ಫಿಲಿಪೈನ್ಸ್ನಲ್ಲಿ ವಾಸಿಸುವ ಬಾಲಕಿಯೊಬ್ಬಳು ಆನ್‌ಲೈನ್‌ನಲ್ಲಿ ಊಟವನ್ನ ಆರ್ಡರ್ ಮಾಡಿದಾಗ ಆಕೆಯ ಜೊತೆ ಒಂದು ವಿಶೇಷ ಘಟನೆ ಸಂಭವಿಸಿದೆ, ಅದು ಎಲ್ಲರಿಗೂ ಆಶ್ಚರ್ಯವನ್ನುಂಟು ಮಾಡಿತು. ಟೆಕ್ನಿಕಲ್ ಅಪ್ಲಿಕೇಶನ್‌ನ ದೋಷದಿಂದಾಗಿ, 42 ಡೆಲಿವರಿ ಬಾಯ್ ಗಳು ಆರ್ಡರ್ ಮಾಡಿದ ಊಟದೊಂದಿಗೆ ಹುಡುಗಿಯ ಮನೆಗೆ ತಲುಪಿದ್ದಾರೆ. ಈ ವೀಡಿಯೊ ಇದೀಗ ಸಾಕಷ್ಟು ವೈರಲ್ ಆಗಿದೆ.
ಪ್ರಸ್ತುತ ಸಮಯದಲ್ಲಿ, ಪ್ರಪಂಚವು ಆಧುನಿಕ ಅಪ್ಲಿಕೇಶನ್‌ಗಳು ಮತ್ತು ಆಧುನಿಕ ವಿಷಯಗಳೊಂದಿಗೆ ಹೆಚ್ಚು ಸಂಪರ್ಕ ಸಾಧಿಸಲು ಪ್ರಾರಂಭಿಸಿದೆ. ಇಂದಿನ ಕಾಲದಲ್ಲಿ, ಜನರು ಮನೆಯಿಂದ ಹೊರಗೆ ಹೋಗಲು ಇಷ್ಟಪಡುವುದಿಲ್ಲ ಮತ್ತು ಮನೆಯಲ್ಲಿ ಕುಳಿತುಕೊಂಡೇ ಆನ್‌ಲೈನ್‌ನಲ್ಲಿ ಬುಕ್ ಮಾಡಲು ಆದ್ಯತೆ ನೀಡುತ್ತಾರೆ, ಉದಾಹರಣೆಗೆ ಆನ್ಲೈನ್ ಡ್ರೆಸ್ ಖರೀದಿಸುವುದು, ಊಟ ಆರ್ಡರ್ ಮಾಡುವುದು ಅಥವಾ ಮನೆಯಲ್ಲೇ ಕುಳಿತುಕೊಂಡು ಟಿಕೆಟ್ ಬುಕ್ ಮಾಡುವುದು ಇತ್ಯಾದಿ.
ಕರೋನಾ ವೈರಸ್ ಹರಡುತ್ತಿರುವುದರಿಂದ, ಜನರು ಹೆಚ್ಚೆಚ್ಚು ಆನ್‌ಲೈನ್ ಆರ್ಡರ್ ಮಾಡಲು ಪ್ರಾರಂಭಿಸಿದ್ದಾರೆ. ಮನೆಯಲ್ಲಿ ಕುಳಿತುಕೊಂಡೇ ಹೆಚ್ಚಿನ ಜನರು ಆನ್‌ಲೈನ್‌ನಲ್ಲಿ ಊಟವನ್ನು ಆರ್ಡರ್ ಮಾಡುತ್ತಾರೆ, ಇದರಲ್ಲಿನ ಟೆಕ್ನಿಕಲ್ ದೋಷಗಳಿಂದಾಗಿ ಕೆಲವೊಮ್ಮೆ ನಾವು ಆರ್ಡರ್ ಮಾಡದಿರುವ ಊಟವೂ ಕೂಡ ಬರುತ್ತದೆ.
ಫಿಲಿಪೈನ್ಸ್ನಲ್ಲಿ ವಾಸಿಸುವ ಆ ಬಾಲಕಿಯೊಂದಿಗೂ ಇದೇ ರೀತಿಯ ಘಟನೆ ಸಂಭವಿಸಿದೆ. ಈ ಘಟನೆ ಫಿಲಿಪೈನ್ಸ್‌ನ ಶೆಬು ನಗರದಿಂದ ವರದಿಯಾಗಿದೆ. ಒಬ್ಬ ವಿದ್ಯಾರ್ಥಿನಿಯು ಆನ್‌ಲೈನ್‌ನಲ್ಲಿ ಊಟಕ್ಕೆ ಆರ್ಡರ್ ಮಾಡಿದಾಗ, 42 ಡೆಲಿವರಿ ಬಾಯ್ ಗಳು ಆಕೆಯ ಮನೆಗೆ ಊಟವನ್ನ ತಂದಿದ್ದಾರೆ. ಹುಡುಗಿ ತನ್ನ ಮನೆಯ ಬಾಗಿಲು ತೆರೆದ ತಕ್ಷಣ, ಅನೇಕ ಡೆಲಿವರಿ ಹುಡುಗರು ಊಟವನ್ನ ತಂದಿರುವುದನ್ನು ಆಕೆ ನೋಡಿ ಆಶ್ಚರ್ಯಪಟ್ಟಳು ಮತ್ತು ಅವಳ ಇಡೀ ಮನೆಯ ರಸ್ತೆ ತುಂಬಿ ತುಳುಕುತ್ತಿತ್ತು, ಅಲ್ಲಿ ಜನಸ್ತೋಮವೇ ನೆರೆದಿತ್ತು.
ಹೊರಗೆ ನಿಂತಿರುವ ಜನರೆಲ್ಲರೂ ಈ ದೃಶ್ಯವನ್ನೇ ಕಣ್ಣುಬಿಡದೇ ನೋಡುತ್ತಲೇ ಇದ್ದರು. ತಾಂತ್ರಿಕ ಅಪ್ಲಿಕೇಶನ್‌ನ ದೋಷದಿಂದಾಗಿ ಹೋಗಾಗಿದೆ ಎಂದು ಹುಡುಗಿ ತಿಳಿದುಕೊಂಡಳು. ಆ ಬೀದಿಯಲ್ಲಿ ವಾಸಿಸುವ ಡಾನ್ ಕೀನ್ ಸೌರೆಜ್ ಘಟನೆಯ ವಿಡಿಯೋವನ್ನು ರೆಕಾರ್ಡ್ ಮಾಡಿ ಫೇಸ್‌ಬುಕ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.
ಊಟವನ್ನ ಆರ್ಡರ್ ಮಾಡಿದ ಹುಡುಗಿಗೆ ಕೇವಲ 7 ವರ್ಷ. ತಾಯಿ ಮತ್ತು ತಂದೆ ಮನೆಯಲ್ಲಿ ಅವರೊಂದಿಗೆ ಇರಲಿಲ್ಲ ಮತ್ತು ಅವರು ದಾದಿಯೊಂದಿಗೆ ಮನೆಯಲ್ಲಿ ಊಟ ಮಾಡಲು ಆರ್ಡರ್ ಮಾಡಿದ್ದಳು, ಇದರಿಂದಾಗಿ ಆಕೆ ಆನ್‌ಲೈನ್‌ನಲ್ಲಿ ಊಟವನ್ನ ಆರ್ಡರ್ ಮಾಡಿದ್ದಳು ಎಂದು ಅವರು ಹೇಳಿದರು.
ಈ ವೀಡಿಯೊವನ್ನು ಅವರು ನವೆಂಬರ್ 25 ರಂದು ಹಂಚಿಕೊಂಡಿದ್ದಾರೆ, ಇದು ಇಲ್ಲಿಯವರೆಗೆ 3 ಲಕ್ಷಕ್ಕೂ ಹೆಚ್ಚು ವೀಕ್ಷಣೆಗಳನ್ನು ಗಳಿಸಿದೆ. ಇದರೊಂದಿಗೆ 800 ಕ್ಕೂ ಹೆಚ್ಚು ಲೈಕ್‌ಗಳು ಮತ್ತು 100 ಕ್ಕೂ ಹೆಚ್ಚು ಕಾಮೆಂಟ್‌ಗಳನ್ನು ಸ್ವೀಕರಿಸಲಾಗಿದೆ. ತಾಂತ್ರಿಕ ತೊಂದರೆಗಳು ಅನಾನುಕೂಲಗಳು ಮತ್ತು ಅನುಕೂಲಗಳನ್ನು ಹೊಂದಿವೆ, ಆದ್ದರಿಂದ ಎರಡಕ್ಕೂ ಒಬ್ಬರು ಸಿದ್ಧರಾಗಿರಬೇಕು.
ವಿಡಿಯೋ ನೋಡಿ