ಹವಾಯಿ ಚಪ್ಪಲಿ, ಬಿಳಿ ಸೀರೆಗಳನ್ನ ಧರಿಸುವ ಮಮತಾ ಬ್ಯಾನರ್ಜಿಯ ಒಟ್ಟು ಆಸ್ತಿ ಎಷ್ಟು ಗೊತ್ತಾ?

in Kannada News/News 788 views

ಮಮತಾ ಬ್ಯಾನರ್ಜಿ ಬಳಿ ತನ್ನ ಸ್ವಂತದ ಯಾವುದೇ ವಾಹನವಾಗಲಿ ಅಥವಾ ಮನೆಯಾಗಲಿ ಹೊಂದಿಲ್ಲ. ಸಾಮಾನ್ಯವಾಗಿ ಏಕವರ್ಣದ ಬಾರ್ಡರ್ ಹತ್ತಿ ಸೀರೆಗಳು ಮತ್ತು ಹವಾಯಿ ಚಪ್ಪಲ್ ನಲ್ಲಿ ಕಂಡುಬರುವ ಮಮತಾ ಬ್ಯಾನರ್ಜಿ ತನ್ನ ಜೀವನವನ್ನು ಕಡಿಮೆ ಸಂಪನ್ಮೂಲಗಳಲ್ಲಿ ಕಳೆಯುತ್ತಾಳೆ ಎಂದು ಹೇಳಲಾಗುತ್ತದೆ.

Advertisement

ಪಶ್ಚಿಮ ಬಂಗಾಳದಲ್ಲಿ ಕೆಲವೇ ದಿನಗಳಲ್ಲಿ ಚುನಾವಣೆ ನಡೆಯಲಿದ್ದು ರಾಜ್ಯ ರಾಜಕಾರಣದ ಕಾವು ಜೋರಾಗಿದೆ. ಒಂದೆಡೆ ಬಿಜೆಪಿ ರಾಜ್ಯದಲ್ಲಿ ತನ್ನ ರಾಜಕೀಯ ನೆಲೆಯನ್ನು ಸ್ಥಾಪಿಸಲು ಸಂಘರ್ಷ ನಡೆಸುತ್ತಿದೆ, ಮತ್ತೊಂದೆಡೆ ಮುಖ್ಯಮಂತ್ರಿ ಸ್ಥಾನವನ್ನು ಹೊಂದಿರುವ ಮಮತಾ ಬ್ಯಾನರ್ಜಿ ತನ್ನ ಕುರ್ಚಿಯನ್ನು ಉಳಿಸಿಕೊಳ್ಳಲು ತೀವ್ರ ಪ್ರಯತ್ನ ಮಾಡುತ್ತಿದ್ದಾರೆ. 4 ದಶಕಗಳಿಗಿಂತಲೂ ಹೆಚ್ಚು ಕಾಲ ರಾಜಕೀಯದಲ್ಲಿ ಸಕ್ರಿಯವಾಗಿರುವ ಮಮತಾ ಬ್ಯಾನರ್ಜಿ ಕಳೆದ ಹತ್ತು ವರ್ಷಗಳಿಂದ ಪಶ್ಚಿಮ ಬಂಗಾಳದ ಮುಖ್ಯಮಂತ್ರಿಯಾಗಿದ್ದಾರೆ. ಕೇಂದ್ರದಲ್ಲಿ ಕಲ್ಲಿದ್ದಲು, ರೈಲ್ವೆ, ಮಾನವ ಸಂಪನ್ಮೂಲ ಮತ್ತು ಅಭಿವೃದ್ಧಿ, ಯುವ ವ್ಯವಹಾರ, ಕ್ರೀಡೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವರಾಗಿಯೂ ಸೇವೆ ಸಲ್ಲಿಸಿದ್ದಾರೆ. ರಾಜಕೀಯದಲ್ಲಿ ಇಷ್ಟೆಲ್ಲಾ ಸ್ಥಾನಗಳನ್ನ ಅಲಂಕರಿಸಿದ್ದರು ಆಕೆಯ ಬಳಿ ಸ್ವಂತ ಮನೆಯೂ ಇಲ್ಲವಂತೆ.

ಕೋಲ್ಕತ್ತಾದ ಅತ್ಯಂತ ಸಾಮಾನ್ಯ ಕುಟುಂಬದಲ್ಲಿ ಜನವರಿ 5, 1955 ರಂದು ಜನಿಸಿದ ಮಮತಾ ಬ್ಯಾನರ್ಜಿ ಸಲ್ಲಿಸಿದ ಚುನಾವಣಾ ಅಫಿಡವಿಟ್ ಪ್ರಕಾರ, ಆಕೆಗೆ ಯಾವುದೇ ವಾಹನ ಅಥವಾ ಮನೆ ಇಲ್ಲ. ಅವರ ಒಟ್ಟು ಚರಾಸ್ಥಿ 30.45 ಲಕ್ಷ ರೂ. ಹಾಗು ಆಕೆಯ ಬ್ಯಾಂಕ್ ಖಾತೆಯಲ್ಲಿ 27.6 ಲಕ್ಷ ರೂ. ನಷ್ಟಿದೆಯಂತೆ. ಚುನಾವಣಾ ಆಯೋಗಕ್ಕೆ ನೀಡಿದ ಮಾಹಿತಿಯಲ್ಲಿ, ಮಮತಾ ಬ್ಯಾನರ್ಜಿ ಮೂರು ಬ್ಯಾಂಕ್ ಖಾತೆಗಳನ್ನು ಹೊಂದಿದ್ದಾರೆಂದು ತಿಳಿಸಿದ್ದಳು. ಅವುಗಳಲ್ಲಿ ಒಂದು ದೆಹಲಿಯಲ್ಲಿದೆ. ಎರಡು ಉಳಿತಾಯ ಖಾತೆಗಳಿವೆ ಮತ್ತು ಒಂದು ಚುನಾವಣಾ ವೆಚ್ಚಗಳಿಗಾಗಿ ತೆರೆಯಲಾದ ಖಾತೆಯಾಗಿದೆ. ತನ್ನ ಬಳಿ ಮಲ್ಟಿ ಜಿಮ್ ಮಷೀನ್ ಇದ್ದು ಅದು ಎರಡು ಲಕ್ಷ 15 ಸಾವಿರ ರೂಪಾಯಿ ಮೌಲ್ಯದ್ದಾಗಿದೆ ಎಂದು ಹೇಳಿದ್ದರು. ಇದಲ್ಲದೆ, ಮಮತಾ ಬ್ಯಾನರ್ಜಿ 9.75 ಗ್ರಾಂ ಚಿನ್ನಾಭರಣಗಳನ್ನು ಹೊಂದಿದ್ದಾಳೆ.

ಇದು ಆಕೆ ಚುನಾವಣಾ ಆಯೋಗಕ್ಕೆ ಸಲ್ಲಿಸಿದ್ದ ಅಫಿಡವಿಟ್ ನಲ್ಲಿ ತಿಳಿಸಲಾದ ಮಾಹಿತಿಯಾದರೆ, ಆಕೆ ತನ್ನ ಕುಟುಂಬಕ್ಕಾಗಿ ಸಾಕಷ್ಟು ಆಸ್ತಿ ಮಾಡಿಕೊಂಡಿದ್ದಾಳೆ, ಪಶ್ಚಿಮ ಬಂಗಾಳದಾದ್ಯಂತ ಅಷ್ಟೇ ಅಲ್ಲ ದೆಹಲಿಯಲ್ಲೂ ಆಸ್ತಿ ಹಾಗು ಸಾಕಷ್ಟು ಹಣ ಹೊಂದಿದ್ದಾಳೆ ಎಂದು ಹೇಳಲಾಗುತ್ತದೆ. ಆದರೆ ಇದ್ಯಾವ ಮಾಹಿತಿಯನ್ನೂ ಆಕೆ ಚುನಾವಣಾ ಅಫಿಡವಿಟ್ ನಲ್ಲಿ ಇದುವರೆಗೂ ತಿಳಿಸಿಲ್ಲ. ರಾಜಕಾರಣಿಗಳ ವಿಷಯ ನಿಮಗೆಲ್ಲಾ ಗೊತ್ತಿದ್ದದ್ದೇ. ತಮ್ಮ ಆಸ್ತಿಯ ನೈಜ ವಿವರವನ್ನ ಕೆಲವೇ ನಾಯಕರು ಬಹಿರಂಗಪಡಿಸುತ್ತಾರೆ.

ಮಮತಾ ಬ್ಯಾನರ್ಜಿ ಕಲ್ಕತ್ತಾ ವಿಶ್ವವಿದ್ಯಾಲಯದಿಂದ ಎಂ.ಎ ಅಧ್ಯಯನ ಮಾಡಿದ್ದಾಳೆ ಮತ್ತು ಎಲ್.ಎಲ್.ಬಿ. ಕೂಡ ಮುಗಿಸಿದ್ದಾಳೆ. ತಮ್ಮ ರಾಜಕೀಯ ಇನ್ನಿಂಗ್ಸ್ ಅನ್ನು ಕಾಂಗ್ರೆಸ್ ಜೊತೆ ಪ್ರಾರಂಭಿಸಿದ್ದಳು. 1975 ರಲ್ಲಿ ಆಕೆ ಪಶ್ಚಿಮ ಬಂಗಾಳದ ಮಹಿಳಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಯಾಗಿದ್ದಳು. ಆದಾಗ್ಯೂ, ನಂತರ ಅವರು ಕಾಂಗ್ರೆಸ್ ನಿಂದ ನಂತರ ಬೇರ್ಪಟ್ಟರು ಮತ್ತು ತಮ್ಮದೇ ಪಕ್ಷವನ್ನು ರಚಿಸಿದಳು. ಮಮತಾ ಬ್ಯಾನರ್ಜಿ ಸರಳ ಹಾಗು ಸಾಮಾನ್ಯ ಜೀವನವನ್ನು ನಡೆಸುತ್ತಾಳಂತ ಹೇಳಲಾಗುತ್ತದೆ. ಆಕೆಯನ್ನ ನಾವು ಬಿಳಿ ಸೀರೆ ಹಾಗು ಹವಾಯಿ ಚಪ್ಪಲ್ ಗಳಲ್ಲೇ ಕಾಣುತ್ತೇವೆ.

ಮಾಧ್ಯಮ ವರದಿಗಳ ಪ್ರಕಾರ, ರಾಜಕೀಯಕ್ಕೆ ಸೇರುವ ಮೊದಲು ಮಮತಾ ಬ್ಯಾನರ್ಜಿ ಸ್ಟೆನೋಗ್ರಾಫರ್, ಶಾಲಾ ಶಿಕ್ಷಕಿ, ವೈಯಕ್ತಿಕ ಬೋಧಕಿ ಮತ್ತು ಸೇಲ್ಸ್‌ಗರ್ಲ್ ಆಗಿ ಕೆಲಸ ಮಾಡಿದ್ದಳು. ಅವರ ಅಭಿಮಾನಿಗಳಲ್ಲಿ ‘ದೀದಿ’ ಎಂದು ಜನಪ್ರಿಯವಾಗಿರುವ ಮಮತಾ ಬ್ಯಾನರ್ಜಿ ಸಂಗೀತವನ್ನು ಬಹಳ ಇಷ್ಟಪಡುತ್ತಾಳಂತೆ, ವಿಶೇಷವಾಗಿ ರವೀಂದ್ರ ಸಂಗೀತ. ಆಕೆಯ ಆರೋಗ್ಯದ ಬಗ್ಗೆಯೂ ಜಾಗರೂಕರಾಗಿರುತ್ತಾಳೆ ಮತ್ತು ಪ್ರತಿದಿನ 4-5 ಕಿ.ಮೀ. ನಡೆಯುತ್ತಾಳೆ. ಅಡುಗೆಯ ಬಗ್ಗೆ ವಿಶೇಷ ಕಾಳಜಿ ವಹಿಸುತ್ತಾಳೆ. ಎಣ್ಣೆ-ಮಸಾಲೆಯುಕ್ತ ಆಹಾರದಿಂದ ದೂರವೇ ಇರುತ್ತಾಳಂತೆ.

Advertisement
Share this on...