ಅಯೋಧ್ಯೆಯಲ್ಲಿ ರಾಮಮಂದಿರಕ್ಕೆ 2500 ಕೋಟಿ ಹಣ ಹರಿದು ಬಂದರೆ ಅಲ್ಲಿ ನಿರ್ಮಿಸಲಿರುವ ಮಸೀದಿಗೆ ಇದುವರೆಗೆ ಸಿಕ್ಕ ದೇಣಿಗೆ ಕೇವಲ…..

in Kannada News/News 772 views

ಅಯೋಧ್ಯೆಯಲ್ಲಿ ಸುಪ್ರೀಂಕೋರ್ಟ್ ಆದೇಶದ ಮೇರೆಗೆ ಉತ್ತರಪ್ರದೇಶ ಸರ್ಕಾರದ ವತಿಯಿಂದ ಧನ್ನಿಪುರದ ಕೇಂದ್ರ ಸುನ್ನಿ ವಕ್ಫ್ ಮಂಡಳಿಗೆ ನೀಡಲಾದ ಐದು ಎಕರೆ ಜಮೀನಿನಲ್ಲಿ ನಿರ್ಮಿಸಲಿರುವ ಮಸೀದಿಯಿಂದ ಅನ್ಸಾರಿ ಅಂತರ ಕಾಯ್ದುಕೊಂಡಿದ್ದರು. ನಿರ್ಮಿಸಬೇಕಾದ ಮಸೀದಿಯ ಡಿಸೈನ್‌ನ್ನ ಅನ್ಸಾರಿ ನಿರಾಕರಿಸಿದ್ದಾರೆ.  ಮಸೀದಿಯ ಉದ್ದೇಶಿತ ವಿನ್ಯಾಸವು ವಿದೇಶಿ ವಾಸ್ತುಶಿಲ್ಪದಿಂದ ಪ್ರೇರಿತವಾಗಿದೆ, ಇದನ್ನು ಭಾರತೀಯ ವಾಸ್ತುಶಿಲ್ಪದ ಪ್ರಕಾರ ಮಾಡಬೇಕು ಎಂದು ಅವರು ಹೇಳಿದರು. ಅನ್ಸಾರಿ ಮಾತನಾಡುತ್ತ, ಮಸೀದಿ ಪ್ರದರ್ಶನಕ್ಕಾಗಿ ಅಲ್ಲ ಮತ್ತು ಅದು ಸರಳವಾಗಿರಬೇಕು ಎಂದು ಹೇಳಿದರು. ಟ್ರಸ್ಟ್ ಅವರನ್ನು ನಿರ್ಲಕ್ಷಿಸಿದ್ದಕ್ಕಾಗಿ ಅವರು ನಿರಾಶೆಗೊಂಡಿದ್ದಾರೆ. ಈ ಪ್ರಕರಣವನ್ನು 70 ವರ್ಷಗಳಿಂದ ನ್ಯಾಯಾಲಯದಲ್ಲಿ ಹೋರಾಡಿದ್ದರೂ ಯಾವುದೇ ಮುಖಂಡನಾಗಲಿ ಅಥವ ಮುಸ್ಲಿಂ ಪಕ್ಷವಾಗಲಿ ತನ್ನನ್ನಾಗಲಿ ತನ್ನ ಸಲಹೆಯನ್ನಾಗಲಿ ಕೇಳಿಲ್ಲ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ‌.

Advertisement

ಅಯೋಧ್ಯೆಯ ಧನ್ನಿಪುರದಲ್ಲಿ ಉದ್ದೇಶಿತ ಮಸೀದಿಯ ಹೆಸರನ್ನ ‘ಬಾಬರ್’ ಹೆಸರಿನಿಂದ ಇಡಬಾರದು ಯಾಕಂದ್ಏ ಬಾಬರ್ ಭಾರತದ ಮುಸಲ್ಮಾನರ ಮಸೀಹಾ ಅಲ್ಲ ಹಾಗಾಗಿ ಆ ಹೆಸರನ್ನ ಮಸೀದಿಗೆ ಇಡಬಾರದು ಎಂದು ಅನ್ಸಾರಿ ಹೇಳಿದ್ದಾರೆ.

ಅಷ್ಟೇ ಅಲ್ಲದೆ ಉದ್ದೇಶಿತ ಮಸೀದಿ ನಿರ್ಮಾಣಕ್ಕಾಗಿ ಇದುವರೆಗೆ ಸಂಗ್ರಹವಾದ ದೇಣಿಗೆಯ ಬಗ್ಗೆಯೂ ಅನ್ಸಾರಿ ಪ್ರಶ್ನಿಸಿದ್ದು, “ಸುಪ್ರೀಂಕೋರ್ಟ್ ನಿಂದ ತೀರ್ಪು ಬಂದು 16 ತಿಂಗಳುಗಳು ಕಳೆದರೂ ಇದುವರೆಗೆ ಕೇವಲ 20 ಲಕ್ಷ ದೇಣಿಗೆ ಸಂಗ್ರಹವಾಗಿದೆ” ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಇಂಡೋ-ಇಸ್ಲಾಮಿಕ್ ಕಲ್ಚರ್ ಫೌಂಡೇಶನ್ (ಐಐಸಿಎಫ್) ಮಸೀದಿ ನಿರ್ಮಾಣದ ಜವಾಬ್ದಾರಿಯನ್ನು ಹೊಂದಿದೆ ಎಂಬುದು ನಮಗೆಲ್ಲರಿಗೂ ತಿಳಿದಿದೆ. ಐಐಸಿಎಫ್ ಅಧ್ಯಕ್ಷರ ಕಾರ್ಯ ಶೈಲಿ ಉತ್ತಮವಾಗಿಲ್ಲ ಮತ್ತು ಟ್ರಸ್ಟ್ ಖಾಸಗಿ ಕಂಪನಿಯಾಗಿ ಮಾರ್ಪಟ್ಟಿದೆ. ಜನರು ಮಸೀದಿ ನಿರ್ಮಾಣಕ್ಕಾಗಿ ದೇಣಿಗೆ ಮಾಡಲು ಉತ್ಸುಕರಾಗದಿರಲು ಇದೂ ಪ್ರಮುಖ ಕಾರಣವಾಗಿದೆ ಎಂದು ಇಕ್ಬಾಲ್ ಅನ್ಸಾರಿ ಹೇಳಿದರು.

ಈ ಪ್ರಾಜೆಕ್ಟ್ ನ್ನ ಉತ್ತರಪ್ರದೇಶ ಸುನ್ನಿ ವಕ್ಫ್ ಬೋರ್ಡ್  ಪ್ರಾರಂಭಿಸಿತು. ಮಸೀದಿ ಸಂಕೀರ್ಣದಲ್ಲಿ ಮಸೀದಿಯ ಜೊತೆಗೆ ಆಸ್ಪತ್ರೆ, ವಸ್ತುಸಂಗ್ರಹಾಲಯ, ಗ್ರಂಥಾಲಯ, ಸಮುದಾಯ ಕೇಂದ್ರ, ಇಂಡೋ-ಇಸ್ಲಾಮಿಕ್ ಸಾಂಸ್ಕೃತಿಕ ಸಂಶೋಧನಾ ಕೇಂದ್ರ, ಮತ್ತು ಪಬ್ಲಿಕೇಷನ್ ಹೌಸ್ ಸೇರಿವೆ.

ರಾಮಮಂದಿರ ನಿರ್ಮಾಣಕ್ಕಾಗಿ ದೇಶಾದ್ಯಂತ ಸಂಗ್ರಹವಾಗಿತ್ತು ಬರೋಬ್ಬರಿ 2500 ಕೋಟಿ ರೂ

ಮನೆ ಮನೆಗೆ ತೆರಳಿ ರಾಮ ಮಂದಿರ ನಿರ್ಮಾಣ ದೇಣಿಗೆ ಸಂಗ್ರಹ ಪ್ರಕ್ರಿಕೆಯನ್ನು ಮಾರ್ಚ್ ತಿಂಗಳ ಮೊದಲ ವಾರದಲ್ಲೇ ನಿಲ್ಲಿಸಲಾಗಿತ್ತು. ಟ್ರಸ್ಟ್ ಅಂದಾಜಿಸಿದಂತೆ 2,500 ಕೋಟಿ ರೂಪಾಯಿ ದೇಣಿಗೆ ಸಂಗ್ರಹವಾಗಿದೆ. ಇನ್ನು ಮೂವರು ವರ್ಷಗಳ ಕಾಲ ನಿರ್ಮಾಣ ಕಾರ್ಯ ತಡೆಯಿಲ್ಲದೆ ಮುಂದುವರೆಯಲಿದೆ ಎಂದು ವಿಶ್ವ ಹಿಂದೂ ಪರಿಷತ್ ತಿಳಿಸಿದೆ.

ದೇಣಿಗೆ ಸಂಗ್ರಹ ಕಾರ್ಯ ನಿಲ್ಲಿಸಿದ್ದರೂ ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ವೆಬ್ ಸೈಟ್ ನಲ್ಲಿ ಆನ್ ಲೈನ್ ಮೂಲಕ ಹಣ ನೀಡುತ್ತಿದ್ದಾರೆ ಎಂದು ಟ್ರಸ್ಟ್ ನ ಪ್ರಧಾನ ಕಾರ್ಯದರ್ಶಿ ಚಂಪತ್ ರೈ ಮಾಹಿತಿ ನೀಡಿದ್ದಾರೆ.

ದೇಶಾದ್ಯಂತ 9 ಲಕ್ಷ ಸ್ವಯಂಸೇವಕರು ನಾಲ್ಕು ಲಕ್ಷ ಹಳ್ಳಿಗಳ 10 ಕೋಟಿ ಮನೆಗಳಿಂದ ದೇಣಿಗೆ ಸಂಗ್ರಹಿಸಿದ್ದಾರೆ ಎಂದು ಚಂಪತ್ ರೈ ಹೇಳಿದ್ದಾರೆ.

ಅಯೋಧ್ಯೆಯಲ್ಲಿ 70 ಎಕರೆಯಲ್ಲಿ ಮಂದಿರ ನಿರ್ಮಾಣಕ್ಕೆ ಟ್ರಸ್ಟ್ ಮುಂದಾಗಿತ್ತು. ಆದರೆ ಇದೀಗ ಹೆಚ್ಚುವರಿಯಾಗಿ ಜಮೀನನ್ನು ಖರೀದಿಸಿ 107 ಎಕರೆಗೆ ವಿಸ್ತರಿಸಲು ಟ್ರಸ್ಟ್ ಯೋಜನೆ ರೂಪಿಸಿದೆ. ಅದಕ್ಕಾಗಿ ಸ್ಥಳೀಯ ನಿವಾಸಿಗಳ ಜಮೀನನ್ನು ಖರೀದಿಸಲಾಗುತ್ತಿದೆ ಎಂದರು.

Advertisement
Share this on...