ದಾವಣಗೆರೆ:
ರಾಜ್ಯದಲ್ಲಿ ಶಿಥಿಲವಾದ 100 ರಾಮನ ದೇವಸ್ಥಾನಗಳನ್ನ ಜೀರ್ಣೋದ್ಧಾರ ಮಾಡಿ. ಮೋದಿ ರಾಮನ ಬದಲು ನೀವು ದಶರಥ ರಾಮನ ದೇವಸ್ಥಾನ ಜೀರ್ಣೋದ್ಧಾರ ಮಾಡಿ ಎಂದು ಸಿಎಂಗೆ ಒತ್ತಾಯ ಮಾಡಿದರು.
ವಾಲ್ಮೀಕಿ ವಿಶ್ವವಿದ್ಯಾಲಯಕ್ಕೆ ಪರಮೇಶ್ವರ್ ಒತ್ತಾಯ
ಇದೇ ವೇಳೆ ಮಾತನಾಡಿದ ಗೃಹ ಸಚಿವ ಜಿ.ಪರಮೇಶ್ವರ್, ಜಾತ್ರೆಗೆ ಸತತ ಮೂರು ವರ್ಷಗಳ ಕಾಲ ನಮಗೆ ಆಹ್ವಾನ ನೀಡಿದ್ದರೂ ಬರಲು ಆಗಿರಲಿಲ್ಲ. ಸಿಎಂ ಸಿದ್ದರಾಮಯ್ಯ ಅವರು ಬಜೆಟ್ನಲ್ಲಿ ವಾಲ್ಮೀಕಿ ವಿಶ್ವವಿದ್ಯಾಲಯ ಘೋಷಣೆ ಮಾಡಬೇಕು ಎಂದು ಒತ್ತಾಯಿಸಿದರು.
ರಾಮರಾಜ್ಯ ಆದ್ರೆ ಜಾತೀಯತೆ ತೊಲಗುತ್ತೆ
ಕಾವಿ ಶಕ್ತಿ ಕೇವಲ ಯಾರಿಗೋ ಸಿಮೀತ ಆಗಿದ್ದು ಅಲ್ಲ. ಮಹರ್ಷಿ ವಾಲ್ಮೀಕಿ ಅವರು ರಾಮಾಯಣ ರಚಿಸಿ ಶೂದ್ರರಿಗೂ ಅದರ ಅವಕಾಶ ಇದೆ ಅನ್ನೋದು ತೋರಿಸಿಕೊಟ್ಟರು. ರಾಮರಾಜ್ಯ ಆದಾಗಲೇ ಜಾತೀಯತೆ ತೊಲಗುತ್ತದೆ. ಮನುಷ್ಯ, ಮನುಷ್ಯ ಪ್ರೀತಿಸಬೇಕು ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.
ಮನುಷ್ಯರನ್ನ ಪ್ರೀತಿಸುವಿದೇ ಧರ್ಮ
ಬಸವಾದಿ ಶರಣರು ದಯಯೇ ಧರ್ಮದ ಮೂಲ ಅಂತಾರೆ. ಮನುಷ್ಯರನ್ನ ಪ್ರೀತಿಸುವಿದೇ ಧರ್ಮ. ಕೆಲ ಪಟ್ಟಭದ್ರ ಹಿತಾಸಕ್ತಿಗಳು ಒಂದು ಧರ್ಮದ ವಿರುದ್ಧ ಮತ್ತೊಂದು ಧರ್ಮದ ವಿರುದ್ಧ ಎತ್ತಿ ಕಟ್ಟುವ ಕೆಲಸ ಮಾಡುತ್ತಿದ್ದಾರೆ. ಅದಕ್ಕೆ ನಾವು ಸಂವಿಧಾನವನ್ನ ಓದಿಕೊಳ್ಳಬೇಕು. ಅಂದಾಗ ಸಮ ಸಮಾಜ ನಿರ್ಮಾಣವಾಗಬೇಕು ಎಂದರು.
ಜಾತಿ ವ್ಯವಸ್ಥೆ ಪರಿಣಾಮವಾಗಿ ನಾವು ನೀವೆಲ್ಲರೂ ಶೂದ್ರರಾಗಿದ್ದೇವು. ವರ್ಣ ವ್ಯವಸ್ಥೆಯಿಂದ ಅಕ್ಷರ ಸಂಸ್ಕೃತಿಯಿಂದ ನಾವು ದೂರವಾದೇವು. ಹಾಗಾಗಿ ನೀವು ಎಲ್ಲರೂ ಶಿಕ್ಷಣವಂತರಾಗಬೇಕು ಅಂತ ಸಿಎಂ ಸಿದ್ದರಾಮಯ್ಯ ಮನವಿ ಮಾಡಿಕೊಂಡರು.