ಸ್ಪುರದ್ರೂಪಿ ನಟ ಸುಶಾಂತ್ ಸಿಂಗ್ ರಾಜಪೂತ್ ಸಾ ವಿ ನ ಬಳಿಕ ಈ ಆ ಮನೆ ಏನಾಗಿದೆ ಗೊತ್ತಾ?

in FILM NEWS/Kannada News/News 348 views

ಮುಂಬೈ:

Advertisement
ಕಳೆದ ವರ್ಷ ಕರೊನಾದ ಮೊದಲ ಅಲೆ ಉತ್ತುಂಗದಲ್ಲಿ ಇರುವ ಸಂದರ್ಭದಲ್ಲಿ ಬಾಲಿವುಡ್​ ನಟ ಸುಶಾಂತ್​ ಸಿಂಗ್​ ರಜಪೂತ್​ ಆ ತ್ಮ ಹ ತ್ಯೆ ಮಾಡಿಕೊಂಡು ನಿಧನರಾದರು. ಮುಂಬೈನ ತಮ್ಮ ಮನೆಯಲ್ಲಿ ಫ್ಯಾನ್​ಗೆ ನೇ‌ಣು ಹಾ ಕಿ ಕೊಂಡು ಸುಶಾಂತ್​ ಇನ್ನಿಲ್ಲವಾಗಿ ಒಂದು ವರ್ಷವೇ ಆಗಿದೆ. ಈಗ ಅವರ ಮನೆಯು ಬಾಡಿಗೆಗಿದ್ದು, ಅದರ ಬಗ್ಗೆ ಸಿಕ್ಕಾಪಟ್ಟೆ ಚರ್ಚೆಯಾಗುತ್ತಿದೆ.

ಸುಶಾಂತ್​ ಸಿಂಗ್​ ನಿ ಧ ನ ರಾದಾಗಿನಿಂದ ಇಲ್ಲಿಯವರೆಗೂ ಮುಂಬೈನ ಬಾಂದ್ರಾದಲ್ಲಿರುವ ಅವರ ಫ್ಲಾಟ್​ ಖಾಲಿಯಾಗಿಯೇ ಇದೆ. ಸುಶಾಂತ್​ ಈ ಮನೆಯನ್ನು 2019ರ ಕೊನೆಗೆ ಬಾಡಿಗೆಗೆ ಪಡೆದಿದ್ದರು. ಮೂರು ವರ್ಷಗಳ ಕಾಲ ಅಗ್ರೀಮೆಂಟ್​ ಇದ್ದು, 2022ಕ್ಕೆ ಮನೆ ಖಾಲಿ ಮಾಡಬೇಕಿತ್ತು ಅಥವಾ ಅಗ್ರೀಮೆಂಟ್​ ನವೀಕರಿಸಬೇಕಿತ್ತು. ಈ ಮನೆಗೆ, ಪ್ರತಿ ತಿಂಗಳು ನಾಲ್ಕೂವರೆ ಲಕ್ಷ ರೂಪಾಯಿ ಬಾಡಿಗೆ ಕಟ್ಟುತ್ತಿದ್ದರಂತೆ ಸುಶಾಂತ್​. ಅವರು ಕೊನೆಯುಸಿರೆಳೆದ ನಂತರ ಮನೆ ಖಾಲಿಯಾಗಿದ್ದು, ಆ ಮನೆಯನ್ನು ಬೇರೆಯವರಿಗೆ ಬಾಡಿಗೆ ಕೊಡುವ ಪ್ರಯತ್ನ ನಡೆಯುತ್ತಿದೆ.

ಬಾಂದ್ರಾದ ಮಾಂಟ್​ ಬ್ಲಾಂಕ್​ ಬಿಲ್ಡಿಂಗ್​ನಲ್ಲಿರುವ 3600 ಚದರಡಿ ಇರುವ ಈ ಡ್ಯುಪ್ಲೆ ಮನೆ ಆರನೇ ಮಹಡಿಯಲ್ಲಿದೆ. ಈ ಮನೆಗೆ ಮೂರು ಕಾರ್​ ಪಾರ್ಕಿಂಗ್​ ಸಹ ನೀಡಲಾಗಿದೆ. ಈ ಮನೆಗೆ ಸುಶಾಂತ್​ ಸಿಂಗ್​ ಪ್ರತಿ ತಿಂಗಳು ನಾಲ್ಕೂವರೆ ಲಕ್ಷ ರೂ.ಗಳನ್ನು ಬಾಡಿಗೆ ಕೊಡುತ್ತಿದ್ದರು. ಮುಂದಿನ ವರ್ಷಕ್ಕೆ ಆ ಬಾಡಿಗೆ ಇನ್ನಷ್ಟು ಹೆಚ್ಚುತ್ತಿತ್ತು. ಆದರೆ, ಕಳೆದ ಒಂದು ವರ್ಷದಿಂದ ಮನೆ ಖಾಲಿ ಇರುವುದರಿಂದ ಮತ್ತು ಕರೊನಾದಿಂದ ರಿಯಲ್​ ಎಸ್ಟೇಟ್​ ವ್ಯವಹಾರದಲ್ಲಿ ಇಳಿಮುಖವಾಗಿರುವುದರಿಂದ, ಬಾಡಿಗೆ ಸಹ ಕಡಿಮೆ ಆಗಿದೆ.

ಈಗ ಈ ಮನೆಯ ಬಾಡಿಗೆ ನಾಲ್ಕು ಲಕ್ಷ ರೂ.ಗಳಾಗಿದ್ದು, ಕಳೆದ ಕೆಲವು ತಿಂಗಳುಗಳಿಂದ ಸೂಕ್ತ ಬಾಡಿಗೆದಾರರಿಗೆ ಹುಡುಕಾಟ ನಡೆಸಲಾಗುತ್ತಿದೆ. ಆದರೆ, ಇದುವರೆಗೂ ಸುಶಾಂತ್​ ಇದ್ದ ಮನೆಗೆ ಬಾಡಿಗೆದಾರರು ಬಂದಿಲ್ಲ. ಬಾಲಿವುಡ್​ನ ಕೆಲವು ನಟ-ನಟಿಯರಿಗೆ ಈ ಮನೆ ತೋರಿಸಲಾಗಿದೆಯಾದರೂ, ಮನೆಗೆ ಬರುವುದಕ್ಕೆ ಇದುವರೆಗೂ ಯಾರೂ ಆಸಕ್ತಿ ತೋರಿಸಿಲ್ಲವಂತೆ.

ಸುಶಾಂತ್ ಅಗಲಿಕೆಗೆ ಒಂದು ವರ್ಷ, ಗೆಳತಿ ರಿಯಾ ಹೇಳಿದ್ದೇನು?

ಸುಶಾಂತ್ ಸಿಂಗ್ ರಜಪೂತ್ ಸಾ ವ ನ್ನ ಪ್ಪಿ ನೆನ್ನೆಗೆ ಒಂದು ವರ್ಷ. ಮೊದಲ ಪುಣ್ಯ ಸ್ಮರಣೆ ದಿನದಂದು ಅವರನ್ನು ನೆನಪಿಸಿಕೊಂಡಿರುವ ನಟಿ ಹಾಗೂ ಅವರ ಮಾಜಿ ಗೆಳತಿ ರಿಯಾ ಚಕ್ರವರ್ತಿ, ಬಾಲಿವುಡ್ ಸ್ಟಾರ್ ಅಗಲುವಿಕೆಯಿಂದ ಇನ್ನೂ ಹೊರಬರಬೇಕಾಗಿದೆ ಎಂದು ಹೇಳಿದ್ದಾರೆ. ಬಾಂದ್ರಾದಲ್ಲಿನ ತನ್ನ ಅಪಾರ್ಟ್ ಮೆಂಟ್ ನಲ್ಲಿ ಸುಶಾಂತ್ ಸಿಂಗ್ ರಜಪೂತ್ ಜೂನ್ 14, 2020ರಂದು ನೇ ಣು ಬಿ ಗಿ ದು ಸ್ಥಿತಿಯಲ್ಲಿ ಕಂಡುಬಂದಿದ್ದರು.

ಇನ್ಸ್ಟಾಗ್ರಾಮ್ ನಲ್ಲಿ ಭಾವುಕ ಪತ್ರವೊಂದನ್ನು ಬರೆದುಕೊಂಡಿರುವ ರಿಯಾ ಚಕ್ರವರ್ತಿ, ನೀನು ಇನ್ನು ಮುಂದೆ ಇಲ್ಲಿಲ್ಲ ಎಂದು ನಾನು ನಂಬುವ ಒಂದು ಕ್ಷಣವೂ ಇಲ್ಲ. ಸಮಯ ಎಲ್ಲವನ್ನೂ ಗುಣಪಡಿಸುತ್ತದೆ ಎಂದು ಅವರು ಹೇಳಿದರು. ಆದರೆ, ನನ್ನ ಸಮಯ ಮತ್ತು ಎಲ್ಲವೂ ನೀನೆ. ನೀವು ಈಗ ನನ್ನ ಕಾಪಾಡುವ ದೇವರು ಎಂದು ನನಗೆ ತಿಳಿದಿದೆ. ಚಂದ್ರನಿಂದ ಟೆಲಿಸ್ಕೋಪ್ ನಿಂದ ನನನ್ನು ನೋಡುತ್ತಿದ್ದೀರಿ ಮತ್ತು ನನನ್ನು ರಕ್ಷಿಸುತ್ತಿದ್ದೀರಾ ಎಂದು ರಜಪೂತ್ ಫೋಟೋದೊಂದಿಗೆ 28 ವರ್ಷದ ರಿಯಾ ಚಕ್ರವರ್ತಿ ಬರೆದುಕೊಂಡಿದ್ದಾರೆ.

ನೀನು ಇಲ್ಲದೆ ಜೀವನವಿಲ್ಲಾ, ನೀನು ಅದರ ಅರ್ಥವನ್ನು ನಿನ್ನೊಂದಿಗೆ ತೆಗೆದುಕೊಂಡು ಹೋಗಿದ್ದೀರಿ. ಈ ಶೂನ್ಯವನ್ನು ತುಂಬಲು ಸಾಧ್ಯವಿಲ್ಲ .. ನೀನು ಇಲ್ಲದೆ, ನಾನು ಇನ್ನೂ ನಿಂತಿದ್ದೇನೆ ಎಂದು ರಿಯಾ ಚಕ್ರವರ್ತಿ ಹೇಳಿಕೊಂಡಿದ್ದಾರೆ. ರಜಪೂತ್ ಗೈರನ್ನು ಪ್ರತಿ ಸಮಯ ನೆನಪಿಕೊಳ್ಳುತ್ತೇನೆ. ನೀನು ನನ್ನೊಂದಿಗೆ ಇದ್ದೀಯಾ ಎಂಬುದು ನನ್ನಗೆ ತಿಳಿದಿದೆ. ಎಲ್ಲಕಡೆ ನಿನ್ನನ್ನೇ ನೋಡುತ್ತಿರುತ್ತೇನೆ. ಐ ಮಿಸ್ ಯೂ, ಮೈ ಬೆಸ್ಟ್ ಫ್ರೆಂಡ್, ಮೈ ಮ್ಯಾನ್, ಮೈ ಲವ್ ಎಂದು ರಿಯಾ ಚಕ್ರವರ್ತಿ ಭಾವುಕರಾಗಿದ್ದಾರೆ.

Advertisement
Share this on...