ಹಣೆಯ ಮೇಲೆ ಸಿಂಧೂರ, ಸೈಕಲ್ ಮೇಲೆ ಸವಾರಿ, FORBES ಲಿಸ್ಟ್‌ನ ಜಗತ್ತಿನ‌ ಶಕ್ತಿಶಾಲಿ ಮಹಿಳೆಯರ ಪಟ್ಟಿಯಲ್ಲಿ ಸ್ಥಾನ ಪಡೆದ ಈ ಮತಿಲ್ದಾ ಕುಲ್ಲು ಯಾರು ಗೊತ್ತಾ?

in Kannada News/News/ಕನ್ನಡ ಮಾಹಿತಿ 462 views

ಒಡಿಶಾದ ಆಶಾ ಕಾರ್ಯಕರ್ತೆಯೊಬ್ಬರು ಫೋರ್ಬ್ಸ್‌ನ ಅತ್ಯಂತ ಶಕ್ತಿಶಾಲಿ ಭಾರತೀಯ ಮಹಿಳೆಯರ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ. ಫೋರ್ಬ್ಸ್ (FORBES) ಇಂಡಿಯಾ ಡಬ್ಲ್ಯೂ-ಪವರ್ 2021 ಪಟ್ಟಿಯಲ್ಲಿ ಒಡಿಶಾದ ಸುಂದರ್‌ಗಢ್ ಜಿಲ್ಲೆಯ 45 ವರ್ಷದ ಬುಡಕಟ್ಟು ಆಶಾ ಕಾರ್ಯಕರ್ತೆ ಮತಿಲ್ಡಾ ಕುಲ್ಲು, ಅಮೆಜಾನ್ ಪ್ರೈಮ್ ಮುಖ್ಯಸ್ಥೆ ಅಪರ್ಣಾ ಪುರೋಹಿತ್ ಮತ್ತು ಸೇಲ್ಸ್‌ಫೋರ್ಸ್ ಇಂಡಿಯಾ ಸಿಇಒ ಅರುಂಧತಿ ಭಟ್ಟಾಚಾರ್ಯರಂತಹ ಮಹಿಳೆಯರೂ ಇದ್ದಾರೆ. ಫೋರ್ಬ್ಸ್ ಇಂಡಿಯಾ ಮಹಿಳಾ ಸಬಲೀಕರಣದ ಪಟ್ಟಿಯಲ್ಲಿ ಕುಲು ದೇಶದ ಮೂರನೇ ಶಕ್ತಿಶಾಲಿ  ಮಹಿಳೆಯ ಸ್ಥಾನವನ್ನು ಪಡೆದಿದ್ದಾರೆ.

Advertisement

ಮತಿಲ್ದಾ ಕುಲ್ಲು ಅವರು ಬಡಗಾಂವ್ ತಹಸಿಲ್‌ನ ಗರ್ಗಡ್‌ಬಹಲ್ ಗ್ರಾಮದಲ್ಲಿ ಕೆಲಸ ಮಾಡುತ್ತಿದ್ದಾರೆ. ಅವರ ಈವರೆಗಿನ ಪಯಣ ಹೋರಾಟ ಮತ್ತು ಕಷ್ಟಗಳಿಂದ ಕೂಡಿದೆ. ಕೆಲವೊಮ್ಮೆ ಜನರು ಅವರ ಸಲಹೆ ಮತ್ತು ಅವರ ಮಾತುಗಳನ್ನು ಗೇಲಿ ಮಾಡುತ್ತಿದ್ದರು. ಆದರೆ ಇದೀಗ ಅದೇ ಜನರು ಅವರಿಗೆ ಗೌರವವನ್ನು ನೀಡುತ್ತಿದ್ದಾರೆ.

ಯಾರು ಈ ಮತಿಲ್ದಾ ಕುಲ್ಲು?

ಮತಿಲ್ದಾ ಕುಲ್ಲು ಒಡಿಶಾದ ಸುಂದರ್‌ಗಢ್ ಜಿಲ್ಲೆಯ ಬಡಗಾಂವ್ ತಹಸಿಲ್ ನಿವಾಸಿಯಾಗಿದ್ದಾರೆ. ಮತಿಲ್ದಾ ಅವರು 15 ವರ್ಷಗಳ ಹಿಂದೆ ಸುಂದರ್‌ಗಢ್ ಜಿಲ್ಲೆಯ ಗರ್ಗಡ್‌ಬಹಾಲ್ ಗ್ರಾಮದಲ್ಲಿ ಆಶಾ ಕಾರ್ಯಕರ್ತೆಯಾಗಿ ನೇಮಕಗೊಂಡಿದ್ದರು. ಅಂದಿನಿಂದ ಇಂದಿನವರೆಗೂ ನಿರಂತರವಾಗಿ ಜನರಲ್ಲಿ ಜಾಗೃತಿ ಮೂಡಿಸುತ್ತಿದ್ದಾರೆ. ಮತಿಲ್ದಾ ಅವರ ಪ್ರಯತ್ನದ ಪರಿಣಾಮ ಬಡಗಾಂವ ತಹಸಿಲ್ ಜನರು ಈಗ ರೋಗಗಳ ಚಿಕಿತ್ಸೆಗಾಗಿ ಆಸ್ಪತ್ರೆಯ ಮೊರೆ ಹೋಗುತ್ತಿದ್ದಾರೆ. ವಾಸ್ತವವಾಗಿ, ಆ ಗ್ರಾಮ‌ ಹಿಂದುಳಿದಿದ್ದರಿಂದ ಅಲ್ಲಿನ ಜನರು ಈ ರೋಗಗಳನ್ನ ಮಾಟಮಂತ್ರದ ಪರಿಣಾಮವೆಂದು ಪರಿಗಣಿಸುತ್ತಿದ್ದು ತಾಂತ್ರಿಕರು-ಭೂತೋಪದೇಶಕರ ಬಳಿ ಹೋಗುತ್ತಿದ್ದರು. ಈ ಬಗ್ಗೆ ಮತಿಲ್ದಾ ಜನರಿಗೆ ಅರಿವು ಮೂಡಿಸಲು ಪ್ರಾರಂಭಿಸಿದರು ಮತ್ತು ಕ್ರಮೇಣ ಅವರ ಪ್ರಯತ್ನಗಳು ಫಲ ನೀಡಿತು. ಇದೀಗ ಜನರಲ್ಲಿ ಜಾಗೃತಿ ಮೂಡಿದ್ದು, ಜನರು ಮಾಟಮಂತ್ರದ ಕಪಿಮುಷ್ಠಿಯಿಂದ ಮುಕ್ತರಾಗಿದ್ದಾರೆ.

ಗ್ರಾಮಸ್ಥರನ್ನ ಆರೋಗ್ಯವಂತರಾಗಿಸುವುದೇ ಮತಿಲ್ದಾ ಗುರಿ

ಮತಿಲ್ದಾ ಕೆಲದ ಪ್ರತಿ ದಿನ ಬೆಳಿಗ್ಗೆ 5 ಗಂಟೆಗೆ ಪ್ರಾರಂಭವಾಗುತ್ತದೆ. ಜಾನುವಾರುಗಳನ್ನು ಸಾಕಿಕೊಂಡು, ಮನೆಯ ಅಡುಗೆ ಕೆಲಸ ಮಾಡಿದ ಬಳಿಕ ಅವರು ಹಳ್ಳಿಯ ಜನರನ್ನು ಆರೋಗ್ಯ ವಿಚಾರಿಸಿ ಅವರನ್ನ ಆರೋಗ್ಯದಿಂದಿರಿಸಲು ಮನೆಯಿಂದ ಹೊರಡುತ್ತಾರೆ. ಮತಿಲ್ದಾ ಹಳ್ಳಿಯ ಮೂಲೆ ಮೂಲೆಗಳಿಗೆ ಸೈಕಲ್‌ನಲ್ಲೇ ಓಡುತ್ತಾರೆ‌. ಗ್ರಾಮದಲ್ಲಿ ಮನೆ ಮನೆಗೆ ಭೇಟಿ ನೀಡುವುದು, ನವಜಾತ ಶಿಶುಗಳು ಮತ್ತು ಹದಿಹರೆಯದ ಹೆಣ್ಣುಮಕ್ಕಳಿಗೆ ಲಸಿಕೆ ಹಾಕುವುದು, ಹೆರಿಗೆ ಪೂರ್ವ ಮತ್ತು ನಂತರದ ಪರೀಕ್ಷೆಗಳನ್ನು ನಡೆಸುವುದು ಅವರ ಕೆಲಸದ ಭಾಗವಾಗಿದೆ.

ಇದಲ್ಲದೇ ಮಗುವಿನ ಜನನಕ್ಕೆ ಸಿದ್ಧತೆ ನಡೆಸುವುದು, ಅಗತ್ಯ ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ಮಾಹಿತಿ ನೀಡುವುದು, ಎಚ್‌ಐವಿ ಮತ್ತಿತರ ಸೋಂಕುಗಳಿಂದ ದೂರವಿರುವಂತೆ ಗ್ರಾಮಸ್ಥರಿಗೆ ಸಲಹೆ ನೀಡುವುದು ಕೂಡ ಅವರ ಕೆಲಸವಾಗಿದೆ. ಮತಿಲ್ದಾ ಈ ಜವಾಬ್ದಾರಿಯನ್ನು ಸಂಪೂರ್ಣ ಸೇವಾ ಮನೋಭಾವನೆಯೊಂದಿದೆ ನಿರ್ವಹಿಸುತ್ತಿದ್ದಾರೆ.

ಕರೋನಾ ಸಾಂಕ್ರಾಮಿಕ ಸಮಯದಲ್ಲಿಯೂ ಸಹ, ಮತಿಲ್ದಾ ಉತ್ತಮ ಕೆಲಸ ಮಾಡಿದರು ಮತ್ತು ಪ್ರದೇಶದಲ್ಲಿ ವ್ಯಾಕ್ಸಿನೇಷನ್ ಕೆಲಸದಲ್ಲಿ ಶ್ರಮಿಸಿದರು. ಕರೋನಾ ಸಾಂಕ್ರಾಮಿಕ ಸಮಯದಲ್ಲಿ, ಮತಿಲ್ದಾ ಜನರನ್ನು ಪರೀಕ್ಷಿಸಲು ಪ್ರತಿದಿನ 50 ರಿಂದ 60 ಮನೆಗಳಿಗೆ ಹೋಗುತ್ತಿದ್ದರು. ತಿಂಗಳಿಗೆ 4500 ರೂ. ಗಳಿಸುವ ಮತಿಲ್ದಾ ಕುಲ್ಲು ಬಡಗಾಂವ್ ತಹಸಿಲ್‌ನ 964 ಜನರನ್ನು ನೋಡಿಕೊಳ್ಳಲು ತನ್ನ ಜೀವನವನ್ನೇ ಮುಡಿಪಾಗಿಟ್ಟಿದ್ದಾರೆ. ಮತಿಲ್ದಾ ಈ ಜನರಿಗೆ ಕರೋನಾ ವಾರಿಯರ್. ಮತಿಲ್ದಾ ತನ್ನ ಕೆಲಸದ ಬಗ್ಗೆ ಹೆಮ್ಮೆಪಡುತ್ತೇನೆ ಏಕೆಂದರೆ ಅದು ಜೀವಗಳನ್ನು ಉಳಿಸುತ್ತದೆ ಎನ್ನುತ್ತಾರೆ.

ಗ್ರಾಮಸ್ಥರಿಗೆ ವ್ಯಾಕ್ಸಿನೇಷನ್‌ ಬಗ್ಗೆ ಅರಿವು ಮೂಡಿಸೋದೇ ಸವಾಲಿನ ವಿಷಯವಾಗಿತ್ತು

ಕರೋನಾ ಅವಧಿಯಲ್ಲಿ ಪರಿಸ್ಥಿತಿ ಹದಗೆಟ್ಟಿದ್ದರಿಂದ ಜವಾಬ್ದಾರಿ ಹೆಚ್ಚಾಗಿತ್ತು. ಪ್ರತಿದಿನ ಕರೋನಾ ರೋಗಲಕ್ಷಣಗಳಿರುವ 50 ರಿಂದ 60 ರೋಗಿಗಳ ಮನೆಗೆ ಪರೀಕ್ಷೆಗೆ ಹೋಗುತ್ತಿದ್ದರು, ಆದರೆ ಲಸಿಕೆ ಹಾಕಿಸಲು ಜನರನ್ನು ಒಪ್ಪಿಸುವುದೇ ದೊಡ್ಡ ಸವಾಲಾಗಿತ್ತು. ಗ್ರಾಮದಲ್ಲಿ ವ್ಯಾಕ್ಸಿನೇಷನ್‌ ಪ್ರಾರಂಭಿಸಿದಾಗ, ಅದನ್ನು ಹಾಕಿಸಿಕೊಳ್ಳುವಂತೆ ಗ್ರಾಮಸ್ಥರ ಮನವೊಲಿಸಲು ಕಷ್ಟವಾಯಿತು. ಕ್ರಮೇಣ ಜನರಲ್ಲಿ ಇದರ ಬಗ್ಗೆ ಅರಿವು ಮೂಡಿಸಲಾಯಿತು. ಹಳ್ಳಿಗರ ಸೇವೆಗಿಂತ ತನಗೆ ಏನೂ ಮುಖ್ಯವಲ್ಲ ಎಂದು ಮತಿಲ್ದಾ ಹೇಳುತ್ತಾರೆ.

ಒಂದು ಕಾಲದಲ್ಲಿ ಗೇಲಿ ಮಾಡುತ್ತಿದ್ದ ಜನ

“ಮೊದ ಮೊದಲು ನನ್ನ ಪ್ರಯಾಣ ತುಂಬಾ ಸಂಘರ್ಷದಿಂದ ಕೂಡಿತ್ತು. ಇಲ್ಲಿನ ಜನರು ಅನಾರೋಗ್ಯದಿಂದ ಬಳಲುತ್ತಿದ್ದಾಗ ಆಸ್ಪತ್ರೆಗೆ ಹೋಗುತ್ತಿರಲಿಲ್ಲ. ಆಸ್ಪತ್ರೆಯಿಂದ ಚಿಕಿತ್ಸೆ ಪಡೆದುಕೊಳ್ಳು ಎಂದು ಹೇಳಿದಾಗ ಜನ ಗೇಲಿ ಮಾಡುತ್ತಿದ್ದರು. ಸಮಯ ಕಳೆದಂತೆ, ಜನರು ನನ್ನ ಮಾತನ್ನು ಅರ್ಥಮಾಡಿಕೊಂಡರು. ಈಗ ತಮ್ಮ ಆರೋಗ್ಯದ ಬಗ್ಗೆ ಗ್ರಾಮಸ್ಥರಿಗೆ ಅರಿವು ಮೂಡಿದೆ. ಪ್ರತಿಯೊಂದು ಸಣ್ಣ ಕಾಯಿಲೆಗೂ ಜನ ಚಿಕಿತ್ಸೆಗಾಗಿ ಆಸ್ಪತ್ರೆಗೆ ಹೋಗುತ್ತಿದ್ದಾರೆ” ಎನ್ನುತ್ತಾರೆ ಮತಿಲ್ದಾ.

ಮತಿಲ್ದಾ ಹಳ್ಳಿಯಲ್ಲಿ ಹೆಚ್ಚು ಕಷ್ಟಪಡಬೇಕಾಯಿತು ಏಕೆಂದರೆ ಆ ದಿನಗಳಲ್ಲಿ ಜನರು ಚಿಕಿತ್ಸೆಗಾಗಿ ಆಸ್ಪತ್ರೆಗೆ ಹೋಗುವ ಬದಲು ಮಾಟಮಂತ್ರದ ಮೊರೆ ಹೋಗುತ್ತಿದ್ದರು. ಜನರ ಈ ಮನಸ್ಥಿತಿಯನ್ನು ಬದಲಾಯಿಸುವುದೆ ಮತಿಲ್ದಾ ರವರಿಗೆ ಸವಾಲಿನ ಕೆಲಸವಾಗಿತ್ತು. ಮತಿಲ್ದಾ ಅವರ ಪ್ರಯತ್ನದಿಂದಲೇ ಗ್ರಾಮದಲ್ಲಿ ಮಾಟಮಂತ್ರದಂತಹ ಸಾಮಾಜಿಕ ಶಾಪವನ್ನು ನಿರ್ಮೂಲನೆ ಮಾಡಲು ಸಾಧ್ಯವಾಯಿತು. ಗ್ರಾಮದಲ್ಲಿ ಈ ದೊಡ್ಡ ಬದಲಾವಣೆಯನ್ನು ತರಲು ಮತ್ತು ಜನರನ್ನು ಆರೋಗ್ಯವಾಗಿಡಲು ಅವರ ಕೊಡುಗೆಯ ಕಾರಣ, ಫೋರ್ಬ್ಸ್ ಮತಿಲ್ದಾ ಅವರನ್ನ ವಿಶ್ವದ ಅತ್ಯಂತ ಶಕ್ತಿಶಾಲಿ ಮಹಿಳೆಯರ ಪಟ್ಟಿಯಲ್ಲಿ ಸೇರಿಸಿದೆ. ಇತ್ತೀಚೆಗೆ ಫೋರ್ಬ್ಸ್ ಇಂಡಿಯಾ ಭಾರತದ ಮಹಿಳಾ ಶಕ್ತಿ 2021 ರ ಪಟ್ಟಿಯನ್ನು ಬಿಡುಗಡೆ ಮಾಡಿತ್ತು. ಈ ಪಟ್ಟಿಯಲ್ಲಿ ತಮ್ಮ ಸ್ವಂತ ಬಲದ ಮೇಲೆ ಯಶಸ್ಸಿನ ಮೆಟ್ಟಿಲನ್ನು ಏರಿದ ಮಹಿಳೆಯರು ಸೇರಿದ್ದಾರೆ.

Advertisement
Share this on...