ಕೇರಳದ ರಾಜಕೀಯದಲ್ಲಿ ಕೋಲಾಹಲವನ್ನೇ ಎಬ್ಬಿಸಿದ್ದ ಸೋಲಾರ್ ಪ್ಯಾನಲ್ ಹಗರಣದ ಮಧ್ಯೆ ನಿಂತಿದ್ದವಳೇ ಸರಿತಾ ನಾಯರ್. ಹಣ ಹಾಗು ಅಧಿಕಾರದ ಆಟದಲ್ಲಿ ಸೆ-ಕ್ಸ್ ನ ರಿಮೋಟ್ ನಿಂದ ಆಟವಾಡಿಸುತ್ತಿದ್ದ ಮಹಿಳೆಯರಲ್ಲಿ ಸರಿತಾ ನಾಯರ್ ಮೊದಲಿಗಳೇನಲ್ಲ ಆದರೆ ಮಧ್ಯಮ ವರ್ಗದ ಕುಟುಂಬದ ಹಿನ್ನೆಲೆಯಿಂದ ಬಂದ ಮಹಿಳೆಯೊಬ್ಬಳ ಬಳಿ ರಾತ್ರೋರಾತ್ರಿ ಕೋಟ್ಯಂತರ ರೂಪಾಯಿ ಬಂದು ಬಿಡುತ್ತದೆಯೆಂದರೆ ಯಾರೂ ಕೂಡ ನಂಬೋಕೆ ಸಾಧ್ಯವೇ ಆಗಲ್ಲ. ಯಾರು ಈ ಸರಿತಾ ನಾಯರ್? ಏನಿದು ಸೋಲಾರ್ ಪ್ಯಾನಲ್ ಹಗರಣ? ಬನ್ನಿ ತಿಳಿದುಕೊಳ್ಳೋಣ.
ಸರಿತಾ ನಾಯರ್ ತನ್ನ ಲಿವಿನ್ ಪಾರ್ಟನರ್ ಬಿಜು ರಾಧಾಕೃಷ್ಣನ್ ಜೊತೆಯಲ್ಲಿ ಸೋಲಾರ್ ಹೆಸರಿನ ಫರ್ಮ್ ಒಂದನ್ನ ಶುರು ಮಾಡಿದ್ದಳು. ಈ ಫರ್ಮ್ ಸೋಲಾರ್ ಪ್ಯಾನೆಲ್ ಗಳನ್ನ ನೀಡುತ್ತೇವೆ ಎಂಬ ಹೆಸರಿನಲ್ಲಿ ಹಲವಾರು ಬಿಸಿನೆಸ್‌ಮೆನ್ ಗಳಿಂದ ಕೋಟಿ ಕೋಟಿ ಹಣ ಪೀಕಿದ್ದರು. ಆದರೆ ಕೋಟ್ಯಂತರ ರೂಪಾಯಿಯನ್ನ ಪಡೆದ ಬಳಿಕವೂ ಕಂಪೆನಿ ಮಾತ್ರ ಸೋಲಾರ್ ಪ್ಯಾನಲ್ ಗಳ ಸರಬರಾಜು ಮಾಡಲೇ ಇಲ್ಲ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಸ್ ಗಳು ದಾಖಲಾಗುತ್ತಿದ್ದಂತೆ ಇಬ್ಬರನ್ನೂ ಕೇರಳ ಪೋ-ಲಿಸ-ರು ಅ-ರೆ-ಸ್ಟ್ ಮಾಡಿ ಬಿಟ್ಟರು. ತನಿಖೆಯಲ್ಲಿ ಆಗ ಬೆಳಕಿಗೆ ಬಂದ ವಿಚಾರವೇನೆಂದರೆ ಕೇರಳದ ಆಗಿನ ಮುಖ್ಯಮಂತ್ರಿಯ ಆಪ್ತ ಸಚಿವ ಹಾಗು ಟಿವಿ ಅಭಿನೇತ್ರಿಯೂ ಈ ಹಗರಣದಲ್ಲಿ ಭಾಗಿಯಾದ್ದರು. ಪೋ-ಲಿಸ-ರ ರಿಪೋರ್ಟ್ ಹೇಳುವ ಪ್ರಕಾರ ಈ ಹಗರಣದಲ್ಲಿ ಆಗಿನ ಮುಖ್ಯಮಂತ್ರಿ ಓಮನ್ ಚಾಂಡಿಯ ಆಪ್ತ ಸಚಿವ ಟೆನ್ನಿ ಜೋಪಾನ್ ಹಾಗಯ ಜಿಕುಮಾನ್ ಜ್ಯಾಕೋಬ್ ಹಾಗು ಭದ್ರತಾ ಸಿಬ್ಬಂದಿ ಸಲೀಮ್ ರಾಜ್ ನನ್ನೂ ಬಳಸಿಕೊಳ್ಳಲಾಗಿತ್ತು.
ತನಿಖೆಯ ಪ್ರಾಥಮಿಕ ಹಂತದಲ್ಲಿ ತಿಳಿದು ಬಂದ ವಿಷಯವೇನೆಂದರೆ ಜೋಪಾನ್ 15 ತಿಂಗಳಲ್ಲಿ ಬರೋಬ್ಬರಿ 800 ಕ್ಕೂ ಅಧಿಕ ಬಾರಿ ಫೋನ್ ಮೂಲಕ ನಾಯರ್ ಜೊತೆ ಸಂಪರ್ಕಿಸಿದ್ದ. ಅದೇ ಸಲೀಮ್ ರಾಜ್ ಹಾಗು ಜ್ಯಾಕೋಬ್ ಕೂಡ ತಮ್ಮ ಫೋನ್ ಗಳಿಂದ 400 ಕ್ಕೂ ಅಧಿಕ ಬಾರಿ ನಾಯರ್ ಜೊತೆ ಮಾತನಾಡಿದ್ದರು. ತನಿಖೆಯಲ್ಲಿ ಬೆಳಕಿಗೆ ಬಂದ ವಿಚಾರವೇನೆಂದರೆ ಕೇರಳದ ಆಗಿನ ಮುಖ್ಯಮಂತ್ರಿ ಉಮ್ಮನ್ ಚಾಂಡಿ ಕೂಡ ಈ ಹಗರಣದಲ್ಲಿ ಭಾಗಿಯಾಗಿದ್ದು ಆತ ಕೂಡ ನೂರಾರು ಕೋಟಿ ಹಣ ಲಪಟಾಯಿಸಿದ್ದ.
ಯಾಕಂದ್ರೆ ಉಮ್ಮನ್ ಚಾಂಡಿ ತನ್ನ ಬಳಿ ಫೋನ್ ಇಟ್ಟುಕೊಂಡಿರಲಿಲ್ಲ ಹಾಗು ಯಾರನ್ನಾದರೂ ಸಂಪರ್ಕಿಸಬೇಕೆಂದರೆ ತನ್ನ ಪರ್ಸನಲ್ ಸ್ಟಾಫ್ ಫೋನ್ ಬಳಸಿ ಕಾಲ್ ಮಾಡುತ್ತಿದ್ದ. ಬಳಿಕ ಈ ಹಗರಣ ಬೆಳಕಿಗೆ ಬಂದ ಬಳಿಕ ಮುಖ್ಯಮಂತ್ರಿ ಉಮ್ಮನ್ ಚಾಂಡಿ ಆಗಿನಿಂದ ತನ್ನ ಸ್ವಂತ ಫೋನ್ ಬಳಸಲು ಆರಂಭಿಸಿದ್ದ.
ಯಾರೀ ಸರೀತಾ ನಾಯರ್?
36 ವರ್ಷದ ಸರಿತಾ ನಾಯರ್ ಕೇರಳದ ರಾಜಕೀಯವನ್ನ ವಿಸ್ಪೋಟಕ ಪರಿಸ್ಥಿತಿಗೆ ತಂದು ನಿಲ್ಲಿಸಿದವಳಾಗಿದ್ದು, ಸಣ್ಣ ಸಣ್ಣ ಬಿಸಿನೆಸ್ ಮೆನ್ ಗಳಿಂದ ಚಿಕ್ಕ ಪುಟ್ಟ ಶೇರ್ ಗಳನ್ನು ಮಿಡಲ್‌ಮ್ಯಾನ್ ರೂಪದಲ್ಲಿ ಇನ್ವೆಸ್ಟ್ ಮಾಡಿ ತನ್ನ ಕೆರಿಯರ್ ಆರಂಭಿಸಿದ್ದಳು. ಇಂದು ಆಕೆಯನ್ನ ಕೇರಳದ ಜನ ಸೋಲಾರ್ ಸರಿತಾ ಎಂಬ ಹೆಸರಿನಿಂದಲೇ ಕರೆಯುತ್ತಾರೆ. ಈ ಸರಿತಾ ನಾಯರ್ ಸಡನ್ ಆಗಿ ಈ ಮಟ್ಟಕ್ಕೆ ಬೆಳೆದು ಬಂದವಳಲ್ಲ, ಸರಿತಾ ತಿರುವನಂತಪುರಂ ನಿಂದ 100 ಕಿಲೋಮೀಟರ್ ದೂರವಿರುವ ಚೆಂಗನ್ನೂರ್ ನಲ್ಲಿ ತನ್ನ ಶೈಕ್ಷಣಿಕ ವಿದ್ಯಾಭ್ಯಾಸವನ್ನ ಮುಗಿಸಿದ್ದಳು. ಆಕೆ ತನ್ನ ಶಾಲೆಯಲ್ಲಿ ಟಾಪರ್ ಕೂಡ ಆಗಿದ್ದಳು.
ಸರಿತಾ ನಾಯರ್ ಟೀನೇಜ್ ನಲ್ಲಿದ್ದಾಗಲೇ ಕ್ಲರ್ಕ್ ಆಗಿ ಕಾರ್ಯ ನಿರ್ವಹಿಸುತ್ತಿದ್ದ ಆಕೆಯ ತಂದೆಯ ನಿ-ಧ-ನ-ವಾಗಿತ್ತು. ತನಗಿದ್ದ ಸಾಲದ ಹೊರೆಯಿಂದ ಅವರು ಆ-ತ್ಮ-ಹ-ತ್ಯೆ ಮಾಡಿಕೊಂಡಿದ್ದರು, ಅದಾದ ಬಳಿಕ ಸರಿತಾ ನಾಯರ್ ಕುಟುಂಬ ಸಾಲದ ಸು-ಳಿ-ಯಲ್ಲಿ ಸಿಲುಕಿ ಒ-ದ್ದಾ-ಡು-ವ ಸ್ಥಿತಿ ಉಂಟಾಗಿತ್ತು. ಅದಾದ ಬಳಿಕ ಸರಿತಾ ನಾಯರ್ ತಾಯಿ ಮನೆಗೆಲಸ, ಚಿಕ್ಕ ಪುಟ್ಟ ಕೆಲಸಗಳನ್ನ ಮಾಡಿ ತನ್ನ ಪರಿವಾರದ ಜವಾಬ್ದಾರಿಯನ್ನ ನಿಭಾಯಿಸಿದಳು.
ಸರಿತಾ ನಾಯರ್ 18 ವರ್ಷದವಳಿರುವಾಗಲೇ ಆಕೆಯನ್ನ ಅರಬ್ ದೇಶದಲ್ಲಿ ಕೆಲಸ ಮಾಡುತ್ತಿದ್ದ ರಾಜೇಂದ್ರನ್ ಎಂಬುವವನ ಜೊತೆ ಮದುವೆ ಮಾಡಿಸಿದರು. ಸರಿತಾ ನಾಯರ್ ಗೆ ಎರಡು ಮಕ್ಕಳೂ ಆದರು. ಬಳಿಕ ಇಬ್ಬರ ನಡುವಿನ ಮನಸ್ತಾಪಕ್ಕೆ ವಿ-ಚ್ಛೇ-ದ-ನ ಕೂಡ ಆಗಿತ್ತು. ಬಳಿಕ ಸರಿತಾ ಎಲೆಕ್ಟ್ರಾನಿಕ್ಸ್ ಕಮ್ಯುನಿಕೇಶನ್ಸ್, ಏರಕ್ರಾಫ್ಟ್ ಮೆಂಟೆನೆನ್ಸ್ ಹಾಗು ಇಂಜಿನಿಯರಿಂಗ್ ನಲ್ಲಿ ಡಿಪ್ಲೊಮಾ ಕೋರ್ಸ್ ಕೂಡ ಮುಗಿಸಿದಳು.
ಶೇರ್ ಬ್ರೋಕರ್ ಫರ್ಮ್ ನಲ್ಲಿ ಸಿಕ್ಕಿತು ಮೊದಲ ಕೆಲಸ:
ಸರಿತಾ ನಾಯರ್ ತನ್ನ ಮೊದಲ ನೌಕರಿಯನ್ನ ಒಂದು ಶೇರ್ ಬ್ರೋಕರ್ ಫರ್ಮ್ ನಲ್ಲಿ ಮಾಡಿದಳು ಬಳಿಕ ಆಕೆ ಕೇರಳದ ಹೌಸಿಂಗ್ ಫೈನಾನ್ಸ್ ಲಿಮಿಟೆಡ್ ನಲ್ಲಿ ಕಾರ್ಯ ನಿರ್ವಹಿಸಿದಳು. ಅಲ್ಲೇ ಆಕೆಯ ಭೇಟಿ ಬಿಜು ರಾಧಾಕೃಷ್ಣನ್ ಜೊತೆ ಆಗಿತ್ತು. ರಾಧಾಕೃಷ್ಣನ್ ಹೆಂಡತಿ ಸಾಯೋಕೂ ಮುನ್ನವೇ ಆತ ಹಾಗು ಸರಿತಾ ನಾಯರ್ ಇಬ್ಬರೂ ಲಿವಿನ್ ರಿಲೇಶನಶಿಪ್ ನಲ್ಲಿರೋಕೆ ಶುರು ಮಾಡಿದ್ದರು. ತನ್ನ ಹೆಂಡತಿಯ ಸಾ-ವಿ-ನ ಬಳಿಕ ಪೋಲಿಸರಿಂದ ಬಚಾವ್ ಮಾಡಲು ಬಿಜು ಸರಿತಾಳ ಜೊತೆ ಕೊಯಂಬತ್ತೂರಿಗೆ ಓಡಿ ಹೋದ.
ಕೊಯಂಬತ್ತೂರಿಗೆ ಬಂದ ಬಳಿಕ ಸರಿತಾ ತನ್ನ ಹೆಸರನ್ನ ನಂದಿನಿ ನಾಯರ್ ಅಂತ ಬದಲಿಸಿಕೊಂಡು ತಾನೊಬ್ಬ ಚಾರ್ಟೆಡ್ ಅಕೌಂಟೆಂಟ್ ಎಂದು ಹೇಳಿಕೊಂಡಳು. ಬಿಜು ತನ್ನ ವೇಷವನ್ನ ಬದಲೊಸಿಕೊಂಡು ತನ್ನನ್ನು ತಾನು ಸ್ಟ್ರ್ಯಾಟೆಜಿಕ್ ಇನ್ವೆಸ್ಟರ್ ಅಂತ ಒಮ್ಮೆ ಹಾಗು ಮತ್ತೊಮ್ಮೆ ತಾನೊಬ್ಬ IAS ಆಫೀಸರ್ ಅಂತ ಹೇಳಿಕೊಳ್ಳುತ್ತಿದ್ದ. ಬಿಜು ಸೌರ ಹಾಗು ಅರೆ ಪಾರಂಪರಿಕ ಸೌರಶಕ್ತಿಯ ವಿಷಯದಲ್ಲಿ PhD ಪಡೆಯಲು ತನ್ನ ನೌಕರಿಯನ್ನ ಬಿಟ್ಟು ಬಿಟ್ಟ.
ಇವರಿಬ್ಬರೂ ಸೇರಿ ಹಲವಾರು ಬೋಗಸ್ ಕಂಪೆನಿಗಳನ್ನ ಶುರು ಮಾಡಿ ಅವುಗಳ ಮೂಲಕ ಕಡಿಮೆ ಬಡ್ಡಿ ದರದಲ್ಲಿ ಸಾಲವನ್ನ ನೀಡುತ್ತೇವೆ ಹಾಗು ಇನ್ವೆಸ್ಟರ್ ಗಳಿಗೆ ಬೋಗಸ್ ಯೋಜನೆಗಳ ಮೂಲಕ ನಿವೇಶನಗಳನ್ನ ಕೊಡಿಸುತ್ತೇವೆ ಎಂಬ ಆಮಂತ್ರಣ ನೀಡುತ್ತಿದ್ದರು. ಇಲ್ಲಿಂದ ಶುರುವಾಯಿತು ಸರಿತಾ ನಾಯರ್ ಳ ಲವ್, ಸೆಕ್ಸ್ ಹಾಗು ಹಗರಣದ ಅಸಲಿ ಆಟ. ತಮ್ಮ ನಿಜ ಬಣ್ಣವನ್ನ ತೋರಿಸಲು ಬಿಜು ಹಾಗು ಸರಿತಾ ಆರಂಭಿಸಿದರು.
ಈ ಇಬ್ಬರೂ ದೊಡ್ಡ ದೊಡ್ಡ ವ್ಯಕ್ತಿಗಳ ಹೆಸರುಗಳನ್ನ ಬಳಸಿಕೊಂಸು ತಮ್ಮ ದಂ-ಧೆ-ಯನ್ನ ಶುರು ಮಾಡಿದರು. ಮೊದಲು ಸರಿತಾ ಇನ್ವೆಸ್ಟರ್ ಅಥವ ಪ್ರಮೋಟರ್ ಗಳಿಗೆ ತನ್ನ ಯೋಜನೆಯ ಬಗ್ಗೆ ತಿಳಿಸುತ್ತಿದ್ದಳು, ಬಳಿಕ ಆತನ ಬೇಕು ಬೇಡಗಳನ್ನೆಲ್ಲಾ ತಿಳಿದುಕೊಳ್ಳುತ್ತಿದ್ದಳು. ಅದಾದ ಬಳಿಕ ಆ ಇನ್ವೆಸ್ಟರ್ ಗೆ ಬಿಜು ನಿಂದ ಫೋನದ ಮಾಡಿಸುತ್ತಿದ್ದಳು. ಆತ ಫೋನ್ ಮೂಲಕ ತಾನು ಲಂಡನ್ ನಿಂದ ಮಾತನಾಡುತ್ತಿದ್ದೇನೆ ಎಂದೇ ಹೇಳಿಕೊಳ್ಳುತ್ತಿದ್ದ. ಈ ಇಬ್ಬರೂ ಹಲವಾರು ಕಾರ್ಯಕ್ರಮಗಳನ್ನ ಆಯೋಜಿಸಿ ಆ ಕಾರ್ಯಕ್ರಮಗಳಿಗೆ ದೊಡ್ಡ ದೊಡ್ಡ ರಾಜಕೀಯ ನಾಯಕರನ್ನೂ ಆಹ್ವಾನಿಸುತ್ತಿದ್ದರು.
ಸರಿತಾ ನಾಯರ್ ಹಾಗು ಬಿಜು ರಾಜಕಾರಣಿಗಳ ಜೊತೆ ಸಂಪರ್ಕ ಬೆಳೆಸಿಕೊಳ್ಳುತ್ತ ಹಾಗು ಫೋಟೊ ತೆಗೆಸಿಕೊಂಡು ಅವರನ್ನ ತಮ್ಮ ಪ್ರಭಾವಿ ಜಾಲದ ಖೆಡ್ಡಾಗೆ ಬೀ-ಳಿ-ಸಿ-ಕೊಳ್ಳುತ್ತಿದ್ದರು. ಬಳಿಕ ಕೆಲ ಜನರಿಗೆ ಇವರ ಮೇಲೆ ಅನುಮಾನ ಬಂದರೆ ಇಲ್ಲ ಲಾಸ್ ಆದರೆ ಲಾಸ್ ಆದ ಜನರು ಇವರ ಮೇಲೆ ಕೇ-ಸ್ ಕೂಡ ದಾಖಲಿಸಿದರು. 2010 ರಲ್ಲಿಈ ಇಬ್ಬರ ಮೇಲೂ 20 ಕ್ಕೂ ಅಧಿಕ ಕೇ-ಸ್ ಗಳು ದಾಖಲಾಗಿದ್ದವು. ಆದರಡ ಇವರಿಗಿದ್ದ ರಾಜಕೀಯ ಇನ್ಫ್ಲೂಯೆನ್ಸ್ ಇವರನ್ನ ಬಚಾವ್ ಮಾಡಿತ್ತು.
2011 ರಲ್ಲಿ ಶುರುವಾಯ್ತು ಟೀಂ ಸೋಲಾರ್ ಹಗರಣ:
ಇವರಿಬ್ಬರೂ ಲಕ್ಷ್ಮಿ ನಾಯರ್ ಹಾಗು ಡಾ.ಆರಬಿ ನಾಯರ್ ಹೆಸರಿನಿಂದ 2011 ರಲ್ಲಿ ಟೀಂ ಸೋಲಾರ್ ಶುರು ಮಾಡಿದರು, ಆದರೆ ಆ ಕಂಪೆನಿಯ ರೆಜಿಸ್ಟ್ರೇಶನ್ ತಮ್ಮ ವಾಸ್ತವಿಕ ಹೆಸರಿನಿಂದಲೇ ರೆಜಿಸ್ಟರ್ ಮಾಡಿಸಿದರು. ಬಳಿಕ ಆಗಿನ ಕೇರಳದ ಕಾಂಗ್ರೆಸ್ ಮುಖ್ಯಮಂತ್ರಿಯಾಗಿದ್ದ ಓಮನ್ ಚಾಂಡಿಯ ಪರ್ಸನಲ್ ಸ್ಟಾಫ್ ನ್ನ ಸಂಪರ್ಕಿಸಿದರು ಹಾಗು ಟೀಂ ಸೋಲಾರ್ ಗಾಗಿ ಸರ್ಕಾರದ ವತಿಯಿಂದ ಫಂಡ್ ಕೊಡುವಂತೆ ಕೇಳಿಕೊಂಡರು.
ಹೀಗೆ ಮುಖ್ಯಮಂತ್ರಿಯ ಪರ್ಸನಲ್ ಸ್ಟಾಫ್ ಜೊತೆಗೆ ಇವರ ಸಂಬಂಧ ಗಟ್ಟಿಯಾಗುತ್ತ ಹೋಯ್ತು, ಈ ಮೂಲಕ ಮುಖ್ಯಮಂತ್ರಿ ಕಾರ್ಯಾಲದಿಂದ ಪಡೆದುಕೊಂಡ ಮಹತ್ವದ ವಿಷಗಳನ್ನ ಬಳಸಿಕೊಂಡು ರಾಜ್ಯದ ಜನರನ್ನ ಪ್ರಭಾವಿತಗೊಳಿಸಲು ಹಾಗಯ ತನ್ನ ಕ್ಲೈಂಟ್ಸ್ ಗಳ ಮೇಲೆ ಒತ್ತಡ ಹೇರೋಕೆ ಶುರು ಮಾಡಿದರು. ಸರಿತಾ ನಾಯರ್ ರಾಜ್ಯದ ಹಲವಾರು ಮಂತ್ರಿಗಳ ಜೊತೆಗೂ ಸಂಬಂಧ ಹೊಂದಿದವಳಾಗಿ ಬೆಳೆದು ಬಿಟ್ಟಳು. ಸರಿತಾ ನಾಯರ್ ಜೊತೆಗಿನ ಅ-ಕ್ರ-ಮ ಸಂಬಂಧಕ್ಕಾಗಿ ಕೇರಳದ ಮಂತ್ರಿಯೊಬ್ಬ ತನ್ನ ಹೆಂಡತಿಗೆ ಕಿ-ರು-ಕು-ಳ ನೀಡುತ್ತಿದ್ದಾನೆ ಎಂಬ ಆ-ರೋ-ಪ-ದ ಮೇಲೆ ರಾಜೀನಾಮೆ ಕೂಡ ನೀಡಬೇಕಾಗಿತ್ತು.
ಸರಿತಾ ನಾಯರ್ ಹಾಗು ಬಿಜು ಮೇಲೆ ಸೋಲಾರ್ ಹಗರಣದಲ್ಲಿ ವ್ಯಾಪಾರಿಗಳಿಗೆ ಮೋಸ ಮಾಡಿ ಆರು ಕೋಟಿ ರೂಪಾತಿ ಲಪಟಾಯಿಸಿದ್ದಾರೆ ಎಂಬ ಆ-ರೋ-ಪ-ವೂ ಇದೆ. ಇಬರನ್ನ 2013 ರಲ್ಲಿ ಅ-ರೆ-ಸ್ಟ್ ಮಾಡುವ ಮುನ್ನವೂ ಎರಡು ಬಾರಿ ಪೋಲಿಸ್ ಅರೆಸ್ಟ್ ಮಾಡಿದ್ದರು. ಆದರೆ ಜಾಮೀನಿನ ಮೇಲೆ ಇವರಿಬ್ಬರೂ ಹೊರ ಬಂದಿದ್ದರು. ಬಿಜು ಗೆ ಹೆಂಡತಿಯ ಸಾ-ವ-ನ್ನ ಮೊದ ಮೊದಲು ಆ-ತ್ಮ-ಹ-ತ್ಯೆ ಎಂದೇ ಹೇಳಲಾಗಿತ್ತು ಆದರೆ ಪ್ರ-ಕ-ರ-ಣ-ವ-ನ್ನ ಕ್ರೈಂ ಬ್ರ್ಯಾಂಚ್ ತನಿಖೆ ನಡೆಸಿದ ಬಳಿಕ ಕೊ-ಲೆ-ಯ ಆ-ರೋ-ಪ-ದ ಮೇಲೆ ಬಿಜು ಹಾಗು ಸರಿತಾ ಗೆ ಜೀ-ವಾ-ವ-ಧಿ ಶಿ-ಕ್ಷೆ-ಯಾಯಿತು.
ಜೈ-ಲಿ-ನಲ್ಲಿ ಸರಿತಾ ಒಂದು ಪತ್ರವನ್ನ ಬರೆದಿದ್ದಾಳೆ ಹಾಗು ಆ ಪತ್ರದಲ್ಲಿ ಹಲವಾರು VIP ಗಳ ಹೆಸರನ್ನೂ ಉಲ್ಲೇಖಿಸಿದ್ದು ಆ ಪತ್ರವನ್ನ ಈಗ ಕೋರ್ಟಿಗೆ ಸಬ್ಮಿಟ್ ಮಾಡಲಾಗುವುದು. ಮೂಲಗಳ ಪ್ರಕಾರ ಸರಿತಾ ನಾಯರ್ ಳನ್ನ ಭೇಟಿಯಾಗಲು ಜೈ-ಲಿ-ಗೆ ಹಲವಾರು ರಾಜಕೀಯ ನಾಯಕರ ಸಮೇತ ಹಲವಾರು ಹೈ ಪ್ರೊಫೈಲ್ ವ್ಯಕ್ತಿಗಳೂ ಸಾಕಷ್ಟು ಪ್ರಯತ್ನ ಪಟ್ಟಿದ್ದಾರೆ. ಸದ್ಯ ಮುಳುಗುತ್ತಿರುವ ಸರಿತಾ ನಾಯರ್ ಳ ಹಡಗಿನಲ್ಲಿ ಹಲವಾರು ರಾಜಕೀಯ ನಾಯಕರ ಭವಿಷ್ಯವೂ ಡೋಲಾಯಮಾನ ಸ್ಥಿತಿಯಲ್ಲಿದೆ.