“ಇದು ಕರುನಾಡಿಗೆ ಸಿಕ್ಕ ನಿಜವಾದ ಸಮ್ಮಾನ”: ಶ್ರೀರಾಮ, ಪ್ರಧಾನಿ ಮೋದಿಯನ್ನ ಹಾಡಿಹೊಗಳಿದ ಕಿಚ್ಚ ಸುದೀಪ್

in Uncategorized 75 views

ನಟ ಕಿಚ್ಚ ಸುದೀಪ್ ಅವರು ತಮ್ಮ ಸಿನಿಮಾಗಳಲ್ಲಿ ಹನುಮಂತ ಹಾಗೂ ಶ್ರೀರಾಮನ ಬಗ್ಗೆ ಭಕ್ತಿ ವ್ಯಕ್ತಪಡಿಸಿದ್ದಾರೆ. ಇದೀಗ ಜಗತ್ತಿನಾದ್ಯಂತ ಶ್ರೀರಾಮನ ಜಪ ನಡೆಯುವಾಗ ಭಾರತದ ಪುಣ್ಯಭೂಮಿ ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ಉದ್ಘಾಟನೆ ವೇಳೆ ಮಹತ್ವದ ಹೇಳಿಕೆ ನೀಡಿದ್ದಾರೆ. ಹಾಗಾದರೆ ಅಯೋಧ್ಯೆಯಲ್ಲಿ ಶ್ರೀರಾಮ ಮೂರ್ತಿ ಪ್ರಾಣ ಪ್ರತಿಷ್ಠಾಪನೆ ಕುರಿತು ನಟ ಕಿಚ್ಚ ಸುದೀಪ್ ಅವರು ಹೇಳಿದ್ದು ಏನು ಗೊತ್ತಾ?

ಅಯೋಧ್ಯೆ ಶ್ರೀರಾಮ ಮಂದಿರ ಪ್ರಾಣ ಪ್ರತಿಷ್ಠಾಪನೆ ವೇಳೆ ಹಲವು ಬಾಲಿವುಡ್ & ಭಾರತದ ವಿವಿಧ ಸಿನಿಮಾ ರಂಗದ ನಟ & ನಟಿಯರು ಹಾಜರಿದ್ದರು. ಎಲ್ಲಿ ಕೇಳಿದರೂ, ಶ್ರೀರಾಮನ ಹೆಸರೇ ಕಿವಿಗೆ ಬೀಳುತ್ತಿದೆ. ಈ ವೇಳೆ ದೇಶಕ್ಕೆ ದೇಶವೆ ರಾಮನ ಹೆಸರಲ್ಲಿ ಮಿಂದು ಹೋಗಿದೆ. ‘ರಾಮ ಬಂದರೆ ದೀಪಾವಳಿ’ ಅಂತಾ ಇಂದು ದೀಪ ಬೆಳಗಿಸಿ ಸಂಭ್ರಮಿಸಲು ಜನ ಕೂಡ ಸಿದ್ಧತೆ ನಡೆಸಿದ್ದಾರೆ. ಅಯೋಧ್ಯೆಯಲ್ಲಿ ಮಾತ್ರವಲ್ಲ, ದೇಶದಲ್ಲಿ ರಾಮ ಮಂದಿರ ಪ್ರಾಣ ಪ್ರತಿಷ್ಠಾಪನೆ ಕಣ್ತುಂಬಿಕೊಳ್ಳಲು ಜನ ಕಾದಿದ್ದರು. ಇದೀಗ ಅದೆಲ್ಲ ಅದ್ಧೂರಿಯಾಗಿ ನಡೆದು ಹೋಗಿದ್ದು, ಇದೇ ವೇಳೆ ಕಿಚ್ಚ ಸುದೀಪ್ ಕೂಡ ವಿಶೇಷವಾಗಿ ಟ್ವೀಟ್ ಮಾಡಿದ್ದಾರೆ.

Advertisement

ಕಿಚ್ಚ ಸುದೀಪ್ ಶ್ರೀರಾಮನ ಬಗ್ಗೆ ಹೇಳಿದ್ದೇನು?

ಅಂದಹಾಗೆ ಅಯೋಧ್ಯೆ ಶ್ರೀರಾಮ ದೇಗುಲ ಉದ್ಘಾಟನೆ ಹಿನ್ನೆಲೆಯಲ್ಲಿ ಟ್ವೀಟ್ ಮಾಡಿರುವ ಕಿಚ್ಚ ಸುದೀಪ್ ಅವರು, ಪ್ರಧಾನಿ ನರೇಂದ್ರ ಮೋದಿ ಅವರಿಗೂ ಧನ್ಯವಾದ ಅರ್ಪಿಸಿದ್ದಾರೆ. ಅಲ್ಲದೆ ಇದೇ ವೇಳೆ ಶ್ರೀರಾಮನ ಸ್ಮರಣೆ ಹಾಗೂ ಮಹರ್ಷಿ ವಾಲ್ಮೀಕಿ ಅವರ ಸ್ಮರಣೆಯನ್ನು ಮಾಡಿದ್ದಾರೆ ನಟ ಕಿಚ್ಚ ಸುದೀಪ್ ಅವರು. ಹಾಗಾದರೆ ಕಿಚ್ಚ ಸುದೀಪ್ ಅವರು ಶ್ರೀರಾಮನ ಸ್ಮರಣೆ ಮಾಡಿದ್ದು ಹೇಗೆ ಗೊತ್ತೆ? ಮುಂದೆ ಓದಿ.

‘ರಾಮ ಜಯ ರಾಮ..’

ಅಂದಹಾಗೆ ಈ ಬಗ್ಗೆ ಟ್ವೀಟ್ ಮಾಡಿರುವ ನಟ ಕಿಚ್ಚ ಸುದೀಪ್ ಅವರು, ‘ರಾಮ ಜಯ ರಾಮ ಆದಿ ಗುರು ಮಹರ್ಷಿ ಶ್ರೀ ವಾಲ್ಮೀಕಿ ಮೊದಲು ನಿಮ್ಮ ಕಥೆ ಹೇಳಿದರು… ವಾಲ್ಮೀಕಿಗಳು ರೂಪಿಸಿದ ಶ್ರೀ ರಾಮ ನೀನು ನಮ್ಮ ಎದೆಯಲ್ಲಿ ಶಾಶ್ವತವಾಗಿ ನಿಂತೆ ವರ್ಷಗಳ ಕಾಯುವಿಕೆ ನಂತರ ಇಂದು ವಿರಾಜಮಾನನಾದೆ ಗುಡಿಯೊಳಗೆ, ನಿನ್ನ ಕಣ್ಣುಂಬಿಕೊಳ್ಳಲು ಎರಡೇ ಕಣ್ಣನ್ನೇಕೆ ಕೊಟ್ಟೆ? ನಿನ್ನ ಕೀರ್ತನೆಗೆ ಎರಡೇ ಕಿವಿಗಳು…’

‘ನಮ್ಮದು ಎಂತಹ ಪುಣ್ಯ ಕರುನಾಡಿನಿಂದ ವಿಗ್ರಹವಾಗಿ ರೂಪುಗೊಂಡೆ, ಕರ್ನಾಟಕದ ಮಣ್ಣ ಗರ್ಭದಿಂದ ಎದ್ದು ಬಂದೆ, ನಿನ್ನ ಆಲಯ ಕಟ್ಟಲು ಶ್ರೀ ವಿಶ್ವ ಪ್ರಸನ್ನ ತೀರ್ಥ ಗುರುಗಳಿಗೆ ಅದೃಷ್ಟ ಕೊಟ್ಟೆ, ಅರುಣ್‌ ಯೋಗಿರಾಜ್ ಅವರಿಗೆ ನಿನ್ನ ಕೆತ್ತಲು ಕಲಾಶೀರ್ವಾದವಾದೆ, ನಿನ್ನ ಪರಮ ಭಕ್ತ ಕನ್ನಡದ ಮಣ್ಣಿನ ವೀರ ಹನುಮಾನ ಇದು ಕರ್ನಾಟಕಕ್ಕೆ ನಿಜದ ಸಮ್ಮಾನ ಜೈ ಶ್ರೀ ರಾಮ್’ ಎಂದು ಟ್ವೀಟ್ ಮಾಡಿದ್ದಾರೆ ನಟ ಕಿಚ್ಚ ಸುದೀಪ್ ಅವರು.

ಪೂಜೆ ಮಾಡಿ ಭಕ್ತಿ ಮೆರೆದ ಸುದೀಪ್!

ಹಾಗೇ ಮತ್ತೊಂದು ಟ್ವೀಟ್ ಮೂಲಕ ನಟ ಕಿಚ್ಚ ಸುದೀಪ್ ಅವರು ಶ್ರೀರಾಮನ ಸ್ಮರಣೆಯ ಮಾಡಿದ್ದಾರೆ. ಈ ಮೂಲಕ ನಟ ಸುದೀಪ್ ಅವರು ಶ್ರೀರಾಮನ ಬಗ್ಗೆ ತಮಗಿರುವ ಭಕ್ತಿಯ ಜಗತ್ತಿಗೆ ಸಾರಿ ಸಾರಿ ಹೇಳಿದ್ದಾರೆ. ಆ ವಿಡಿಯೋಗಾಗಿ ಮುಂದೆ ನೋಡಿ.

ಒಟ್ಟಾರೆ ಜಗತ್ತಿನಾದ್ಯಂತ ಈಗ ಶ್ರೀರಾಮ ನಾಮವೇ ಕೇಳಿಬರುತ್ತಿದೆ. ಅದ್ರಲ್ಲೂ ಅಯೋಧ್ಯೆಯ ಭೂಮಿಯಲ್ಲಿ ಹಬ್ಬವೇ ಶುರುವಾಗಿದೆ. ಪ್ರಧಾನಿ ಮೋದಿ ಕೂಡ ಈ ಸಂಭ್ರಮದ ಭಾಗವಾಗಿ ಶ್ರೀರಾಮನಿಗೆ ನಮಿಸಿದ್ದಾರೆ. ಇದೇ ವೇಳೆ ನಟ ಕಿಚ್ಚ ಸುದೀಪ್ ಕೂಡ ಶ್ರೀರಾಮನ ಸ್ಮರಣೆ ಮಾಡಿ ನಮಿಸಿದ್ದಾರೆ.

Advertisement
Share this on...