ಲಾಲ್ ಸಿಂಗ್ ಚಡ್ಡಾ ಅಟ್ಟರ್‌ಫ್ಲಾಪ್: ಅಮೀರ್ ಖಾನ್‌ನ ಮುಂದಿನ ಚಿತ್ರ ‘ಮೊಘಲ್’ನ್ನ ರದ್ದುಗೊಳಿಸಿ ಅಮೀರ್ ಖಾನ್‌ಗೆ ಮತ್ತೊಂದು ಮರ್ಮಾಘಾತ ಕೊಟ್ಟ T-Series

in Uncategorized 262 views

ದೇಶದ ಅತಿದೊಡ್ಡ ಮ್ಯೂಸಿಕ್ ಕಂಪನಿ T-Series ಅನ್ನು ಸ್ಥಾಪಿಸಿದ ಗುಲ್ಶನ್ ಕುಮಾರ್ ಅವರ ಜೀವನಚರಿತ್ರೆ ‘ಮೊಘಲ್’ ಈಗ ಬಂದ್ ಆಗಿದೆ. ಅಮೀರ್ ಖಾನ್ ಅಭಿನಯದ ‘ಲಾಲ್ ಸಿಂಗ್ ಚಡ್ಡಾ’ ಸಿನಿಮಾದ ಹಣೆಬರಹ ನೋಡಿ ‘ಮೊಘಲ್’ ಸಿನಿಮಾ ನಿಲ್ಲಿಸುವ ನಿರ್ಧಾರಕ್ಕೆ ಬರಲಾಗಿದೆ. ಚಿತ್ರದಲ್ಲಿ ಗುಲ್ಶನ್ ಕುಮಾರ್ ಪಾತ್ರದಲ್ಲಿ ಅಮೀರ್ ಖಾನ್ ನಟಿಸಬೇಕಿತ್ತು. ಆದರೆ, ‘ಲಾಲ್ ಸಿಂಗ್ ಚಡ್ಡಾ’ ಬಾಕ್ಸ್ ಆಫೀಸ್‌ನಲ್ಲಿ ಅಟ್ಟರ್‌ಫ್ಲಾಪ್ ಆದ ನಂತರ, ‘ಮೊಘಲ್’ ನಿರ್ದೇಶಕ ಸುಭಾಷ್ ಕಪೂರ್ ತಮ್ಮ ಮುಂದಿನ ಚಿತ್ರ ‘ಜಾಲಿ ಎಲ್‌ಎಲ್‌ಬಿ 3’ ಪ್ರಾರಂಭಿಸಲು ಮನಸ್ಸು ಮಾಡಿದ್ದಾರೆ.

Advertisement

ವಾಸ್ತವವಾಗಿ, T-Series ಸಂಸ್ಥಾಪಕ ಗುಲ್ಶನ್ ಕುಮಾರ್ ಅವರ ಪುತ್ರ ಭೂಷಣ್ ಕುಮಾರ್ ಅವರು ತಮ್ಮ ತಂದೆ ಸಂಗೀತದ ದಿಗ್ಗಜನಾದ ಕಥೆಯನ್ನು ಇಡೀ ಜಗತ್ತಿಗೆ ತೋರಿಸಲು ಬಯಸಿದ್ದರು. ಗುಲ್ಶನ್ ಕುಮಾರ್ ಕೂಡ ತಮ್ಮನ್ನು ಸಂಗೀತ ದಿಗ್ಗಜ ಎಂದು ಕರೆದುಕೊಳ್ಳಲು ಇಷ್ಟಪಡುತ್ತಿದ್ದರು ಎನ್ನಲಾಗಿದೆ. ಈ ಬಯೋಪಿಕ್‌ನ ಸ್ಕ್ರಿಪ್ಟ್ ಅನ್ನು ನಿರ್ದೇಶಕ ಸುಭಾಷ್ ಕಪೂರ್ ಸಿದ್ಧಪಡಿಸಿದ್ದಾರೆ. ಅವರು ಮೊದಲು ಈ ಚಿತ್ರದಲ್ಲಿ ಅಕ್ಷಯ್ ಕುಮಾರ್ ಅವರನ್ನು ಕರೆತಂದಿದ್ದರು. ಚಿತ್ರದ ಮೊದಲ ಪೋಸ್ಟರ್ ಅನ್ನು ಮಾರ್ಚ್ 15, 2017 ರಂದು ಬಿಡುಗಡೆ ಮಾಡಲಾಗಿತ್ತು.

‘ಅಮರ್ ಉಜಾಲಾ’ ವರದಿಯ ಪ್ರಕಾರ, ‘ಮೊಘಲ್’ ಚಿತ್ರದ ಫ್ರಾಫಿಟ್‌ನ್ನ ಹಂಚಿಕೊಳ್ಳುವ ಕುರಿತು ಅಕ್ಷಯ್ ಮತ್ತು ಭೂಷಣ್ ನಡುವಿನ ಮಾತುಕತೆಗಳು ಕಾರ್ಯರೂಪಕ್ಕೆ ಬರಲಿಲ್ಲ. ಇದಾದ ನಂತರ ಅಕ್ಷಯ್ ಕುಮಾರ್ ‘ಮೊಘಲ್’ ಚಿತ್ರದಲ್ಲಿ ಕೆಲಸ ಮಾಡಲು ನಿರಾಕರಿಸಿದರು. ಆ ಸಮಯದಲ್ಲಿ, ಭೂಷಣ್ ಕುಮಾರ್ ಅವರಿಗೆ ಈ ವಿಷಯ ನಿಜಕ್ಕೂ ಅವಮಾನವೆನಿಸಿತು, ಆದ್ದರಿಂದ ಅವರು ಈ ಚಿತ್ರದಲ್ಲಿ ಅಕ್ಷಯ್ ಕುಮಾರ್ ಅವರಿಗಿಂತ ದೊಡ್ಡ ಸ್ಟಾರ್ ಅನ್ನು ತೆಗೆದುಕೊಳ್ಳಲು ನಿರ್ಧರಿಸಿದರು. ಇದಾದ ನಂತರ ಅಮೀರ್ ಖಾನ್ ಕೂಡ ಗುಲ್ಶನ್ ಕುಮಾರ್ ರವರ ಜೀವನಚರಿತ್ರೆಯಾಧರಿಸಿದ ‘ಮೊಘಲ್’ ಚಿತ್ರದಲ್ಲಿ ನಟಿಸಲು ಒಪ್ಪಿಕೊಂಡರು.

‘ಲಾಲ್ ಸಿಂಗ್ ಚಡ್ಡಾ’ ಚಿತ್ರದ ಕೆಲಸ ಮುಗಿಸಿ ‘ಮೊಘಲ್’ ಸಿನಿಮಾದ ಕೆಲಸ ಶುರು ಮಾಡುತ್ತೇವೆ ಎಂದಿತ್ತು ಅಮೀರ್ ಚಿತ್ರತಂಡ. ಆದರೆ, ಈ ಚಿತ್ರಕ್ಕೆ ಹಣ ಹೂಡುತ್ತಿರುವ T-Series ಸಂಸ್ಥೆ ತನ್ನ ಚಿತ್ರೀಕರಣವನ್ನು ಅನಿರ್ದಿಷ್ಟಾವಧಿಗೆ ಮುಂದೂಡಿದೆ. ದೇಶದಲ್ಲಿ ‘ಲಾಲ್ ಸಿಂಗ್ ಚಡ್ಡಾ’ ಬಾಯ್‌ಕಾಟ್ ನ ಕರೆ ನಂತರ, ಚಿತ್ರವು ಬಾಕ್ಸ್ ಆಫೀಸ್‌ನಲ್ಲಿ ತುಂಬಾ ಕೆಟ್ಟದಾಗಿದೆ ಪ್ರದರ್ಶನ ನೀಡಿತ್ತು. ಥಿಯೇಟರ್‌ನಲ್ಲಿ ಜನರಿಲ್ಲದ ಕಾರಣ, ದೇಶದಾದ್ಯಂತ ಅನೇಕ ಚಿತ್ರಮಂದಿರಗಳಲ್ಲಿ ಶುಕ್ರವಾರದ 1300 ಶೋಗಳನ್ನ ರದ್ದುಗೊಳಿಸಲಾಗಿತ್ತು.

ಟಿ-ಸೀರೀಸ್ ಸಂಸ್ಥಾಪಕ ಗುಲ್ಶನ್ ಕುಮಾರ್ ಅವರ ಬಯೋಪಿಕ್‌ಗಾಗಿ ಕಂಪನಿಯ ಉತ್ಸಾಹ ಈಗ ಮುಗಿದಿದೆ. ಈ ವರ್ಷ ಮತ್ತು ಮುಂದಿನ ವರ್ಷ T-Series ಚಿತ್ರಗಳ ಪಟ್ಟಿಯಿಂದ ‘ಮೊಘಲ್’ ಹೆಸರನ್ನು ಕೈಬಿಡಲಾಗಿದೆ.

Advertisement
Share this on...