ವ್ಯಾಕ್ಸಿನ್ ಸಿಕ್ತೋ ಇಲ್ವೋ…. ಆದರೆ ಕೊರೋನಾದಿಂದ ಪ್ರಾಣ ಉಳಿಸಿಕೊಳ್ಳಲು ಈ ಮೂರನ್ನ ಮಾತ್ರ ಮಾಡಲೇಬೇಕು

in Helath-Arogya/Kannada News/News 4,916 views

ನವದೆಹಲಿ: ದೇಶದಲ್ಲಿ ಕೊರೋನಾ ಎರಡನೇ ಅಲೆ ದಾಳಿ ಇಟ್ಟಿದೆ. ಹೀಗಿರುವಾಗಲೇ ದೇಶಾದ್ಯಂತ 18 ಲಕ್ಷ ಮಂದಿಗೆ ಕೊರೋನಾ ಲಸಿಕೆ ನೀಡಿ ಆಗಿದೆ. ಲಸಿಕೆ ಪಡೆದ ಬಳಿಕ ಕೊರೋನಾ ಮಾರ್ಗಸೂಚಿ ಪಾಲಿಸಿ, ಇಲ್ಲದಿದ್ದರೆ ಕೊರೋನಾ ಅಪಾಯ ಕಟ್ಟಿಟ್ಟ ಬುತ್ತಿ ಎಂದು ತಜ್ಞರು ಪದೇ ಪದೇ ಎಚ್ಚರಿಸುತ್ತಿದ್ದಾರೆ. ಇನ್ನು ಸರ್ಕಾರದ ಪ್ರಧಾನ ವೈಜ್ಞಾನಿಕ ಸಲಹೆಗಾರ ವಿಜಯ್ ರಾಘವನ್ ಟ್ವೀಟ್ ಮಾಡಿ ಕೊರೋನಾ ಮಾರ್ಗಸೂಚಿ ಪಾಲಿಸುವಂತೆ ಮನವಿ ಮಾಡಿದ್ದಾರೆ.

Advertisement

ಲಸಿಕೆ ಹಾಕಿಸಿಕೊಂಡಿದ್ದೀರೋ, ಇಲ್ವೋ ಮಾಸ್ಕ್ ತಪ್ಪದೇ ಹಾಕಿ

ನೀವು ಲಸಿಕೆ ಹಾಕಿಸಿಕೊಂಡಿದ್ದೀರೋ ಇಲ್ವೋ.. ಆದರೆ ಮಾಸ್ಕ್, ಸಾಮಾಜಿಕ ಅಂತರ ಹಾಗೂ ವೆಂಟಿಲೇಷನ್ ಈ ಮೂರು ವಿಚಾರಗಳು ಕೊರೋನಾ ತಡೆಯಲು ಅತ್ಯಗತ್ಯ. ಜನರು ತಮ್ಮ ಈ ಮೂರು ಸುರಕ್ಷಾ ಕವಚ ಎಂದಿಗೂ ದೂರ ಮಾಡಬೇಡಿ ಎಂದು ರಾಘವನ್ ಟ್ವೀಟ್ ಮಾಡಿದ್ದಾರೆ.

ಕೊರೋನಾ ಪ್ರಕರಣದಲ್ಲಿ ಇಳಿಕೆ

ಭಾರತದಲ್ಲಿ ಶುಕ್ರವಾರ 3,26,098 ಹೊಸ ಕೊರೋನಾ ಪ್ರಕರಣ ಹಾಗೂ 3,980 ಪ್ರಕರಣ ದಾಖಲಾಗಿವೆ. ಕೇಂದ್ರ ಆರೋಗ್ಯ ಇಲಾಖೆ ಕೊಟ್ಟ ಈ ಅಂಕಿ ಅಂಶಗಳು ಕಳೆದ 24 ಗಂಟೆಯಲ್ಲಿ 31,000 ಪ್ರಕರಣಗಳು ಕಡಿಮೆಯಾಗಿರುವುದಾಗಿ ತಿಳಿಸಿದೆ.

ಕೊರೋನಾ ಮೂರನೇ ಅಲೆ ಬರುವುದು ಖಚಿತ

ಕೇಂದ್ರ ಸರ್ಕಾರ ಪ್ರಧಾನ ವೈಜ್ಞಾನಿಕ ಸಲಹೆಗಾರ ಕೊರೋನಾದ ಮೂರನೇ ಅಲೆಯನ್ನು ತಡೆಯಲು ಸಾಧ್ಯವಿಲ್ಲ. ಆದರೆ ಇದು ಯಾವಾಗ ಬರುತ್ತದೆ ಎನ್ನಲು ಸಾಧ್ಯವಿಲ್ಲ. ಹೀಗಾಗಿ ನಾವು ಮೊದಲೇ ತಯಾರಾಗಿರಬೇಕು. ಸೋಂಕು ಹೆಚ್ಚುತ್ತಿದ್ದಂತೆಯೇ ಜನರ ರೋಗ ನಿರೋಧಕ ಶಕ್ತಿಯೂ ಹೆಚ್ಚಲಿ ಎಂದಿದ್ದಾರೆ.

ಮುಂದಿನ ಸುದ್ದಿ: ಕಣ್ಣೀರಿಟ್ಟ ಪ್ರಧಾನಿ ಮೋದಿ

ಕಣ್ಣಿಗೆ ಕಾಣದ ಸೋಂಕಿಗೆ ಅದೆಷ್ಟು ಜನರ ಜೀವ ಕಳೆದುಕೊಂಡರು. ತಮ್ಮವರನ್ನು ಕಳೆದುಕೊಂಡ ಕುಟುಂಬಸ್ಥರು ಕಂಗಾಲಾಗಿದ್ದಾರೆ. ನಮ್ಮ ಪ್ರೀತಿ ಪಾತ್ರ ಎಷ್ಟೋ ಜನರ ಜೀವವನ್ನು ಈ ಕೊರೋನಾ ಬಲಿತೆಗೆದುಕೊಂಡು ಬಿಟ್ಟಿದೆ. ಅವರ ಕುಟುಂಬಕ್ಕೆ ನನ್ನ ಸಂತಾಪಗಳು ಎಂದು ಅಗಲಿದವರ ನೆನೆದು ಪ್ರಧಾನಿ ನರೇಂದ್ರ ಮೋದಿ ಅವರು ಭಾವುಕರಾದರು.

ಸೋಂಕಿನ ನಿಯಂತ್ರಣಕ್ಕೆ ಎಲ್ಲ ಪ್ರಯತ್ನಗಳನ್ನು ನಡೆಸಲಾಗಿದೆ. ಆದರೂ ಕೂಡ ಈ ಸೋಂಕು ಎಲ್ಲೆಡೆ ಹರಡುತ್ತಿದ್ದು, ಹಲವಾರು ಜನರು ಜೀವ ಕಳೆದುಕೊಳ್ಳುತ್ತಿದ್ದಾರೆ ಎಂದು ಅವರು ಗದ್ಗದಿತರಾದರು.

ತಮ್ಮ ಕ್ಷೇತ್ರ ವಾರಾಣಾಸಿಯ ವೈದ್ಯರು, ನರ್ಸ್​ ಮತ್ತು ಅರೆ ವೈದ್ಯಕೀಯ ಸಿಬ್ಬಂದಿಗಳೊಂದಿಗೆ ಸಭೆ ನಡೆಸಿದ ಅವರು, ಇದೇ ವೇಳೆ ಸೋಂಕಿನ ವಿರುದ್ಧ ಹೋರಾಟದಲ್ಲಿ ಆರೋಗ್ಯ ಕ್ಷೇತ್ರದ ಮುಂಚೂಣಿ ಕಾರ್ಯಕರ್ತರ ಸೇವೆಯನ್ನು ಅಭಿನಂದಿಸಿದರು. ಇದೇ ವೇಳೆ ಸೋಂಕಿ ವಿರುದ್ಧದ ಈ ಹೋರಾಟ ನಿರಂತರವಾಗಿದ್ದು, ಈ ಬಗ್ಗೆ ತೃಪ್ತಿಹೊಂದಬಾರದು ಎಂದು ಕರೆ ನೀಡಿದರು.

ಸೋಂಕಿತರಿಗೆ ಉಪಚರಿಸುವುದು ಈಗ ನಮ್ಮ ಮುಂದಿರುವ ದೊಡ್ಡ ಸವಾಲು ಇದೇ ಕಾರಣಕ್ಕೆ ಎಲ್ಲಿ ರೋಗ ಕಂಡು ಬಂದರು ಅಲ್ಲಿಯೇ ಚಿಕಿತ್ಸೆ ನೀಡಬೇಕು (ಜಹಾನ್​ ಬಿಮರ್​, ವಾಹಿನ್​ ಉಪಚಾರ್​) ಎಂಬ ಘೋಷವಾಕ್ಯದಿಂದ ಕರ್ತವ್ಯ ನಿರ್ವಹಿಸಬೇಕು ಎಂದು ಘೋಷಣೆ ನೀಡಿದರು. ಈ ಮೂಲಕ ಜನರು ಸಕಾಲಕ್ಕೆ ಚಿಕಿತ್ಸೆ ಸಿಗದೇ ತೊಂದರೆಗೆ ಒಳಗಾಗುವ ಒತ್ತಡವನ್ನು ಕಡಿಮೆ ಮಾಡುತ್ತದೆ ಎಂದರು.

ಸೋಂಕಿತರ ಚಿಕಿತ್ಸೆಗೆ ಸಾಕಷ್ಟು ಕೆಲಸಗಳು ನಡೆದಿದ್ದು, ಉತ್ತರ ಪ್ರದೇಶದ ಪೂರ್ವಾಂಚಲ್​ ಗ್ರಾಮೀಣ ಪ್ರದೇಶಗಳಲ್ಲಿ ಹೆಚ್ಚಿನ ಗಮನ ಹರಿಸು ಅವಶ್ಯಕತೆ ಇದೆ ಎಂದು ಒತ್ತಿ ಹೇಳಿದರು.ಇದೇ ವೇಳೆ ತಮ್ಮ ಕ್ಷೇತ್ರದ ಆಸ್ಪತ್ರೆಗಳ ಕಾರ್ಯವೈಖರಿ ಕುರಿತು ಪರಿಶೀಲನೆ ನಡೆಸಿದರು. ನಗರದ ಪಂಡಿತ್​ ರಾಜನ್​ ಮಿಶ್ರಾ ಕೋವಿಡ್​ ಆಸ್ಪತ್ರೆ ಸೇರಿದಂತೆ ಇತ್ತೀಚೆಗೆ ಆರಂಭವಾದ ಡಿಆರ್​ಡಿಒ ಮತ್ತು ಭಾರತ ಸೇನೆಯ ಪ್ರಯತ್ನವನ್ನು ಕೂಡ ಅವಲೋಕಿಸಿದರು. ಇದೇ ವೇಳೆ ಪ್ರಸ್ತುತ ಪರಿಸ್ಥಿತಿ ಕುರಿತು ಚರ್ಚೆ ನಡೆಸಿದ ಅವರು ಭವಿಷ್ಯದ ತಯಾರಿ ಕುರಿತು ಸಿದ್ಧತೆಗಳ ಕುರಿತು ಕೂಡ ಚರ್ಚಿಸಿದರು.

ಇದೇ ವೇಳೆ ಲಸಿಕೆ ಪ್ರಾಮುಖ್ಯತೆ ಬಗ್ಗೆ ಒತ್ತಿ ಹೇಳಿದ ಅವರು, ಮುಂಚೂಣಿ ಕಾರ್ಯಕರ್ತರು ಲಸಿಕೆ ಪಡೆಯುವುದರಿಂದ ಜನ ಸೇವೆ ನಡೆಸಬಹುದು. ಮುಂದಿನ ದಿನಗಳಲ್ಲಿ ಎಲ್ಲರಿಗೂ ಲಸಿಕೆ ನೀಡುವ ಮೂಲಕ ಅವರ ರಕ್ಷಣೆಗೆ ಸರ್ಕಾರ ಬದ್ಧವಾಗಿದೆ ಎಂದರು.

ಇನ್ನು ಬ್ಲಾಕ್​ ಫಂಗಸ್ ಹೆಚ್ಚಳದ ಬಗ್ಗೆ ಆತಂಕ ವ್ಯಕ್ತಪಡಿಸಿದ ಅವರು, ಕೋವಿಡ್​ ಸೋಂಕಿನ ವಿರುದ್ಧ ಹೋರಾಟದಲ್ಲಿ ಬ್ಲಾಕ್​ ಫಂಗಸ್​ ಹೊಸ ಸವಾಲಾಗಿ ಪರಿಣಮಿಸಿದೆ. ಅದನ್ನು ಎದುರಿಸಲು ಮುನ್ನೆಚ್ಚರಿಕೆಯ ಸಿದ್ಧತೆಗಳನ್ನು ತೆಗೆದುಕೊಳ್ಳುವತ್ತ ಗಮನಹರಿಸಬೇಕು ಎಂದರು.

ಎರಡನೇ ಅಲೆ ಕೊರೋನಾ ಸೋಂಕಿನ ತೀವ್ರತೆ ಹೆಚ್ಚಿದ್ದು, ಸಾವನ್ನಪ್ಪುತ್ತಿರುವವ ಸಂಖ್ಯೆ ಕೂಡ ಹೆಚ್ಚುತ್ತಿದೆ. ಸೋಂಕು ನಿಭಾಯಿಸುಬ ಬಗ್ಗೆ ಸರ್ಕಾರ ಕೂಡ ಟೀಕೆ ಎದುರಿಸುತ್ತಿದೆ. ಕಳೆದ ವಾರಗಳಲ್ಲಿ ಸಾವಿನ ಸಂಖ್ಯೆ ಏರುತ್ತಿರುವ ಬಗ್ಗೆ ಮತ್ತು ಸೋಂಕು ನಿಯಂತ್ರಿಸುವಲ್ಲಿ ಸರ್ಕಾರ ವಿಫಲವಾಗಿದೆ ಎಂದು ಪ್ರತಿಪಕ್ಷಗಳು ಟೀಕೆಗಳನ್ನು ಮಾಡಿದ್ದವು. ಸರ್ಕಾರ ಪೂರ್ವ ಸಿದ್ಧತೆ ನಡೆಸದೇ ಲಸಿಕೆ ವಿತರಣೆಯಲ್ಲಿ ಕೂಡ ಸರ್ಕಾರ ವಿಫಲವಾಯಿತು ಎಂದು ಟೀಕೆಗಳನ್ನು ಪ್ರತಿಪಕ್ಷಗಳು ಮಾಡಿದ್ದರು.

ಗುರುವಾರ ರಾಜ್ಯದ 10 ಜಿಲ್ಲಾಧಿಕಾರಿಗಳೊಂದಿಗೆ ಸಭೆ ನಡೆಸಿದ ಪ್ರಧಾನಿ ಕೋವಿಡ್​ ಪರಿಸ್ಥಿತಿ ಕುರಿತು ಅಧಿಕಾರಿಗಳಿಂದ ಮಾಹಿತಿ ಪಡೆದರು. ಇದೇ ವೇಳೆ ಗ್ರಾಮಗಳಲ್ಲಿ ಸೋಂಕು ಹೆಚ್ಚುತ್ತಿರುವ ಬಗ್ಗೆ ಆತಂಕ ವ್ಯಕ್ತಪಡಿಸಿದ ಅವರು, ಅಗತ್ಯ ಮುನ್ನೆಚ್ಚರಿಕೆ ವಹಿಸುವಂತೆ ಸೂಚನೆ ನೀಡಿದರು

Advertisement
Share this on...