ಪ್ರವಾದಿ ಮೊಹಮ್ಮದ್ ಕುರಿತು ನೂಪುರ್ ಶರ್ಮಾ ಅವರ ಹೇಳಿಕೆಯ ನಂತರ, ಮುಸ್ಲಿಮರು ದೇಶಾದ್ಯಂತ ಎಲ್ಲೆಡೆ ಭಯ ಸೃಷ್ಟಿಸುವುದರಲ್ಲಿ ನಿರತರಾಗಿದ್ದಾರೆ. ಜುಮಾ ನಮಾಜ್‌ನ ನಂತರ ಉತ್ತರಪ್ರದೇಶದಿಂದ ಬಂಗಾಳದವರೆಗೆ ಭೀಕರ ಹಿಂಸಾಚಾರಗಳು ಕಂಡುಬಂದವು. ಈಗ ಈ ಅನುಕ್ರಮದಲ್ಲಿ, ಕೆಲವು ವೀಡಿಯೊಗಳು ಇಂಟರ್ನೆಟ್ ನಲ್ಲಿ ವೈರಲ್ ಆಗುತ್ತಿದ್ದು ಈ ಹಿಂಸಾಚಾರವು ಪೂರ್ವ ಯೋಜಿತವಾಗಿದೆ ಎಂಬುದು ಸ್ಪಷ್ಟವಾಗಿದೆ, ಇದರ ಹಿಂದೆ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ರಾಜಕೀಯ ಘಟಕ SDPI ಇದೆ.
ಟ್ವಿಟರ್ ಯೂಸರ್ ವಿಜಯ್ ಪಟೇಲ್ ಈ ನಿಟ್ಟಿನಲ್ಲಿ ಸತತ ಹಲವಾರು ಟ್ವೀಟ್‌ಗಳನ್ನು ಹಂಚಿಕೊಂಡಿದ್ದಾರೆ. ಪ್ರತಿ ರ‌್ಯಾಲಿಯಲ್ಲೂ SDPI ಬಿಡುಗಡೆ ಮಾಡಿದ ಪ್ರತಿಭಟನೆಯ ಪೋಸ್ಟರ್ ಕಾಣಿಸುತ್ತಿದೆ ಎಂದು ಅವರು ಹೇಳಿದ್ದಾರೆ. ಈ ರ‌್ಯಾಲಿಗಳಲ್ಲಿ SDPI ನ ಜನರು ಬೀದಿಗಿಳಿದು ಬಹಿರಂಗವಾಗಿ ಘೋಷಣೆಗಳನ್ನು ಕೂಗುತ್ತಿರುವುದನ್ನೂ ನೋಡಬಹುದು.
ವೀಡಿಯೊದಲ್ಲಿ, ಭಾರತ ಸರ್ಕಾರಕ್ಕೆ ಸವಾಲು ಹಾಕುತ್ತ ಎಸ್‌ಡಿಪಿಐ ನಾಯಕ – “ನೀವು ಪ್ರವಾದಿ ಮೊಹಮ್ಮದ್ ಅವರನ್ನು ಅವಮಾನಿಸುವ ಮೂಲಕ ದೊಡ್ಡ ತಪ್ಪು ಮಾಡಿದ್ದೀರಿ. ಈ ಮುಸ್ಲಿಂ ತನ್ನ ಪ್ರವಾದಿಗಾಗಿ ಮಾತ್ರ ಬದುಕುತ್ತಾನೆ, ಉಸಿರಾಡುತ್ತಾನೆ, ಸಾಯುತ್ತಾನೆ. ನೀವು ನಮ್ಮ ಪ್ರವಾದಿಯ ಹೆಮ್ಮೆಯನ್ನು ಅವಮಾನಿಸಿದ್ದರೆ, ನಾನು ಇದನ್ನು ಹೇಳಲು ಬಯಸುತ್ತೇನೆ … ಗುಸ್ತಖ್-ಎ-ರಸೂಲ್‌ನ ಒಂದೇ ಒಂದು ಶಿಕ್ಷೆ, ಸರ್ ಧಡ್ ಸೆ ಅಲಗ್ (ದೇಹದಿಂದ ತಲೆ ಬೇರ್ಪಡೋದು ಮಾತ್ರ)”. ಈ ಪ್ರತಿಭಟನೆಯ ಭಾಗವಾಗಿ ಸಾವಿರಾರು ಸಂಖ್ಯೆಯಲ್ಲಿ ಮುಸಲ್ಮಾನರು ಯಾವ ರೀತಿಯಲ್ಲಿ ಸೇರಿದೆ ಮತ್ತು ‘ಸರ್ ತಾನ್ ಸೆ ಜುದಾ’ ಎಂದು ಜೋರಾಗಿ ಘೋಷಣೆಗಳನ್ನು ಕೂಗುವುದನ್ನು ನೀವು ವೀಡಿಯೊದಲ್ಲಿ ನೋಡಬಹುದು.
3. In this video, SDPI officials challenge the Indian authorities and raise slogans like 'Sar Tan Se Juda'
The public is reacting too! pic.twitter.com/A4xtvYFf9X
— Vijay Patel🇮🇳 (@vijaygajera) June 11, 2022
ಇದಲ್ಲದೆ, SDPI ನ ಈ ವ್ಯಕ್ತಿ ಗುಂಪನ್ನು ಪ್ರಚೋದಿಸುತ್ತ ಇದು 1992 ರ ಭಾರತವಲ್ಲ ಎಂದು ಹೇಳುತ್ತಾನೆ. ವೀಡಿಯೊದಲ್ಲಿ ಆತ, “ನಮ್ಮ ಒಂದು ಮಸೀದಿ ಇತ್ತು, ಅದು ಹೋಗಿದೆ ಆದರೆ ನಮ್ಮ ಹೃದಯದಿಂದ ಅದು ಇನ್ನೂ ಹೋಗಿಲ್ಲ. ಮಸೀದಿ ಯಾವುದು, ಕಾರಂಜಿ ಯಾವುದು ಎಂಬುದನ್ನು ನೀವು ಮರೆತುಬಿಡುತ್ತೀರಿ… ಈಗ ನಾವು ಮಸೀದಿಯ ಲೈಟ್, ನಳಕ್ಕಾಗಿಯೂ ನಮ್ಮ ಜೀವನವನ್ನು ತ್ಯಾಗ ಮಾಡುತ್ತೇವೆ. ಇದು 1992 ರ ಭಾರತ ಅಂತ ನೀವು ಅಂದುಕೊಂಡಿದ್ದೀರ? ಇದು ಈಗಿನ ಭಾರತ… ನಮಗೆ ನ್ಯಾಯ ಸಿಗುವವರೆಗೆ ನಾವು ಹೀಗೆಯೇ ಧ್ವನಿ ಎತ್ತುತ್ತೇವೆ. ನೀವು ಉಳಿಯಲು ಬಯಸಿದರೆ ಈ ದೇಶದಲ್ಲಿ ಗೌರವದಿಂದ ಇರಿ. ಪ್ರತಿಯೊಂದನ್ನೂ ಹೇಗೆ ಪ್ರಶಂಸಿಸಬೇಕೆಂದು ನಮಗೆ ತಿಳಿದಿದೆ. ನಿಮಗೆ ಗೊತ್ತಿಲ್ಲದಿದ್ದರೆ, ನಿಮ್ಮ ತಂದೆ ಎಲ್ಲಿಂದ ಬಂದಿದ್ದರೋ ಅಲ್ಲಿಗೇ ಹೋಗಿ” ಎಂದು ಹೇಳುತ್ತಿದ್ದಾನೆ.
5. Another radical leader is demanding to give Nupur Sharma and Navin Jindal to them! pic.twitter.com/N8RzN2dEsf
— Vijay Patel🇮🇳 (@vijaygajera) June 11, 2022
ಇದರ ನಂತರ, ಮುಂದಿನ ವೀಡಿಯೊದಲ್ಲಿ, ಮತ್ತೊಬ್ಬ ಕಟ್ಟರಪಂಥೀಯ ಮುಸ್ಲಿಂ ನಾಯಕ ರ‌್ಯಾಲಿಯ ಮಧ್ಯದಲ್ಲಿ ನಿಂತು, “ನಾವು ಶಾಂತಿಯ ಸಹೋದರತ್ವದ ಸಂದೇಶವನ್ನು ನೀಡಿದ್ದೇವೆ. ಈಗ ನಾನು ಇಲ್ಲಿನ ಸರ್ಕಾರಕ್ಕೆ, ಇಂಟೆಲಿಜೆನ್ಸ್‌ಗೆ, ಪೋಲಿಸರಿಗೆ ಹೇಳಲು ಬಯಸುತ್ತೇನೆ,.. ನೂಪುರ್ ಶರ್ಮಾ ಅವರನ್ನು ಶಿಕ್ಷಿಸಲು ಸಾಧ್ಯವಾಗದಿದ್ದರೆ, ನವೀನ್ ಜಿಂದಾಲ್ ಅವರನ್ನು ಶಿಕ್ಷಿಸಲು ಸಾಧ್ಯವಾಗದಿದ್ದರೆ, ಈ ಕಾನೂನಿನಡಿಯಲ್ಲಿ ಶಿಕ್ಷೆ ವಿಧಿಸಲು ಸಾಧ್ಯವಿಲ್ಲ. ದೇಶ ಅಥವಾ ನಿಮಗೆ ಯಾರದ್ದಾದರೂ ಆಡಳಿತ ಬೇಕು, ನೂಪುರ್ ಶರ್ಮಾ ಮತ್ತು ನವೀನ್ ಜಿಂದಾಲ್ ಅವರನ್ನು ಗಲ್ಲಿಗೇರಿಸಲು ನಿಮಗೆ ಸಾಕಷ್ಟು ಧೈರ್ಯವಿಲ್ಲದಿದ್ದರೆ, ಅವರನ್ನು ನಮಗೆ ಒಪ್ಪಿಸಿ” ಎಂದು ಹೇಳುತ್ತಾನೆ. ಇದಾದ ನಂತರ, ಮುಸ್ಲಿಂ ಮುಖಂಡರು ತುಂಬಿದ ರ‌್ಯಾಲಿಯಲ್ಲಿ ಹಿಂದೂಗಳ ಬಗ್ಗೆ ದ್ವೇಷವನ್ನು ಹರಡುತ್ತಾನೆ ಮತ್ತು SDPI ನ ಒಬ್ಬ ಕಾರ್ಯಕರ್ತ ಜೀವಂತವಾಗಿರುವವರೆಗೆ ದೇಶವನ್ನು ಹಿಂದೂ ರಾಷ್ಟ್ರ, ಬ್ರಾಹ್ಮಣ ರಾಷ್ಟ್ರ ಮಾಡುವ ಕನಸು ಎಂದಿಗೂ ನನಸಾಗುವುದಿಲ್ಲ ಎಂದು ಹೇಳುತ್ತಾನೆ.
7. Another place and another radical leader of SDPI.
He is talking here that why SDPI has been created! pic.twitter.com/K0nzgCxAFG— Vijay Patel🇮🇳 (@vijaygajera) June 11, 2022
ಮುಂದಿನ ವಿಡಿಯೋದಲ್ಲಿ ಮತ್ತೊಬ್ಬ ಎಸ್‌ಡಿಪಿಐ ಮುಖಂಡ “ಆರ್‌ಎಸ್‌ಎಸ್‌ನ ಕೊಳಕು ಹುಳಗಳು, ನೀವು ನಮ್ಮ ಪ್ರವಾದಿಯ ಹೆಸರನ್ನು ತೆಗೆದುಕೊಳ್ಳುತ್ತಿದ್ದೀರಿ, ನಾನು ನಿಮಗೆ ಹೇಳುತ್ತೇನೆ, ಇವು ಆರ್‌ಎಸ್‌ಎಸ್ ಮತ್ತು ಬಿಜೆಪಿಯ ಕೊಳಕು ಕೀಟಗಳು ಎಂದು ನಾವು ಇಂದು ಅರಿತುಕೊಂಡಿದ್ದೇವೆ. ಜನರು ಮೂರ್ಖರು. ನಾವು ಈ ದೇಶದೊಳಗೆ SDPI ಅನ್ನು ರಚಿಸಿದ್ದೇವೆ. ಈ ಪಕ್ಷ ಕಟ್ಟಿದಾಗಿನಿಂದ ಇಲ್ಲಿಯವರೆಗೆ ನಿಮ್ಮೊಂದಿಗೆ ಕಣಕ್ಕಿಳಿಯಲು ಈ ಪಕ್ಷ ಅಸ್ತಿತ್ವಕ್ಕೆ ಬಂದಿದೆ ಎಂದು ಸವಾಲು ಹಾಕುತ್ತಿದ್ದೇವೆ” ಎನ್ನುವುದನ್ನ ಕೇಳಬಹುದು.
ಮುಂದಿನ ವೀಡಿಯೊದಲ್ಲಿ, ಅದೇ ಶಿಕ್ಷೆಯ ಘೋಷಣೆಗಳನ್ನು ಗುಂಪು ಸರ್ ತನ್ ಸೆ ಜುದಾ, ಸರ್ ತನ್ ಸೆ ಜುದಾ ಎಂದು ಕೂಗುತ್ತದೆ. ರ್ಯಾಲಿಯಲ್ಲಿ ತೊಡಗಿರುವ ಜನರ ಕೈಯಲ್ಲಿ ನೂಪುರ್ ಶರ್ಮಾ ಅವರ ಪೋಸ್ಟರ್‌ಗಳು ಮತ್ತು ಅವರ ಮುಖದ ಮೇಲೆ ನರೇಂದ್ರ ಮೋದಿ ಹಾಯ್-ಹಾಯ್ ಎಂಬ ಘೋಷಣೆ ಇದೆ.
ಇಂತಹ ಎಲ್ಲಾ ವಿಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಮತಾಂಧರು ಶೇರ್ ಮಾಡುತ್ತಿದ್ದಾರೆ. ಮೂಲಭೂತವಾದಿಗಳು ನೂಪುರ್ ಶರ್ಮಾರನ್ನು ಗಲ್ಲಿಗೇರಿಸಬೇಕು ಅಥವಾ ನೂಪುರ್ ಶರ್ಮಾ ಅವರನ್ನು ತಮ್ಮ ವಶಕ್ಕೆ ನೀಡಬೇಕು ಎಂದು ಒತ್ತಾಯಿಸುತ್ತಿದ್ದಾರೆ. ಬಿಜೆಪಿ ಜೊತೆಗೆ ಈ ಮೂಲಭೂತವಾದಿಗಳು ಈಗ ಕಾಂಗ್ರೆಸ್ ಮತ್ತು ಸಮಾಜವಾದಿ ಪಕ್ಷಗಳ ಮೇಲೂ ಕೋಪಗೊಂಡಿದ್ದಾರೆ. ಅವರು ಈ ಪಕ್ಷಗಳನ್ನು ‘ಹರಾಮಖೋರ್’ ಎಂದು ಕರೆದಿದ್ದಾರೆ. ಬಂಗಾಳದ ಮುಖ್ಯಮಂತ್ರಿ ಇಂದು ಮುಖ್ಯಮಂತ್ರಿಯಾಗಿರುವುದೇ ಈ ಮುಸ್ಲಿಮರ ಕೊಡುಗೆಯಿಂದ ಎಂದು ಹೇಳಿದ್ದಾರೆ.
13. Here is a video of West Bengal.
They are mocking and challenging Mamata Didi there!They are openly saying that the CM chair is given by Muslims to her pic.twitter.com/qaSZAU3mjy
— Vijay Patel🇮🇳 (@vijaygajera) June 11, 2022