ಆಕಸ್ಮಾತ್ ಆಗಿ ದೇಹದ ಮೇಲೆ ಹಲ್ಲಿ ಬಿದ್ದರೆ ಏನು ಮಾಡಬೇಕು? ಯಾವ ಭಾಗದ ಮೇಲೆ ಬಿದ್ದರೆ ನಿಮ್ಮ ಅದೃಷ್ಟ ಖುಲಾಯಿಸುತ್ತೆ ಗೊತ್ತಾ?

in Helath-Arogya/Kannada News/News 1,293 views

ನಮ್ಮ ಪೂರ್ವಜರ ಪೀಳಿಗೆಯಿಂದ ಇಂದಿನ ಪೀಳಿಗೆಯವರೆಗೂ ಕೂಡ ಈ ಒಂದು ಹಲ್ಲಿ ಮೈ ಮೇಲೆ ಬಿದ್ದರೆ ಅಪಶಕುನ ಎಂಬ ಮಾತು ಕೇಳಿ ಬರುತ್ತಿರುವುದು ತೀರ ಸಾಮಾನ್ಯವಾಗಿದೆ ಎನ್ನಬಹುದು. ಮನೆಯ ಗೋಡೆಗಳ ಮೂಲೆಯಲ್ಲಿ ಹಲ್ಲಿ ಹೆಚ್ಚಾಗಿ ಕಾಣಿಸುತ್ತದೆ. ಹಲ್ಲಿಗಳು ನಮ್ಮ ಮೈ ಮೇಲೆ ಬಿದ್ದ ಕೂಡಲೇ ಸ್ನಾನ ಮಾಡಬೇಕು, ದೇವರಿಗೆ ಒಂದು ಹರೆಕೆಯನ್ನು ಕಟ್ಟಿಕೊಳ್ಳಬೇಕು. ದೋಷ ಪರಿಹಾರ ಮಾಡಿಕೊಳ್ಳಬೇಕು ಎಂಬ ಹಲವು ರೀತಿಯ ಮಾತುಗಳನ್ನು ನಮ್ಮ ಹಿರಿಯರು ಹೇಳುತ್ತಾರೆ. ನಮ್ಮ ಹಿಂದಿನ ತಲೆಮಾರಿನವರು ಮಾತ್ರವಲ್ಲ, ಇಂದಿನ ಯುಗದವರು ಕೂಡ ಇದನ್ನು ನಂಬುತ್ತಾರೆ. ಹಾಗೂ ಅವರು ಕೂಡ ಇದೆ ಮಾತನ್ನು ಎಲ್ಲರಿಗೂ ಹೇಳುತ್ತಾರೆ.

Advertisement

ಪ್ರತಿಯೊಬ್ಬರ ಮನೆಯಲ್ಲೂ ಹಲ್ಲಿ ಒಂದು ಶಾಶ್ವತ ಅತಿಥಿಯಾಗಿರುತ್ತದೆ. ಹಲ್ಲಿಯನ್ನು ಕಂಡರೆ ಹೆದರಿಕೊಂಡು ಒಂದು ಮೈಲಿ ದೂರ ಹೋಗುವ ಜನರೇ ಹೆಚ್ಚು. ಹಲ್ಲಿಯನ್ನು ಕಂಡರೆ ಸಾಕು ಬೆಚ್ಚಿ ಬೀಳುವುದು, ಇಂಥ ಘಟನೆಗಳು ಹೆಚ್ಚು ಎಂದೇ ಹೇಳಬಹುದು. ಹಲ್ಲಿಯನ್ನು ಓಡಿಸಲು ನಮ್ಮ ಜನ ಆನೇಕ ತಂತ್ರಗಳನ್ನು ಪ್ರಯೋಗ ಮಾಡುತ್ತಾರೆ. ಮನೆಯಲ್ಲಿ ಹಲ್ಲಿ ಲೊಚ್ಚಗುಡುವುದು ಅಥವಾ ವಿಪರೀತ ಒಡಾಡುತ್ತಿದ್ದರೆ, ಅದನ್ನು ಸಾಯಿಸಲು ಮುಂದಾಗುತ್ತಾರೆ. ನೀವು ಗಮನಿಸಿ ನೋಡಿ ಹಲ್ಲಿಯನ್ನು ಹೊಡೆಯಲು ಪ್ರಯತ್ನ ಪಟ್ಟರೆ, ಅದು ಕೂಡಲೇ ತನ್ನ ಬಾಲವನ್ನು ಕತ್ತರಿಸಿಕೊಂಡು ಕಾಣೆಯಾಗುತ್ತದೆ.

ಆ ದೃಶ್ಯವನ್ನು ನೋಡಲು ಸ್ವಲ್ಪ ಹಿಂಸೆಯಾಗುತ್ತದೆ. ಹಿರಿಯರ ಮಾತಿನಂತೆ ಹಲ್ಲಿ ಅಡುಗೆಯಲ್ಲಿ ಬಿದ್ದರೆ, ಆ ಅಡುಗೆ ಸಂಪೂರ್ಣವಾಗಿ ವಿಷವಾಗಿ ಪರಿವರ್ತನೆಗೊಂಡಿರುತ್ತದೆ. ಹಿಂದೂ ಪುರಾಣಗಳಲ್ಲಿ ಹಲ್ಲಿಯ ಬಗ್ಗೆ ಒಂದಿಷ್ಟು ಉಲ್ಲೇಖಗಳಿವೆ ಎಂಬುದು ಒಂದು ಮಾತು. ಹಲ್ಲಿಯನ್ನು ಕೆಲವರು ನೋಡಲು ಹಿಂಸೆ ಪಡುತ್ತಾರೆ. ಇನ್ನು ಕೆಲವರು ಹಲ್ಲಿಯನ್ನು ಪೂಜಿಸುತ್ತಾರೆ. ಹೌದು, ಹಲ್ಲಿ ದೀಪಾವಳಿಯ ದಿನದಂದೂ ಗೋಡೆಯ ಮೇಲೆ ಇದ್ದರೆ, ಮನೆಯಲ್ಲಿ ಲಕ್ಷಿಯ ಆಗಮನ ಎಂದು ಕೆಲವರು ನಂಬುತ್ತಾರೆ. ಜೊತೆಗೆ ಯಾವುದಾದರೂ ಗಂಭೀರ ವಿಚಾರಗಳನ್ನು ಮಾತನಾಡುವಾಗ ಹಲ್ಲಿ ಲೊಚ್ಚಗುಟ್ಟರೆ ಅದು ಸತ್ಯ ಎಂಬ ಅರ್ಥಗಳು ನಮ್ಮ ಜನರ ತಲೆಯಲ್ಲಿ ಉಂಟು.

ಹಲ್ಲಿ ಯಾವ ಭಾಗದಲ್ಲಿ ಬಿದ್ದರೆ ಏನು ಲಾಭ, ಯಾವ ತೊಂದರೆ ಎಂಬುದು ಇಲ್ಲಿ ತಿಳಿಸಲಾಗಿದೆ ನೋಡಿ

1. ಮುಖದ ಹುಬ್ಬುಗಳ ಮೇಲೆ ಬಿದ್ದರೆ ಅಕಸ್ಮಿಕ ಧನಲಾಭ ಪ್ರಾಪ್ತಿ.

2. ಗಲ್ಲದ ಮೇಲೆ ಬಿದ್ದರೆ ನಿಮ್ಮ ಜೀವನಕ್ಕೆ ಐಶ್ವರ್ಯ ದೊರೆಯಲಿದೆ.

3. ಮೂಗಿನ ಆಸು-ಪಾಸು ಬಿದ್ದರೆ ಆರೋಗ್ಯ ಹದೆಗೆಡುವ ಪರಿಸ್ಥಿತಿ ಉಂಟು.

4. ಎಡಗೈ ಭಾಗದ ಮೇಲೆ ಬಿದ್ದರೆ ನಿಮ್ಮ ಲೈಂಗಿಕ ಜೀವನ ಸುಗಮವಾಗುತ್ತದೆ.

5. ಕಾಲಿನ ಭಾಗಗಳ ಮೇಲೆ ಬಿದ್ದರೆ ಅಕಸ್ಮಿಕ ದೂರ ಪ್ರಯಾಣ, ವಿದೇಶ ಪ್ರಯಾಣ ಸಂಭವ.

6. ತೊಡೆಗಳ ಮೇಲೆ ಬಿದ್ದರೆ ಕುಟಂಬದಲ್ಲಿ ಒಂದು ಆಶಾಂತಿ, ಮನಸ್ತಾಪ ಉಂಟಾಗುವಂಥ ಸನ್ನಿವೇಶಗಳು.

7. ಬಲಗೈ ಮೇಲೆ ಬಿದ್ದರೆ ತೀರ ಆರೋಗ್ಯ ಸಮಸ್ಯೆ ಕಾಡಲಿದೆ.

8. ಕತ್ತಿನ ಭಾಗದಲ್ಲಿ ಬಿದ್ದರೆ, ಶತ್ರುಗಳ ಸಂಖ್ಯೆ ಕಡಿಮೆಯಾಗುತ್ತದೆ ಎಂಬ ನಂಬಿಕೆ.

ದೀಪಾವಳಿಯ ರಾತ್ರಿ ಹಲ್ಲಿ ಕಂಡರೆ?

ದೀಪಾವಳಿಯ ರಾತ್ರಿ ಹಲ್ಲಿ ಕಂಡರೆ ದೀಪಾವಳಿ ಹಬ್ಬದ ದಿನ ರಾತ್ರಿ ಮನೆಯಲ್ಲಿ ಹಲ್ಲಿಯು ಕಾಣಿಸಿದರೆ ಅತ್ಯಂತ ಶುಭವೆಂದು ಹೇಳಲಾಗುತ್ತದೆ. ಹೀಗೆ ಹಲ್ಲಿ ಕಾಣಿಸುವುದರಿಂದ ಮುಂದಿನ ಜೀವನದಲ್ಲಿ ಸುಖ-ಸಮೃದ್ಧಿ ವೃದ್ಧಿಸುವುದಲ್ಲದೆ, ಆರ್ಥಿಕ ಸಂಕಷ್ಟಗಳು ದೂರಾಗಿ ಲಕ್ಷ್ಮಿ ಕೃಪೆ ಲಭಿಸುವ ಸಂಕೇತವದು ಎಂದು ಹೇಳಲಾಗುತ್ತದೆ.

ಹಲ್ಲಿಗಳು ಜಗಳವಾಡುವುದನ್ನು ನೋಡಿದರೆ?

ಹಲ್ಲಿಗಳು ಪರಸ್ಪರ ಜಗಳವಾಡುವುದು ಅಶುಭದ ಸಂಕೇತವಾಗಿದೆ. ಹಲ್ಲಿಗಳ ಜಗಳವನ್ನು ನೋಡುವುದು ಅಶುಭವೆಂದು, ಇದು ಮನೆಯ ಸದಸ್ಯರಿಗೆ ಎದುರಾಗುವ ಸಮಸ್ಯೆಯನ್ನು ಮತ್ತು ಪರಸ್ಪರ ಮನಸ್ತಾಪವಾಗುವ ಸಂಕೇತವನ್ನು ಸೂಚಿಸುತ್ತದೆ. ಹಾಗಾಗಿ ಇಂಥ ಸಮಯದಲ್ಲಿ ಮನೆಯಲ್ಲಿ ಜಗಳ, ಮನಸ್ಥಾಪ ಆಗದಂಂತೆ ನೋಡಿಕೊಳ್ಳಬೇಕು.

ಹಲ್ಲಿಗಳು ಕೂಡುವುದನ್ನು ನೋಡಿದರೆ

ಹಲ್ಲಿಗಳ ಸಮಾಗಮವು ಅಕಸ್ಮಾತ್ ಕಣ್ಣಿಗೆ ಬಿದ್ದರೆ ಅದನ್ನು ಶುಭ ಶಕುನವೆಂದು ಹೇಳಲಾಗುತ್ತದೆ. ಇದರಿಂದ ಶುಭ ವಾರ್ತೆಯನ್ನು ಕೇಳಬಹುದು, ಬಂಧು-ಮಿತ್ರರ ಭೇಟಿಯಾಗಬಹುದು, ಒಟ್ಟಾರೆ ಹಲ್ಲಿಗಳು ಕೂಡುವುದು ಅಕಸ್ಮಾತ್ ಕಂಡರೆ ಶುಭವೆಂದು ಹೇಳಲಾಗುತ್ತದೆ.

Advertisement
Share this on...