ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ಪಕ್ಷದ ಜನತಾ ದಳ ಯುನೈಟೆಡ್ (ಜೆಡಿಯು) ಹಿರಿಯ ನಾಯಕ ಮತ್ತು ಮಾಜಿ ಎಂಎಲ್‌ಸಿ ಗುಲಾಂ ರಸೂಲ್ ಬಲಿವಿ ಮತ್ತೆ ವಿವಾದಾತ್ಮಕ ಹೇಳಿಕೆ ನೀಡಿದ್ದಾನೆ. ಭಾನುವಾರ (ಫೆಬ್ರವರಿ 12, 2023), ಈತ ಬಾಗೇಶ್ವರ್ ಧಾಮ್ ಸರ್ಕಾರ್ ಪಂಡಿತ್ ಧೀರೇಂದ್ರ ಕೃಷ್ಣ ಶಾಸ್ತ್ರಿ ಅವರನ್ನು ವೇಷಧಾರಿ ಎಂದು ಕರೆದಿದ್ದಾನೆ. ಅಷ್ಟೇ ಅಲ್ಲ, ಬಾಬಾ ರಾಮ್‌ದೇವ್ ಪಾಕಿಸ್ತಾನದ ಭಯೋತ್ಪಾದಕ ಸಂಘಟನೆ ಲಷ್ಕರ್-ಎ-ತೊಯ್ಬಾ ಜೊತೆ ಸಂಪರ್ಕ ಹೊಂದಿರುವುದಾಗಿ ಹೇಳಿದ್ದಾನೆ. ಮೋದಿಗೆ ಪಾಕಿಸ್ತಾನದ ಭಯವಿದ್ದರೆ ಶೇ.30ರಷ್ಟು ಮುಸ್ಲಿಮರನ್ನು ಸೇನೆಗೆ ಸೇರಿಸಿಕೊಳ್ಳಲಿ ಎಂದು ಹೇಳಿದ್ದಾನೆ.
ಬಿಹಾರದ ನವಾದಾದಲ್ಲಿ ಆಯೋಜಿಸಿದ್ದ ಮರ್ಕ್‌ಜಿ ಇದಾರ-ಎ-ಶರಿಯಾ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಬಲಿಯಾವಿ ಮಾತನಾಡಿದ್ದಾನೆ. ಬಾಬಾ ರಾಮ್‌ದೇವ್‌ಗೆ ನೀಡಿರುವ ಜಮೀನು ಹಾಗೂ ಅವರ ಉತ್ಪನ್ನಗಳ ಬಗ್ಗೆ ತನಿಖೆ ನಡೆಸಬೇಕು ಎಂದನು. ಮಾರಾಟವಾಗುತ್ತಿರುವ ಅವರ ಸರಕುಗಳ ಪ್ರಮಾಣ ಮತ್ತು ಅವುಗಳನ್ನು ಎಲ್ಲಿಂದ ತಯಾರಿಸಲಾಗುತ್ತಿದೆ ಎಂಬುದನ್ನೂ ಸಹ ತನಿಖೆ ಮಾಡಬೇಕು. ರಾಮದೇವ್ ಭಾರತೀಯನಲ್ಲ. ಅವರ ಆಸ್ತಿಯನ್ನು ಪರಿಶೀಲಿಸಬೇಕು ಎಂದು ಹೇಳಿದ್ದಾನೆ.
ಪ್ರಧಾನಿ ನರೇಂದ್ರ ಮೋದಿ ಅವರನ್ನು ಗುರಿಯಾಗಿಸಿಕೊಂಡು ಮಾತನಾಡಿದ ಬಲಿಯಾವಿ, “ಪಾಕಿಸ್ತಾನದೊಂದಿಗೆ ವ್ಯವಹರಿಸಲು ಹೆದರುತ್ತಿದ್ದರೆ, ಕೇವಲ 30 ಪ್ರತಿಶತದಷ್ಟು ಮುಸ್ಲಿಮರಿಗೆ ಭಾರತೀಯ ಸೇನೆಯಲ್ಲಿ ಸ್ಥಾನ ನೀಡಲಿ. ಪಾಕಿಸ್ತಾನ ನಮಗೆ ಕ್ಷಿಪಣಿಗಳನ್ನು ತೋರಿಸುತ್ತಿದ್ದಾಗ ನಾಗ್ಪುರದ ಯಾವ ಬಾಬಾನೂ ಉತ್ತರಿಸಲಿಲ್ಲ. ಮುಸಲ್ಮಾನರ ಮಗ ಎಪಿಜೆ ಅಬ್ದುಲ್ ಕಲಾಂ ಮುಂದೆ ಬಂದರು” ಎಂದಿದ್ದಾನೆ.
ಬಾಗೇಶ್ವರ ಧಾಮದ ಮಹಂತ್ ಪಂಡಿತ್ ಧೀರೇಂದ್ರ ಶಾಸ್ತ್ರಿ ಅವರನ್ನು ವೇಷಧಾರಿ ಎಂದು ಕರೆದ ಬಲಿಯವಿ, “ಅವರು ಯಾರೆಂದು ಗೊತ್ತಿಲ್ಲ. ಅವರ ಬಗ್ಗೆ ನನಗೆ ಗೊತ್ತಿಲ್ಲ. ನನಗೆ ಸಂವಿಧಾನ ಮತ್ತು ನ್ಯಾಯಾಲಯ ಗೊತ್ತು. ಇಂತಹ ವೇಷಧಾರಿಗಳಿಗೆ ನಮ್ಮ ದೇಶದಲ್ಲಿ ಸ್ಥಾನವಿಲ್ಲ. ಬಟ್ಟೆ ಮತ್ತು ಮೇಕಪ್‌ನ ಸಹಾಯದಿಂದ ಯಾರೂ ನಮ್ಮ ದೇಶವನ್ನು ದಾರಿತಪ್ಪಿಸಲು ಸಾಧ್ಯವಿಲ್ಲ. ದೇಶದಲ್ಲಿ ದಲಿತರಂತೆ ಮುಸಲ್ಮಾನರಿಗೂ ಕಾಯಿದೆ ಮಾಡಬೇಕು. ಮುಸ್ಲಿಮರ ರಕ್ಷಣೆಗೆ ಕಾನೂನು ರೂಪಿಸಬೇಕು” ಎಂದು ಬಲಿಯಾವಿ ಹೇಳಿದ್ದಾನೆ.
ಕೆಲವು ದಿನಗಳ ಹಿಂದೆ ನೂಪುರ್ ಶರ್ಮಾರನ್ನ ಹುಚ್ಚಿ ಎಂದು ಕರೆದು ಇಡೀ ನಗರವನ್ನು ಕರ್ಬಲಾವನ್ನಾಗಿ (ಖಾಲಿ ಮೈದಾನ) ಮಾಡುವ ಬಗ್ಗೆ ಇದೇ ಬಲಿಯಾವಿ ಮಾತನಾಡಿದ್ದ. ಜೆಡಿಯು ನಾಯಕ ಜನವರಿ 18, 2023 ರಂದು ಜಾರ್ಖಂಡ್‌ನ ಹಜಾರಿಬಾಗ್‌ನಲ್ಲಿ ಮಾತನಾಡುತ್ತ, “ನೀವು ನನ್ನ ಪೈಗಂಬರ್ ಗೌರವಕ್ಕೆ ಕೈ ಹಾಕಿದರೆ, ನಾವು ಕರ್ಬಲಾ ಮೈದಾನದಲ್ಲಿ ಜಮಾಯಿಸಿದ್ದೇವೆ, ಅವರ ಗೌರವಕ್ಕಾಗಿ ನಾವು ಇಡೀ ನಗರವನ್ನೇ ಕರ್ಬಲಾ ಮಾಡುತ್ತೇವೆ. ಜಾತ್ಯತೀತ ಎಂದು ಕರೆದುಕೊಳ್ಳುವ ರಾಜಕೀಯ ಪಕ್ಷಗಳು ಕೂಡ ನೂಪುರ್ ಶರ್ಮಾ ಬಂಧನಕ್ಕೆ ಒತ್ತಾಯಿಸಲಿಲ್ಲ. ಯಾವುದೇ ರಿಯಾಯಿತಿ ಇರುವುದಿಲ್ಲ, ಏಕೆಂದರೆ ನನ್ನ ಜೀವನ ನನ್ನದಲ್ಲ ಮತ್ತು ನನ್ನ ಉಸಿರು ನನ್ನದಲ್ಲ. ರಸೂಲನ ಬೆಳಕಿಲ್ಲದವನು ಬದುಕಬೇಕು. ಸತ್ತ ನಂತರ ಯಾರೂ ಉಳಿಯದ ದಿನ ಬರುತ್ತದೆ ಎಂಬ ಆಸೆಯೊಂದಿಗೆ ನಾವು ಬದುಕುತ್ತಿದ್ದೇವೆ” ಎಂದಿದ್ದ.
ಜಿಹಾದಿಗಳ ನಿದ್ದೆಗೆಡಿಸಿರುವ ಈ ಧೀರೇಂದ್ರ ಶಾಸ್ತ್ರಿ ಯಾರು?
ಮಧ್ಯಪ್ರದೇಶದ ಬಾಗೇಶ್ವರ್ ಧಾಮ್ ಸರ್ಕಾರ್ ಪೀಠಾಧೀಶ್ವರ ಪಂಡಿತ್ ಧೀರೇಂದ್ರ ಕೃಷ್ಣ ಶಾಸ್ತ್ರಿ ಅವರಿಗೂ ವಿವಾದಗಳೊಂದಿಗೂ ಹಳೆಯ ನಂಟಿದೆ. ಇಂತಹ ಪರಿಸ್ಥಿತಿಯಲ್ಲಿ ಈಗ ಅವರು ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. ಧೀರೇಂದ್ರ ಕೃಷ್ಣ ಶಾಸ್ತ್ರಿ ಅವರು ನಾಗ್ಪುರದಲ್ಲಿ ತಮ್ಮ ಕಥಾವಾಚನ ಬಿಟ್ಟು ಹೋಗಿದ್ದಾರೆ ಎಂದು ಅವರ ಮೇಲೆ ಆರೋಪ ಹೊರಿಸಲಾಗುತ್ತಿದೆ. ಅದರ ನಂತರ ಅವರು ತಮ್ಮ ವಿರೋಧಿಗಳಿಗೆ ಮುಟ್ಟಿ ನೋಡಿಕೊಳ್ಳುವಂತಹ ಉತ್ತರ ನೀಡುತ್ತಿದ್ದಾರೆ.
ಬಾಗೇಶ್ವರ ಧಾಮಕ್ಕೆ ಭೇಟಿ ನೀಡುವ ಭಕ್ತರ ಎಲ್ಲಾ ಇಷ್ಟಾರ್ಥಗಳು ಈಡೇರುತ್ತವೆ ಎಂದು ಹೇಳಲಾಗುತ್ತದೆ. ಬಾಗೇಶ್ವರ ಧಾಮ ಸರ್ಕಾರ್ ನ ಪಂಡಿತ್ ಧೀರೇಂದ್ರ ಕೃಷ್ಣ ಶಾಸ್ತ್ರಿ ಅವರ ಕಥಾವಾಚನ ನಡೆಸಲು ಹಾಗು ಅವರ ದರ್ಶನ ಪಡೆಯಲು ನಾಯಕರ ನಡುವೆ ಪೈಪೋಟಿ ಏರ್ಪಟ್ಟಿದೆ. ಬಾಗೇಶ್ವರ ಧಾಮಕ್ಕೆ ಬರುವ ಭಕ್ತರ ಎಲ್ಲಾ ಇಷ್ಟಾರ್ಥಗಳನ್ನು ಬಾಗೇಶ್ವರ ಧಾಮ ಸರ್ಕಾರ್ ಪೀಠ ಪೂರೈಸುತ್ತದೆ ಎಂದು ಹೇಳಲಾಗುತ್ತದೆ.
ಅಷ್ಟಕ್ಕೂ ಯಾರು ಈ ಧೀರೇಂದ್ರ ಕೃಷ್ಣ ಶಾಸ್ತ್ರಿ?
ಧೀರೇಂದ್ರ ಕೃಷ್ಣ ಶಾಸ್ತ್ರಿ ಅವರು ಜುಲೈ 4, 1996 ರಂದು ಮಧ್ಯಪ್ರದೇಶದ ಛತ್ತರ್‌ಪುರ ಬಳಿಯ ಗಡಾಗಂಜ್ ಗ್ರಾಮದಲ್ಲಿ ಜನಿಸಿದರು. ಅವರ ಇಡೀ ಕುಟುಂಬವು ಪ್ರಾಚೀನ ಬಾಗೇಶ್ವರ ಧಾಮ್ ದೇವಾಲಯವಿರುವ ಅದೇ ಗಡಾಗಂಜ್‌ನಲ್ಲಿ ವಾಸಿಸುತ್ತಿದೆ. ಅವರ ಪೂರ್ವಿಕರ ಮನೆಯೂ ಇಲ್ಲೇ ಇದೆ.
ಅವರ ಅಜ್ಜ ಪಂಡಿತ್ ಭಗವಾನ್ ದಾಸ್ ಗರ್ಗ್ ಕೂಡ ಇಲ್ಲೇ ವಾಸಿಸುತ್ತಿದ್ದರು. ಕೃಷ್ಣ ಶಾಸ್ತ್ರಿಯವರ ಅಜ್ಜ ಚಿತ್ರಕೂಟದ ನಿರ್ಮೋಹಿ ಅಖಾಡದಿಂದ ದೀಕ್ಷೆ ಪಡೆದಿದ್ದರು. ನಂತರ ಅವರು ಗಡಾ ಗ್ರಾಮವನ್ನು ತಲುಪಿದರು. ಅಲ್ಲಿ ಅವರು ಬಾಗೇಶ್ವರ ಧಾಮ ದೇವಾಲಯವನ್ನು ನವೀಕರಿಸಿದರು. ಧೀರೇಂದ್ರ ಕೃಷ್ಣ ಅವರ ತಾತ ಕೂಡ ಇಲ್ಲಿ ದರ್ಬಾರ್ ನಡೆಸುತ್ತಿದ್ದರು. ಅವರು ಸನ್ಯಾಸ ಆಶ್ರಮವನ್ನು ತೆಗೆದುಕೊಂಡಿದ್ದರು.
ಧೀರೇಂದ್ರ ಕೃಷ್ಣ ಶಾಸ್ತ್ರಿ ಬಗ್ಗೆ ಏನಿದು ವಿವಾದ?
ಬಾಗೇಶ್ವರ ಧಾಮ ಸರ್ಕಾರ್ ನ ಪಂಡಿತ ಧೀರೇಂದ್ರ ಶಾಸ್ತ್ರಿ ಅವರ ಕಥಾವಾಚನ ಸಂದರ್ಭದಲ್ಲಿ ಜನರ ಸಮಸ್ಯೆಗಳನ್ನು ಆಲಿಸಿ ಪರಿಹರಿಸುತ್ತಾರೆ ಎಂದು ಹೇಳಲಾಗುತ್ತದೆ. ಧೀರೇಂದ್ರ ಶಾಸ್ತ್ರಿಯವರ ಕಥಾವಾಚನದ ಸಮಯದಲ್ಲಿ ದೆವ್ವ ಹಿಡಿದವರಿಂದ ಹಿಡಿದು ರೋಗಗಳವರೆಗೆ ಎಲ್ಲವೂ ಗುಣವಾಗುತ್ತದೆ ಎಂದು ಹೇಳಲಾಗುತ್ತದೆ. ಬಾಬಾ ಬೆಂಬಲಿಗರು ಹೇಳುವಂತೆ ಬಾಗೇಶ್ವರ್ ಧಾಮ್ ಸರ್ಕಾರ್ ವ್ಯಕ್ತಿಯನ್ನ ನೋಡಿದ ತಕ್ಷಣವೇ ಅವರಿಗೆ ಯಾವ ರೀತಿಯ ಸಮಸ್ಯೆಯಿದೆ ಎಂಬುದು ಗೊತ್ತಾಗಿಬಿಡುತ್ತೆ, ಬಳಿಕ ಆ ಸಮಸ್ಯೆಗಳನ್ನ ಪರಿಹರಿಸುತ್ತಾರೆ ಎಂದು ಹೇಳುತ್ತಾರೆ.
ಮತ್ತೊಂದೆಡೆ, ಬಾಗೇಶ್ವರ ಧಾಮ ಸರ್ಕಾರವು ಜನರ ಅರ್ಜಿಗಳನ್ನು ದೇವರ (ಬಾಲಾಜಿ ಹನುಮಾನ್) ಬಳಿ ಕೊಂಡೊಯ್ಯುವ ಕೊಂಡಿಯಾಗಿದೆ, ಜನರ ಸಮಸ್ಯೆಯನ್ನು ಕೇಳಿ ದೇವರೇ ಆ ಸಮಸ್ಯೆಗಳನ್ನ ಪರಿಹರಿಸುತ್ತಾನೆ ಎಂದು ಹೇಳುತ್ತದೆ. ಆದರೆ ಬಾಗೇಶ್ವರ್ ಧಾಮ್ ಸರ್ಕಾರದ ಈ ಮಾತುಗಳನ್ನ ನಾಗಪುರದ ಆಂಧ್ ಶ್ರದ್ಧಾ ನಿರ್ಮೂಲನ ಸಮಿತಿಯು ಪ್ರಶ್ನಿಸಿದೆ. ಅಲ್ಲಿಂದಲೇ ಈ ಇಡೀ ವಿವಾದ ಶುರುವಾಯಿತು.
ಗಢಾ ಛತ್ತರ್‌ಪುರದ ಸಮೀಪವಿರುವ ಸ್ಥಳ. ಇಲ್ಲಿಯೇ ಬಾಗೇಶ್ವರ ಧಾಮವಿದೆ. ಇಲ್ಲಿ ಬಾಲಾಜಿ ಹನುಮಾನ್ ಜೀ ದೇವಸ್ಥಾನವಿದೆ. ಪ್ರತಿ ಮಂಗಳವಾರದಂದು ಬಾಲಾಜಿ ಹನುಮಾನ್ ಜೀ ದರ್ಶನ ಪಡೆಯಲು ಅಪಾರ ಜನಸ್ತೋಮ ಸೇರುತ್ತದೆ. ಕ್ರಮೇಣ ಜನರು ಈ ದರ್ಬಾರ್ ನ್ನ ಬಾಗೇಶ್ವರ್ ಧಾಮ್ ಸರ್ಕಾರ್ ಎಂದು ಕರೆಯಲು ಪ್ರಾರಂಭಿಸಿದರು. ಈ ದೇವಾಲಯವು ನೂರಾರು ವರ್ಷಗಳಷ್ಟು ಹಳೆಯದು ಎಂದು ಹೇಳಲಾಗುತ್ತದೆ.
ಈ ದೇವಾಲಯವನ್ನು 1986 ರಲ್ಲಿ ನವೀಕರಿಸಲಾಯಿತು. 1987 ರ ಸುಮಾರಿಗೆ, ಒಬ್ಬ ಸಂತ ಬಾಬಾ ಜಿ ಸೇತು ಲಾಲ್ ಜಿ ಮಹಾರಾಜ್ ಇಲ್ಲಿಗೆ ಬಂದರು. ಅವರನ್ನು ಭಗವಾನ್ ದಾಸ್ ಜಿ ಮಹಾರಾಜ್ ಎಂಬ ಹೆಸರಿನಿಂದಲೂ ಕರೆಯಲಾಗುತ್ತಿತ್ತು. ಪ್ರಸ್ತುತ ಧಾಮದ ಮುಖ್ಯಸ್ಥರಾದ ಪಂಡಿತ ಧೀರೇಂದ್ರ ಶಾಸ್ತ್ರಿ ಅವರು ಭಗವಾನ್ ದಾಸ್ ಜಿ ಮಹಾರಾಜ್ ಅವರ ಮೊಮ್ಮಗ.
ಇದರ ನಂತರ, 1989 ರಲ್ಲಿ, ಬಾಬಾ ಜಿ ಅವರು ಬಾಗೇಶ್ವರ ಧಾಮದಲ್ಲಿ ಬೃಹತ್ ಮಹಾಯಜ್ಞವನ್ನು ಆಯೋಜಿಸಿದ್ದರು. 2012ರಲ್ಲಿ ಬಾಗೇಶ್ವರ ಧಾಮದ ಸಿದ್ಧ ಪೀಠದಲ್ಲಿ ಭಕ್ತರ ಸಮಸ್ಯೆಗಳ ನಿವಾರಣೆಗಾಗಿ ದರ್ಬಾರ್ ಆರಂಭಿಸಲಾಗಿತ್ತು. ಇದರ ನಂತರ, ಕ್ರಮೇಣ ಬಾಗೇಶ್ವರ ಧಾಮದ ಭಕ್ತರು ಈ ದರ್ಬಾರ್ ನೊಂದಿಗೆ ಸಂಪರ್ಕ ಹೊಂದಲು ಪ್ರಾರಂಭಿಸಿದರು. ಇಲ್ಲಿಗೆ ಬರುವ ಜನರ ಸಮಸ್ಯೆಗಳು ಬಗೆಹರಿಯುತ್ತವೆ ಎಂದು ಹೇಳಿಕೊಳ್ಳುತ್ತಾರೆ.