ಇವರೇ ನೋಡಿ ಮೃತ ಕನ್ಹಯ್ಯಲಾಲ್ ಪುತ್ರರು: ತಂದೆ ಹ-ತ್ಯೆ-ಯ ಬಳಿಕ ಕಣ್ಣೀರಿಡುತ್ತ ಈ ಮಕ್ಕಳು ಹೇಳ್ತಿರೋದೇನು ನೋಡಿ, ಇವರ ಕಣ್ಣೀರು ನೋಡೋಕಾಗಲ್ಲ 😓

in Uncategorized 277 views

Udaipur Mu_rder case: ಕನ್ಹಯ್ಯಾಲಾಲ್ ಹ-ತ್ಯೆ ಪ್ರಕರಣದಲ್ಲಿ ಅವರ ಪುತ್ರರು ಪೊಲೀಸ್ ಪ್ರೊಟೆಕ್ಷನ್ ತೆಗೆದುಹಾಕದಿದ್ದರೆ ಇಂದು ತಮ್ಮ ತಂದೆ ಬದುಕುತ್ತಿದ್ದರು. ಆರೋಪಿಗಳಿಗೆ ಮರಣದಂಡನೆ ವಿಧಿಸಬೇಕು ಎಂದು ಒತ್ತಾಯಿಸುತ್ತ ಕಣ್ಣೀರಿಟ್ಟರು.

ರಾಜಸ್ಥಾನದ ಉದಯಪುರದಲ್ಲಿ ಕನ್ಹಯ್ಯಾಲಾಲ್ ಹ-ತ್ಯೆ-ಗೆ ಇಡೀ ದೇಶವೇ ಬೆಚ್ಚಿಬಿದ್ದಿದೆ. ಆರೋಪಿಗಳಾದ ಮೊಹಮ್ಮದ್ ರಿಯಾಜ್ ಮತ್ತು ಗೌಸ್ ಮೊಹಮ್ಮದ್ ಅವರನ್ನು ಪೊಲೀಸರು ಬಂಧಿಸಿದ್ದಾರೆ. ಈ ವಿಚಾರದಲ್ಲಿ ಕಾರ್ಯಾಚರಣೆ ಜಾರಿಯಲ್ಲಿದೆ. ಏತನ್ಮಧ್ಯೆ, ತಂದೆಯನ್ನು ಕೊಂ-ದ ಇಬ್ಬರು ಆರೋಪಿಗಳಿಗೆ ಮರಣದಂಡನೆ ವಿಧಿಸಬೇಕೆಂದು ಕನ್ಹಯ್ಯಾಲಾಲ್ ಅವರ ಮಕ್ಕಳಾದ ತರುಣ್ ಮತ್ತು ಯಶ್ ಒತ್ತಾಯಿಸಿದ್ದಾರೆ. ಇದರೊಂದಿಗೆ ಪೊಲೀಸರ ನಿರ್ಲಕ್ಷ್ಯದ ಆರೋಪವೂ ಕೇಳಿಬಂದಿದೆ.

Advertisement

ಕನ್ಹಯ್ಯಾ ಲಾಲ್ ಅವರ ಪುತ್ರರು ‘ಆಜ್ ತಕ್’ ಜೊತೆಗಿನ ವಿಶೇಷ ಸಂವಾದದಲ್ಲಿ, “ನಾವು ಅರಿಯದೇ ತಪ್ಪಾಗಿ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಅನ್ನು ಹಂಚಿಕೊಂಡಿದ್ದೇವು, ನಂತರ ನೆರೆಹೊರೆಯವರು ನಮ್ಮ ತಂದೆಯ ವಿರುದ್ಧ ಪೊಲೀಸ್ ದೂರು ನೀಡಿದರು. ತಂದೆಯವರನ್ನ ಪೋಲಿಸರು ವಿಚಾರಣೆಗೆ ಕರೆಸಿ ಬಂಧಿಸಿದ್ದರು. ಆದರೆ 24 ಗಂಟೆಗಳ ನಂತರ ಜಾಮೀನು ಕೂಡ ಸಿಕ್ಕಿತ್ತು. ಈ ವಿಷಯ ಇತ್ಯರ್ಥವೂ ಆಗಿತ್ತು. ನಾಲ್ಕೈದು ದಿನ ನಮ್ಮ ಅಂಗಡಿಯನ್ನು ಮುಚ್ಚಿದ್ದೆವು. ಕಾರಣ ನಾವು ಅಂಗಡಿಯನ್ನು ಮುಚ್ಚುವಂತೆ ಸ್ಥಳೀಯ ಆಡಳಿತ ನಮಗೆ ಹೇಳಿತ್ತು. ಈ ಮಧ್ಯೆ, ಯಾರೋ ಪಾಪಾಗೆ (ಅಪ್ಪನಿಗೆ) ಬೆದರಿಕೆ ಹಾಕುತ್ತಲೇ ಇದ್ದರು, ನಂತರ ನಾವು ಪೊಲೀಸ್ ಠಾಣೆಯಲ್ಲಿ ದೂರು ಕೂಡ ನೀಡಿ ಪೊಲೀಸ್ ಪ್ರೊಟೆಕ್ಷನ್ ಗೆ ಒತ್ತಾಯಿಸಿದ್ದೇವು” ಎಂದರು.

ಬಾಲ್ಯದಲ್ಲಿ ಪ್ರಧಾನಿ ಮೋದಿ ಚಹಾ ಮಾರಿದ್ದ ಜಾಗ?| Tea Stall where PM Modi Sold Tea |ತಿನ್ನಲು ಅನ್ನವಿಲ್ಲದೆ ಮಣ್ಣಿನ ರೊಟ್ಟಿ ತಿನ್ನುತ್ತಿದ್ದಾರೆ ಈ ದೇಶದ ಜನ | This country people eating Mud Rotis|Most Amazing 30 facts

Watch and Subscribe to the Channel to get such amazing facts

“ಪಾಪಾಗೆ ಪೊಲೀಸ್ ಪ್ರೊಟೆಕ್ಷನ್ ಕೂಡ ಸಿಕ್ಕಿತು, ಆದರೆ ಎರಡು ದಿನಗಳ ನಂತರ ಅದನ್ನು ತೆಗೆದುಹಾಕಲಾಯಿತು. ಏಳು ದಿನಗಳ ನಂತರ ಅಂಗಡಿ ತೆರೆದಾಗ ಏಕಾಏಕಿ ತಂದೆಯನ್ನು ಬ-ರ್ಬ-ರವಾಗಿ ಹ-ತ್ಯೆ ಮಾಡಲಾಯಿತು ಎಂದು ಮೃತ ಕನ್ಹಯ್ಯಲಾಲ್ ಪುತ್ರರು ಹೇಳುತ್ತಾರೆ. “ನಿಮ್ಮ ತಂದೆಯನ್ನು ಯಾರೋ ಕೊ-ಲೆ ಮಾಡಿದ್ದಾರೆ ಅಂತ ಯಾರೋ ಫೋನ್‌ನಲ್ಲಿ ಹೇಳಿದರು. ಪೊಲೀಸರು ಪ್ರೊಟೆಕ್ಷನ್ ತೆಗೆಯದೇ ಇದ್ದಿದ್ದರೆ ತಂದೆ ಬದುಕುಳಿಯಬಹುದಿತ್ತು” ಎಂದು ಕನ್ಹಯ್ಯ ಪುತ್ರ ಯಶ್ ಹೇಳಿದ್ದಾರೆ.

ನಾವಿಬ್ಬರೂ ಇನ್ನೂ ಕಾಲೇಜಿನಲ್ಲಿ ಓದುತ್ತಿದ್ದು, ತಂದೆ ಮಾತ್ರ ಮನೆಯಲ್ಲಿ ಸಂಪಾದನೆ ಮಾಡುತ್ತಿದ್ದರು, ಈಗ ಅವರು ಈ ಲೋಕದಲ್ಲಿಲ್ಲ ಎಂದು ಕಣ್ಣೀರಿಡುತ್ತ ಪುತ್ರರು ಹೇಳಿದರು. ತಂದೆಯನ್ನು ಕೊಂದವರಿಗೆ ಮರಣದಂಡನೆ ವಿಧಿಸಬೇಕು, ಮರಣದಂಡನೆ ಬಿಟ್ಟು ಯಾವ ಶಿಕ್ಷೆಯು ನಮಗೆ ಸ್ವೀಕಾರಾರ್ಹವಲ್ಲ ಎಂದು ಪುತ್ರರು ಸರ್ಕಾರ ಮತ್ತು ಆಡಳಿತಕ್ಕೆ ಒತ್ತಾಯಿಸಿದ್ದಾರೆ.

ಆ್ಯಕ್ಷನ್ ನಲ್ಲಿ IT ಮಿನಿಸ್ಟ್ರಿ

ಮೂಲಗಳ ಪ್ರಕಾರ, ಉದಯಪುರ ಹ-ತ್ಯಾ-ಕಾಂಡವನ್ನು ವೈಭವೀಕರಿಸುವ ಕಂಟೆಂಟ್ ಗಳನ್ಮ ತೆಗೆದುಹಾಕುವಂತೆ ಐಟಿ ಸಚಿವಾಲಯವು ಸೋಶಿಯಲ್ ಮೀಡಿಯಾ ಪ್ಲ್ಯಾಟಫಾರಂ ಗಳಿಗೆ ಮನವಿ ಮಾಡಿದೆ. ಸೋಶಿಯಲ್ ಮೀಡಿಯಾಗಳಲ್ಲಿ ಉದಯಪುರದ ಘಟನೆಯ ಬಗ್ಗೆ ಎಚ್ಚರಿಕೆ ವಹಿಸಬೇಕು ಎಂದು ಸಚಿವಾಲಯ ಬಯಸಿದೆ. ಯಾವುದೇ ವಿಷಯವು ಧಾರ್ಮಿಕ ಸಹಿಷ್ಣುತೆಗೆ ಧಕ್ಕೆ ತಂದರೆ, ಅದನ್ನು ತಕ್ಷಣವೇ ತೆಗೆದುಹಾಕಬೇಕು IT ಮಿನಿಸ್ಟ್ರಿ ಹೇಳಿದೆ.

ಉದಯಪುರ ಹ-ತ್ಯಾ-ಕಾಂ-ಡದ ಆರೋಪಿಯ ‘ದಾವತ್-ಎ-ಇಸ್ಲಾಂ’ ಸಂಘಟನೆಯ ಕನೆಕ್ಷನ್ ಬಗ್ಗೆ ಇದೀಗ ಸೂಫಿ ಖಾನ್ಖಾ ಅಸೋಸಿಯೇಷನ್ ​​ಕೂಡ ಪ್ರತಿಕ್ರಿಯಿಸಿದೆ ಎಂದು ಸೂಫಿ ಖಾನ್ಖಾ ಅಸೋಸಿಯೇಷನ್ ​​​​ಅಧ್ಯಕ್ಷರು ಹೇಳಿದ್ದಾರೆ. ಕಾನ್ಪುರದಲ್ಲಿ ಸಂಘದ ರಾಷ್ಟ್ರೀಯ ಅಧ್ಯಕ್ಷ ಸೂಫಿ ಕೌಸರ್ ಹಸನ್ ಮಜಿದಿ ಅವರು ‘ದಾವತ್-ಎ-ಇಸ್ಲಾಂ’ ಅನ್ನು ಕಟಕಟೆಯಲ್ಲಿ‌ ನಿಲ್ಲಿಸಿದರು, ಅದು ಇಲ್ಲಿ ಘಜವಾ-ಎ-ಹಿಂದ್ ಮಾಡಲು ಬಯಸುತ್ತಿದೆ, ಉದಯಪುರದಲ್ಲಿ ನಡೆದ ಹ-ತ್ಯೆ-ಗೆ ಸಂಬಂಧವಿರುವ ಪಾಕಿಸ್ತಾನಿ ಮೌಲಾನಾ ಮತ್ತು ಅಲ್ಲಿನ ಕನೆಕ್ಷನ್ ಬಗ್ಗೆ ತನಿಖೆ ನಡೆಸಿ ಇದನ್ನ ಭ-ಯೋತ್ಪಾ-ದಕ ಕೃತ್ಯ ಎಂದು ಪರಿಗಣಿಸಬೇಕು ಎಂದು ಹೇಳಿದ್ದಾರೆ. ಕಾನ್ಪುರದ ಮುಸ್ಲಿಂ ಪ್ರದೇಶಗಳಲ್ಲಿ ‘ದಾವತ್-ಎ-ಇಸ್ಲಾಂ’ಗಾಗಿ ದೇಣಿಗೆ ಪೆಟ್ಟಿಗೆಗಳನ್ನು ಸ್ಥಾಪಿಸಲಾಗಿದೆ ಎಂದು ಅವರು ಆರೋಪಿಸಿದರು. ಅದರ ದೂರಿನಲ್ಲಿ, ಅವರು ಒಂದೂವರೆ ವರ್ಷಗಳ ಹಿಂದೆಯೇ ಪೊಲೀಸರಿಗೆ ದೂರು ನೀಡಿದ್ದರು. ಇದಾದ ಬಳಿಕ ನನ್ನ ಕ-ತ್ತು ಕುಯ್ಯುವುದಾಗಿ ಬೆದರಿಕೆ ಹಾಕಿದ್ದರು ಎಂದು ಅವರು ಹೇಳಿದ್ದಾರೆ

UAPA ಆ್ಯಕ್ಟ್ ಅಡಿಯಲ್ಲಿ ಪ್ರಕರಣ ದಾಖಲು

ಕನ್ಹಯ್ಯಾ ಹ-ತ್ಯೆ ಪ್ರಕರಣದಲ್ಲಿ ಆರೋಪಿಗಳಿಬ್ಬರಿಗೂ ಪಾಕಿಸ್ತಾನದ ಜತೆಗಿನ ಕನೆಕ್ಷನ್ ಕೂಡ ಹೊರಬಿದ್ದಿದ್ದು, ಇದೀಗ ಪ್ರಕರಣದ ತನಿಖೆಯನ್ನು NIA ಗೆ ವಹಿಸಲಾಗಿದೆ. ಮತ್ತೊಂದೆಡೆ, UAPA ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ ಎಂದು ರಾಜಸ್ಥಾನ ಡಿಜಿಪಿ ಎಂಎಲ್ ಲಾಠರ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು. ಕನ್ಹಯ್ಯಾಲಾಲ್‌ನನ್ನು ಕೊಂ-ದ ಆರೋಪಿ ಗೌಸ್ ಮೊಹಮ್ಮದ್ 2014 ರಲ್ಲಿ ಪಾಕಿಸ್ತಾನದ ಕರಾಚಿ ನಗರಕ್ಕೆ ಹೋಗಿದ್ದ. ಆತ ದಾವತ್-ಎ-ಇಸ್ಲಾಮಿ ಎಂಬ ಸಂಘಟನೆಯೊಂದಿಗೆ ಸಂಬಂಧ ಹೊಂದಿದ್ದ. ಉತ್ತರ ಪ್ರದೇಶದ ಕಾನ್ಪುರ ಸೇರಿದಂತೆ ದೆಹಲಿ ಮತ್ತು ಮುಂಬೈನಲ್ಲಿ ದಾವತ್-ಎ-ಇಸ್ಲಾಮಿ ಕಚೇರಿಗಳಿವೆ ಎಂದು ರಾಜ್ಯ ಪೊಲೀಸ್ ಮುಖ್ಯಸ್ಥ ಲಾಠರ್ ಹೇಳಿದ್ದಾರೆ.

ಏನಿದು ಪ್ರಕರಣ?

ಮಂಗಳವಾರ ಮಧ್ಯಾಹ್ನ, ಕನ್ಹಯ್ಯಾ ಲಾಲ್ ಎಂಬ ವ್ಯಕ್ತಿಯನ್ನು ಉದಯಪುರದ ಟೇಲರ್ ಅಂಗಡಿಯೊಳಗೆ ಶಿ-ರ-ಚ್ಛೇ-ದ ಮಾಡಲಾಗಿತ್ತು. ಮಂಗಳವಾರ ಸಂಜೆ, ರಾಜಸ್ಥಾನ ಪೊಲೀಸರು ಉದಯಪುರದ ಸೂರಜ್‌ಪೋಲ್ ಪ್ರದೇಶದ ನಿವಾಸಿಗಳಾದ ಗೌಸ್ ಮೊಹಮ್ಮದ್ ಮತ್ತು ರಿಯಾಜ್ ಎಂಬ ಆರೋಪಿಗಳನ್ನು ಬಂಧಿಸಿದ್ದಾರೆ. ಆರೋಪಿಗಳು ಕೊ-ಲೆ-ಯ ಹೊಣೆ ಹೊತ್ತುಕೊಂಡಿರುವ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು.

Advertisement
Share this on...