ಕಳೆದ ಹನ್ನೆರಡೆನೇ ತಾರೀಖು ಸಂಚಾರಿ ವಿಜಯ್ ಬಾಳಲ್ಲಿ ಆಗಬಾರದು ಆಗಿಯೇ ಹೋಯ್ತು. ಬೈಕ್ನಲ್ಲಿ ಸ್ನೇಹಿತನೊಟ್ಟಿಗೆ ಹೋಗುವಾಗ ಆಕ್ಸಿಡೆಂಟ್ ಆಗಿ ಪ್ರಾಣವನ್ನೇ ಬಿಟ್ಟರು ಸಂಚಾರಿ ವಿಜಯ್. ಆದ್ರೆ ತಲೆದಂಡ ಸಿನಿಮಾದ ಶೂಟಿಂಗ್ನಲ್ಲಿ ಪಾತ್ರಕ್ಕೆ ಜೀವ ತುಂಬಿಸಲು ಜೀವವನ್ನೇ ತ್ಯಾಗ ಮಾಡಲು ಮುಂದಾಗಿ ಉಳಿದ್ದಿದ್ದರು. ಸಂಚಾರಿ ವಿಜಯ್ ತನ್ನ ಪಾತ್ರಕ್ಕಾಗಿ ಮಾಡುತ್ತಿದ್ದ ತ್ಯಾಗ ಎಂಥದ್ದು. ? ತಲೆದಂಡ ಸಿನಿಮಾದ ಶೂಟಿಂಗ್ ನಲ್ಲಿ ಆದ ರೋಚಕ ಸನ್ನಿವೇಶ ಎಂಥದ್ದು ಅನ್ನೋ ಕಹಾನಿ ಇಲ್ಲಿದೆ.
ಸ್ಟಾರ್ ಆಗೋದಕ್ಕೆ ನಸೀಬು ಬೇಕು. ಆದ್ರೆ ಪ್ರತಿಭಾವಂತನಾಗೋಕ್ಕೆ ಪರಿಶುದ್ಧ ಪರಿಶ್ರಮ ಬೇಕು. ಇವತ್ತು ಕನ್ನಡ ಸಿನಿಲೋಕ ಸಂಚಾರಿ ವಿಜಯ್ ಅನ್ನೋ ಚಿನ್ನದಂತ ಪ್ರತಿಭೆಯನ್ನ ಕಳೆದುಕೊಂಡಿದೆ. ಅಷ್ಟು ಸುಲಭವಾಗಿ ರಾಷ್ಟ್ರ ಪ್ರಶಸ್ತಿ ಸಂಚಾರಿ ವಿಜಯ್ರನ್ನ ಹುಡ್ಕೊಂಡು ಬಂದಿಲ್ಲ. ಪಾತ್ರಕ್ಕೆ ಜೀವ ತುಂಬುವ ಸಲುವಾಗಿ ಜೀವವನ್ನೇ ಬಿಡುತ್ತಿದ್ದ ಮನುಷ್ಯ ಅವರು. ಪಾತ್ರಕ್ಕಾಗಿ ಅವರು ಮಾಡುತ್ತಿದ್ದ ಡೆಡಿಕೇಷನ್ ಎಂಥದ್ದು ಅನ್ನೋದು ತಲೆದಂಡ ಸಿನಿಮಾದ ಮೇಕಿಂಗ್ನಲ್ಲಿ ಗೊತ್ತಾಗುತ್ತೆ. ಪಾತ್ರಕ್ಕೆ ಜೀವವಷ್ಟೆ ಕೊಡುತ್ತಿರಲಿಲ್ಲ ವಿಜಯ್ , ಪಾತ್ರಕ್ಕಾಗಿ ಜೀವವನ್ನೇ ತ್ಯಾಗ ಮಾಡ್ತಿದ್ರು ಅನ್ನೋ ಈ ಟೀಸರ್ನಲ್ಲಿ ಸ್ಪಷ್ಟವಾಗಿ ಗೊತ್ತಾಗುತ್ತಿದೆ.
ಸಂಚಾರಿ ವಿಜಯ್ ಹತ್ತಿರ ಹತ್ತಿರ 25 ಸಿನಿಮಾಗಳಲ್ಲಿ ನಟಿಸಿದ್ದರು. ಅವುಗಳಲ್ಲಿ ಕೆಲ ಸಿನಿಮಾಗಳ ಪಾತ್ರಗಳಂತು ವಿಜಯ್ ಅವರಿಗೆ ವಿಜಯ್ ಅವರೇ ಸರಿಸಾಟಿ ಎಂಬುದನ್ನ ಸಾರುತ್ತೆ. ಸಂಚಾರಿ ವಿಜಯ್ ಒಳ್ಳೆ ಸಿನಿಮಾಗಳಿಗೆ ಕಾದವರಲ್ಲ, ಒಳ್ಳೆಯ ಪಾತ್ರಗಳಿಗೆ ಕಾದಿದ್ದವರು. ದುಡ್ಡಿನ ಹಿಂದೆ ಹೊದವರಲ್ಲ ಕಲೆಯ ಹಿಂದೆ ಹೋದವರು. ಹರಿವು, ನಾನು ಅವನಲ್ಲ ಅವಳು , ಕೃಷ್ಣ ತುಳಸಿ , ನಾತಿಚರಾಮಿ, ಜಂಟಲ್ ಮನ್ ಸಿನಿಮಾಳ ನಂತರ ಮತ್ತೊಂದು ಚಾಲೆಂಜಿಂಗ್ ಪಾತ್ರವೊಂದನ್ನ ತಲೆದಂಡ ಸಿನಿಮಾದಲ್ಲಿ ಮಾಡಿದ್ದರು. ಇನ್ನೇನು ಸಿನಿಮಾ ರಿಲೀಸ್ ಆಗಬೇಕು ಇಡೀ ಚಿತ್ರಜಗತ್ತಿಗೆ ಸಂಚಾರಿ ವಿಜಯ್ ಎಂಥಹ ಪ್ರತಿಭೇ ಅನ್ನೋದು ಮತ್ತೊಮ್ಮೆ ಸಾಬೀತಾಗಬೇಕು ಅನ್ನೋಷ್ಟರಲ್ಲಿ ಬಾರದ ಲೋಕಕ್ಕೆ ತೆರಳಿ ಕಲಾ ರಸಿಕರ ಮನಸುಗಳನ್ನ ಭಾರವಾಗಿಸಿದ್ದಾರೆ.
ಅಂದೇ ದೊಡ್ಡ ಅವಘಡದಲ್ಲಿ ಹೋಗಿರಬೇಕಿತ್ತು ಸಂಚಾರಿ..! ಪೆದ್ದನ ಪಾತ್ರಕ್ಕಾಗಿ ವಿಜಯ್ ಪಟ್ಟ ಶ್ರಮ ನಿಜಕ್ಕೂ ದುಬಾರಿ
ಚಿಕ್ಕ ಅಪಘಾತದಲ್ಲಿ ದೊಡ್ಡ ಪೆಟ್ಟು ಮಾಡಿಕೊಂಡು ಕಲಾ ಪ್ರಪಂಚಕ್ಕೆ ಆಘಾತವನ್ನ ಉಂಟು ಮಾಡಿದ್ರು ಸಂಚಾರಿ ವಿಜಯ್. ಆದ್ರೆ ತಲೆದಂಡ ಸಿನಿಮಾದ ಶೂಟಿಂಗ್ ನಲ್ಲಿ ಅನೇಕ ಬಾರಿ ಜೀವವನ್ನೇ ಪಣಕ್ಕಿಟ್ಟು ಪಾತ್ರಕ್ಕೆ ಅವರು ಉಸಿರಾಗಿದ್ದರು. ಅದಕ್ಕಾಗಿ ಸಂಚಾರಿ ವಿಜಯ್ ಮಾಡಿಕೊಂಡಿದ್ದ ತಯಾರಿ, ಹಲ್ಲಿನ ಸೆಟ್ ಕಟ್ಟಿಸಿಕೊಂಡಿದ್ದು ಹಾಗೂ ಕೂದಲುಗಳನ್ನು ಕಟ್ ಮಾಡಿಸಿಕೊಂಡಿದ್ದು ನೋಡಿ ಒಬ್ಬ ಸೋಲಿಗರ ಹುಡುಗನಂತೆ ಕಾಣಲು ವಿಜಯ್ ಮಾಡಿಕೊಂಡಿದ್ದ ಸಿದ್ಧತೆ ನಿಬ್ಬೆರಗಾಗಿಸುತ್ತದೆ.
ಚಿತ್ರದ ಪಾತ್ರಕ್ಕೆ ಬಿಕ್ಕಳಿಸುವುದನ್ನು ಕಲಿಯಲು ವಿಜಯ್ ಸುಮಾರು ದಿನ ಅಭ್ಯಾಸ ಮಾಡಿದ್ದರು. ಸುಮಾರು 40-45 ದಿನ ನಡೆದ ಶೂಟಿಂಗ್ನಲ್ಲಿ ಅಶೋಕ್ ಕಾಶ್ಯಪ್ ಅವರು ಛಾಯಾಗ್ರಹಣ, ಸಂಕಲನಕಾರ ಕೆಂಪರಾಜು ಸೇರಿ ಮೂವರು ಚಿತ್ರವನ್ನು ರೂಪಿಸಿದ್ದು ಅದ್ಭುತವಾಗಿ ಮೂಡಿ ಬರುವಂತೆ ಮಾಡಿದ್ದರು.
ತಲೆದಂಡ ಚಿತ್ರದ ಟೀಸರ್ ಹಾಗು ಸಂಚಾರಿ ವಿಜಯ್ ರವರ ಅದ್ಭುತ ನಟನೆ ಹೇಗಿತ್ತು? ಇಲ್ಲಿದೆ ನೋಡಿ
ಮೈಸೂರು ವಿಶ್ವವಿದ್ಯಾಲಯದ ಪತ್ರಿಕೋದ್ಯಮದ ಉಪನ್ಯಾಸಕರಾಗಿರುವ ಪ್ರವೀಣ್ ಕೃಪಾಕರ್ ತಾವೇ ಕಂಡ ಕ್ಯಾರೆಕ್ಟರ್ ಮೇಲೆ ಕಥೆ ಚಿತ್ರಕಥೆ ಬರೆದು ನಿರ್ಮಾಣದ ಜೊತೆಗೆ ತಲೆದಂಡ ಚಿತ್ರದ ನಿರ್ದೇಶನವನ್ನ ಮಾಡಿದ್ದಾರೆ. ಹಿರಿಯ ಛಾಯಾಗ್ರಾಹಕ ಅಶೋಕ್ ಕಶ್ಯಪ್ ಅವರ ಕ್ಯಾಮೆರಾ ಕೈ ಚಳಕದಲ್ಲಿ ಹಾಲಿವುಡ್ ರೆಂಜ್ಗೆ ಸಿನಿಮಾ ಮೂಡಿಬಂದಿದೆ. ಆದ್ರೆ ಅದೆಲ್ಲದಕ್ಕಿಂತ ಒಂದು ಕೈ ಜಾಸ್ತಿ ಸಂಚಾರಿ ವಿಜಯ್ ಅವರ ಅಭಿನಯ.
ನಿರ್ದೇಶಕ ಪ್ರವೀಣ್ ಕೃಪಕಾರ್, ಸಂಚಾರಿ ವಿಜಯ್ ಅವರಿಗೆ ಕಥೆ ಹೇಳಿದ ತಕ್ಷಣವೇ ವಿಜಯ್ ಅವರಿಗೆ ಭಾರೀ ಸಂತೋಷವಾಗಿತ್ತಂತೆ.. ನನಗೆ ಚಾಲೆಂಜಿಂಗ್ ಮಾಡೋ ಪಾತ್ರ ಸಿಕ್ತಲ್ಲ ಎಂದು ನಿರ್ದೇಶಕರನ್ನ ಕೊಂಡಾಡಿದ್ರಂತೆ.
ಪೆದ್ದನ ಪಾತ್ರಕ್ಕೆ ವಿಜಯ್ ಪಟ್ಟ ಪರಿಶ್ರಮ ಎಂಥದ್ದು ಗೊತ್ತಾ..?
ತಲೆದಂಡ ಸಿನಿಮಾ ಅದ್ಭುತವಾಗಿ ಮೂಡಿ ಬಂದಿದೆ. ಆದ್ರೆ ಈ ಸಿನಿಮಾವನ್ನ ತೆರೆಯ ಮೇಲೆ ನೋಡೋಕ್ಕೆ ಸಂಚಾರಿ ವಿಜಯ್ ಅವರೇ ಇಲ್ಲದಿರೋದು ದುರಂತ. ಸಂಚಾರಿ ವಿಜಯ್ , ಚೈತ್ರ ಜಗದೀಶ್, ರಂಗಾಯಣ ರಘು ಅವರ ಧರ್ಮ ಪತ್ನಿ ಮಂಗಳಾ ರಘು , ಬಿ.ಸುರೇಶ್ , ಮಂಡ್ಯ ರಮೇಶ್ ರಂಥಹ ಪ್ರತಿಭಾವಂತ ದಂಡು ತಲೆದಂಡ ಸಿನಿಮಾದಲ್ಲಿ ಅಡಗಿದೆ. ಈ ಪಾತ್ರಕ್ಕಾಗಿ ಸಂಚಾರಿ ವಿಜಯ್ ಮಾಡಿಕೊಂಡ ತಯಾರಿ ಎಂಥದ್ದು ಅನ್ನೋದನ್ನ ಹಿರಿಯ ನಿರ್ದೇಶಕ , ರಂಗಕರ್ಮಿ ಹಾಗೂ ಚಿತ್ರದ ಪಾತ್ರಗಳಲ್ಲಿ ಒಬ್ಬರಾದ ಬಿ.ಸುರೇಶ್ ಹೇಳಿದ್ದಾರೆ.
ಈ ಸಿನಿಮಾಗಾಗಿ ವಿಜಯ್ ಸಣ್ಣ ಆಗಬೇಕಿದ್ದ ಕಾರಣ ಅವರು ನಡೆದುಕೊಂಡೆ ಮೈಸೂರು ನಗರದಿಂದ ಹೊರವಲಯದಲ್ಲಿ ನಡೆಯುತ್ತಿದ್ದ ಶೂಟಿಂಗ್ ಸ್ಥಳಕ್ಕೆ ಬರುತ್ತಿದ್ದರು. ಕಳೆದ ಹಲವು ತಿಂಗಳಿನಿಂದ ಸಿನಿಮಾವನ್ನು ಜನರಿಗೆ ತಲುಪಿಸಲು ಸಾಕಷ್ಟು ಪ್ರಯತ್ನ ಮಾಡಿದ್ದರು. ಆದರೆ ಅದರಲ್ಲಿ ಯಶಸ್ವಿಯಾಗುವ ವೇಳೆಗೆ ಅವರು ನಮ್ಮೊಂದಿಗೆ ಇಲ್ಲರುವುದು ಕನ್ನಡ ಚಿತ್ರರಂಗಕ್ಕೆ ಭಾರೀ ನಷ್ಟವನ್ನು ಉಂಟು ಮಾಡಿದೆ ಎಂದು ತಿಳಿಸಿದ್ದಾರೆ.