“ಇದುವರೆಗೂ ಯಾವ ಖಾನ್‌ಗಳ ಜೊತೆಗೂ ಕೆಲಸ ಮಾಡಬೇಕೂಂತ ಅನಿಸೇ ಇಲ್ಲ, ಯಾಕಂದ್ರೆ ಅವರು…”: ಬಾಲಿವುಡ್ ನಿರ್ಮಾಪಕಿ, ನಿರ್ದೇಶಕಿ

in FILM NEWS/ಸಿನಿಮಾ 19,056 views

ಅಮಿತಾಬ್ ಬಚ್ಚನ್, ರಶ್ಮಿಕಾ ಮಂದಣ್ಣ ಮತ್ತು ನೀನಾ ಗುಪ್ತಾ ಅಭಿನಯದ ‘ಗುಡ್ ಬೈ’ (Goodbye) ಚಿತ್ರದ ಟ್ರೈಲರ್ ಕಳೆದ ವರ್ಷ ಬಿಡುಗಡೆಯಾಗಿತ್ತು. ಮುಂಬೈನಲ್ಲಿ ನಡೆದ ಟ್ರೇಲರ್ ಬಿಡುಗಡೆ ಸಮಾರಂಭದಲ್ಲಿ ಬಿಗ್ ಬಿ ಹೊರತಾಗಿ, ರಶ್ಮಿಕಾ ಮಂದಣ್ಣ, ನೀನಾ ಗುಪ್ತಾ ಮತ್ತು ಚಿತ್ರದ ನಿರ್ಮಾಪಕಿ ಏಕ್ತಾ ಕಪೂರ್ ಕಾಣಿಸಿಕೊಂಡಿದ್ದರು. ಏಕ್ತಾ ಕಪೂರ್ ಬಿಗ್ ಬಿ ಜೊತೆ ಸಿನಿಮಾದಲ್ಲಿ ಕೆಲಸ ಮಾಡಿದ್ದು ಇದೇ ಮೊದಲು.

Advertisement

ಪತ್ರಿಕಾಗೋಷ್ಠಿಯಲ್ಲಿ ಏಕ್ತಾ ಕಪೂರ್ ಅವರು ಅಮಿತಾಬ್ ಬಚ್ಚನ್ ಅವರೊಂದಿಗೆ ಕೆಲಸ ಮಾಡುವುದು ತನ್ನ ಬಾಲ್ಯದ ಕನಸಾಗಿತ್ತು ಎಂದು ಹೇಳಿದರು. ತಾನು ಯಾವ ಖಾನ್ ಗಳ ಅಥವಾ ಬೇರೆ ಯಾರೊಂದಿಗೂ ಕೆಲಸ ಮಾಡುವ ಕನಸು ಕಾಣಲಿಲ್ಲ, ಆದರೆ ಸದಾ ಬಿಗ್ ಬಿ ಜೊತೆ ಕೆಲಸ ಮಾಡಲು ಬಯಸಿದ್ದೆ ಎಂದು ಹೇಳಿದ್ದಾರೆ.

‘ಗುಡ್ ಬೈ’ ಚಿತ್ರದ ಟ್ರೇಲರ್ ಬಿಡುಗಡೆಯ ಸಂದರ್ಭದಲ್ಲಿ, ಏಕ್ತಾ ಕಪೂರ್ ಒಂದು ಘಟನೆಯನ್ನ ವಿವರಿಸುತ್ತ ಹೀಗೆ ಹೇಳಿದರು.

“ನನ್ನ ಬಾಲ್ಯದಿಂದಲೂ, ನಾನು ಯಾವಾಗಲೂ ಒಬ್ಬ ವ್ಯಕ್ತಿಯೊಂದಿಗೆ ಕೆಲಸ ಮಾಡುವ ಕನಸು ಕಂಡೆ ಮತ್ತು ಅದು ಬಿಗ್ ಬಿ. ಅಮಿತ್ ಜಿ ಅವರ ಮನೆಯಲ್ಲಿ ಬರ್ತ್ ಡೇ ಪಾರ್ಟಿಗೆ ಹೋಗುತ್ತಿದ್ದೆ. ಶ್ವೇತಾ ಮತ್ತು ಅಭಿಷೇಕ್ ಬಚ್ಚನ್ ನನ್ನ ಸ್ನೇಹಿತರು. ಅಮಿತಾಭ್ ಸರ್ ಒಮ್ಮೆ ನನ್ನ ತಂದೆಗೆ (ಜಿತೇಂದ್ರ) ನಾನು ಇಡೀ ದಿನ ನನ್ನನ್ನೇ ನೋಡುತ್ತಾ ಕುಳಿತಿದ್ದಳು ಎಂದು ಹೇಳಿದ್ದರು. ನಾನು ಯಾರೊಂದಿಗೂ ಕೆಲಸ ಮಾಡಲು ಬಯಸುವುದಿಲ್ಲ ಎಂದು ನಾನು ಭಾವಿಸುತ್ತೇನೆ. ಶ್ರೀ ಅಮಿತಾಬ್ ಬಚ್ಚನ್ ಅವರೊಂದಿಗೆ ಕೆಲಸ ಮಾಡುವುದು ನನ್ನ ಕನಸಾಗಿತ್ತೇ ಹೊರತು ಯಾವುದೇ ಖಾನ್ ಗಳಾಗಲಿ ಅಥವಾ ಬೇರೆಯವರೊಂದಿಗೆ ಕೆಲಸ ಮಾಡಬೇಕಂತ ಎಂದಿಗೂ ಅನಿಸಿರಲಿಲ್ಲ. ಕೊನೆಗೂ ನನ್ನ ಕನಸು ನಿಜವಾಯಿತು. ಇಂತಹ ಸಿನಿಮಾದಲ್ಲಿ ಕೆಲಸ ಮಾಡಿದ ಅನುಭವವೇ ಬೇರೆ” ಎಂದರು.

ತಮ್ಮ ಸೋಶಿಯಲ್ ಮೀಡಿಯಾ ಅಕೌಂಟ್ ಗಳಲ್ಲಿ ಟ್ರೇಲರ್ ಅನ್ನು ಹಂಚಿಕೊಂಡ ಏಕ್ತಾ, “ಫ್ಯಾಮಿಲಿ ಬೌಂಡಿಂಗ್ ಬಗ್ಗೆಯಂತೂ ಕೇಳಿರುತ್ತೀರ, ಆದರೆ ಮೊದಲ ಬಾರಿಗೆ ಫ್ಯಾಮಿಲಿ ಟ್ಯೂನಿಂಗ್ ಅನ್ನು ನೋಡಲಿದ್ದೀರಿ! ಫ್ಯಾಮಿಲಿ ಡ್ರಾಮಾ ಚಿತ್ರದಲ್ಲಿ ನಿಮಗೆ ಕಾಮಿಡಿ, ಸಾಕಷ್ಟು ಎಮೋಷನಲ್ ಮತ್ತು ಪ್ರೀತಿಯನ್ನು ನೋಡಲು ಸಿಗುತ್ತದೆ” ಎಂದು ಬರೆದಿದ್ದಾರೆ.

ಫ್ಯಾಮಿಲಿ ಡ್ರಾಮಾ ಚಿತ್ರ ‘ಗುಡ್‌ಬೈ’ನಲ್ಲಿ ಅಮಿತಾಬ್ ಬಚ್ಚನ್ ರಶ್ಮಿಕಾ ಮಂದಣ್ಣ ಅವರ ತಂದೆಯ ಪಾತ್ರವನ್ನು ನಿರ್ವಹಿಸಿದ್ದಾರೆ. ಈ ಚಿತ್ರದ ಮೂಲಕ ರಶ್ಮಿಕಾ ಬಾಲಿವುಡ್‌ಗೆ ಪಾದಾರ್ಪಣೆ ಮಾಡುತ್ತಿದ್ದಾರೆ. ನಿರ್ದೇಶಕ ವಿಕಾಸ್ ಬಹ್ಲ್ ಅವರ ‘ಗುಡ್ ಬೈ’ ಚಿತ್ರ ಅಕ್ಟೋಬರ್ 7 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ಇದರ ಟ್ರೇಲರ್ ಇಂದು ಬಿಡುಗಡೆಯಾಗಿದೆ. ಈ ವೇಳೆ ಏಕ್ತಾ ತಮ್ಮ ಮನದಾಳದ ಮಾತನ್ನು ಹೇಳಿದ್ದಾರೆ.

ಕಳೆದ ಆಗಸ್ಟ್‌ನಲ್ಲಿ ‘ಲಾಲ್ ಸಿಂಗ್ ಚಡ್ಡಾ’ ಬಾಯ್‌ಕಾಟ್‌ನಿಂದ ಕೆಟ್ಟ ಸ್ಥಿತಿಯಲ್ಲಿದ್ದಾಗ, ಏಕ್ತಾ ಕಪೂರ್ ಅವರು ಬಾಲಿವುಡ್‌ನ ‘ಖಾನ್‌’ಗಳಲ್ಲಿ ಒಬ್ಬರಾದ ಅಮೀರ್‌ಗೆ ಬೆಂಬಲ ನೀಡಿದ್ದರು. ಅಮೀರ್ ಖಾನ್ ಅವರನ್ನು ಲೆಜೆಂಡ್ ಎಂದು ಬಣ್ಣಿಸಿದ್ದ ಅವರು, ಅವರನ್ನ ಬಾಯ್‌ಕಾಟ್ ಮಾಡೋದು ಸರಿಯಲ್ಲ ಎಂದಿದ್ದರು.

Advertisement
Share this on...