ಅಫ್ಘನ್ ಸೇನೆ ಹಿಂದೆ ಸರಿಯಿತಾ? ಕಾರಣವೇನು? ಅನ್ನೋದನ್ನ ಬಿಚ್ಚಿಟ್ಟ ಅಫ್ಘನ್ ಕಮಾಂಡರ್ ಸಾಮಿ ಸಾದತ್

in Kannada News/News 202 views

ಈ ಯುದ್ಧವನ್ನು ಅಂತಾರಾಷ್ಟ್ರೀಯ ಯು#ದ್ಧ ಎಂದು ಪರಿಗಣಿಸಿದ ಸಾದತ್, ಯಾವುದೇ ಏಕೈಕ ಸೈನ್ಯಕ್ಕೆ ಹೋರಾಡಲು ಸಾಧ್ಯವಿರಲಿಲ್ಲ ಎಂದು ಬರೆದಿದ್ದಾರೆ. ಇದು ಮಿಲಿಟರಿ ಸೋಲು. ಆದರೆ, ಇದಕ್ಕೆ ಕಾರಣ ರಾಜಕೀಯ ವೈಫಲ್ಯ ಎಂದು ಹೇಳಿದ್ದಾರೆ.

Advertisement

ತಾಲಿಬಾನ್‌ ಅಫ್ಘಾನಿಸ್ತಾನವನ್ನು ನಿಯಂತ್ರಣಕ್ಕೆ ತೆಗೆದುಕೊಂಡಿದ್ದು, ತನ್ನ ಸರ್ಕಾರ ನಡೆಸುವ ಮುನ್ನವೇ ಸಾಕಷ್ಟು ಹಿಂ ಸಾ ಚಾ ರ ನಡೆಸುತ್ತಿರುವ ವರದಿಗಳು ಕೇಳಿಬರುತ್ತಿವೆ. ಇನ್ನು, ತಾಲಿಬಾನ್‌ ಅಫ್ಘಾನಿಸ್ತಾನವನ್ನು ಸುಲಭವಾಗಿ ನಿಯಂತ್ರಣಕ್ಕೆ ತೆಗೆದುಕೊಂಡಿತು. ಅಫ್ಘನ್‌ ಸೇನೆಯಾಗಲೀ, ಸರ್ಕಾರವಾಗಲೀ ಯಾವುದೇ ಸವಾಲೊಡ್ಡಲಿಲ್ಲ ಎಂಬ ಆರೋಪಗಳೂ ಕೇಳಿಬಂದಿವೆ. ಅಫ್ಘನ್‌ ಸೇನೆ ತಾಲಿಬಾನ್‌ ಎದುರು ಮಂಡಿಯೂರಿತು, ಪಲಾಯನಗೈದಿತು ಎಂಬ ಮಾತುಗಳೂ ಕೇಳಿಬರುತ್ತಿವೆ. ಈ ಆರೋಪಗಳಿಗೆ ಅಫ್ಘನ್‌ ಸೇನೆಯ ಲೆಫ್ಟಿನೆಂಟ್‌ ಜನರಲ್‌ ಹಾಗೂ ಕಮಾಂಡರ್‌ ಆಗಿರುವ ಸಾಮಿ ಸಾದತ್‌ ಅಂತಾರಾಷ್ಟ್ರೀಯ ಸುದ್ದಿ ಮಾದ್ಯಮ ನ್ಯೂಯಾರ್ಕ್‌ ಟೈಮ್ಸ್‌ನಲ್ಲಿ ತನ್ನ ಅಭಿಪ್ರಾಯ ವ್ಯಕ್ತಪಡಿಸಿದ್ದು, ಹಲವು ಪ್ರಶ್ನೆಗಳಿಗೆ ಉತ್ತರ ನೀಡಿದ್ದಾರೆ.

“ನಾನು ಅಫ್ಘಾನ್ ಸೇನೆಯಲ್ಲಿ 3 ಸ್ಟಾರ್‌ ಜನರಲ್‌. 11 ತಿಂಗಳು, 215 ಮೈವಾಂಡ್ ಕಾರ್ಪ್ಸ್ ನ ಕಮಾಂಡರ್ ಆಗಿ, ನೈರುತ್ಯ ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ವಿ ರು ದ್ಧ ದ ಯು ದ್ಧ ಕಾರ್ಯಾಚರಣೆಯಲ್ಲಿ ನಾನು 15,000 ಸೈನಿಕರನ್ನು ಮುನ್ನಡೆಸಿದೆ. ನಾನು ನೂರಾರು ಅಧಿಕಾರಿಗಳು ಮತ್ತು ಸೈನಿಕರನ್ನು ಕಳೆದುಕೊಂಡಿದ್ದೇನೆ. ಅದಕ್ಕಾಗಿಯೇ, ನನ್ನಂತೆ ದಣಿದ ಮತ್ತು ನಿರಾಶೆಗೊಂಡವರಿಗೆ ನಾನು ಪ್ರಾಯೋಗಿಕ ದೃಷ್ಟಿಕೋನವನ್ನು ನೀಡಲು ಮತ್ತು ಅಫ್ಘಾನ್‌ ಸೇನೆಯ ಗೌರವ ರಕ್ಷಿಸಲು ಬಯಸಿದ್ದೆ. ಅಫ್ಘಾನ್‌ ಸೈನ್ಯದ ತಪ್ಪುಗಳನ್ನು ನಾನು ಇಲ್ಲಿ ವಿಮೋಚನೆ ಮಾಡುತ್ತಿಲ್ಲ. ಆದರೆ ವಾಸ್ತವವೆಂದರೆ, ನಮ್ಮಲ್ಲಿ ಅನೇಕರು ಶೌರ್ಯದಿಂದ ಮತ್ತು ಗೌರವಯುತವಾಗಿ ಹೋರಾಡಿದರು, ಅಮೆರಿಕ ಮತ್ತು ಅಫ್ಘಾನ್ ನಾಯಕತ್ವದಿಂದ ಮಾತ್ರ ನಿರಾಸೆಗೊಳಿಸಲಾಯಿತು ಎಂದು ತಾಲಿಬಾನ್ ಗೆಲುವನ್ನು ಪ್ರತಿರೋಧವಿಲ್ಲದೆ ನೋಡುತ್ತಿರುವ ಸಮಯದಲ್ಲಿ 36 ವರ್ಷದ ಕಮಾಂಡರ್‌ ಬರೆದಿದ್ದಾರೆ.

ಅಶ್ರಫ್ ಘನಿ ತನ್ನನ್ನು ಅಫ್ಘಾನಿಸ್ತಾನ ವಿಶೇಷ ಪಡೆಗಳ ಕಮಾಂಡರ್ ಎಂದು ಹೆಸರಿಸಿದಾಗ ನಾನು ಲಷ್ಕರ್ ಗಾದಲ್ಲಿ ಯು ದ್ಧ ದಲ್ಲಿದ್ದೆ. ನಂತರ, ಕಾಬೂಲ್‌ಗೆ ಬರಲು ತನ್ನ ಸೈನ್ಯವನ್ನು ಅಲ್ಲಿಯೇ ಬಿಡಬೇಕಾಯಿತು ಎಂದೂ ಸಮಿ ಹೇಳಿದ್ದಾರೆ. ಅಂದು ಆಗಸ್ಟ್ 15. ತಾಲಿಬಾನ್ ಆ ವೇಳೆಗಾಗಲೇ ಕಾಬೂಲ್ ತಲುಪಿದ್ದರಿಂದ ತಡವಾಗಿತ್ತು. ನಂತರ ಘನಿ ತನಗೆ ಕಾಬೂಲ್ ಭದ್ರಪಡಿಸುವ ಕೆಲಸವನ್ನು ಒಪ್ಪಿಸಿದರು, ಮತ್ತು ಅವರು ದೇಶವನ್ನು ತೊರೆದರು.

“ಆದರೆ ನನಗೆ ಎಂದಿಗೂ ಅವಕಾಶ ಸಿಗಲಿಲ್ಲ: ತಾಲಿಬಾನಿಗಳು ಹತ್ತಿರವಾಗುತ್ತಲೆ ಇದ್ದರು ಮತ್ತು ಘನಿ ದೇಶ ಬಿಟ್ಟು ಓಡಿ ಹೋದರು ಎಂದು ಸಾಮಿ ಬರೆದಿದ್ದು, ಈ ಮೂಲಕ ಆಗಸ್ಟ್ 15ರಂದು ಅಫ್ಘನ್‌ ರಾಜಧಾನಿ ಕಾಬೂಲ್‌ನಲ್ಲಿ ಏನಾಯಿತು ಎಂಬುದನ್ನು ಚಿತ್ರಿಸಿದ್ದಾರೆ.

ಅದೇ ರಾತ್ರಿ ಘನಿ ದೇಶವನ್ನು ತೊರೆದರು. ನಂತರ, ಅವರು ಇದು ತಪ್ಪಿಸಿಕೊಳ್ಳುವ ಕ್ರಿಯೆಯಲ್ಲ, ರ ಕ್ತ ಪಾ ತ ವನ್ನು ತಪ್ಪಿಸಲು ಅವರು ದೇಶವನ್ನು ತೊರೆಯಬೇಕಾಯಿತು ಎಂದು ಅಫ್ಘಾನಿಸ್ತಾನ ಅದ್ಯಕ್ಷರಾಗಿದ್ದ ಘನಿ ಹೇಳಿದರು.

ಘನಿ ದೇಶ ತೊರೆದ ನಂತರ, ಮಧ್ಯಂತರವಾಗಿ ಯಾವುದೇ ಮಾತುಕತೆಗೆ ಅವಕಾಶವಿರಲಿಲ್ಲ, ಅಫ್ಘಾನ್ ಸೇನೆಯು ಪ್ರತಿ ದಿನವೂ ಪ್ರತಿರೋಧಿಸಿತು ಎಂದು ಸಾಮಿ ಬರೆದಿದ್ದಾರೆ.

ಆದರೂ, ಸೇನೆಯು ವಿಫಲವಾಯಿತು ಮತ್ತು ಈ ವೈಫಲ್ಯಕ್ಕೆ ಮೂರು ಕಾರಣಗಳಿವೆ ಎಂದು ಸಮಿ ಹೇಳಿದ್ದಾರೆ. ಮೊದಲನೆಯದು ಯುಎಸ್ ಮತ್ತು ಡೊನಾಲ್ಡ್ ಟ್ರಂಪ್‌ರ ದೋಹಾ ಶಾಂತಿ ಒಪ್ಪಂದದೊಂದಿಗೆ ಆರಂಭವಾಗುತ್ತದೆ. ಎರಡನೆಯದಾಗಿ, ಅಫ್ಘಾನ್ ಸೇನೆಯು ಗುತ್ತಿಗೆದಾರರ ಲಾಜಿಸ್ಟಿಕ್ಸ್ ಮತ್ತು ನಿರ್ವಹಣೆ ಬೆಂಬಲವನ್ನು ಕಳೆದುಕೊಂಡಿತು ಹಾಗೂ ಮೂರನೆಯದು ಅಶ್ರಫ್ ಘನಿ ಸರ್ಕಾರದ ಭ್ರಷ್ಟಾಚಾರ ಎಂದು ಲೆಫ್ಟಿನೆಂಟ್‌ ಜನರಲ್‌ ಬರೆದಿದ್ದಾರೆ.

“ಅಫ್ಘಾನ್‌ ಭದ್ರತಾ ಪಡೆಗಳೊಂದಿಗೆ ಯುಎಸ್ ವಾಯು-ಬೆಂಬಲದ ನಿಯಮಗಳು ರಾತ್ರೋರಾತ್ರಿ ಪರಿಣಾಮಕಾರಿಯಾಗಿ ಬದಲಾಯಿತು, ಮತ್ತು ತಾಲಿಬಾನ್ ಧೈರ್ಯಶಾಲಿಯಾಗಿತ್ತು. ಅವರು ಗೆಲುವನ್ನು ಗ್ರಹಿಸಬಲ್ಲವರಾಗಿದ್ದರು ಮತ್ತು ಇದು ಕೇವಲ ಅಮೆರಿಕನ್ನರು (ಯುಎಸ್‌ ಸೇನೆ) ಹೊರಗೆ ಹೋಗುವುದನ್ನು ಕಾಯುವ ವಿಷಯ ಎಂದು ತಿಳಿದಿದ್ದರು. ಆ ಒಪ್ಪಂದದ ಮೊದಲು, ತಾಲಿಬಾನ್ ಅಫ್ಘಾನ್‌ ಸೈನ್ಯದ ವಿ ರು ದ್ಧ ಯಾವುದೇ ಮಹತ್ವದ ಯು ದ್ಧ ಗಳನ್ನು ಗೆಲ್ಲಲಿಲ್ಲ. ಆದರೆ, ಆ ಒಪ್ಪಂದದ ನಂತರ.. ನಾವು ದಿನಕ್ಕೆ ಹತ್ತಾರು ಸೈನಿಕರನ್ನು ಕಳೆದುಕೊಂಡಿದ್ದೇವೆ. ಜುಲೈ ವೇಳೆಗೆ, 17,000 ಬೆಂಬಲ ಗುತ್ತಿಗೆದಾರರ ಪೈಕಿ ಹೆಚ್ಚಿನವರು ಹೊರಹೋಗಿದ್ದರು ಎಂದು ಅವರು ಹೇಳಿದರು.

ಯು ದ್ಧ ದ ಅಂತಿಮ ದಿನಗಳನ್ನು ನೆನಪಿಸುತ್ತಾ, ಅದು ಅತಿವಾಸ್ತವಿಕವಾಗಿದೆ. ಒಂದೆಡೆ, ಅಫ್ಘಾನ್ ಸೇನೆಯು ತಾಲಿಬಾನ್ ವಿ ರು ದ್ಧ ತನ್ನ ಕ್ಷೀಣಿಸುತ್ತಿರುವ ಸಂಪನ್ಮೂಲಗಳೊಂದಿಗೆ ಹೋರಾಡುತ್ತಿರುವಾಗ, ಯುಎಸ್ ಪೈಲಟ್‌ಗಳು ತಮಗೆ ಸಹಾಯ ಮಾಡುವ ಸ್ಥಿತಿಯಲ್ಲಿಲ್ಲದ ಕಾರಣ ಸುಮ್ಮನೆ ಸುತ್ತುವರಿಯುತ್ತಿದ್ದರು ಎಂದೂ ಸಾದತ್ ಹೇಳಿದರು.

ಇನ್ನು, ಈ ಯು ದ್ಧ ವನ್ನು ಅಂತಾರಾಷ್ಟ್ರೀಯ ಯು ದ್ಧ ಎಂದು ಪರಿಗಣಿಸಿದ ಸಾದತ್, ಯಾವುದೇ ಏಕೈಕ ಸೈನ್ಯಕ್ಕೆ ಹೋರಾಡಲು ಸಾಧ್ಯವಿರಲಿಲ್ಲ ಎಂದು ಬರೆದಿದ್ದಾರೆ. ಇದು ಮಿಲಿಟರಿ ಸೋಲು. ಆದರೆ, ಇದಕ್ಕೆ ಕಾರಣ ರಾಜಕೀಯ ವೈಫಲ್ಯ. “ನಮಗೆ ರಾಜಕೀಯ ಮತ್ತು ಅಧ್ಯಕ್ಷರು ದ್ರೋ ಹ ಮಾಡಿದ್ದಾರೆ” ಎಂದು ಅಫ್ಘನ್‌ ಸೇನೆಯ ಲೆಫ್ಟಿನೆಂಟ್‌ ಜನರಲ್‌ ಹಾಗೂ ಕಮಾಂಡರ್‌ ಆಗಿರುವ ಸಾಮಿ ಸಾದತ್‌ ಬರೆದಿದ್ದಾರೆ.

Advertisement
Share this on...