“ಅಯೋಧ್ಯೆ ಆಯ್ತು, ಮಹಾದೇವನಿಲ್ಲದೆ (ಜ್ಞಾನವಾಪಿ) ರಾಮರಾಜ್ಯ ಅಪೂರ್ಣ”: ಶಬ್ನಮ್ ಶೇಖ್

in Uncategorized 6,348 views

ಮಹಾದೇವನಿಲ್ಲದೆ ರಾಮರಾಜ್ಯ ಪುರ್ಣಗೊಳ್ಳುವುದಿಲ್ಲ ಎನ್ನುವ ನಂಬಿಕೆ ನನ್ನದು ಎಂದು ಮುಂಬೈನಿಂದ ಅಯೋಧ್ಯೆಗೆ ಕಾಲ್ನಡಿಗೆಯಲ್ಲಿ ತೆರಳಿದ್ದ ಶಬ್ನಮ್ ಶೇಖ್ ಹೇಳಿದ್ದಾರೆ. ಜ್ಞಾನವಾಪಿ ಮಸೀದಿಯಲ್ಲಿ ಭಗವಂತನಿದ್ದಾನೆ, ದೇವಾಲಯವಿದೆ ಎಂದು ತನಗೆ ಯಾವಾಗಲೂ ಅನಿಸುತ್ತಿತ್ತು. ಆದರೆ ಈಗ ಅದು ನಿಜವಾಗಿದೆ ಎಂದಿದ್ದಾರೆ.

Advertisement

ಜ್ಞಾನವಾಪಿ(Gyanvapi) ಸಂಕೀರ್ಣದಲ್ಲಿ ಭಗವಂತನಿದ್ದಾನೆ, ದೇವಾಲಯವಿದೆ ಎಂದು ತನಗೆ ಸದಾ ಅನಿಸುತ್ತಿತ್ತು, ಮಹಾದೇವನಿಲ್ಲದೆ ರಾಮರಾಜ್ಯ(RamRajya) ಅಪೂರ್ಣ ಎಂದು ಶಬ್ನಮ್​ ಶೇಖ್(Shabnam Shaikh)​ ಹೇಳಿದ್ದಾರೆ. ಶಬ್ನಮ್​ ಶೇಖ್​ ರಾಮಲಲ್ಲಾ ದರ್ಶನ ಮಾಡಲು ಮುಂಬೈನಿಂದ ಅಯೋಧ್ಯೆಗೆ ಪಾದಯಾತ್ರೆ ಕೈಗೊಂಡಿದ್ದರು. ರಾಮಲಲ್ಲಾನ ದರ್ಶನ ಪಡೆಯಲಿ ನಿತ್ಯ ಲಕ್ಷಾಂತರ ಮಂದಿ ಅಯೋಧ್ಯೆ ಭೇಟಿ ನೀಡುತ್ತಿದ್ದಾರೆ.

ಮತ್ತೊಂದೆಡೆ, ವಾರಾಣಸಿ ಜಿಲ್ಲಾ ನ್ಯಾಯಾಲಯವು ಜ್ಞಾನವಾಪಿ ಸಂಕೀರ್ಣದಲ್ಲಿರುವ ವ್ಯಾಸ್ ಜಿ ಅವರ ತೆಹ್ಖಾನಾದಲ್ಲಿ ನಿತ್ಯ ಪೂಜೆಗೆ ಅನುಮತಿ ನೀಡಿದ ನಂತರ, ನೆಲಮಾಳಿಗೆ ತೆರೆಯಲಾಗಿದೆ. ಅಯೋಧ್ಯೆಯಲ್ಲಿ ಮಾತನಾಡಿದ ಶಬ್ನಮ್ ಮಹಾದೇವನಿಲ್ಲದೆ ರಾಮರಾಜ್ಯ ಅಪೂರ್ಣ ನಾವೂ ಈ ಸುದ್ದಿಯ ಮೇಲೆ ಸದಾ ಗಮನವಿಡುತ್ತಿದ್ದೆವು ಎಲ್ಲೋ ಒಂದು ದೇವಸ್ಥಾನವಿದೆ ಎಂಬ ಕಲ್ಪನೆ ಇತ್ತು ಎಂದಿದ್ದಾರೆ.

ಶಬ್ನಮ್ ಶೇಖ್ ತನ್ನ ಸ್ನೇಹಿತರಾದ ರಮಣ್ ರಾಜ್ ಶರ್ಮಾ ಮತ್ತು ವಿನೀತ್ ಪಾಂಡೆ ಅವರೊಂದಿಗೆ ಅಯೋಧ್ಯೆ ಪ್ರವಾಸಕ್ಕೆ ಹೋಗಿದ್ದರು. ರಾಮಲಲ್ಲಾನ ದರ್ಶನ ಪಡೆಯುವುದು ಅವರ ಉದ್ದೇಶವಾಗಿತ್ತು. ಮುಸ್ಲಿಮ್ ಆಗಿದ್ದರೂ, ಶಬ್ನಮ್ ರಾಮನಲ್ಲಿ ಅಚಲವಾದ ನಂಬಿಕೆಯನ್ನು ಹೊಂದಿದ್ದಾರೆ.

ಇದೇ ಕಾರಣಕ್ಕೆ ಶಬನಮ್‌ಗೆ ರಾಮಜನ್ಮಭೂಮಿಗೆ ಹೋಗಲು ಪ್ರೇರಣೆಯಾಗಿದೆ. ಶಬ್ನಮ್ ಭಗವಾನ್ ರಾಮ ಎಲ್ಲರಿಗೂ ಸೇರಿದವರು ಎಂದು ಹೇಳುತ್ತಾರೆ. ಅವರಿಗೆ ಎಲ್ಲವೂ ಸಮಾನ. ಶ್ರೀರಾಮನ ಆರಾಧನೆಯು ಯಾವುದೇ ನಿರ್ದಿಷ್ಟ ಧರ್ಮ ಅಥವಾ ಜಾತಿಗೆ ಸೀಮಿತವಾಗಿಲ್ಲ. ಜತೆಗೆ ಹೆಣ್ಣುಮಕ್ಕಳು ಕಾಲ್ನಡಿಗೆಯಲ್ಲಿ ಪ್ರಯಾಣಿಸುವಂತಿಲ್ಲ ಎಂಬ ಕಲ್ಪನೆಯನ್ನೂ ಮುರಿಯಬೇಕಿದೆ ಎಂದು ಹೇಳಿದ್ದಾರೆ.

Advertisement
Share this on...