Maharashtra Crisis: ಉದ್ಧವ್ ಠಾಕ್ರೆ ಅವರ ರೂಪದಲ್ಲಿ ಮಹಾರಾಷ್ಟ್ರವು ಸಂವೇದನಾಶೀಲ ಮತ್ತು ಸಭ್ಯ ಮುಖ್ಯಮಂತ್ರಿಯನ್ನು ಕಳೆದುಕೊಂಡಿದೆ, ಅವರು ವಿನಯತೆಯಿಂದ ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿದಿದ್ದಾರೆ ಎಂದು ಶಿವಸೇನಾ ಸಂಸದ ಸಂಜಯ್ ರಾವುತ್ ಹೇಳಿದ್ದಾರೆ. ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರು ನೆನ್ನೆ ಮಾತನಾಡುತ್ತ, “ಸಂಖ್ಯೆಗಳ ಆಟ (Number Game)” ದಲ್ಲಿ ಆಸಕ್ತಿ ಹೊಂದಿಲ್ಲ ಮತ್ತು ಅದಕ್ಕಾಗಿಯೇ ನಾನು ನನ್ನ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿದ್ದೇನೆ ಎಂದು ಬುಧವಾರ ಹೇಳಿದ್ದರು.
‘ನಾವು ಒಬ್ಬ ಸಂವೇದನಾಶೀಲ ಹಾಗೂ ಸಭ್ಯ ಮುಖ್ಯಮಂತ್ರಿಯನ್ನು ಕಳೆದುಕೊಂಡಿದ್ದೇವೆ’
ಸಂಜಯ್ ರಾವತ್ ಟ್ವೀಟ್ ಮಾಡುತ್ತ, “ಮುಖ್ಯಮಂತ್ರಿ (ಉದ್ಧವ್ ಠಾಕ್ರೆ) ವಿನಯತೆಯಿಂದ ತಮ್ಮ ಸ್ಥಾನದಿಂದ ಕೆಳಗಿಳಿದಿದ್ದಾರೆ. ನಾವು ಸಂವೇದನಾಶೀಲ ಮತ್ತು ಸಭ್ಯ ಮುಖ್ಯಮಂತ್ರಿಯನ್ನು ಕಳೆದುಕೊಂಡಿದ್ದೇವೆ” ಎಂದಿದ್ದಾರೆ. ಶಿವಸೇನಾ ಸಂಸ್ಥಾಪಕ ಬಾಳ್ ಠಾಕ್ರೆ ಅವರ ಪರಂಪರೆಯನ್ನು ಮುಂದುವರಿಸುತ್ತೇನೆ ಮತ್ತು ಜೈಲಿಗೆ ಹೋಗಲು ಸಿದ್ಧ ಎಂದೂ ರಾವತ್ ಹೇಳಿದರು.
ಅವರು ಮುಂದೆ ಮಾತನಾಡುತ್ತ, “ವಂಚಕರು ಅಂತ್ಯ ಎಂದಿಗೂ ಒಳ್ಳೆಯಾದಗಿರಲ್ಲ ಮತ್ತು ಇತಿಹಾಸವು ಅದನ್ನು ಸಾಬೀತುಪಡಿಸುತ್ತದೆ. ಇದೀಗ ಶಿವಸೇನೆಗೆ ಭರ್ಜರಿ ಗೆಲುವಿನ ಆರಂಭವಾಗಿದೆ. ನಾವು ಲಾಠಿಗಳನ್ನು ಎದುರಿಸುತ್ತೇವೆ, ಜೈಲಿಗೆ ಹೋಗುತ್ತೇವೆ ಆದರೆ ಬಾಳಾಸಾಹೇಬ್ ಠಾಕ್ರೆಯವರ ಶಿವಸೇನೆಯನ್ನು ಜೀವಂತವಾಗಿಡುತ್ತೇವೆ” ಎಂದರು.
ಬಾಲ್ಯದಲ್ಲಿ ಪ್ರಧಾನಿ ಮೋದಿ ಚಹಾ ಮಾರಿದ್ದ ಜಾಗ?| Tea Stall where PM Modi Sold Tea |ತಿನ್ನಲು ಅನ್ನವಿಲ್ಲದೆ ಮಣ್ಣಿನ ರೊಟ್ಟಿ ತಿನ್ನುತ್ತಿದ್ದಾರೆ ಈ ದೇಶದ ಜನ | This country people eating Mud Rotis|Most Amazing 30 facts
Watch and Subscribe to the Channel to get such amazing facts
ಬಾಳ್ ಠಾಕ್ರೆ ಅವರ ಪುತ್ರ ಉದ್ಧವ್ ಅವರನ್ನು 2019 ರಲ್ಲಿ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಳ್ಳಲು ಮನವೊಲಿಸಿದ ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್ ಅವರಿಗೂ ನಾನು ಕೃತಜ್ಞನಾಗಿದ್ದೇನೆ. ಪವಾರ್ ಅವರು ಮಾರ್ಗದರ್ಶನ ನೀಡಿದರು. ಅವರ (ಉದ್ಧವ್ ಠಾಕ್ರೆ) ಜನರು (ಬಂಡಾಯ ಶಿವಸೇನೆ ಶಾಸಕರು) ಬೆನ್ನಿಗೆ ಚೂರಿ ಹಾಕುತ್ತಿದ್ದಾಗ, ಪವಾರ್ ಉದ್ಧವ್ ಅವರ ಹಿಂದೆ ದೃಢವಾಗಿ ನಿಂತರು ಎಂದು ರಾವತ್ ಹೇಳಿದರು.
ಕಾಂಗ್ರೆಸ್ ನಾಯಕರು ಸದಾ ಸರ್ಕಾರದ ಜೊತೆಗಿರಬೇಕು ಎಂದು ರಾವತ್ ಹೇಳಿದರು. ಅಧಿಕಾರ ಬರುತ್ತದೆ, ಹೋಗುತ್ತದೆ ಇಲ್ಲಿ ಯಾರೂ ಶಾಶ್ವತವಾಗಿ ಅಧಿಕಾರದಲ್ಲಿರಲು ಸಾಧ್ಯವಿಲ್ಲ, ನ್ಯಾಯ ಸಿಗಬೇಕು ಎಂದರು. ರಾವುತ್ ಮುಂದೆ ಮಾತನಾಡುತ್ತ, “ಇದು ಅಗ್ನಿಪರೀಕ್ಷೆಯ ಸಮಯ. ಈ ದಿನಗಳೂ ಶೀಘ್ರದಲ್ಲೇ ಕಳೆದುಹೋಗಲಿವೆ” ಎಂದರು.
ಭಾವುಕರಾಗಿ ಕಣ್ಣೀರಿಟ್ಟ ಸಂಜಯ್ ರಾವತ್
ಈ ಹಿಂದೆ ಅವರು ಮಾತನಾಡುತ್ತ, ಠಾಕ್ರೆ ಜವಾಬ್ದಾರಿಯಿಂದ ಎಂದಿಗೂ ತಪ್ಪಿಸಿಕೊಂಡು ಹೋಗುವುದಿಲ್ಲ ಮತ್ತು ಅವರು ಕೊನೆಯವರೆಗೂ ಹೋರಾಡುತ್ತಾರೆ ಎಂದು ಹೇಳಿದ್ದರು. ಶಿವಸೇನೆ ಮತ್ತೆ ಮೇಲೆದ್ದು ಶಿವಸೈನಿಕರು ಮುಖ್ಯಮಂತ್ರಿಯಾಗಲಿದ್ದಾರೆ ಎಂದರು. “ಉದ್ಧವ್ ಠಾಕ್ರೆ ನಮ್ಮ ನಾಯಕ. ಅವರಿಗೆ ಯಾವ ರೀತಿಯ ಬೆಂಬಲವಿದೆಯೋ ಅದರ ಮೂಲಕ ಅವರು ಕೊನೆಯವರೆಗೂ ಹೋರಾಡುತ್ತಾರೆ. ” ಎಂದಿದ್ದರು.
ಬಿಜೆಪಿಯನ್ನು ಹೆಸರಿಸದೆ ರಾವತ್, ಅಧಿಕಾರ ಹಿಡಿಯಲು ಬಯಸುವವರು ಹಾಗೆ ಮಾಡಬಹುದು ಆದರೆ ಭವಿಷ್ಯವು ಶಿವಸೇನೆಯ ಪರವೇ ಇರುತ್ತದೆ ಎಂದು ಹೇಳಿದರು. ಇಂತಹ ಪರಿಸ್ಥಿತಿಯಲ್ಲಿ, ವಿಶ್ವಾಸಮತ ಪರೀಕ್ಷೆಯನ್ನು ಪ್ರಶ್ನಿಸಿ ಶಿವಸೇನೆ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ನಡೆಸುತ್ತಿದ್ದಾಗ, ಸಂಪುಟ ಸಭೆಯ ಅಧ್ಯಕ್ಷತೆ ವಹಿಸಿದ್ದ ಠಾಕ್ರೆ, ತನಗೆ ಸ್ವಂತ ಜನರೇ ದ್ರೋಹ ಬಗೆದಿದ್ದಾರೆ ಎಂದು ಹೇಳಿದ್ದರು. ಠಾಕ್ರೆ ಅವರ ಈ ಮಾತೇ ನನಗೆ ಕಣ್ಣೀರು ತರಿಸಿದೆ ಎಂದು ರಾವತ್ ಹೇಳಿದ್ದಾರೆ.