ನಮ್ಮ ಕರ್ನಾಟಕ ರಾಜ್ಯಕ್ಕೆ ಅಧಿಕಾರಿಯಾಗಿ ಬೇರೆ ರಾಜ್ಯದವರು ಹಲವಾರು ಬಾರಿ ಬಂದಿದ್ದಾರೆ. ಅವರಲ್ಲಿ ಕೆಲವರು ತಾವು ಮಾಡಿದ ಒಳ್ಳೆ ಕೆಲಸಗಳಿಂದ ಇಂದಿಗೂ ಕೂಡ ಜನರ ಮನಸಲ್ಲಿ ಅಚ್ಚಳಿಯದೆ ಉಳಿದಿದ್ದಾರೆ. ಇಂದಿನ ಪೀಳಿಗೆಯಲ್ಲಿ ಹೊರ ರಾಜ್ಯದಿಂದ ಕರ್ನಾಟಕದ ಅಧಿಕಾರಿಯಾಗಿ ಬಂದ ಒಬ್ಬ ಮಹಿಳೆ,ಕರ್ನಾಟಕದ ಜನತೆಗೆ ಬಹಳ ಹತ್ತಿರವಾಗಿದ್ದು, ಜಿಲ್ಲಾಧಿಕಾರಿ ಎಂದರೆ ಇವರ ಹಾಗೆ ಇರಬೇಕು ಎಂಬ ಭಾವನೆ ಮೂಡುವಂತೆ ಮಾಡಿದ್ದಾರೆ. ಯಾರು ಆ ಜಿಲ್ಲಾಧಿಕಾರಿ? ಅವರು ಮತ್ಯಾರು ಅಲ್ಲ. ಪ್ರಸ್ತುತ ಸಾಂಸ್ಕೃತಿಕ ನಗರಿ ಮೈಸೂರಿನ ಜಿಲ್ಲಾಧಿಕಾರಿಯಾಗಿ ಕಾರ್ಯ ನಿರ್ವಹಿಸುತ್ತಿರುವ ರೋಹಿಣಿ ಸಿಂಧೂರಿ ಅವರು. ಆದರೆ ನಮ್ಮ ರಾಜಕಾರಣಿಗಳು ರೋಹಿಣಿ ಅವರನ್ನು ವರ್ಗಾವಣೆ ಮಾಡಿದ್ದಾರೆ. ಈಗ ಆಗಿದ್ದೇನು ಗೊತ್ತಾ, ಈ ಕೆಳಗಿನ ವಿಡಿಯೋ ನೋಡಿ
ಕರ್ನಾಟಕ ಕಂಡ, ನಮ್ಮ ದೇಶ ಕಂಡ ಅತ್ಯಂತ ಖಡಕ್ DC ಅಧಿಕಾರಿಗಳಲ್ಲಿ ನಮ್ಮ ರೋಹಿಣಿ ಅವರು ಕೂಡ ಒಬ್ಬರು ಎಂದು ಹೇಳಿದರೆ ತಪ್ಪಾಗಲಾರದು. ಇವರ ಮೇಲೆ ಇಲ್ಲ ಸಲ್ಲದ ಆರೋಪಗಳನ್ನು ಮಾಡಿ ಇವರನ್ನು ರಾಜಕಾರಣಿಗಳು ವರ್ಗಾವಣೆ ಮಾಡಿದ್ದಾರೆ. ಈಗ ನಮ್ಮ ಕರುನಾಡ ದಿಟ್ಟ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರು ಮತ್ತೆ ಮೈಸೂರಿಗೆ ಬರಲು ಆಂಧ್ರದ ಮುಖ್ಯಮಂತ್ರಿಗಳಾದ ಜಗನ್ ಮೊರೆ ಹೋದ್ರಾ ಎಂಬ ಸುದ್ದಿಗಳು ಎಲ್ಲೆಡೆ ಹರಿದಾಡುತ್ತಿದ್ದು, ಇದರ ಬಗ್ಗೆ ಅಸಲಿ ಸತ್ಯ ಏನು ಗೊತ್ತಾ? ಸದ್ಯ ಈ ವಿಡಿಯೋ ಎಲ್ಲೆಡೆ ಸಕತ್ ವೈರಲ್ ಆಗಿದ್ದು, ರೋಹಿಣಿ ಸಿಂಧೂರಿ ಅವರ ಬಗ್ಗೆ ಏನಿದು ಹೊಸ ಸುದ್ದಿ? ಈ ಕೆಳಗಿನ ವಿಡಿಯೋ ನೋಡಿ ನಿಮ್ಮ ಅನಿಸಿಕೆ ತಿಳಿಸಿರಿ (ವಿಡಿಯೋ ಕೃಪೆ – ಸಂಸ್ಕಾರ ಸೌರಭ)
ರೋಹಿಣಿ ಸಿಂಧೂರಿ ಮೂಲತಃ ತೆಲಂಗಾಣದವರು. ಕರ್ನಾಟಕದ ಅಧಿಕಾರಿಯಾಗಿ ಕಾರ್ಯ ನಿರ್ವಹಿಸುತ್ತಿರುವ ಇವರು ಬಹಳ ಚೆನ್ನಾಗಿ ಕನ್ನಡ ಮಾತನಾಡುವುದನ್ನು ಕಲಿತಿದ್ದಾರೆ. ರೋಹಿಣಿ ಸಿಂಧೂರಿ ಅವರು ಹುಟ್ಟಿದ್ದು 1984, ಮೇ 30ರಂದು. ಓದಿನಲ್ಲಿ ಬಹಳ ಆಸಕ್ತಿ ಇದ್ದ ಇವರು, ಕೆಮಿಕಲ್ ಇಂಜಿನಿಯರಿಂಗ್ ನಲ್ಲಿ ಪದವಿ ಪಡೆದರು. ಜನಸೇವೆ ಮಾಡಬೇಕು, ಸಿವಿಲ್ ಸರ್ವೆಂಟ್ ಆಗಬೇಕು ಎಂಬ ಉದ್ದೇಶದಿಂದ ಯು.ಪಿ.ಎಸ್.ಸಿ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಬೇಕು ಎಂದು ನಿರ್ಧರಿಸಿ, ಬಹಳ ಶ್ರ-ಮ ಪಟ್ಟು 2009 ರಲ್ಲಿ 43ನೇ ರಾಂಕ್ ಪಡೆದು ಯು.ಪಿ.ಎಸ್.ಸಿ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿ, ಕರ್ನಾಟಕದ ಕೇಡರ್ ನ ಭಾರತೀಯ ಸೇವಾಧಿಕಾರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ಹಾಸನ ತುಮಕೂರು ಮತ್ತು ಮಂಡ್ಯ ಜಿಲ್ಲೆಯ ಅಧಿಕಾರಿಯಾಗಿ ರೋಹಿಣಿ ಸಿಂಧೂರಿ ಅವರು ಮಾಡಿರುವ ಕೆಲಸಗಳನ್ನು ಅಲ್ಲಿನ ಜನರು ಮರೆಯುವಂತಿಲ್ಲ. ಮಂಡ್ಯದಲ್ಲಿ ಪ್ರತಿಯೊಂದು ಮನೆಗೂ ಶೌ-ಚಾಲಯ ಇರಬೇಕು ಎಂದು ಸ್ವಚ್ಚ್ ಭಾರತ್ ಯೋಜನೆ ಕುರಿತು ರೋಹಿಣಿ ಸಿಂಧೂರಿ ಅವರು ಮಾಡಿದ ಕೆಲಸವನ್ನು ಮೆಚ್ಚಿ ಭಾರತ ಸರ್ಕಾರ ಅವರಿಗೆ ಗೌರವಿಸಿತು. ಇನ್ನು 10ನೆ ತರಗತಿ ರಿಸಲ್ಟ್ ನಲ್ಲಿ ಹಿಂದಿದ್ದ ಹಾಸನ ಜಿಲ್ಲೆಯನ್ನು ಮೊದಲ ಸ್ಥಾನಕ್ಕೆ ತಂದ ಕೀರ್ತಿ ರೋಹಿಣಿ ಅವರಿಗೆ ಸಲ್ಲುತ್ತದೆ. ತುಮಕೂರು ಜಿಲ್ಲೆಯಲ್ಲಿ ಕೂಡ ಬಹಳಷ್ಟು ಒಳ್ಳೆಯ ಕೆಲಸಗಳನ್ನು ಮಾಡಿಸಿದ್ದಾರೆ ರೋಹಿಣಿ ಸಿಂಧೂರಿ.
ಈ ಜಿಲ್ಲೆಗಳ ಜನರು, ರೋಹಿಣಿ ಸಿಂಧೂರಿ ಅವರು ಮತ್ತೊಮ್ಮೆ ತಮ್ಮ ಜಿಲ್ಲೆಗೆ ಅಧಿಕಾರಿಯಾಗಿ ಬರಬೇಕು ಎಂದು ಅಪೇಕ್ಷೆ ಪಡುತ್ತಾರೆ. ಇಂದಿಗೂ ಕೂಡ ರೋಹಿಣಿ ಸಿಂಧೂರಿ ಅವರನ್ನು ನೆನೆಯುತ್ತಾರೆ. ಯಾವುದೇ ರೀತಿಯ ಪೊಲಿಟಿಕಲ್ ಪ್ರೆಶರ್ ಗಳಿದ್ದರೂ, ಏನೇ ಅಡೆತಡೆ ಬಂದರು, ಧೈರ್ಯ ಕಳೆದುಕೊಳ್ಳದೆ ತಾವು ಕೆಲಸ ಮಾಡುತ್ತಿದ್ದ ಜಿಲ್ಲೆಗೆ ಒಳ್ಳೆಯದನ್ನೇ ಮಾಡಿದ್ದಾರೆ. ಪ್ರಸ್ತುತ ಮೈಸೂರಿನ ಜಿಲ್ಲಾಧಿಕಾರಿಯಾಗಿ ಕಾರ್ಯ ನಿರ್ವಹಿಸುತ್ತಿರುವ ರೋಹಿಣಿ ಅವರು, ಕ-ರೊನಾ ಸಮಯದಲ್ಲಿ ಯಾವುದೇ ಸಮಸ್ಯೆ ಆಗದಂತೆ ದಸರಾ ಹಬ್ಬವನ್ನು ನಡೆಸಿಕೊಟ್ಟರು. ರೋಹಿಣಿ ಸಿಂದೂರಿ ಅವರಿಗೆ ಬಹಳಷ್ಟು ಜನ ಅಭಿಮಾನಿಗಳು ಇದ್ದಾರೆ, ರೋಹಿಣಿ ಸಿಂಧೂರ್ ಅವರು ಕಳೆದ ವರ್ಷ ಟೆಡ್ ಟಾಕ್ಸ್ ನಲ್ಲಿ ಕೂಡ ಪಾಲ್ಗೊಂಡು ಅವರ ಜೀವನದ ಕಥೆಯ ಬಗ್ಗೆ ಮಾತಾಡಿದ್ದರು.
ರೋಹಿಣಿ ಅವರ ವೈಯಕ್ತಿಕ ಜೀವನದ ವಿಷಯಕ್ಕೆ ಬರುವುದಾದರೆ, ಯು.ಪಿ.ಎಸ್.ಸಿ ಪರೀಕ್ಷೆ ಕ್ಲಿಯರ್ ಮಾಡಿದ ನಂತರ ಸುಧೀರ್ ಅವರೊಡನೆ ವಿವಾಹವಾದರು. ಈ ದಂಪತಿಗೆ ಒಂದು ಗಂಡು ಮಗು ಮತ್ತು ಒಂದು ಹೆಣ್ಣು ಮಗು ಇದೆ. ರೋಹಿಣಿ ಅವರ ಪತಿ ಸುಧೀರ್, ಸಾಫ್ಟ್ ವೇರ್ ಇಂಜಿನಿಯರ್. ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದಾರೆ. ರೋಹಿಣಿ ಅವರಿಗೆ ಒಬ್ಬ ತಂಗಿ ಇದ್ದಾರೆ ಅವರು ವೈದ್ಯೆ. ಅವರು ಕೂಡ ಬೆಂಗಳೂರಿನಲ್ಲೇ ಕೆಲಸ ಮಾಡುತ್ತಿದ್ದಾರೆ. ಹುಟ್ಟಿದ್ದು ತೆಲಂಗಾಣ ಆದರೂ ಕರ್ನಾಟಕದಲ್ಲಿ ಕನ್ನಡ ಕಲಿತು, ನಮ್ಮ ನಾಡಿಗೆ ಒಳ್ಳೆಯದನ್ನು ಮಾಡುತ್ತಿರುವ ರೋಹಿಣಿ ಅವರು ಎಲ್ಲಾ ಹೆಣ್ಣುಮಕ್ಳಳಿಗೂ ಮಾದರಿ. ರೋಹಿಣಿ ಸಿಂಧೂರಿ ಅವರ ಕುಟುಂಬದ ಸುಂದರ ಕ್ಷಣಗಳನ್ನು ನೀವು ಇಲ್ಲಿ ನೋಡಬಹುದು!
ರೋಹಿಣಿ ಸಿಂಧೂರಿ ಯಂತೆ ಸಾಕಷ್ಟು ಯುವಕರು ನಮ್ಮ ನಾಡಿನ ಸೇವೆಗಾಗಿ ಬರಬೇಕು ಎಂದು ನಮ್ಮ ಆಸೆ. ರೋಹಿಣಿ ಸಿಂಧೂರಿ ಅವರ ಅದ್ಭುತ ಕೆಲಸಗಳಿಗೆ ನಮ್ಮ ಕಡೆ ಇಂದ ಒಂದು ಸಲಾಂ! ಈ ಸುದ್ದಿ ಇಷ್ಟ ವಾಗಿದ್ದಲ್ಲಿ ಇದನ್ನು ಲೈಕ್ ಮಾಡಿ ಶೇರ್ ಮಾಡಿ ಹಾಗು ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ತಪ್ಪದೆ ಕಾಮೆಂಟ್ ಮೂಲಕ ನಮಗೆ ತಿಳಿಸಿರಿ. ಕನ್ನಡ ಚಿತ್ರಗಳ ಬಗ್ಗೆ, ಕನ್ನಡ ನಾಡಿನ ಬಗ್ಗೆ, ಕನ್ನಡ ಕಿರುತೆರೆಯ ಬಗ್ಗೆ, ಕನ್ನಡ ನಟ ನಟಿಯರ ಬಗ್ಗೆ, ಇಂತಹ ಮತ್ತಷ್ಟು ಉಪಯುಕ್ತ ಮಾಹಿತಿಗಳಿಗಾಗಿ ನಮ್ಮ ಪೇಜನ್ನು ಇಂದೇ ಫಾಲೋ ಮಾಡಿ. ಈ ಸುದ್ದಿ ಇಷ್ಟವಾಗಿದ್ದಲ್ಲಿ ಇದನ್ನು ಲೈಕ್ ಮಾಡಿ ನಿಮ್ಮ ಸ್ನೇಹಿತರ ಜೊತೆಗೆ ಶೇರ್ ಮಾಡಿ.
ಮಾಹಿತಿ ಕೃಪೆ: news67daily.com