ಭಾನುವಾರ (ಆ 1) ಸಂಜೆ ಸಂಪುಟ ರಚನೆಯ ಸಂಬಂಧ ದೆಹಲಿಗೆ ತೆರಳಿದ್ದ ನೂತನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರಿಗೆ ಗ್ರೀನ್ ಸಿಗ್ನಲ್ ಸಿಕ್ಕಿದ್ದು ಮಂಗಳವಾರ (ಆ 3) ತಡರಾತ್ರಿ. ಕೆಲವೊಂದು ವಿಚಾರಕ್ಕೆ ಸಂಬಂಧಿಸಿದಂತೆ ವರಿಷ್ಠರಿಗೆ ಸ್ಪಷ್ಟತೆ ಇರದೇ ಇದ್ದ ಕಾರಣಕ್ಕಾಗಿ ಹಲವು ಸುತ್ತಿನ ಮಾತುಕತೆಗಳು ನಡೆದವು.
ಪೂರ್ವ ನಿಗದಿತ ಕಾರ್ಯಕ್ರಮದ ಪ್ರಕಾರ, ಸೋಮವಾರ ಮಧ್ಯಾಹ್ನವೇ ಬೊಮ್ಮಾಯಿಯವರು ಬೆಂಗಳೂರಿಗೆ ವಾಪಸ್ ಆಗಬೇಕಿತ್ತು. ಆದರೆ, ಲೋಕಸಭಾ ಅಧಿವೇಶನದಿಂದಾಗಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಮತ್ತು ಕೇಂದ್ರ ಗೃಹಸಚಿವ ಅಮಿತ್ ಶಾ ಅವರ ಭೇಟಿ ಸಿಎಂಗೆ ಸಾಧ್ಯವಾಗಿರಲಿಲ್ಲ.
ಕೆಲವೊಂದು ವಿಚಾರಗಳಿಗೆ ಸಲಹೆ ನೀಡಲು ಖುದ್ದು ನಡ್ಡಾ ಅವರಿಗೆ ಸಾಧ್ಯವಾಗದ ಹಿನ್ನಲೆಯಲ್ಲಿ ಅಮಿತ್ ಶಾ ಅವರನ್ನು ಮತ್ತೆ ಬೊಮ್ಮಾಯಿ ಕಾಣಬೇಕಾಯಿತು. ಮೂಲಗಳ ಪ್ರಕಾರ 24 ಸದಸ್ಯರ ತಂಡವನ್ನು ಕಟ್ಟಲು ಹೈಕಮಾಂಡ್ ಅನುಮತಿ ನೀಡಿದೆ ಎಂದು ಹೇಳಲಾಗುತ್ತಿದೆ.
ಬಿಜೆಪಿ ಹೈಕಮಾಂಡಿಗೆ ಒಬ್ಬರ ಹೆಸರನ್ನು ಸಂಪುಟದ ಪಟ್ಟಿಯಲ್ಲಿ ಸೇರಿಸಲು ಗೊಂ ದ ಲ ವಿದ್ದ ಕಾರಣ, ಅಮಿತ್ ಶಾ ಅವರೇ ಇದಕ್ಕೆ ಪರಿಹಾರ ಸೂಚಿಸಬೇಕಾಯಿತು ಎಂದು ಹೇಳಲಾಗುತ್ತಿದೆ. ಬೊಮ್ಮಾಯಿಯವರ ಸತತ ಫಾಲೋ ಅಪ್ ನಿಂದಾಗಿ, ಸಂಪುಟ ರಚನೆ ಇಂದು (ಆ 4) ಸಾಧ್ಯವಾಗುತ್ತಿದೆ. ಆ ಒಂದು ಹೆಸರು ಯಾವುದು?
ಯಡಿಯೂರಪ್ಪನವರು ಯಾವ ಕಾರಣಕ್ಕೂ ಸಂಪುಟ ರಚನೆಯಿಂದ ಬೇ ಸ ರ ಗೊಳ್ಳಬಾರದು
ಸಚಿವ ಸಂಪುಟ ರಚನೆಯ ನಂತರ ಆಗಬಹುದಾದ ಆಕಾಂಕ್ಷಿಗಳ ಗೊಂ ದ ಲ ವನ್ನು ತಿಳಿಗೊಳಿಸುವ ನಿಟ್ಟಿನಲ್ಲಿ ಜೆ.ಪಿ.ನಡ್ಡಾ ಅವರು ಬೊಮ್ಮಾಯಿಯವರ ಜೊತೆ ಸುದೀರ್ಘವಾಗಿ ಚರ್ಚಿಸಿದರು ಎಂದು ಹೇಳಲಾಗುತ್ತಿದೆ. ಜೊತೆಗೆ, ಯಡಿಯೂರಪ್ಪನವರು ಯಾವ ಕಾರಣಕ್ಕೂ ಇದರಿಂದ ಬೇ ಸ ರ ಗೊಳ್ಳಬಾರದು, ಯಾವುದೇ ಷ ರ ತ್ತಿ ಲ್ಲ ದೇ ಮುಖ್ಯಮಂತ್ರಿ ಸ್ಥಾನದಿಂದ ಅವರು ಕೆಳಗಿಳಿದಿದ್ದಾರೆ ಎನ್ನುವ ಸೂಚನೆಯನ್ನೂ ನಡ್ಡಾ ಅವರು ಬೊಮ್ಮಾಯಿ ಅವರಿಗೆ ನೀಡಿದ್ದಾರೆ ಎನ್ನುವ ಮಾಹಿತಿಯಿದೆ.
ವಿಜಯೇಂದ್ರ ಅವರನ್ನು ಸಂಪುಟದಲ್ಲಿ ಸೇರಿಸಿಕೊಳ್ಳಬೇಕೇ ಎನ್ನುವ ವಿಚಾರ
ಯಡಿಯೂರಪ್ಪನವರ ಪುತ್ರ ಬಿ.ವೈ.ವಿಜಯೇಂದ್ರ ಅವರನ್ನು ಸಂಪುಟದಲ್ಲಿ ಸೇರಿಸಿಕೊಳ್ಳಬೇಕೇ ಎನ್ನುವ ವಿಚಾರವೇ ಸಂಪುಟದ ಪಟ್ಟಿ ವಿಳಂಬವಾಗಲು ಕಾರಣವಾಯಿತು ಎಂದು ಹೇಳಲಾಗುತ್ತಿದೆ. ಸಿಎಂ ಬೊಮ್ಮಾಯಿ ಮೂರು ಸಂಭಾವ್ಯ ಪಟ್ಟಿಯನ್ನು ಹೈಕಮಾಂಡ್ ಬಳಿ ತೆಗೆದುಕೊಂಡು ಹೋಗಿದ್ದರು. ಆ ಮೂರೂ ಪಟ್ಟಿಯಲ್ಲಿ ವಿಜಯೇಂದ್ರ ಅವರಿಗೆ ಸಚಿವ ಸ್ಥಾನ ನೀಡಲು ಬೊಮ್ಮಾಯಿ ಶಿಫಾರಸನ್ನು ಮಾಡಿದ್ದರು. ಈ ವಿಚಾರದಲ್ಲಿ ಫೈನಲ್ ಕಾಲ್ ತೆಗೆದುಕೊಳ್ಳಲು ವರಿಷ್ಠರು ಸಮಯ ತೆಗೆದುಕೊಂಡರು.
ಆ ಒಂದು ಹೆಸರೇ ನೂತನ ಸಂಪುಟದ ಪಟ್ಟಿ ವಿಳಂಬವಾಗಲು ಕಾರಣ!
ಪಕ್ಷದೊಳಗೆ ಮತ್ತು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕೆಲವು ಹಿರಿಯರು ವಿಜಯೇಂದ್ರ ಅವರನ್ನು ಸಂಪುಟದಲ್ಲಿ ಸೇರಿಸಿಕೊಳ್ಳಲು ಶಿಫಾರಸನ್ನು ಮಾಡಿದ್ದರು. ಈ ವಿಚಾರವನ್ನು ಅಮಿತ್ ಶಾ ಅವರ ಜೊತೆ ಮಾತುಕತೆ ನಡೆಸಿ ಅಂತಿಮಗೊಳಿಸಬೇಕಾಗುತ್ತದೆ ಎನ್ನುವ ನಿಲುವಿಗೆ ನಡ್ಡಾ ಬಂದಿದ್ದರು. ಹಾಗಾಗಿ, ಈ ವಿಚಾರದಲ್ಲಿ ಮತ್ತೊಂದು ಸುತ್ತಿನ ಮಾತುಕತೆಯನ್ನು ಅಮಿತ್ ಶಾ ಜೊತೆ ಬೊಮ್ಮಾಯಿ ಮತ್ತು ನಡ್ಡಾ ಮಾಡಬೇಕಾಯಿತು. ಕೊನೆಗೂ, ಈ ವಿಚಾರದಲ್ಲಿ ವರಿಷ್ಠರು ಅಂತಿಮ ನಿರ್ಧಾರಕ್ಕೆ ಬಂದರು. ವಿಜಯೇಂದ್ರ ಅವರು ಸಂಪುಟದಲ್ಲಿ ಸ್ಥಾನ ಪಡೆದಿಲ್ಲ.
ವಿಜಯೇಂದ್ರಗೆ ಒಂದೋ ಡಿಸಿಎಂ ಸ್ಥಾನ, ಇಲ್ಲವೇ ಕ್ಯಾಬಿನೆಟ್ ಬರ್ತ್
ಈ ಹಿಂದೆಯೇ ಒಂದು ಪ್ರಸ್ತಾವನೆ ಬಿಜೆಪಿ ಹೈಕಮಾಂಡ್ ಮುಂದೆ ಇತ್ತು. ಒಂದು ವೇಳೆ, ಲಿಂ ಗಾ ಯ ತ ಸ ಮು ದಾ ಯ ದ ವರು ಅಲ್ಲದೇ ಬೇರೆ ಯಾರಾದರೂ ಸಿಎಂ ಆದರೆ, ವಿಜಯೇಂದ್ರಗೆ ಉಪಮುಖ್ಯಮಂತ್ರಿ ಸ್ಥಾನ, ಲಿಂ ಗಾ ಯ ತ ರೇ ಸಿಎಂ ಆದರೆ, ಬಿಎಸ್ವೈ ಪುತ್ರನಿಗೆ ಕ್ಯಾಬಿನೆಟ್ ಸ್ಥಾನ ನೀಡುವ ಬಗ್ಗೆ ಚರ್ಚೆ ನಡೆದಿತ್ತು ಎಂದು ಹೇಳಲಾಗುತ್ತಿದೆ. ಆದರೆ, ಬೊಮ್ಮಾಯಿ ಸಂಪುಟದಲ್ಲಿ ಡಿಸಿಎಂ ಇರುವುದಿಲ್ಲ ಮತ್ತು ವಿಜಯೇಂದ್ರ ಅವರಿಗೆ ಸಂಪುಟದಲ್ಲಿ ಸ್ಥಾನ ಸಿಗಲಿಲ್ಲ ಎನ್ನುವುದು ಅಂತಿಮವಾಗಿದೆ.