Google Search: ಗೂಗಲ್ ಪ್ರಪಂಚದಾದ್ಯಂತ ಜನಪ್ರಿಯ ಸರ್ಚ್ ಎಂಜಿನ್ ಆಗಿದೆ. ಜನರು ದಿನವಿಡೀ ಇದರಲ್ಲಿ ಅಂದರೆ ಗೂಗಲ್ ಸರ್ಚ್ ನಲ್ಲಿ ಒಂದೊಲ್ಲೊಂದು ವಿಚಾರಕ್ಕಾಗಿ ಏನಾದರೂ ಅಥವಾ ಮತ್ತೊಂದನ್ನು ಹುಡುಕುತ್ತಲೇ ಇರುತ್ತಾರೆ. ಈ ಕಾರಣದಿಂದಾಗಿ, Google ಸರ್ಚ್ ನ್ನ ಬಳಸುವಾಗ ಕೆಲವು ವಿಷಯಗಳನ್ನು ನೆನಪಿನಲ್ಲಿಟ್ಟುಕೊಳ್ಳುವುದು ಮುಖ್ಯವಾಗಿದೆ.
ಹಾಗೆ ನೋಡಿದರೆ ಯೂಸರ್ಗಳು ಅಡುಗೆ, ಆರೋಗ್ಯ ಸಂಬಂಧಿತ ಸಮಸ್ಯೆಗಳು ಇತ್ಯಾದಿ ಯಾವುದೇ ವಿಷಯದ ಕುರಿತು Google ಸರ್ಚ್ ಎಂಜಿನ್ ಅನ್ನು ಬಳಸಬಹುದು, ಆದರೆ ಕೆಲವೊಮ್ಮೆ ಕೆಲವು ವಿಷಯಗಳನ್ನು ಸರ್ಚ್ ಮಾಡುವುದು ನಿಮ್ಮ ಪಾಲಿಗೆ ಕಂಟಕವಾಗಬಹುದು ಮತ್ತು ನೀವು ಜೈಲಿಗೂ ಹೋಗಬೇಕಾಗಬಹುದು, ಆದ್ದರಿಂದ Google ನಲ್ಲಿ ಸರ್ಚ್ ಮಾಡುವಾಗ ಅಥವ ಅದನ್ನು ಬಳಸುವಾಗ ಕೆಲವು ವಿಷಯಗಳನ್ನು ನೆನಪಿನಲ್ಲಿಡಿ.
ಅದೇ ಸಮಯದಲ್ಲಿ, Google (Google Search) ನಲ್ಲಿ ಅನೇಕ ಪದಗಳನ್ನು ಹುಡುಕುವುದನ್ನು ತಪ್ಪಿಸಬೇಕು. ಇವುಗಳನ್ನ ಸರ್ಚ್ ಮಾಡಿದರೆ ಜೈಲಿಗೆ ಹೋಗಬೇಕಾಗಬಹುದು ಅಂದರೆ ಇಂತಹ ಸರ್ಚ್ ಗಳನ್ನ ಮಾಡಿದರೆ ನೀವು ಭಾರೀ ಸಂಕಷ್ಟದಲ್ಲೂ ಸಿಲುಕಬಹುದು.
ಬಾಂಬ್ ತಯಾರಿಸುವ ವಿಧಾನ
ಬಾಂಬ್ ತಯಾರಿಸುವುದು ಹೇಗೆ? ಎಂದು ಗೂಗಲ್ನಲ್ಲಿ ಸರ್ಚ್ ಮಾಡಬೇಡಿ. ಅನೇಕ ಬಾರಿ ಜನರು ಅದನ್ನು ಹುಡುಕುತ್ತಾರೆ ಮತ್ತು ತೊಂದರೆಗೆ ಸಿಲುಕುತ್ತಾರೆ. ಇದನ್ನು ಹುಡುಕಿದಾಗ, ನೀವು ಭದ್ರತಾ ಏಜೆನ್ಸಿಗಳ ಕಣ್ಣಿಗೆ ಬೀಳಬಹುದು ಮತ್ತು ನಿಮ್ಮ ವಿರುದ್ಧ ಅವರು ಸಂಪೂರ್ಣವಾಗಿ ಕಾನೂನು ಕ್ರಮ ತೆಗೆದುಕೊಳ್ಳಬಹುದು.
Google ಸರ್ಚ್ ಎಂಜಿನ್ನಲ್ಲಿ ಅಡಲ್ಟ್ ಮೂವಿಗಳನ್ನ ಎಂದಿಗೂ ಸರ್ಚ್ ಮಾಡಬೇಡಿ, ಏಕೆಂದರೆ ಅದು ನಿಮ್ಮನ್ನು ಜೈಲಿಗೂ ತಳ್ಳಬಹುದು. ಅದೇ ಸಮಯದಲ್ಲಿ, ಅದನ್ನು ಹುಡುಕುವ ಮೂಲಕ ನೀವು ತೊಂದರೆಗೂ ಸಿಲುಕಬಹುದು. ಇದನ್ನು ಸರ್ಚ್ ಮಾಡುವುದನ್ನ ತಪ್ಪಿಸಿ, ಏಕೆಂದರೆ ಇದರ ವ್ಯಸನವು ಸಮಾಜದಲ್ಲಿಯೂ ನಿಮ್ಮನ್ನು ಮುಜುಗರಕ್ಕೀಡು ಮಾಡುತ್ತದೆ.
Google ನಲ್ಲಿ ಬ್ಯಾಂಕ್ ಗ್ರಾಹಕ ಸೇವೆ ಸಂಖ್ಯೆಯನ್ನು (Bank customer care number) ಎಂದಿಗೂ ಸರ್ಚ್ ಮಾಡಬೇಡಿ. ಏಕೆಂದರೆ ವಂಚಕರು (online fraudsters) ನಕಲಿ ಸಂಖ್ಯೆಗಳನ್ನು ಪಟ್ಟಿ ಮಾಡುತ್ತಾರೆ. ಅದೇ ಸಮಯದಲ್ಲಿ, ಆ ಪಟ್ಟಿಯು ಪುನರಾವರ್ತಿತ ಹುಡುಕಾಟದಲ್ಲಿ ಬರುತ್ತದೆ, ಅದು ನಿಮ್ಮ ಬ್ಯಾಂಕ್ ಖಾತೆಯನ್ನು ಒಮ್ಮೆಗೇ ಖಾಲಿ ಮಾಡಿಬಿಡುತ್ತದೆ.
ಅಪ್ಪಿತಪ್ಪಿಯೂ Google ನಲ್ಲಿ ಈ ಪದಗಳನ್ನ (Words) ಸರ್ಚ್ ಮಾಡಲೇಬೇಡಿ: ಅಪಾಯ ಕಟ್ಟಿಟ್ಟ ಬುತ್ತಿ
ಗೂಗಲ್ ಬಗ್ಗೆ ಯಾರಿಗೂ ಪರಿಚಯ ಮಾಡಿ ಕೊಡಲೇ ಬೇಕಿಲ್ಲ. ಏಕೆಂದರೆ ಇಂದು ಗೂಗಲ್ ಪ್ರತಿಯೊಬ್ಬರ ಕೈಬೆರಳನ್ನು ತಲುಪಿದೆ. ಜನರು ಕೇಳುವ ಯಾವುದೇ ಪ್ರಶ್ನೆಗೆ ಗೂಗಲ್ ಬಳಿ ಉತ್ತರ ಇದ್ದೇ ಇರುತ್ತದೆ.
ಆದರೆ, ಗೂಗಲ್ ನೀಡುವ ಎಲ್ಲ ಮಾಹಿತಿಯು ಕೂಡ ನಿಜವಾಗಿರುವುದಿಲ್ಲ. ಏಕೆಂದರೆ, ಸೈಬರ್ ಖದೀಮರು ಜನರಿಗೆ ವಂಚನೆ ಮಾಡಲೆಂದೇ ಬ್ಯಾಂಕ್ ವಿಳಾಸ, ಬ್ರ್ಯಾಂಡ್ ಕಂಪನಿಗಳ ಕಸ್ಟಮರ್ ಕೇರ್ ನಂಬರ್ ಸೇರಿದಂತೆ ಅನೇಕ ಮಾಹಿತಿಗಳನ್ನು ಅಪ್ಲೋಡ್ ಮಾಡಿರುತ್ತಾರೆ. ಅಪ್ಪಿತಪ್ಪಿ ಈ ಮಾಹಿತಿಗಳನ್ನು ನಂಬಿ ತಮ್ಮ ಸಮಸ್ಯಗಳನ್ನು ಬಗೆಹರಿಸಿಕೊಳ್ಳಲು ಮುಂದಾದರೆ ಸಾಕಷ್ಟು ಸಮಸ್ಯೆ ಎದುರಿಸಬೇಕಾಗುತ್ತದೆ. ಕೆಲವೊಮ್ಮೆ ಸಾವಿಗೂ ದೂಡಬಹುದು.
ಇಂದು ಇಂಟರ್ನೆಟ್ ಎಷ್ಟೇ ಮುಂದುವರಿದಿರಬಹುದು, ಅಷ್ಟೇ ಪ್ರಮಾಣದಲ್ಲಿ ಸೈಬರ್ ಕ್ರೈಂ ತಲೆಎತ್ತಿದ್ದು, ಜನರಿಗೆ ತಲೆನೋವಾಗಿ ಪರಿಣಮಿಸಿದೆ. ಇಂತಹ ಪ್ರಕರಣಗಳಲ್ಲಿ ದೂರು ನೀಡಿದರು ಅಪರಾಧದ ಮೂಲ ಪತ್ತೆಹಚ್ಚುವುದು ಕಷ್ಟವಾಗಿದ್ದು, ಸೈಬರ್ ಕ್ರೈಂ ದಿನ ಕಳೆದಂತೆ ತನ್ನ ಕದಂಬಬಾಹುವನ್ನು ವಿಸ್ತರಿಸುತ್ತಿದೆ. ಹೀಗಾಗಿ ಗೂಗಲ್ನಲ್ಲಿ ಸರ್ಚ್ ಮಾಡುವಾಗ ಇಂತಹ ಸೈಬರ್ ವಂಚಕರಿಂದ ಪಾರಾಗಲು ಕೆಲವೊಂದು ಮುಂಜಾಗ್ರತ ಕ್ರಮಗಳು ಈ ಕೆಳಕಂಡಂತಿದೆ.
1. ಮೊದಲನೇಯದಾಗಿ ಯಾವುದೇ ಪರಿಸ್ಥಿತಿಯಲ್ಲೂ ಶ ಸ್ತ್ರಾ ಸ್ತ್ರ, ಆ ತ್ಮ ಹ ತ್ಯೆ, ಕೊ ಲೆ, ಮಕ್ಕಳ ಅ ಶ್ಲೀ ಲ ತೆಯನ್ನು ಗೂಗಲ್ನಲ್ಲಿ ಸರ್ಚ್ ಮಾಡಬೇಡಿ. ಏಕೆಂದರೆ ನಿಮ್ಮ ಐಪಿ ಅಡ್ರೆಸ್ ಅನ್ನು ಪತ್ತೆಹಚ್ಚಿ, ನಿಮ್ಮ ಮೇಲೆ ಗೂಢಾಚಾರಿಕೆ ಮಾಡಬಹುದು.
2. ಗೂಗಲ್ನಲ್ಲಿ ಔಷಧಗಳನ್ನು ಹುಡುಕುವ ಬದಲು ನೇರವಾಗಿ ವೈದ್ಯರನ್ನು ಸಂಪರ್ಕಿಸುವುದು ಒಳಿತು.
3. ಯಾವುದೇ ಕಂಪನಿಯ ಕಸ್ಟಮರ್ ಕೇರ್ ನಂಬರ್ ಅನ್ನು ಗೂಗಲ್ನಲ್ಲಿ ಹುಡುಕಾಡಬೇಡಿ. ಏಕೆಂದರೆ ಸೈಬರ್ ವಂ ಚ ಕ ರ ಜಾ ಲ ಕ್ಕೆ ಸಿ ಲು ಕು ವ ಸಾಧ್ಯತೆ ಹೆಚ್ಚಿರುತ್ತದೆ. ಅದರ ಬದಲಾಗಿ ವೆಬ್ಸೈಟ್ಗಳನ್ನು ಹುಡುಕಿ ಮೊಬೈಲ್ ನಂಬರ್ ಪಡೆದುಕೊಳ್ಳಿ.
4. ವೆಬ್ಸೈಟ್ ಯುಆರ್ಎಲ್ ಅನ್ನು ಗೂಗಲ್ನಲ್ಲಿ ಸರ್ಚ್ ಮಾಡಬೇಡಿ. ಅದರಲ್ಲೂ ಆನ್ಲೈನ್ ಬ್ಯಾಂಕಿಂಗ್ ವೆಬ್ಸೈಟ್ ವಿಚಾರಕ್ಕೆ ಬಂದಾಗ ತುಂಬಾ ಎಚ್ಚರಿಕೆ ವಹಿಸಿರಿ.
5. ಯಾವಾಗಲೂ ವೇರಿಫೈ ಮಾಡಿದ ಮೊಬೈಲ್ ಅಪ್ಲಿಕೇಶನ್ಗಳನ್ನು ಆ್ಯಂಡ್ರಾಯ್ಡ್ ಪ್ಲೇ ಸ್ಟೋರ್, ಆ್ಯಪಲ್ ಪ್ಲೇ ಸ್ಟೋರ್ ಅಥವಾ ಮೈಕ್ರೋಸಾಫ್ಟ್ ಸ್ಟೋರ್ನಲ್ಲಿ ಡೌನ್ಲೋಡ್ ಮಾಡಿಕೊಳ್ಳಿ.
ಇವುಗಳಲ್ಲದೆ, ಹಣಕಾಸು, ಷೇರು ಮಾರುಕಟ್ಟೆ ಮತ್ತು ಸರ್ಕಾರಿ ವೆಬ್ಸೈಟ್ಗಳಿಗೆ ಸಂಬಂಧಿಸಿದ ವಿವರಗಳ ನಿಖರವಾದ ಯುಆರ್ಎಲ್ಗಳನ್ನು ಹುಡುಕಬೇಕು.
ಮುಂದಿನ ಸುದ್ದಿ: ಇಂಟರ್ನೆಟ್ ಸಹಾಯ ಇಲ್ಲದೆ ಗೂಗಲ್ ಮ್ಯಾಪ್ ಬಳಸುವುದು ಹೇಗೆ ಗೊತ್ತಾ?
ಗೂಗಲ್ ನೀಡಿರುವ ಬಹುಮುಖ್ಯ ಸೇವೆಗಳಲ್ಲಿ ಮ್ಯಾಪ್ ಕೂಡ ಒಂದು. ನಮಗೆ ಪರಿಚಯ ಇರದ ಸ್ಥಳಗಳಿಗೆ ಗೂಗಲ್ ಮ್ಯಾಪ್ ಯಾವುದೇ ಅಡೆತಡೆ ಇಲ್ಲದೆ ಕರೆದೊಯ್ಯುತ್ತದೆ.
ಆಂಡ್ರಾಯ್ಡ್ ಮೊಬೈಲ್ ಹೊಂದಿದ ಪ್ರತಿಯೊಬ್ಬರು ಗೂಗಲ್ ಮ್ಯಾಪ್ ಉಪಯೋಗಿಸುತ್ತಾರೆ. ಇಷ್ಟು ಬಹುಮುಖ್ಯವಾಗಿರುವ ಈ ಮ್ಯಾಪ್ ಇದೀಗ ಮತ್ತಷ್ಟು ಗ್ರಾಹಕ ಸ್ನೇಹಿಯಾಗಿದೆ.
ಹೌದು, ಇದುವರೆಗೆ ಇಂಟರ್ನೆಟ್ ಸಪೋರ್ಟಿನಿಂದ ಗೂಗಲ್ ಮ್ಯಾಪ್ ಕಾರ್ಯನಿರ್ವಹಿಸುತ್ತಿತ್ತು. ಆದರೆ, ಇದೀಗ ಆಫ್ ಲೈನ್ ಸೇವೆಯೂ ಲಭ್ಯವಾಗಿದೆ.
ಒಂದು ವೇಳೆ ಬಳಕೆದಾರನ ಬಳಿ ಮೊಬೈಲ್ ಡಾಟಾ ಖಾಲಿಯಾಗಿದ್ದರೆ ಅಥವಾ ಸರಿಯಾದ ನೆಟ್ ವರ್ಕ್ ಲಭ್ಯವಿರದ ಜಾಗದಲ್ಲಿ ನೇವಿಗೇಷನ್ ಮಾಡುವ ಸಂದರ್ಭ ಬಂದರೆ ಈ ಹೊಸ ಫೀಚರ್ ಸಹಾಯ ಮಾಡುತ್ತದೆ.
ಗೂಗಲ್ ಮ್ಯಾಪ್ ಆಫ್ ಲೈನ್ ಫೀಚರ್ ಸಹಾಯದಿಂದಾಗಿ ನೀವು ಗೂಗಲ್ ಮ್ಯಾಪ್ ನ್ನು ಆಫ್ ಲೈನ್ ನಲ್ಲಿ ಬಳಸಬಹುದು.ಒಮ್ಮೆ ನೀವು ಮ್ಯಾಪ್ ಡೌನ್ ಲೋಡ್ ಮಾಡಿದ ನಂತರ ನೀವು ಅಂತರ್ಜಾಲದ ಸಹಾಯವಿಲ್ಲದೆ ದಾರಿಯ ಹುಡುಕಾಟ ನಡೆಸಬಹುದು ಮತ್ತು ಆಫ್ ಲೈನ್ ನಲ್ಲಿ ಅದನ್ನು ಬಳಸಬಹುದು
ಗೂಗಲ್ ಮ್ಯಾಪ್ ನ್ನು ನೀವು ಡೌನ್ ಲೋಡ್ ಮಾಡುವ ಮೂಲಕ ಡಾಟಾವಿಲ್ಲದೆ ಬಳಸಬಹುದಾಗಿದ್ದು ನಿಮ್ಮ ಡಿವೈಸಿನ ಎಸ್ ಡಿ ಕಾರ್ಡ್ ಅಥವಾ ಇಂಟರ್ನಲ್ ಸ್ಟೋರೇಜ್ ಸಹಾಯದಿಂದ ಬಳಸಬಹುದು.
ಆಫ್ ಲೈನ್ ಬಳಕೆಗಾಗಿ ಗೂಗಲ್ ಮ್ಯಾಪ್ ಡೌನ್ ಲೋಡ್ ಮಾಡುವುದು ಹೇಗೆ?
- ನಿಮ್ಮ ಆಂಡ್ರಾಯ್ಡ್ ಡಿವೈಸ್ ನಲ್ಲಿ ಗೂಗಲ್ ಮ್ಯಾಪ್ ಆಪ್ ನ್ನು ತೆರೆಯಿರಿ.
- ನೀವು ತಲುಪಬೇಕಿರುವ ಸ್ಥಳವನ್ನು ಹುಡುಕಾಡಿ.
- ಡೈರೆಕ್ಷನ್ ನ್ನು ಟ್ಯಾಪ್ ಮಾಡಿ.ಅದು ನಿಮ್ಮ ಸ್ಕ್ರೀನಿನ ಕೆಳಭಾಗದ ಎಡದಲ್ಲಿರುತ್ತದೆ.
- ನೀವು ಯಾವ ರೀತಿ ಪ್ರಯಾಣ ಬೆಳೆಸಲು ಇಚ್ಛಿಸುತ್ತೀರಿ ಅದನ್ನು ಆಯ್ಕೆ ಮಾಡಿ.
- ನಂತರ ಬಿಳಿ ಬಾರ್ ನ್ನು ಟ್ಯಾಪ್ ಮಾಡಿ. ಇದು ಸ್ಕ್ರೀನಿನ ಕೆಳಭಾಗದಲ್ಲಿರುತ್ತದೆ.
- ಇದೀಗ ಸೇವ್ ಆಫ್ ಲೈನ್ ನ್ನು ಟ್ಯಾಪ್ ಮಾಡಿ.