“ಹಿಂದುಗಳು ಎಲ್ಲೇ ಕಂಡರೂ ಅವರನ್ನ ಕೊಂದುಬಿಡಿ, ಪ್ರಪಂಚದಲ್ಲಿ ಇಸ್ಲಾಮಿಕ್ ಆಳ್ವಿಕೆಗಾಗಿ ಮುಸ್ಲಿಂ ಆರ್ಮಿ ಅತ್ಯಗತ್ಯ”: ಮುಸ್ಲಿಂ ಡಾಕ್ಟರ್

in Uncategorized 3,821 views

ಪ್ಯಾಲೆಸ್ತೀನ್ ಇಸ್ಲಾಮಿಕ್ ವಿದ್ವಾಂಸ ಡಾ. ಮೊಹಮ್ಮದ್ ಅಫೀಪ್ ಶಾದಿದ್ (Palestinian Islamic Scholar Dr. Mohammed Afeef Shadid) ಅವರ ವೀಡಿಯೊ ವೈರಲ್ ಆಗುತ್ತಿದೆ, ಅದರಲ್ಲಿ ಈತ ಹಿಂದೂಗಳು ಮತ್ತು ಯಹೂದಿಗಳನ್ನು ಕೊ.ಲ್ಲು.ವ ಬಗ್ಗೆ ಮಾತನಾಡಿದ್ದಾರೆ. ಜಗತ್ತಿನಲ್ಲಿ ಇಸ್ಲಾಮಿನ ಆಳ್ವಿಕೆಯನ್ನು ಸ್ಥಾಪಿಸಲು, ಹಿಂಸಾತ್ಮಕ ಸೈನ್ಯವನ್ನು ರಚಿಸುವ ಅವಶ್ಯಕತೆಯಿದೆ ಎಂದು ಶದೀದ್ ಹೇಳುತ್ತಾನೆ.

Advertisement

ವೆಸ್ಟರ್ನ್ ಬ್ಯಾಂಕ್‌ನ ತುಲ್ಕರ್ಮ್ ನಗರದ ಬಿಲಾಲ್ ಬಿನ್ ರಬಾ ಮಸೀದಿಯಲ್ಲಿ ಶದೀದ್ ಈ ಹೇಳಿಕೆಯನ್ನು ನೀಡಿದ್ದಾನೆ. ಈ ವಿಡಿಯೋ ಈಗ ಇಂಟರ್‌ನೆಟ್ ನಲ್ಲಿ ವೈರಲ್ ಆಗುತ್ತಿದೆ. ಮುಸ್ಲಿಮರು ಹಿಂಸಾತ್ಮಕ ಮತ್ತು ಆಕ್ರಮಣಕಾರಿ ಸೈನ್ಯವನ್ನು ರಚಿಸಬೇಕು ಮತ್ತು ಮುಸ್ಲಿಮೇತರರನ್ನು ಕೊ.ಲ್ಲು.ವ ಮೂಲಕ ಇಸ್ಲಾಂ ಧರ್ಮವನ್ನು ಇಡೀ ಜಗತ್ತಿಗೆ ಹರಡಬೇಕು ಎಂದು ಹೇಳಲು ಮುಸ್ಲಿಮರ ಧಾರ್ಮಿಕ ಪುಸ್ತಕವಾದ ಕುರಾನ್‌ನ ಹಲವಾರು ಪದ್ಯಗಳನ್ನು ಶದೀದ್ ಉಲ್ಲೇಖಿಸಿದ್ದಾನೆ.

ಶದಿದ್ ತನ್ನ ಪ್ರಬಂಧದಲ್ಲಿ ಪರ್ಷಿಯಾ ಮತ್ತು ಬೈಜಾಂಟೈನ್ ಸಾಮ್ರಾಜ್ಯದ ಉದಾಹರಣೆಯನ್ನು ನೀಡಿದನು. ಈ ಎರಡೂ ರಾಜ್ಯಗಳು ಮುಸಲ್ಮಾನರ ದಾ.ಳಿ.ಗೆ ಕಾರಣವಾಗಿದ್ದು ಅವರು ದರೋಡೆಕೋರರು ಎಂಬ ಕಾರಣಕ್ಕಾಗಿ ಅಲ್ಲ, ಬದಲಾಗಿ ಅಲ್ಲಿನ ರಾಜ್ಯಗಳ ಆಳ್ವಿಕೆಯನ್ನು ವಶಪಡಿಸಿಕೊಳ್ಳಲು ಮತ್ತು ಇಸ್ಲಾಂನ್ನ ಹರಡಲು ದಾ.ಳಿ ಮಾಡಿದ್ದರಿಂದ ಎಂದು ಶದೀದ್ ಹೇಳುತ್ತಾನೆ.

ಶದೀದ್ ಮಾತನಾಡುತ್ತ, “ಅವರು ನಮ್ಮ ಭೂಮಿಯನ್ನು ಆಕ್ರಮಿಸಿಕೊಂಡರು ಮತ್ತು ಲೂಟಿ ಮಾಡಿದರು ಅನ್ನೋ ಕಾರಣಕ್ಕಾಗಿ ನಾವು (ಮುಸ್ಲಿಮರು) ಪರ್ಷಿಯನ್ನರು ಮತ್ತು ಬೈಜಾಂಟೈನ್‌ಗಳ ವಿರುದ್ಧ ಹೋರಾಡಲಿಲ್ಲ. ಬದಲಾಗಿ ಅವರ ಭೂಮಿಯನ್ನು ವಶಪಡಿಸಿಕೊಳ್ಳಲು ಮತ್ತು ಅವರನ್ನು ಇಸ್ಲಾಂಗೆ ಪರಿವರ್ತಿಸುವ ಮೂಲಕ ಅಲ್ಲಾಹನ ಧರ್ಮವನ್ನು ಹರಡಲು ನಾವು ಇದನ್ನು ಮಾಡಿದ್ದೇವೆ” ಎನ್ನುತ್ತಾನೆ.

ತಮ್ಮ ಶಸ್ತ್ರಾಸ್ತ್ರಗಳನ್ನು ತೆಗೆದುಕೊಂಡು ಇಸ್ರೇಲ್‌ನ ಎಲ್ಲಾ ಯಹೂದಿಗಳನ್ನು ಕೊ.ಲ್ಲು.ವವರಿಗೆ ಮಾತ್ರ ಪ್ಯಾಲೆಸ್ಟೈನ್ ಅನ್ನು ಮುಕ್ತಗೊಳಿಸಲು ಸಾಧ್ಯವಾಗುತ್ತದೆ ಎಂದು ಶಾದಿದ್ ಹೇಳುತ್ತಾನೆ. ಶೀಘ್ರದಲ್ಲೇ ಈ ಜಗತ್ತಿನಲ್ಲಿ ಒಬ್ಬ ಬಲಿಷ್ಠ ಖಲೀಫನು ಉದಯಿಸುತ್ತಾನೆ ಮತ್ತು ಅವನು ಇಡೀ ಜಗತ್ತನ್ನು ಆಳುತ್ತಾನೆ ಮತ್ತು ಇಸ್ಲಾಂ ಧ್ವಜವನ್ನು ಹಾರಿಸುತ್ತಾನೆ ಎಂದು ಹೇಳುತ್ತಾನೆ.

ಆತ ಮುಂದೆ ಮಾತನಾಡುತ್ತ, “ಉಮಯ್ಯದ್ ಕ್ಯಾಲಿಫೇಟ್ ಆಳ್ವಿಕೆಯಲ್ಲಿ, ಇಸ್ಲಾಮಿಕ್ ಸ್ಟೇಟ್ 11 ಮಿಲಿಯನ್ ಚದರ ಕಿಲೋಮೀಟರ್‌ಗಳಲ್ಲಿ ಹರಡಿತು. ಅಬ್ಬಾಸಿದ್ ಖಲೀಫನ ಕಾಲದಲ್ಲಿ ಇದು 330 ದಶಲಕ್ಷ ಚದರ ಕಿಲೋಮೀಟರ್‌ಗಳಷ್ಟು ಹರಡಿತ್ತು. ಒಟ್ಟೋಮನ್ ಸಾಮ್ರಾಜ್ಯದಲ್ಲಿ ಇದು 10 ಮಿಲಿಯನ್ ಚದರ ಕಿಲೋಮೀಟರ್ಗಳಷ್ಟು ಹರಡಿತು”

ವೃತ್ತಿಯಲ್ಲಿ ದಂತವೈದ್ಯನಾಗಿರುವ ಡಾ. ಮೊಹಮದ್ ಶದೀದ್, “ನಮ್ಮ ದಿನಗಳಲ್ಲಿ ಶೀಘ್ರದಲ್ಲೇ ಉದಯಿಸಲಿರುವ ಎರಡನೇ ಖಿಲೀಫೈಟ್, ಇನ್ಶಾ ಅಲ್ಲಾಹ್ 51 ಮಿಲಿಯನ್ ಚದರ ಕಿಲೋಮೀಟರ್ಗಳನ್ನು ತಲುಪುತ್ತದೆ, ಅದು ಇಡೀ ಜಗತ್ತನ್ನು ಆವರಿಸುತ್ತದೆ. ಇದಕ್ಕಾಗಿ ಎಲ್ಲೆಲ್ಲಿ ಬಹುದೇವರರಾಧಕರು (ಅನೇಕ ದೇವರುಗಳನ್ನು ಪೂಜಿಸುವವರು) ಕಂಡುಬಂದರೂ ಅವರನ್ನು ಕೊ.ಲ್ಲ.ಬೇಕು” ಎಂದು ಹೇಳುತ್ತಾನೆ.

ಶದೀದ್ ಮಾತನಾಡುತ್ತ, “ಅಲ್ಲಾಹನ ದೀನ್ ಅನ್ನು ಪ್ರಪಂಚದಾದ್ಯಂತ ಹರಡುವುದು ನಮ್ಮ ಗುರಿಯಾಗಿದೆ. ನಾವು ಹಿಂಸಾತ್ಮಕ ಸೈನ್ಯವನ್ನು ರಚಿಸುತ್ತೇವೆ ಮತ್ತು ಅಲ್ಲಾನಲ್ಲಿ ನಂಬಿಕೆಯಿಲ್ಲದವರೆಲ್ಲರ ವಿರುದ್ಧ ಹೋರಾಡುತ್ತೇವೆ. ಅಲ್ಲಾಹನ ಮತ್ತು ಅವನ ಕೊನೆಯ ಪ್ರವಾದಿಯ ಆದೇಶಗಳನ್ನು ಪಾಲಿಸದವರ ವಿರುದ್ಧವೂ ನಾವು ಹೋರಾಡುತ್ತೇವೆ. ಈ ಹೋರಾಟ ಮುಗಿಯುವವರೆಗೂ ನಾವು ಈ ಹೋರಾಟ ನಡೆಸುತ್ತೇವೆ” ಎನ್ನುತ್ತಾನೆ.

Advertisement
Share this on...