ಉತ್ತರ ಪ್ರದೇಶ, ಅಸ್ಸಾಂ ಮಾದರಿಯಲ್ಲಿ ಉತ್ತರಾಖಂಡದಲ್ಲೂ ಮದರಸಾಗಳ ಸಮೀಕ್ಷೆ (Survey) ನಡೆಸಲಾಗುವುದು. ಮದರಸಾಗಳ ಬಗ್ಗೆ ಕಳವಳ ವ್ಯಕ್ತಪಡಿಸಿರುವ ಉತ್ತರಾಖಂಡ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ, ಮದರಸಾಗಳ ಬಗ್ಗೆ ನಿರಂತರವಾಗಿ ದೂರುಗಳು ಬರುತ್ತಿದ್ದು, ಈಗ ಅವುಗಳ ಮೇಲೆ ತೀವ್ರ ನಿಗಾ ವಹಿಸಿ ಸಮೀಕ್ಷೆ ನಡೆಸಲಾಗುವುದು ಎಂದು ಹೇಳಿದ್ದಾರೆ.
ಉತ್ತರಾಖಂಡದ ಮುಖ್ಯಮಂತ್ರಿ ಮಂಗಳವಾರ (ಸೆಪ್ಟೆಂಬರ್ 13, 2022) ಸಚಿವಾಲಯದಲ್ಲಿ ನಡೆದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡುತ್ತಿದ್ದರು. ಈ ಸಂದರ್ಭದಲ್ಲಿ ಉತ್ತರಾಖಂಡದ ಮದರಸಾಗಳ ಚಟುವಟಿಕೆಗಳು ಮತ್ತು ಕೆಲಸಗಳ ಬಗ್ಗೆ ನಿರಂತರವಾಗಿ ದೂರುಗಳು ಬರುತ್ತಿವೆ ಎಂದು ಹೇಳಿದರು. ಈ ಎಲ್ಲಾ ದೂರುಗಳನ್ನು ಗಂಭೀರವಾಗಿ ಪರಿಗಣಿಸಲಾಗುತ್ತಿದ್ದು, ಇದಕ್ಕಾಗಿ ಎಲ್ಲಾ ಮದರಸಾಗಳನ್ನು ತನಿಖೆಗೆ ಒಳಪಡಿಸಲಾಗುವುದು ಎಂದು ಹೇಳಿದರು. ಮದರಸಾಗಳ ಸಮೀಕ್ಷೆ ಅನಿವಾರ್ಯವಾಗಿದ್ದು, ಇದಕ್ಕಾಗಿ ತನಿಖಾ ಪ್ರಕ್ರಿಯೆ ಆರಂಭಿಸಲಾಗುವುದು ಎಂದು ಸ್ಪಷ್ಟಪಡಿಸಿದರು.
ಒಂದು ದಿನ ಮುಂಚಿತವಾಗಿ ಅಂದರೆ ಸೋಮವಾರ (ಸೆಪ್ಟೆಂಬರ್ 12, 2022) ರಾಜ್ಯ ಸರ್ಕಾರವು ಉತ್ತರ ಪ್ರದೇಶದ ಮಾದರಿಯಲ್ಲಿ ಮದರಸಾಗಳ ಸಮೀಕ್ಷೆಯನ್ನು ನಡೆಸಬೇಕು ಎಂದು ವಕ್ಫ್ ಮಂಡಳಿಯ ನೂತನ ಅಧ್ಯಕ್ಷ ಶಮ್ಸ್ ಹೇಳಿದಾಗ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಅವರ ಈ ಹೇಳಿಕೆ ಬಂದಿದೆ.
ಶಮ್ಸ್ ಮಾತನಾಡುತ್ತ, “ಯುಪಿ ಸರ್ಕಾರದ ಮಾದರಿಯನ್ನ ಅನುಸರಿಸುತ್ತ ನಾವು ಉತ್ತರಾಖಂಡದಲ್ಲಿ ನಡೆಯುತ್ತಿರುವ ಮದರಸಾಗಳ ಸಮೀಕ್ಷೆಯನ್ನು ನಡೆಸುತ್ತೇವೆ. ಇದು UMB ಅಥವಾ ವಕ್ಫ್ ಬೋರ್ಡ್ಗೆ ಸಂಯೋಜಿತವಾಗಿರುವ ಮದರಸಾಗಳನ್ನು ಒಳಗೊಂಡಿರುತ್ತದೆ. ಎರಡೂ ಸರ್ಕಾರಿ ಸಂಸ್ಥೆಗಳಲ್ಲಿ ನೋಂದಾಯಿಸದವರನ್ನು ಇದರಲ್ಲಿ ಸೇರಿಸಲಾಗುತ್ತದೆ” ಎಂದಿದ್ದರು.
उत्तराखण्ड में मदरसों के कामकाज, गतिविधियों को लेकर लगातार शिकायतें आ रही हैं, इन शिकायतों को राज्य सरकार द्वारा गंभीरता से लिया जा रहा है, जिसके दृष्टिगत प्रदेश के सभी मदरसों का सर्वे किया जाएगा। pic.twitter.com/519sKt23ad
— Pushkar Singh Dhami (@pushkardhami) September 13, 2022
“ಏನೇ ಆಗಲಿ ಉತ್ತರಾಖಂಡದಲ್ಲಿ ಯಾವುದೇ ನೋಂದಣಿಯಾಗದ ಮದರಸಾಗಳು ಕಾರ್ಯನಿರ್ವಹಿಸಲು ಅನುಮತಿಸುವುದಿಲ್ಲ. ಸಿಎಂ ಜತೆ ಮಾತನಾಡಿದ್ದೇನೆ. ಸಮೀಕ್ಷೆಯ ಔಪಚಾರಿಕ ಪ್ರಸ್ತಾವನೆಯನ್ನು ಶೀಘ್ರದಲ್ಲೇ ಅವರಿಗೆ ಕಳುಹಿಸಲಾಗುವುದು. ರಾಜ್ಯದಲ್ಲಿನ ಮಸೀದಿ, ಮದರಸಾಗಳಲ್ಲಿ ಯಾವುದೇ ಅಕ್ರಮ ನಡೆದರೆ ತಡೆಯಲು ಭದ್ರತಾ ಕ್ಯಾಮೆರಾಗಳನ್ನು ಅಳವಡಿಸಲಾಗುವುದು” ಎಂದೂ ಅವರು ಹೇಳಿದ್ದರು.
ಉತ್ತರ ಪ್ರದೇಶದಲ್ಲಿ ಇಂದಿನಿಂದ ಶುರುವಾಗಲಿದೆ ಮದರಸಾಗಳ ಸಮೀಕ್ಷೆ
ನಿಮ್ಮ ಮಾಹಿತಿಗಾಗಿ ತಿಳಿಸಬಯಸುವ ವಿಷಯವೇನೆಂದರೆ ಆಗಸ್ಟ್ 31 ರಂದು ಉತ್ತರ ಪ್ರದೇಶದ ಯೋಗಿ ಆದಿತ್ಯನಾಥ್ ಸರ್ಕಾರವು ರಾಜ್ಯದ ಎಲ್ಲಾ ಮದರಸಾಗಳನ್ನು ಸಮೀಕ್ಷೆಗೆ ಒಳಪಡಿಸಬೇಕು ಮತ್ತು ಅವುಗಳ ವರದಿಗಳನ್ನು ಆಡಳಿತಕ್ಕೆ ಸಲ್ಲಿಸಬೇಕು ಎಂದು ಆದೇಶಿಸಿತ್ತು. ಉತ್ತರಪ್ರದೇಶ ಸರ್ಕಾರವು ರಾಜ್ಯದ ಶಿಕ್ಷಣ ವ್ಯವಸ್ಥೆಯ ಪುನಶ್ಚೇತನದ ದಿಕ್ಕಿನಲ್ಲಿ ಪ್ರಯತ್ನಗಳನ್ನು ಮಾಡುತ್ತಿದೆ. ಮದರಸಾಗಳ ಸಮೀಕ್ಷೆಗೆ ಸಂಬಂಧಿಸಿದಂತೆ ಎಲ್ಲ ಜಿಲ್ಲೆಗಳ ಡಿಸಿ ಗಳಿಗೆ ಆದೇಶ ನೀಡಲಾಗಿದೆ. ಈ ಸಮೀಕ್ಷೆಯು ಮಂಗಳವಾರದಿಂದ (ಸೆಪ್ಟೆಂಬರ್ 13) ಪ್ರಾರಂಭವಾಗುತ್ತಿದ್ದು ಈ ಸಮೀಕ್ಷೆ ಮುಗಿಸಲು ಅಕ್ಟೋಬರ್ 5, 2022 ರವರೆಗೆ ಗಡುವು ನೀಡಲಾಗಿದೆ. ಇದರಲ್ಲಿ ಮಾನ್ಯತೆ ಇಲ್ಲದ ಎಲ್ಲ ಮದರಸಾಗಳ ಸಮೀಕ್ಷೆ ನಡೆಸಲಾಗುವುದು.
ಈ ನಿಟ್ಟಿನಲ್ಲಿ ಸಭೆಯನ್ನೂ ನಡೆಸಲಾಗಿತ್ತು. ಸಮೀಕ್ಷೆಯಲ್ಲಿ SDM, BSA (ಬೇಸಿಕ್ ಶಿಕ್ಷಣ ಅಧಿಕಾರಿ) ಮತ್ತು ಜಿಲ್ಲಾ ಅಲ್ಪಸಂಖ್ಯಾತ ಅಧಿಕಾರಿಗಳು ಇರುತ್ತಾರೆ ಎಂದು ಸ್ಪಷ್ಟಪಡಿಸಲಾಗಿತ್ತು. ಈ ವರದಿಯನ್ನು ಜಿಲ್ಲಾಧಿಕಾರಿಗಳಿಗೆ ಸಲ್ಲಿಸಿ, ಅವರು ಸರ್ಕಾರಕ್ಕೆ ರವಾನಿಸಲಿದ್ದಾರೆ. ವಾಸ್ತವವಾಗಿ, ಮದರಸಾಗಳ ಶಿಕ್ಷಣ ವ್ಯವಸ್ಥೆಯನ್ನು ಉತ್ತಮ ಮತ್ತು ಆಧುನಿಕವಾಗಿಸುವುದು ಇದರ ಗುರಿಯಾಗಿದೆ. ಯಾವ ಜಿಲ್ಲೆಯಲ್ಲಿ ಎಷ್ಟು ಮಾನ್ಯತೆ ಇಲ್ಲದ ಮದರಸಾಗಳಿವೆ, ಅದರಲ್ಲಿ ಎಷ್ಟು ವಿದ್ಯಾರ್ಥಿಗಳು ಶಿಕ್ಷಣ ಪಡೆಯುತ್ತಿದ್ದಾರೆ ಎಂಬ ಮಾಹಿತಿಯೂ ಈ ಸಮೀಕ್ಷೆಯಿಂದ ಲಭ್ಯವಾಗಲಿದೆ.
ಈ ಸಮೀಕ್ಷೆಯಲ್ಲಿ ಸರಿಯಾಗಿ ನಡೆಯುತ್ತಿರುವ ಮದರಸಾಗಳನ್ನೂ ಮಾನ್ಯತೆ ವ್ಯಾಪ್ತಿಗೆ ತರಲಾಗುವುದು. ಯಾವ ಮದರಸಾಗಳು ಎಲ್ಲಿಂದ ಹಣ ಪಡೆಯುತ್ತಿವೆ ಎಂಬುದರ ಬಗ್ಗೆಯೂ ತನಿಖೆ ನಡೆಸಲಾಗುವುದು. ಆ ಮದರಸಾಗಳಿಗೆ ‘ಉತ್ತರ ಪ್ರದೇಶ ಮದರ್ಸಾ ಮಂಡಳಿ’ಯಿಂದ ಮಾನ್ಯತೆ ನೀಡಲಾಗುವುದು, ಅದು ಅರ್ಹವಾಗಿರುತ್ತದೆ. ಅಷ್ಟೇ ಅಲ್ಲ, ಈ ಮದರಸಾಗಳಲ್ಲಿ ಕಲಿಸುತ್ತಿರುವ ಶಿಕ್ಷಕರು ಯಾರು, ಏನು ಕಲಿಸುತ್ತಿದ್ದಾರೆ ಎಂಬ ಮಾಹಿತಿಯನ್ನೂ ಸರ್ಕಾರ ಪಡೆಯಬೇಕಿದೆ. ಮದರಸಾಗಳ ಪಠ್ಯಕ್ರಮ ಯಾವುದು, ಇದನ್ನೂ ಸಮೀಕ್ಷೆಯಲ್ಲಿ ಸಂಗ್ರಹಿಸಲಾಗುವುದು.