ಹಿಂದೂ ವಿರೋಧಿ ಹೇಳಿಕೆಗಳಿಗೆ ಕುಖ್ಯಾತಿ ಗಳಿಸಿರುವ ಬಾಲಿವುಡ್ ನಟಿ ಸ್ವರಾ ಭಾಸ್ಕರ್ ಒಂಟಿ ಜೀವನ (Single Life) ಕಸವನ್ನು ಫಿಲ್ಟರ್ ಮಾಡಿದಂತೆ ಎಂದಿದ್ದಾರೆ. ನಟ ಶಾರುಖ್ ಖಾನ್ (Shah Rukh Khan) ಮತ್ತು ಚಲನಚಿತ್ರ ನಿರ್ಮಾಪಕ ಆದಿತ್ಯ ಚೋಪ್ರಾ (Aditya Chopra) ತನ್ನ ಪ್ರೇಮ ಜೀವನವನ್ನು ಅಂದರೆ ಲವ್ ಲೈಫ್ನ್ನ ಹಾಳುಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.
ರಾಜ್-ಸಿಮ್ರನ್ ಜೋಡಿಯಲ್ಲಿ ಶಾರುಖ್ ಖಾನ್ ಮತ್ತು ಕಾಜೋಲ್ ನಟಿಸಿದ ದಿಲ್ವಾಲೆ ದುಲ್ಹನಿಯಾ ಲೇ ಜಾಯೇಂಗೆ ಚಿತ್ರವು ಆದಿತ್ಯ ಚೋಪ್ರಾ ಅವರ ನಿರ್ದೇಶನದ ಚೊಚ್ಚಲ ಚಿತ್ರವಾಗಿತ್ತು. ಈ ಚಿತ್ರವು ಅವರಿಗೆ ಪ್ರಣಯದ ವಿಭಿನ್ನ ಕಲ್ಪನೆಯನ್ನು ನೀಡಿತು, ಅದು ನಂತರ ಸುಳ್ಳು ಎಂದು ಸಾಬೀತಾಯಿತು ಎಂದು ಸ್ವರಾ ಹೇಳಿದ್ದಾರೆ.
ಮಿಡ್ಡೇ (MidDay) ಜೊತೆ ಮಾತನಾಡಿದ ಸ್ವರಾ, “ನನ್ನ ಪ್ರೇಮ ಜೀವನವನ್ನು (Love Life) ಹಾಳು ಮಾಡಿದ್ದಕ್ಕಾಗಿ ನಾನು ಆದಿತ್ಯ ಚೋಪ್ರಾ ಸರ್ ಮತ್ತು ಶಾರುಖ್ ಖಾನ್ ಅವರನ್ನು ದೂಷಿಸುತ್ತೇನೆ. ಏಕೆಂದರೆ, ನಾನು ಚಿಕ್ಕವಯಸ್ಸಿನಲ್ಲಿ ದಿಲ್ವಾಲೆ ದುಲ್ಹನಿಯಾ ಲೇ ಜಾಯೇಂಗೆಯನ್ನು ನೋಡಿದ್ದೇನೆ ಮತ್ತು ಅಂದಿನಿಂದ ನಾನು ಶಾರುಖ್ನಂತೆ ಕಾಣುವ ರಾಜ್ನನ್ನ ಹುಡುಕುತ್ತಿದ್ದೇನೆ. ರಾಜ್ ಅಸ್ತಿತ್ವದಲ್ಲಿಲ್ಲ ಎಂದು ಅರ್ಥಮಾಡಿಕೊಳ್ಳಲು ನನಗೆ ವರ್ಷಗಳೇ ಹಿಡಿಯಿತು. ನಾನು ಸಂಬಂಧಗಳ ವಿಚಾರದಲ್ಲಿ ಕೆಟ್ಟವಳು ಅಂತ ಭಾವಿಸಲ್ಲ” ಎಂದು ಹೇಳಿದ್ದಾರೆ.
ವಾಸ್ತವವಾಗಿ, ಸ್ವರಾ ಅವರು ತಮ್ಮ ಮುಂಬರುವ ಚಿತ್ರ ‘ಜಹಾಂ ಚಾರ್ ಯಾರ್’ ಪ್ರಚಾರದ ಸಂದರ್ಭದಲ್ಲಿ ಸಂದರ್ಶನವೊಂದರಲ್ಲಿ ಈ ಮಾತನ್ನ ಹೇಳಿದ್ದಾರೆ. ಪ್ರೀತಿ ಮತ್ತು ಮದುವೆಯ ಬಗ್ಗೆ ತನ್ನ ಕನಸುಗಳು ವರ್ಷಗಳಲ್ಲಿ ಹೇಗೆ ಬದಲಾಗಿವೆ ಎಂಬುದರ ಕುರಿತು ಸ್ವರಾ ಮಾತನಾಡಿದರು. ಚಿತ್ರವು ಮಹಿಳೆಯರ ಸ್ನೇಹವನ್ನು ಆಧರಿಸಿದೆ. ಇದರಲ್ಲಿ ಸ್ವರಾ ಜೊತೆಗೆ ಪೂಜಾ ಚೋಪ್ರಾ, ಶಿಖಾ ತಲ್ಸಾನಿಯಾ ಮತ್ತು ಮೆಹರ್ ವಿಜ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.
ಫಿಲ್ಮ್ ಪ್ರೊಮೋಷನ್ ವೇಳೆ ಮಾತನಾಡಿದ ಪೂಜಾ ಚೋಪ್ರಾ, “ಸ್ವರ ಸಿಂಗಲ್ ಆಗಿದ್ದು, ಡೇಟ್ಗೆ ಹೋಗಲು ಸಿದ್ಧ” ಎಂದಿದ್ದಾರೆ. ಇದರ ನಂತರ ಮಾತನಾಡಿದ ಸ್ವರಾ, “ನಾನು ಡೇಟ್ ಮಾಡಿದ್ದೇನೆ ಫ್ರೆಂಡ್ಸ್. ಈಗ ಮಾಡಲು ಸಾಧ್ಯವಿಲ್ಲ ನನಗೆ ಅಷ್ಟು ಎನರ್ಜಿ ಉಳಿದಿಲ್ಲ. ಸಿಂಗಲ್ ಲೈಫ್ ಕಠಿಣವಾಗಿದೆ ಮತ್ತು ಕಸವನ್ನು ಫಿಲ್ಟರ್ ಮಾಡುವ ಕೆಲಸದಂತೆ” ಎಂದರು.
ಈ ಚಿತ್ರವನ್ನು ಸೆಪ್ಟೆಂಬರ್ 16 ರಂದು ಬಿಡುಗಡೆ ಮಾಡಲು ನಿರ್ಧರಿಸಲಾಗಿದೆ. ಸ್ವರಾ ಅವರ ಕೊನೆಯ ಚಿತ್ರ ‘ವೀರೆ ದಿ ವೆಡ್ಡಿಂಗ್’ (2018) ಕೂಡ ಸ್ತ್ರೀ ಸ್ನೇಹವನ್ನು ಆಧರಿಸಿತ್ತು. ಸ್ವರಾ ಅವರ ಮುಂದಿನ ಚಿತ್ರ ‘ಮಿಸೆಸ್ ಫಲಾನಿ’ ಕೂಡ ಬಿಡುಗಡೆಯಾಗಲು ಸಿದ್ಧವಾಗಿದೆ. ಒಂಬತ್ತು ಶಾರ್ಟ್ ಸೀರೀಸ್ನ ಕಲೆಕ್ಷನ್ ಆಗಿರುವ ಈ ಚಿತ್ರದಲ್ಲಿ ಅವರು ಒಂಬತ್ತು ಪಾತ್ರಗಳನ್ನು ನಿರ್ವಹಿಸಲಿದ್ದಾರೆ.
ಬಾಲಿವುಡ್ ಬಾಯ್ಕಾಟ್ ಬಗ್ಗೆಯೂ ಮಾತನಾಡಿದ್ದ ಸ್ವರಾ ಭಾಸ್ಕರ್
ಸಿನಿಮಾ ಲೋಕದಲ್ಲಿ ಸ್ವರಾ ಭಾಸ್ಕರ್ ಮತ್ತು ರಾಜಕೀಯ ಲೋಕದಲ್ಲಿ ರಾಹುಲ್ ಗಾಂಧಿ ಅವರ ಅಭಿನಯ ಒಂದೇ ರೀತಿಯಾಗಿದೆ. ಅನಿಲ್ ಕಪೂರ್ ಅವರ ಮಾತಿನಲ್ಲಿ ಹೇಳಬೇಕಂದರೆ – ‘ಝಕಾಸ್’. ಇಬ್ಬರ ನಟನೆಯೂ ಝಕಾಸ್. ಇಬ್ಬರ ನೇತಾಗಿರಿ ಝಕಾಸ್ ಆಗಿದೆ. ಹಾಗಾಗಿಯೇ ಈಕೆಯ ಸಿನಿಮಾಗಳು ಓಡುವುದಿಲ್ಲ, ಆತ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ. ಇವರಿಬ್ಬರಲ್ಲೂ ಇನ್ನೊಂದು ಸಾಮ್ಯತೆ ಇದೆ. ಇಬ್ಬರೂ ಸುಪ್ರಸಿದ್ಧ ಲಿಬರಲ್-ಸೆಕ್ಯೂಲರ್ ಪೋಷಕರ ಮಕ್ಕಳು.
ಆದರೆ, ಸ್ವರಾ ಭಾಸ್ಕರ್ ಅವರ ಪ್ರಕಾರ, ಇಡೀ ಬಾಲಿವುಡ್ ರಾಹುಲ್ ಗಾಂಧಿಮತವಾಗಿಬಿಟ್ಟಿದೆ. ಕಾಂಗ್ರೆಸ್ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ‘ಪಪ್ಪು’ ಅಲ್ಲ ಎಂದೂ ಅವರು ಹೇಳುತ್ತಾರೆ. ನಾನು ಅವರನ್ನು ಭೇಟಿಯಾಗಿದ್ದೇನೆ ಮತ್ತು ಅವರು ‘ಇಂಟೆಲಿಜೆಂಟ್’ ಎಂದು ಅರಿತುಕೊಂಡಿದ್ದೇನೆ. ಅಂದಹಾಗೆ, ಪಾರ್ಟ್ ಟೈಂ ನಟಿ ಫುಲ್ ಟೈಂ ಆ್ಯಕ್ಟಿವಿಸ್ಟ್ ಸ್ವರಾ ಭಾಸ್ಕರ್ ಎಲ್ಲದರಲ್ಲೂ ‘ಪರಿಣಿತರು, ವಿಶೇಷಜ್ಞೆ’ ಎಂಬ ಪಟ್ಟಿಯಲ್ಲಿರುವ ನಟಿಯಾಗಿದ್ದಾಳೆ. ನಿಸ್ಸಂಶಯವಾಗಿ, ಇಂಟೆಲಿಜೆನ್ಸಿಯನ್ನ ಅಳೆಯುವ ಆಕೆಯ ಬುದ್ಧಿಮತ್ತೆ ಮಾತ್ರ ವಿಭಿನ್ನವಾಗಿರುತ್ತದೆ.
ಇಂಡಿಯಾ ಟುಡೇ ಜೊತೆ ಮಾತನಾಡಿದ ಸ್ವರಾ ಭಾಸ್ಕರ್, “ಈ ರೀತಿಯ ಹೋಲಿಕೆ ನ್ಯಾಯಯುತವಾಗಿದೆಯೇ ಎಂದು ನನಗೆ ತಿಳಿದಿಲ್ಲ, ಆದರೆ ನಾನು ರಾಹುಲ್ ಗಾಂಧಿಯನ್ನು ನೆನಪಿಸಿಕೊಳ್ಳುತ್ತೇನೆ. ಎಲ್ಲರೂ ಅವರನ್ನು ಪಪ್ಪು ಎಂದು ಕರೆಯತೊಡಗಿದರು. ಇದರಿಂದ ಕ್ರಮೇಣ ಜನ ಅವರೇ ಪಪ್ಪು ಎಂದು ನಂಬತೊಡಗಿದರು. ಆದರೆ ನಾನು ಅವರನ್ನು ಭೇಟಿ ಮಾಡಿದ್ದೇನೆ. ಅವರು ಬಹಳ ಬುದ್ಧಿವಂತ ಮತ್ತು ಸ್ಪಷ್ಟ ವ್ಯಕ್ತಿ. ಇದೇ ರೀತಿ ಈಗ ಬಾಲಿವುಡ್ ಕೂಡ ಪಪ್ಪೂಕರಣ ಆಗುತ್ತಿದೆ” ಎಂದರು.
ವಾಸ್ತವವಾಗಿ, ಸದ್ಯದ ಪರಿಸ್ಥಿತಿಯಲ್ಲಿ ಅನೇಕ ಹಿಂದಿ ಚಲನಚಿತ್ರಗಳ ಬಗ್ಗೆ ಬಾಯ್ಕಾಟ್ ಟ್ರೆಂಡ್ ಚರ್ಚೆಯಲ್ಲಿದೆ. ಈ ಬಗ್ಗೆ ಸ್ವರಾ ತಮ್ಮ ಅಭಿಪ್ರಾಯಗಳನ್ನು ಮಂಡಿಸಿದ್ದಾರೆ. ಈ ಸಂದರ್ಭದಲ್ಲಿ, ಸುಶಾಂತ್ ಸಿಂಗ್ ರಜಪೂತ್ ಅವರ ‘ಆತ್ಮಹತ್ಯೆ’ ನಂತರ ಬಾಲಿವುಡ್ ಅನ್ನು ಪ್ರಕ್ಷೇಪಿಸಿದ ರೀತಿಯಿಂದ ಇಂತಹ ಪರಿಸ್ಥಿತಿ ಉದ್ಭವಿಸಿದೆ ಎಂದು ಅವರು ಹೇಳಿದರು. ಮದ್ಯ, ಡ್ರಗ್ಸ್, ಸೆಕ್ಸ್ ಮಾತ್ರ ಇರುವ ಜಾಗ ಬಾಲಿವುಡ್ ಎಂದು ಭಾವಿಸುವ ವಾತಾವರಣ ನಿರ್ಮಾಣವಾಯಿತು. ಲಾಲ್ ಸಿಂಗ್ ಚಡ್ಡಾ, ರಕ್ಷಾ ಬಂಧನ ಮತ್ತು ದೊಬಾರಾ ಮುಂತಾದ ಚಿತ್ರಗಳು ಗಲ್ಲಾಪೆಟ್ಟಿಗೆಯಲ್ಲಿ ವಿಫಲವಾದ ಕಾರಣಗಳ ಬಗ್ಗೆ ಅನುರಾಗ್ ಕಶ್ಯಪ್ ಹೇಳುದ್ದ ಮಾತುಗಳಿಗೆ ಸ್ವರಾ ಸಹ ಸಮ್ಮತ ವ್ಯಕ್ತಪಡಿಸಿದರು. ಬೆಲೆಯೇರಿಕೆಯಿಂದಾಗಿ ಜನರ ಬಳಿ ಹಣವಿಲ್ಲ, ಸಿನಿಮಾ ನೋಡಲು ಥಿಯೇಟರ್ಗೆ ಬರುತ್ತಿಲ್ಲ ಎಂದು ಅನುರಾಗ್ ಹೇಳಿದ್ದರು.
ಒಟ್ಟಾರೆಯಾಗಿ, ಈ ಸಂದರ್ಶನದ ಸಮಯದಲ್ಲಿ, ಸ್ವರಾ ಅವರು ಬಾಲಿವುಡ್ ಅನ್ನು ಸ್ವಚ್ಛಗೊಳಿಸಲು ಮತ್ತು ಅದರ ದುರದೃಷ್ಟಕ್ಕೆ ನೇರವಾಗಿ/ಪರೋಕ್ಷವಾಗಿ ಹೊಣೆಗಾರರಾಗಲು ತಮ್ಮ ಕೈಲಾದಷ್ಟು ಪ್ರಯತ್ನಿಸಿದರು. ಆದರೆ ಅವರು ರಾಹುಲ್ ಗಾಂಧಿಯನ್ನು ಈ ಇಡೀ ವಿಷಯಕ್ಕೆ ಎಳೆದು ತಂದಿರುವ ರೀತಿಯನ್ನು ನಾವು ರಾಜನಾಥ್ ಸಿಂಗ್ (ಕಡೀ ನಿಂದಾ) ಮಾಡುತ್ತೇವೆ.
“ಹಿಂದೂವಾಗಿ ಹುಟ್ಟದ್ನಲ್ಲಾಂತ ನಾಚಿಕೆಯಾಗ್ತಿದೆ”: ಎಂದಿದ್ದ ನಟಿ ಸ್ವರಾ ಭಾಸ್ಕರ್
ಬಾಲಿವುಡ್ (ಕು)ಖ್ಯಾತ ನಟಿ ಸ್ವರಾ ಭಾಸ್ಕರ್ ಸದಾ ತನ್ನ ಹೇಳಿಕೆಗಳಿಂದ ಸುದ್ದಿಯಲ್ಲಿರ್ತಾಳೆ. ಈಕೆ ಸದಾ ಹಿಂದುಗಳ, ಹಿಂದುತ್ವದ, ಬಿಜೆಪಿ, ಹಿಂದೂ ಸಂಘಟನೆಗಳ ವಿರುದ್ಧ ವಿಷ ಕಕ್ಕುತ್ತಲೇ ಇರುತ್ತಾಳೆ. ಮೊನ್ನೆ Kali ಚಿತ್ರದ ಪೋಸ್ಟರ್ ನಲ್ಲಿ ಕಾಳಿ ಮಾತೆಯ ಕುರಿತಾಗಿ ಪೋಸ್ಟ್ ಆಗಿದ್ದ ಅವಮಾನಕಾರಿ ಪೋಸ್ಟರ್ನ್ನ ಹಿಂದುಗಳೆಲ್ಲಾ ವಿರೋಧ ವ್ಯಕ್ತಪಡಿಸುತ್ತಿದ್ದಾಗ “ಕಾಳಿ ನನ್ನ ಪಾಲಿಗೆ ಸಿಗರೇಟ್ ಸೇದುವ, ಮಾಂಸ ತಿನ್ನುವ ದೇವತೆಯಾಗೇ ಕಾಣ್ತಾಳೆ” ಎಂದಿದ್ದ ಟಿಎಂಸಿ ಸಂಸದೆ ಮಹುವಾ ಮೋತ್ರಾ ವಿರುದ್ಧ ದೇಶದಾದ್ಯಂತ ಭಾರೀ ಆಕ್ರೋಶವಾಗುತ್ತಿದ್ದರೆ ಇಲ್ಲೂ ಸ್ವರಾ ಭಾಸ್ಕರ್ ಮೋಹುವ ಮೋತ್ರಾ ಪರ ಬ್ಯಾಟ್ ಬೀಸಿದ್ದಾಳೆ. ಇಷ್ಟೇ ಅಲ್ಲ ಜವಾಹರಲಾಲ್ ನೆಹರು ಯೂನಿವರ್ಸಿಟಿಯಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ (CAA) ವಿರೋಧಿಸಿ ಅಲ್ಲಿನ ಕೆಲ ದೇಶದ್ರೋಹಿ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದ್ದಾಗ ಈಕೆ ಅಲ್ಲಿ ಹೋಗಿ ಅವರಿಗೆ ಬೆಂಬಲ ಸೂಚಿಸಿ ಬಂದಿದ್ದಳು. ಇದು ಈಕೆಯ ಮೊದಲ ಕೃತ್ಯವೇನಲ್ಲ, ಇಂತಹ ಯಾವುದೇ ವಿಷಯ ಬಂದರೂ ಈಕೆ ತನ್ನ ಮನೆಯಲ್ಲಿ ಕೂತು ಭಾರತವನ್ನ ವಿರೋಧಿಸುವ ಜನರ ಬೆಂಬಲಕ್ಕಿದ್ದೀನಿ ಅಂತ ವಿಡಿಯೋ ಹಾಕುತ್ತಾಳೆ.
ಸ್ವರಾ ಭಾಸ್ಕರ್ ತನ್ನ ಹದ್ದು ಮೀರಿ ಅಸಹ್ಯಕ-ರ ಹೇಳಿಕೆಯೊಂದನ್ನು ನೀಡಿದ್ದಳು. ಈ ಸ್ವರಾ ಭಾಸ್ಕರ್ ಹೇಳುವ ಪ್ರಕಾರ ಮುಸ್ಲಿಂ ಯುವಕರು, ಗಂಡಸರು ಭಾರೀ ಸುಖ ಕೊಡುತ್ತಾರೆ, ಪ್ರೀತಿ ಮಾಡುತ್ತಾರೆ ಆದರೆ ಅದನ್ನ ಸಂಘಿಗಳು ಕೊಡೋಕೆ ಸಾಧ್ಯವಿಲ್ಲ ಎಂದಿದ್ದಳು. ಬಾಲಿವುಡ್ನ ಈ (ಕು)ಖ್ಯಾತ ನಟಿ ಸದಾ ಹಿಂದುಗಳನ್ನ ಟಾರ್ಗೇಟ್ ಮಾಡುತ್ತಲೇ ಇರುತ್ತಾಳೆ ಹಾಗು ಈಗ ಈಕೆ ಹಿಂದುಗಳ ವಿರುದ್ಧ ವಿಷಕಕ್ಕುತ್ತ “ಸಂಘಿ ಹಮೇ ಮುಸ್ಲಿಂ ಮರ್ದೋ ಕೇ ಪಾಸ್ ನಹಿ ಜಾನೇ ದೇನಾ ಚಾಹತೇ ಹೈ ಕ್ಯೂಂಕಿ ಮುಸ್ಲಿಂ ಮರ್ದ್ ಬಢಿಯಾ ಸೆ ಪ್ಯಾರ್ ಕರತೆ ಹೈ ಔರ್ ಸಂಘಿಯೋ ಸೆ ತೋ ನಹಿ ಹೋ ಪಾತಾ” ಎಂದಿದ್ದಳು.
Wait.. so basically Sanghis don’t want us to get with Muslim men because they know they are better lovers?!?!?!? 🤣🤣🤣🤣 यार थोड़ा तो भरोसा रखो अपनी भी skills पर.. oh sorry.. आपसे तो ये भी नहीं हो पाता!!!!! #इनसेनाहोपाएगा #SanghiShittyLovers https://t.co/F1XT96LUJ9
— Swara Bhasker (@ReallySwara) October 15, 2020
ಇದರರ್ಥ “ಸಂಘಿಗಳು ನಮ್ಮನ್ನ ಮುಸ್ಲಿಂ ಗಂಡಸರ ಬಳಿ ಹೋಗಲು ಬಿಡುವುದಿಲ್ಲ ಯಾಕಂದ್ರೆ ಮುಸ್ಲಿಂ ಗಂಡಸರು ಬಹಳ ಚೆನ್ನಾಗಿ ಪ್ರೀತಿ, ಸುಖ ಕೊಡುತ್ತಾರೆ ಹಾಗು ಆ ಪ್ರೀತಿಯಾಗಲಿ, ಸುಖವನ್ನಾಗಲಿ ನೀಡಲು ಈ ಸಂಘಿಗಳ ಕೈಯಿಂದ ಸಾಧ್ಯವಿಲ್ಲ” ಎಂಬುದಾಗಿದೆ.
ಇದೀಗ ಮತ್ತೆ ಸುದ್ದಿಯಲ್ಲಿರುವ ಸ್ವರಾ ಭಾಸ್ಕರ್ ತಾನು ಹಿಂದೂ ಅಂತ ಹೇಳಿಕೊಳ್ಳೋಕೆ ನಾಚಿಕೆಯಾಗುತ್ತೆ ಎಂದಿದ್ದಾಳೆ. ಯಾಕೆ? ಇಲ್ಲಿದೆ ಸಂಪೂರ್ಣ ಮಾಹಿತಿ
ನಟಿ ಸ್ವರಾ ಭಾಸ್ಕರ್ ಟ್ವಿಟರ್ನಲ್ಲಿ ಜನರ ಕೆಂಗಣ್ಣಿಗೆ ಗುರಿಯಾಗಿದ್ದಾಳೆ. ಈ ಬಾರಿ ಸ್ವರಾ ಭಾಸ್ಕರ್ನ್ನ ಟ್ರೋಲರ್ಗಳು ಹಿಗ್ಗಾಮುಗ್ಗಾ ಝಾಡಿಸುತ್ತಿದ್ದಾರೆ. ಟ್ವಿಟ್ಟರ್ ನಲ್ಲಿ ವೈರಲ್ ಆಗುತ್ತಿರುವ ವೀಡಿಯೊಗೆ ಸ್ವರಾ ಭಾಸ್ಕರ್ ಪ್ರತಿಕ್ರಿಯಿಸಿದ್ದೆ ಇದಕ್ಕೆಲ್ಲ ಕಾರಣವಾಗಿದೆ. ದೆಹಲಿಯ ಹತ್ತಿರವಿರುವ ಗುರುಗ್ರಾಮ್ ನ ವೀಡಿಯೊವೊಂದು ವೈರಲ್ ಆಗಿದೆ, ಇದರಲ್ಲಿ ಕೆಲ ಮುಸ್ಲಿಮರು ಶುಕ್ರವಾರದಂದು ರಸ್ತೆಯ ಮಧ್ಯದಲ್ಲಿ ನಮಾಜ್ ಮಾಡುತ್ತಿರುವುದನ್ನು ಕಾಣಬಹುದು.
Factory ಗಳ ಮೇಲೆ ಇದನ್ಜ ಹಾಕೋದ್ಯಾಕೆ? | Slippers ಹಾಕಿಕೊಂಡು bike ಚಲಾಯಿಸುವಂತಿಲ್ಲ | Interesting facts
ಅಲ್ಲಿ ನಮಾಜ್ ಮಾಡುತ್ತಿರುವ ಮುಸಲ್ಮಾನರ ರಕ್ಷಣೆಗಾಗಿ ಪೊಲೀಸ್ ಪಡೆಗಳನ್ನ ನಿಯೋಜಿಸಲಾಗಿದೆ. ನಮಾಜ್ ಮಾಡಲು ಇಲ್ಲಿಗೆ ಬಂದಿರುವ ಈ ಮುಸಲ್ಮಾನರು ಇಲ್ಲಿಯವರಲ್ಲ, ಎಲ್ಲಿಂದ ಬಂದಿದಾರೋ ಗೊತ್ತಿಲ್ಲ ಎಂದು ಸ್ಥಳಿಯ ಹಿಂದುಗಳು ಆಕ್ಷೇಪ ವ್ಯಕ್ತಪಡಿಸುತ್ತ, ‘ಜೈ ಶ್ರೀ ರಾಮ್’ ಮತ್ತು ‘ಭಾರತ್ ಮಾತಾ ಕಿ ಜೈ’ ಎಂಬ ಘೋಷಣೆಗಳನ್ನು ಕೂಗಿ ಅವರನ್ನ ವಿರೋಧಿಸಿದ್ದಾರೆ.
ಈ ಸಮಯದಲ್ಲಿ, ಪೊಲೀಸರು ಪರಿಸ್ಥಿತಿಯನ್ನು ನಿಯಂತ್ರಿಸಲು ಜನರ ಜೊತೆ ಮಾತನಾಡುತ್ತಿರುವುದನ್ನು ಸಹ ಕಾಣಬಹುದು. ಈ ಬಗ್ಗೆ ನಟಿ ಸ್ವರಾ ಭಾಸ್ಕರ್ ಟ್ವೀಟ್ ಮಾಡಿದ್ದು, ಟ್ವಿಟ್ಟರ್ ನಲ್ಲಿ ವಿವಾದಾತ್ಮಕ ಟ್ವೀಟ್ ಮಾಡಿದ್ದಾಳೆ. ಬಳಿಕ ಸ್ವರಾ ಭಾಸ್ಕರ್ ಕೂಡ ಟ್ವಿಟ್ಟರ್ ನಲ್ಲಿ ಜನರ ಕೆಂಗಣ್ಣಿಗೆ ಗುರಿಯಾದಳು.
We don't need you, please convert….will be great for us…
— Haryanavi_tau (@tau_haryane_ala) October 22, 2021
ಗುರುಗ್ರಾಮದಲ್ಲಿ ನಮಾಜ್ ಮಾಡುವ ವಿವಾದದ ಕುರಿತು, ಸ್ವರ ಭಾಸ್ಕರ್ ಟ್ವೀಟ್ ಮಾಡಿದ್ದು, ನಾನು ಹಿಂದೂ ಆಗಿ ಹುಟ್ಟಿದ್ದಕ್ಕೆ ನಾಚಿಕೆಯಾಗುತ್ತಿದೆ ಎಂದು ಬರೆದಿದ್ದಾಳೆ. ಸ್ವರಾ ಭಾಸ್ಕರ್ ಳ ಈ ಟ್ವೀಟ್ನ ಬಳಿಕ ಟ್ವಿಟ್ಟರ್ ನಲ್ಲಿ ಆಕೆಯನ್ನ ಹಿಗ್ಗಾಮುಗ್ಗಾ ಝಾಡಿಸುತ್ತಿದ್ದಾರೆ.