಾಮ ಚರಿತೆಯನ್ನು ತಮ್ಮ ರಾಮಾಯಣ ಮಹಾಕಾವ್ಯದ ಮೂಲಕ ಪ್ರಪಂಚಕ್ಕೆ ಮನದಟ್ಟು ಮಾಡಿಕೊಟ್ಟ ವಾಲ್ಮೀಕಿ ಮಹರ್ಷಿ (Valmiki Maharshi) ಪ್ರತಿಮೆಯೂ ಅನಾವರಣ ಮಾಡಲಾಗುತ್ತಿದೆ. ಈ ನಡುವೆ, ವಾಲ್ಮೀಕಿ ಹುಟ್ಟಿ ಬೆಳೆದು, ತಮ್ಮ ಬಾಲ್ಯ, ಯೌವನ ಹಾಗೂ ವೃತ್ತಿ ಸೇರಿದಂತೆ ಮೊಕ್ಷ ಪಡೆದ ಸ್ಥಳ ಕರ್ನಾಟಕದಲ್ಲೇ ಇದೆ ಎಂಬ ಹೆಮ್ಮೆಯ ವಿಚಾರ ಹೆಚ್ಚಿನವರಿಗೆ ತಿಳಿದಿಲ್ಲ.

ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ತಾಲೂಕಿನ ತಲಕಾಯಲಬೆಟ್ಟದಲ್ಲಿ ಮಹರ್ಷಿ ವಾಲ್ಮೀಕಿ ಬಾಲ್ಯ, ಯೌವನ, ಸಂಸಾರ ಸೇರಿದಂತೆ ನಾರದರಿಂದ ಮೊಕ್ಷ ಪಡೆದು ಜ್ಞಾನಿಯಾದರಂತೆ. ಹೌದು, ತಲಕಾಯಲಬೆಟ್ಟ ಗ್ರಾಮದ ಬಳಿ ತನ್ನ ಕೆಟ್ಟ ಕೆಲಸಗಳನ್ನು ಬಿಟ್ಟು ಇಲ್ಲಿರುವ ಗುಹೆಯಲ್ಲಿ ಜಪ ತಪ ಜ್ಞಾನ ಸಂಪಾದಿಸಿದರಂತೆ. ಇದರ ಕುರುಹುಗಾಗಿ ಬೆಟ್ಟದಲ್ಲಿ ಗುಹೆ, ಶಿವಲಿಂಗ ಇದ್ದು, ಹೊರಗೆ ವಾಲ್ಮೀಕಿ ಮಹರ್ಷಿಯ ದೇವಸ್ಥಾನ ಪ್ರತಿಮೆ ಇದೆ.

ಅಯೋಧ್ಯೆಯಲ್ಲಿ ರಾಮಾಯಣ ಮಹಾಕಾವ್ಯದ ಕತೃ ಮಹರ್ಷಿ ವಾಲ್ಮಕಿ ಪ್ರತಿಮೆಯನ್ನು ಶ್ರೀರಾಮರ ಪ್ರತಿಮೆ ಉದ್ಘಾಟನೆ ದಿನವೇ ಅನಾರಣ ಮಾಡುವುದನ್ನು ಕೇಳಿ ಗ್ರಾಮಸ್ಥರು ಟಿವಿ9 ಜೊತೆ ಸಂತಸ ಹಂಚಿಕೊಂಡಿದ್ದಾರೆ. ಅಯೋದ್ಯೆಯ ಶ್ರೀರಾಮನ ಕಥೆಯನ್ನು ಪ್ರಪಂಚಕ್ಕೆ ಸಾರಿದ್ದ ವಾಲ್ಮೀಕಿ ಮಹರ್ಷಿಯ ಗೌರವಾರ್ಥ, ಅಯೋದ್ಯೆಯಲ್ಲಿ ಸ್ಥಾನ ಕೊಟ್ಟಿರುವುದಕ್ಕೆ ತಲಕಾಯಲಬೆಟ್ಟ ಗ್ರಾಮಸ್ಥರ ಸಂತೋಷಕ್ಕೆ ಕಾರಣವಾಗಿದೆ. ಆದರೆ ಮಹಾನ್ ಮಹರ್ಷಿಯ ಜನ್ಮ ಸ್ಥಳ ಎನ್ನಲಾದ ಹಾಗೂ ಅವರು ತಪಸ್ಸು ಮಾಡಿದ್ದ ಗುಹೆ ಎನ್ನಲಾದ ಸ್ಥಳ ಅಭಿವೃದ್ಧಿಯಿಂದ ವಂಚಿತವಾಗಿರುವುದು ವಿಪರ್ಯಾಸವೇ ಸರಿ.

Advertisement
Share this on...