ಅಯೋಧ್ಯೆ, ಜ್ಞಾನವಾಪಿಯಾಯ್ತು ಇದೀಗ ಮಂಗಳೂರಿನ ಮಳಲಿ ಮಸ್ಜಿದ್ ಸರದಿ: ಕೋರ್ಟ್ ಮೆಟ್ಟಿಲೇರಿದ ವಕ್ಫ್ ಬೋರ್ಡ್

in Uncategorized 2,197 views

ಮಂಗಳೂರು:

Advertisement
ನಗರದ ಮಳಲಿ ಮಸೀದಿ ವಿವಾದಕ್ಕೆ ಇಂದು ವಕ್ಫ್ ಬೋರ್ಡ್ ಅಧಿಕೃತ ಎಂಟ್ರಿ ಕೊಟ್ಟಿದೆ. ಇಂದು ಮಂಗಳೂರಿನ ಮೂರನೇ ಹೆಚ್ಚುವರಿ ಸಿವಿಲ್ ಕೋರ್ಟ್ ನಲ್ಲಿ ಅಧಿಕೃತವಾಗಿ ವಕಾಲತ್ತು ದಾಖಲಿಸೋ ಸಾಧ್ಯತೆ ಇದೆ ಎನ್ನಲಾಗ್ತಿದೆ.

ದಕ್ಷಿಣ ಕನ್ನಡ ಜಿಲ್ಲಾ ವಕ್ಫ್ ಬೋರ್ಡ್ ಮಳಲಿ ಮಸೀದಿ ವಕ್ಫ್ ಬೋರ್ಡ್ ಆಸ್ತಿ ಎಂದು ಪ್ರತ್ಯೇಕ ವಾದ ಮಂಡಿಸಲು ಮುಂದಾಗಿದೆ. ವಕೀಲರ ಮೂಲಕ ವಕಾಲತ್ತು ದಾಖಲಿಸಿ ಪ್ರಕರಣದಲ್ಲಿ ಅಧಿಕೃತ ಹೋರಾಟಕ್ಕೆ ವಕ್ಫ್ ಬೋರ್ಡ್ ಇಳಿದಿದೆ. ಸದ್ಯ ಹೈಕೋರ್ಟ್ ನಿಂದ ಮಂಗಳೂರಿನ ಮೂರನೇ ಹೆಚ್ಚುವರಿ ಸಿವಿಲ್ ಕೋರ್ಟ್​ಗೆ ನಿರ್ದೇಶನ ಸಿಕ್ಕಿದೆ.

ಮಳಲಿ‌ ಮಸೀದಿ ಜಾಗ ವಕ್ಫ್ ಆಸ್ತಿ ಹೌದಾ  ಅಲ್ಲವಾ ಎಂದು ನಿರ್ಧರಿಸಲು ಹೈಕೋರ್ಟ್ ನಿರ್ದೇಶನ ನೀಡಿದೆ. ರಾಜ್ಯ ಹೈಕೋರ್ಟ್ ಈಗಾಗಲೇ ತೀರ್ಪು ಪ್ರಕಟಿಸಿ ಆದೇಶ ಹೊರಡಿಸಿದೆ. ಹೀಗಾಗಿ ಹೈಕೋರ್ಟ್ ಆದೇಶ ತಲುಪಿದ ಕೂಡಲೇ ಮಂಗಳೂರು ಕೋರ್ಟ್​ನಲ್ಲಿ ಮತ್ತೆ ವಿಚಾರಣೆ ಆರಂಭವಾಗಲಿದೆ. ಇಂದು ಆದೇಶ ತಲುಪಿದರೇ ವಾದ ಮಂಡಿಸಲು ವಿಎಚ್​ಪಿ ಪರ ವಕೀಲರಿಂದಲೂ ಅರ್ಜಿ ಸಲ್ಲಿಕೆಯಾಗಲಿದೆ. ಇನ್ನು ಮತ್ತೊಂದೆಡೆ ವಿಎಚ್​ಪಿ ಮತ್ತು ಮಳಲಿ ಮಸೀದಿ ಕಾನೂನು ಹೋರಾಟಕ್ಕೆ ವಕ್ಫ್ ಬೋರ್ಡ್ ಎಂಟ್ರಿಯಾಗಿದೆ. ಮಳಲಿ ಮಸೀದಿ ವಕ್ಫ್ ಆಸ್ತಿ ಎಂದು‌ ದಾಖಲೆ ಸಲ್ಲಿಸಲು ದಕ್ಷಿಣ ಕನ್ನಡ ವಕ್ಫ್ ಬೋರ್ಡ್ ತಯಾರಿ ನಡೆಸಿದೆ

Advertisement
Share this on...