ಅಬ್ಬಬ್ಬಾ ಈ ದೇಶದಲ್ಲಿ 1 ಕಪ್ ಟೀ ಗೆ ₹5567 ಹಾಗು ಒಂದು ಕೆಜಿ ಬಾಳೆಹಣ್ಣಿಗೆ ₹3336 ಅಂತೆ, ಇಡೀ ದೇಶವೇ ಆಯ್ತು ಬರ್ಬಾದ್: ಯಾವ ದೇಶ ಗೊತ್ತಾ?

in Kannada News/News 152 views

– ಆಹಾರ ಸಮಸ್ಯೆಯಿಂದ ಜನ ಕಂಗಾಲು – ಕನಿಷ್ಟ 2 ಲೀಟರ್ ಮೂತ್ರ ಸಂಗ್ರಹಿಸಿ – ಕಿಮ್ ಜಾಂಗ್ ಉನ್ ಆದೇಶ

Advertisement

ಪ್ಯಾನ್‍ಯಾಂಗ್: ಮಿಲಿಟರಿಯಲ್ಲಿ ಸೂಪರ್ ಪವರ್ ರಾಷ್ಟ್ರವಾಗಬೇಕು ಎಂದು ಕನಸು ಹೊತ್ತಿದ್ದ ಉತ್ತರ ಕೊರಿಯಾದಲ್ಲಿ ಈಗ ಭಾರೀ ಆಹಾರ ಸಮಸ್ಯೆ ಎದುರಾಗಿದೆ. ಎಷ್ಟು ಸಮಸ್ಯೆ ಎದುರಾಗಿದೆ ಎಂದರೆ ಬ್ಲಾಕ್ ಟೀ ಪ್ಯಾಕೆಟ್ ಬೆಲೆ 5,167 ರೂಪಾಯಿ ಆಗಿದ್ದರೆ ಒಂದು ಕೆಜಿ ಬಾಳೆಹಣ್ಣಿನ ಬೆಲೆ 3,336 ರೂ.ಗೆ ಏರಿಕೆಯಾಗಿದೆ.

ಕಳೆದ ವಾರ ನಡೆಸಿದ ಸರ್ಕಾರದ ಸಭೆಯಲ್ಲಿ ಕೋವಿಡ್, ಚಂಡಮಾರುತ ಮತ್ತು ಪ್ರವಾಹದಿಂದಾಗಿ ದೇಶದಲ್ಲಿ ಆಹಾರ ಕೊರತೆಯಾಗುವ ಸಾಧ್ಯತೆ ಇದೆ ಉತ್ತರ ಕೊರಿಯಾ ಅಧ್ಯಕ್ಷ, ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ಎಚ್ಚರಿಕೆ ನೀಡಿದ್ದರು.  ಈಗ ಆಹಾರ ಸಮಸ್ಯೆ ಮತ್ತಷ್ಟು ಹೆಚ್ಚಾಗಿದೆ.

ಸಮಸ್ಯೆ ಯಾಕೆ? ಮಿಲಿಟರಿಯಲ್ಲಿ ಪ್ರಭುತ್ವ ಸಾಧಿಸಲು ಅಣ್ವಸ್ತ್ರ ಮತ್ತು ಕ್ಷಿಪಣಿ ಪ್ರಯೋಗ ಮಾಡುತ್ತಿದ್ದ ಹಿನ್ನೆಲೆಯಲ್ಲಿ ಹಲವು ದೇಶಗಳು ಉತ್ತರ ಕೊರಿಯಾ ಮೇಲೆ ನಿರ್ಬಂಧ ವಿಧಿಸಿದ್ದರಿಂದ ಮೊದಲೇ ಆರ್ಥಿಕ ಸಂಕಷ್ಟ ಎದುರಿಸುತ್ತಿತ್ತು. ಈಗ ಕೋವಿಡ್‍ನಿಂದಾಗಿ ದೇಶದ ಗಡಿಯನ್ನು ಮುಚ್ಚಿದೆ. ರಫ್ತು ಮಾಡಲು ಉತ್ಪನ್ನಗಳ ಸಂಖ್ಯೆ ಕಡಿಮೆಯಾಗಿರುವ ಕಾರಣ ಆಮದು ಆಗುತ್ತಿಲ್ಲ. ಇದರಿಂದಾಗಿ ಆರ್ಥಿಕತೆಯ ಮೇಲೆ ಭಾರೀ ಹೊಡೆತ ಬಿದ್ದಿದೆ.

ಕೃಷಿ ಬೀಜ, ರಸಗೊಬ್ಬರ ಕೂಡ ಚೀನಾದಿಂದ ಆಮದು ಆಗುತ್ತಿತ್ತು. ಕೊರೋನಾಗೂ ಮೊದಲು ಉತ್ತರ ಕೊರಿಯಾ ಚೀನಾದಿಂದ 500 ದಶಲಕ್ಷ ಡಾಲರ್ ಮೊತ್ತದಷ್ಟು ಉತ್ಪನ್ನಗಳನ್ನು ಆಮದು ಮಾಡಿಕೊಳ್ಳುತ್ತಿತ್ತು. ಇದೀಗ ಈ ಮೊತ್ತ ಕೇವಲ 2.5 ದಶಲಕ್ಷ ಡಾಲರ್ ಗೆ ಇಳಿದಿದೆ.

ಆಹಾರ ಉತ್ಪನ್ನವೇ ದುಬಾರಿಯಾಗಿರುವ ಕಾರಣ ರಸಗೊಬ್ಬರ ಆಮದು ಅಥವಾ ಖರೀದಿ ಸಾಧ್ಯವಾಗುತ್ತಿಲ್ಲ. ಹೀಗಾಗಿ ಹೀಗಾಗಿ ರೈತರು ಪ್ರತಿನಿತ್ಯ ಕನಿಷ್ಠ 2 ಲೀಟರ್ ನಷ್ಟು  ತಮ್ಮ ಮೂತ್ರಗಳನ್ನು ಸಂಗ್ರಹಿಸಿ ರಸಗೊಬ್ಬರ ಉತ್ಪಾದಿಸಲು ನೆರವಾಗಬೇಕು ಎಂದು ಆದೇಶಿಸಲಾಗಿದೆ.

ಅಣ್ವಸ್ತ್ರ, ಮಿಲಿಟರಿಗೆ ಹೆಚ್ಚಿನ ಹಣ ವಿನಿಯೋಗಿಸಿದ್ದ ಉತ್ತರ ಕೊರಿಯಾ ಆಹಾರ ಉತ್ಪಾದನೆಯತ್ತ ಗಮನ ಹರಿಸಿರಲಿಲ್ಲ. ಕಳೆದ ಪ್ರವಾಹ, ಬಿರುಗಾಳಿಯಿಂದ ಬೆಳೆಗಳು ನಾಶವಾಗಿತ್ತು. ಈ ಎಲ್ಲ ಕಾರಣಗಳಿಂದ ಈಗ ಉತ್ತರ ಕೊರಿಯಾದಲ್ಲಿ ಆಹಾರ ಕ್ಷಾಮ ಬಂದಿದೆ.

ವಿಶ್ವಕ್ಕೆ ಕೊರೊನಾ ಬಂದರೂ ಉತ್ತರ ಕೊರಿಯಾಗೆ ಬಂದಿಲ್ಲ- ಪ್ರಜೆಗಳಿಗೆ ಧನ್ಯವಾದ ಹೇಳಿದ್ದ ಕಿಮ್

ಉತ್ತರ ಕೊರಿಯಾದಲ್ಲಿ ಒಬ್ಬನೇ ಒಬ್ಬ ಕೋವಿಡ್‌ 19ಗೆ ತುತ್ತಾಗಿಲ್ಲ ಎಂದು ಸರ್ವಾಧಿಕಾರಿ ಕಿಮ್‌ ಜಾಂಗ್‌ ಉನ್‌ ಹೇಳಿದ್ದನು.

ಉತ್ತರ ಕೊರಿಯಾದ ಆಡಳಿತಾರೂಢ ವರ್ಕರ್ಸ್ ಪಕ್ಷದ 75ನೇ ಸಂಸ್ಥಾಪನಾ ವರ್ಷಾಚರಣೆ ನಡೆದಿತ್ತು. ಈ ವೇಳೆ ವಾಹಿನಿಯ ಮೂಲಕ ರಾಷ್ಟ್ರವನ್ನು ಉದ್ದೇಶಿಸಿ ಕಿಮ್ ಜಾಂಗ್ ಉನ್ ಮಾತನಾಡಿದ್ದನು.

ವಿಶ್ವವೇ ಕೊರೋನಾ ವೈರಸ್ ನಿಂದ ತತ್ತರಿಸುತ್ತಿದ್ದರೆ ಉತ್ತರ ಕೊರಿಯಾದಲ್ಲಿ ಇಲ್ಲಿಯವರೆಗೆ ಯಾರಿಗೂ ಸೋಂಕು ಬಂದಿಲ್ಲ. ಈ ಸಂಕಷ್ಟದ ಸಂದರ್ಭದಲ್ಲಿ ದೇಶದ ನಾಗರಿಕರು ಉತ್ತಮ ಆರೋಗ್ಯ ಕಾಳಜಿ ಕಾಪಾಡಿಕೊಂಡಿರುವುದಕ್ಕೆ ಕಿಮ್‌ ಜಾಂಗ್‌ ಉನ್‌ ಧನ್ಯವಾದ ಹೇಳಿದ್ದನು.

ಸೋಂಕಿಗೆ ತುತ್ತಾಗದೆ ಜನರು ಉತ್ತಮ ಆರೋಗ್ಯ ಕಾಪಾಡಿಕೊಂಡಿದ್ದಾರೆ. ನಮ್ಮ ಪಕ್ಷಕ್ಕೆ ಪ್ರತಿಯೊಬ್ಬ ಪ್ರಜೆಯ ಜೀವ ಮುಖ್ಯ. ಆರೋಗ್ಯವನ್ನು ಕಾಪಾಡುವ ಮೂಲಕ ಉತ್ತರ ಕೊರಿಯಾ ಜನ ಜಯ ಸಾಧಿಸಿದ್ದಾರೆ ಎಂದು ಕಿಮ್‌ ಕೊಂಡಾಡಿದ್ದನು.

ಈ ಸಂದರ್ಭದಲ್ಲಿ ಚೀನಾ ಅಧ್ಯಕ್ಷ ಕ್ಸಿ ಜಿನ್‌ ಪಿಂಗ್‌ ಕಿಮ್‌ಗೆ ಅಭಿನಂದನೆ ಸಲ್ಲಿಸಿದ್ದನು. ಕಳೆದ 100 ವರ್ಷಗಳಲ್ಲಿಯೇ ಇಡೀ ವಿಶ್ವ ಕಂಡು ಕೇಳರಿಯದ ಸಮಸ್ಯೆಗೆ ಸಿಲುಕಿದೆ. ಕೊರೊನಾ ವೈರಸ್‌ ಎಲ್ಲ ಕಡೆ ಹರಡುತ್ತಿದೆ. ಇಷ್ಟೆಲ್ಲದರ ನಡುವೆ ಉತ್ತರ ಕೊರಿಯಾ ಯಾವುದೇ ಸಮಸ್ಯೆಗೆ ಸಿಲುಕದಿರುವುದು ಪ್ರಶಂಸನೀಯ ಸಂಗತಿ ಎಂದು ಜಿನ್ ಪಿಂಗ್ ತಮ್ಮ ಸಂದೇಶದಲ್ಲಿ ತಿಳಿಸಿದ್ದರು.

ವುಹಾನ್‌ ನಗರದಿಂದ ಸೃಷ್ಟಿಯಾದ ಕೊರೊನಾ ವೈರಸ್‌ ವಿಶ್ವಕ್ಕೆ ಹರಡಿದೆ. ಆದರೆ ಚೀನಾ ಜೊತೆ ಗಡಿಯನ್ನು ಹಂಚಿಕೊಂಡಿರುವ ಉತ್ತರ ಕೊರಿಯಾಗೆ ಯಾವುದೇ ವೈರಸ್‌ ಬಂದಿಲ್ಲ ಎಂದು ಕಿಮ್ ಹೇಳಿದ್ದನು ಆದರೆ ಈಗ ದೇಶ ಭಾರೀ ಕ್ಷಾಮ ಹಾಗು ಬೆಲೆಯೇರಿಕೆಯಿಂದ ತತ್ತರಿಸಿ ಹೋಗಿದೆ.

Advertisement
Share this on...