Get 10 lakhs loan in 5 minutes on WhatsApp: ಸೂಕ್ತ ದಾಖಲೆಗಳನ್ನ ಬಳಕೆದಾರರು ನೀಡಿದರೆ, 10 ಲಕ್ಷದವರೆಗೂ ಸಾಲ ತೆಗೆದುಕೊಳ್ಳಹುದು. ಇಷ್ಟೇ ಅಲ್ಲದೇ ಕೇವಲ 5 ನಿಮಿಷದಲ್ಲಿ ಈ ಲೋನ್ಗೆ ನೀವು ಅನುಮೋದನೆ ಪಡೆದುಕೊಳ್ಳಬಹುದಾಗಿದೆ. ಹಾಗಿದ್ದರೆ ಈ ವಾಟ್ಸ್ಆ್ಯಪ್ನಲ್ಲಿ ಲೋನ್ ತೆದುಕೊಳ್ಳುವುದು ಹೇಗೆ? ಲೋನ್ಗೆ ಎಷ್ಟು ಬಡ್ಡಿ? ನಿಜಕ್ಕೂ ನೀವು ವಾಟ್ಸ್ಆ್ಯಪ್ನಿಂದ ಲೋನ್ ತೆಗೆದುಕೊಳ್ಳಬಹುದಾ? ಇದಕ್ಕೆಲ್ಲ ಉತ್ತರ ಇಲ್ಲಿದೆ ನೋಡಿ.
Get loan on Whatsapp: ವಾಟ್ಸ್ಆ್ಯಪ್(Whatsapp) ಅಂದಕೂಡಲೇ ಎಲ್ಲರಿಗೂ ಸಂದೇಶ(message) ಕಳಿಸುವ ಉತ್ತಮವಾದ ಮಾರ್ಗವೆಂದು ಗೊತ್ತು. ಹೌದು, ವಿಶ್ವದಲ್ಲೇ ಸಂದೇಶ ವಿನಿಮಯ ಮಾಡಿಕೊಳ್ಳುವ ಆ್ಯಪ್ಗಳಲ್ಲಿ ವಾಟ್ಸ್ಆ್ಯಪ್ ಬೆಸ್ಟ್. ಇದೀಗ ನೀವು ವಾಟ್ಸ್ಆ್ಯಪ್ ಮೂಲಕ ಲೋನ್(loan) ಸಹ ಪಡೆದುಕೊಳ್ಳಬಹುದು. ಅದು ಹೇಗೆ ಅಂತಾ ನಾವು ಹೇಳುತ್ತೇವೆ. ಕ್ರೂರಿ ಕೊರೋನಾ(Corona) ಇಡೀ ವಿಶ್ವವನ್ನೇ ತನ್ನ ಕಪಿ ಮುಷ್ಟಿಯಲ್ಲಿಟ್ಟುಕೊಂಡು ಜನರ ಜೀವವನ್ನ ಹಿಂಡಿ ಹಿಪ್ಪೆ ಮಾಡಿದೆ. ಅದೆಷ್ಟೋ ಜನರ ಉಸಿರನ್ನ ಕಸಿದ ಕೊರೋನಾ, ಲಕ್ಷಾಂತರ ಜನರ ಬದುಕನ್ನ ನುಂಗಿ ಹಾಗಿದೆ. ಕೂಲಿ ನಾಲಿ ಮಾಡಿ ಜೀವನ ನಡೆಸುತ್ತಿದ್ದವರ ಬದುಕು ಮೂರಾಬಟ್ಟೆ ಆಗಿದೆ. ಕೊರೋನಾ ಬಂದಮೇಲೆ ಕೆಲಸ ಕಳೆದುಕೊಂಡು ಬೀದಿಗೆ ಬಿದ್ದಿದ್ದಾರೆ. ಲಕ್ಷಾಂತರ ಜನರ ವ್ಯಾಪಾರದಲ್ಲಿ(Business) ಯೂ ಭಾರೀ ನಷ್ಟವನ್ನ ಅನುಭವಿಸಿದ್ದಾರೆ. ಮತ್ತೆ ಸಣ್ಣ ಉದ್ಯಮ ಶುರು ಮಾಡಿ ಮೂರಾಬಟ್ಟೆಯಾಗಿರುವ ಬದುಕನ್ನ ಹೊಲಿದುಕೊಳ್ಳಲು ವಾಟ್ಸ್ಆ್ಯಪ್ ನೆರವಾಗಲಿದೆ. ವಾಟ್ಸ್ಆ್ಯಪ್ ಮೂಲಕ 10 ಲಕ್ಷದವರೆಗೆ ತ್ವರಿತ ಸಾಲ (instant loan)ವನ್ನು ಪಡೆಯಬಹುದಾಗಿದೆ.
ಬ್ಯಾಂಕೇತರ ಹಣಕಾಸು ಕಂಪನಿ (NBFC) IIFL ಫೈನಾನ್ಸ್ ವಾಟ್ಸ್ಆ್ಯಪ್ನಲ್ಲಿ ತ್ವರಿತ ವ್ಯಾಪಾರ ಸಾಲದ ಸೌಲಭ್ಯವನ್ನು ಆರಂಭಿಸಿದೆ. ಸೂಕ್ತ ದಾಖಲೆಗಳನ್ನ ಬಳಕೆದಾರರು ನೀಡಿದರೆ, 10 ಲಕ್ಷದವರೆಗೂ ಸಾಲ ತೆಗೆದುಕೊಳ್ಳಹುದು. ಇಷ್ಟೇ ಅಲ್ಲದೇ ಕೇವಲ 5 ನಿಮಿಷದಲ್ಲಿ ಈ ಲೋನ್ಗೆ ನೀವು ಅನುಮೋದನೆ ಪಡೆದುಕೊಳ್ಳಬಹುದಾಗಿದೆ. ಹಾಗಿದ್ದರೆ ಈ ವಾಟ್ಸ್ಆ್ಯಪ್ನಲ್ಲಿ ಲೋನ್ ತೆದುಕೊಳ್ಳುವುದು ಹೇಗೆ? ಲೋನ್ಗೆ ಎಷ್ಟು ಬಡ್ಡಿ? ನಿಜಕ್ಕೂ ನೀವು ವಾಟ್ಸ್ಆ್ಯಪ್ನಿಂದ ಲೋನ್ ತೆಗೆದುಕೊಳ್ಳಬಹುದಾ? ಇದಕ್ಕೆಲ್ಲ ಉತ್ತರ ಇಲ್ಲಿದೆ ನೋಡಿ.
ವಾಟ್ಸ್ಆ್ಯಪ್ ಲೋನ್ಗೆ ಅರ್ಜಿ ಸಲ್ಲಿಸುವುದು ಹೇಗೆ ?
ನೀವು ಈ ಯೋಜನೆಯ ಲಾಭ ಪಡೆಯಬೇಕಾದರೆ, ಮೊದಲು ಈ ಲೋನ್ ಪಡೆದುಕೊಳ್ಳುವ ಪ್ರಕ್ರಿಯೆಯನ್ನ ತಿಳಿದುಕೊಳ್ಳಬೇಕು. ಇದು ಭಾರತದಲ್ಲಿ ವಾಟ್ಸ್ಆ್ಯಪ್ ಬಳಕೆದಾರರಿಗೆ ಸುಲಭವಾಗಿ ಸಾಲ ಸಿಗುವ ಸೌಲಭ್ಯವಾಗಿದೆ. ಅದರ ಸಹಾಯದಿಂದ , 5 ರಿಂದ 10 ನಿಮಿಷಗಳಲ್ಲಿ ಸಾಲವನ್ನು ನೀವು ಪಡೆಯಬಹುದಾಗಿದೆ. AI-Bot ಸಹಾಯದಿಂದ, ಬಳಕೆದಾರರ ಇನ್ಪುಟ್ ಅನ್ನು ಲೋನ್ ಆಫರ್ನೊಂದಿಗೆ ಸೇರಿಸಲಾಗುತ್ತೆ. ಇದಾದ ಬಳಿಕ , ಬಳೆಕೆದಾರರು ಕೆವೈಸಿ (KYC) ಬ್ಯಾಂಕ್ ಖಾತೆ ಪರಿಶೀಲನೆ ಮತ್ತು ಮ್ಯನ್ ಡೇಟೆಡ್ ಸೆಟ್ಟಲ್ ಆ್ಯಪ್ ಮೂಲಕ ನೀವು ಲೋನ್ ಪಡೆಯಲು ಅರ್ಜಿ ಸಲ್ಲಿಸಬಹುದು.
ಹೀಗೆ ಮಾಡಿ:
ವಾಟ್ಸ್ಆ್ಯಪ್ನಲ್ಲಿ ಲೋನ್ ಪಡೆಯಲು ಮೊದಲು, ವಾಟ್ಸ್ಆ್ಯಪ್ ಮೂಲಕ 9019702184 ಸಂಖ್ಯೆಗೆ “Hi” ಎಂದು ಮೆಸೇಜ್ ಕಳುಹಿಸಬೇಕು. ಅದಾದ ಬಳಿಕ ನಿಮ್ಮ ಬೇಸಿಕ್ ಮಾಹಿತಿಯನ್ನ ನೀಡಬೇಕು. ನಂತರ ಕೆವೈಸಿ ಅನ್ನು ಪೂರ್ಣಗೊಳಿಸಬೇಕು ಹಾಗೂ ನಿಮ್ಮ ಬ್ಯಾಂಕ್ ಹಣದ ವರ್ಗಾವಣೆ ವಿವರಗಳನ್ನ ಪರಿಶೀಲಿಸಬೇಕಾಗುತ್ತದೆ. ಇದಾದ ಬಳಿಕ ನಿಮ್ಮ ದಾಖಲೆಗಳನ್ನ ಪರಿಶೀಲಿಸಿ, ನೋಂದಾಯಿಸಿದ ನಂತರ ಮತ್ತು ತಕ್ಷಣವೇ ನಿಮ್ಮ ಖಾತೆಗೆ ಹಣ ವರ್ಗಾವಣೆಯಾಗಲಿದೆ.
ಎಲ್ಲವೂ ವಾಟ್ಸ್ಆ್ಯಪ್ನಲ್ಲಿ ಮುಗಿಯಲಿದೆ
ಐಐಎಫ್ಎಲ್ ಫೈನಾನ್ಸ್ನ ಚೀಫ್ ರಿಸ್ಕ್ ಆಫೀಸರ್ ಸಂಜೀವ್ ಶ್ರೀವಾಸ್ತವ ಪ್ರಕಾರ , “ಸೇತು ಟೆಕ್ನಾಲಜಿ ಸರ್ವಿಸ್ ಪ್ರೊವೈಡರ್. ಸಾಲಕ್ಕಾಗಿ ಚಾಟ್ ಮಾಡುವುದರಿಂದ ಅರ್ಜಿ ಸಲ್ಲಿಸುವುದರಿಂದ ವಿತರಣೆ ತನಕ ಎಲ್ಲಾ ಕೆಲಸಗಳು ಬಹಳ ಸುಲಭವಾಗಿ ಮುಗಿದು ಹೋಗುತ್ತದೆ. ಸಣ್ಣ ವ್ಯಾಪಾರಿಗಳು ವ್ಯಾಟ್ಸ್ಆ್ಯಪ್ ಮೂಲಕ ಎಲ್ಲಾ ಕೆಲಸಗಳನ್ನ ಪೂರ್ಣಗೊಳಿಸಿ ಹಣವನ್ನು ಪಡೆಯಬಹುದಾಗಿದೆ ಎಂದು ತಿಳಿಸಿದ್ದಾರೆ. ನಿಜಕ್ಕೂ ನಿಮ್ಮ ಬಳಿ ಬ್ಯುಸಿನೆಸ್ ಮಾಡುವ ಐಡಿಯಾ, ಇದ್ದು ಹಣಕ್ಕಾಗಿ ಪರದಾಡುತ್ತಿದ್ದಾರೆ ಈ ಅವಕಾಶವನ್ನ ಬಳಸಿಕೊಳ್ಳಿ.