ಈಗ QR Code ನಿಂದಲೂ ಮುಸ್ಲಿಮರಿಗೆ ಸಮಸ್ಯೆ: Samsung QR Code ನಲ್ಲಿ ಇಸ್ಲಾಂಗೆ ಅಪಮಾನವಾಗಿದೆ ಅಂತ ಬೀದಿಗಿಳಿದು ಸಂಸ್ಥೆಯ ಪ್ರಾಡಕ್ಟ್ಸ್ ಸುಟ್ಟುಹಾಕಿದ ಮುಸ್ಲಿಮರು

in Uncategorized 349 views

ಮುಸ್ಲಿಂ ಉ-ಗ್ರ-ಗಾಮಿ ಫಿರ್ಕಾ ಬರೇಲ್ವಿಯ ಅಂಗಸಂಸ್ಥೆಯಾದ ತೆಹ್ರೀಕ್-ಎ-ಲಬ್ಬೈಕ್ (TLP) ನ ನೂರಾರು ಇಸ್ಲಾಮಿಸ್ಟ್‌ಗಳು ಪಾಕಿಸ್ತಾನದ ಕರಾಚಿಯಲ್ಲಿ ಮೊಬೈಲ್ ಕಂಪನಿ ಸ್ಯಾಮ್‌ಸಂಗ್ ಧರ್ಮನಿಂದೆ ಮಾಡಿದೆ ಎಂಬ ವದಂತಿಗಳ ನಂತರ ಮೊಬೈಲ್ ಬಜಾರ್ ನಲ್ಲಿ ವಿಧ್ವಂಸಕತೆಯನ್ನು ಸೃಷ್ಟಿಸಿದರು. ನಗರದ ಮೊಬೈಲ್ ಬಜಾರ್ ನಲ್ಲಿದ್ದ ಸ್ಯಾಮ್ ಸಂಗ್ ಜಾಹೀರಾತು ಫಲಕಗಳನ್ನು ಪ್ರತಿಭಟನಾಕಾರರು ಹರಿದು ಧ್ವಂಸಗೊಳಿಸಿದರು.

ಈ ಪ್ರತಿಭಟನೆಗಳು ಮೊಬೈಲ್ ಬಜಾರ್‌ಗೆ ಸೀಮಿತವಾಗಿರಲಿಲ್ಲ, ಬದಲಾಗಿ ನಗರದಾದ್ಯಂತ ಹಲವಾರು ಸ್ಥಳಗಳಲ್ಲಿ ಕಂಪನಿಯ ಜಾಹೀರಾತು ಫಲಕಗಳು ಇಸ್ಲಾಮಿಸ್ಟ್ ಗಳ ಕೋಪವನ್ನು ಎದುರಿಸಬೇಕಾಯಿತು. ಸ್ಯಾಮ್‌ಸಂಗ್ ತನ್ನ ಸಾಧನಗಳಲ್ಲಿ QR Code ನ್ನ ಅನ್ನು ಪರಿಚಯಿಸಿದ್ದು ಅದರಲ್ಲಿ ಇಸ್ಲಾಂ ಧರ್ಮನಿಂದನೆಯಾಗಿದೆ ಎಂಬ ವದಂತಿಗಳು ಹರಡಿದ ನಂತರ ಇಸ್ಲಾಮಿಸ್ಟ್‌ಗಳು ಕರಾಚಿಯಲ್ಲಿ ಬೀದಿಗಿಳಿದರು.

ಆದಾಗ್ಯೂ, ಸ್ಯಾಮ್‌ಸಂಗ್ ಮೊಬೈಲ್‌ನ ಉದ್ಯೋಗಿಯೊಬ್ಬರು ‘ದೂಷಣೆ’ ಮಾಡಿದ್ದಾರೆ, ಅವರು ತಮ್ಮ ವೈಫೈ ನೆಟ್‌ವರ್ಕ್‌ಗೆ ‘ದೇವನಿಂದನೆ’ ಎಂದು ಹೆಸರಿಸಿದ್ದಾರೆ ಎಂದು ನಂತರ ಮತ್ತೊಂದು ಹೊಸ ವದಂತಿಯೊಂದು ಹರಡಲು ಪ್ರಾರಂಭಿಸಿತು.

ಆದಾಗ್ಯೂ, ನಿಖರವಾಗಿ ಏನು ‘ದೂಷಣೆ’ ಮಾಡಲಾಗಿದೆ ಎಂಬುದು ಮಾತ್ರ ಯಾರಿಗೂ ತಿಳಿದಿರಲಿಲ್ಲ. ಆದರೂ ಕರಾಚಿಯ ಬೀದಿಗಳಲ್ಲಿ ಸ್ಯಾಮ್‌ಸಂಗ್ ಮೊಬೈಲ್‌ಗಳ ವಿರುದ್ಧ TLP ಉ-ಗ್ರ-ಗಾಮಿಗಳು ತಮ್ಮ ಕೋಪವನ್ನು ಹೊರಹಾಕುವುದನ್ನು ಮಾತ್ರ ಬಿಡಲಿಲ್ಲ.

QR Code ನಲ್ಲಿ ಧರ್ಮ ನಿಂದನೆಯಾಗಿದೆ ಅನ್ನೋದು ಪಾಕಿಸ್ತಾನದಲ್ಲಿ ಹೊಸ ವಿಷಯವೇನೂ ಅಲ್ಲವೇ ಅಲ್ಲ

ಕಳೆದ ವರ್ಷ ಡಿಸೆಂಬರ್ 31 ರಂದು, ಪಾಕಿಸ್ತಾನಿ ವ್ಯಕ್ತಿಯೊಬ್ಬ ತನ್ನ 7UP ಬಾಟಲಿಗಳಲ್ಲಿ ಪ್ರವಾದಿ ಮೊಹಮ್ಮದ್ ಅವರ ಹೆಸರಿನೊಂದಿಗೆ QR Code ಅನ್ನು ಮುದ್ರಿಸಿದ್ದಾರೆ ಎಂದು ಯುಎಸ್ ದೈತ್ಯ ಪೆಪ್ಸಿಗೆ ಬೆದರಿಕೆ ಹಾಕಿದ್ದ.

ಕಂಪನಿಯು 7UP ಕೋಲ್ಡ್ ಡ್ರಿಂಕ್ ಬಾಟಲಿಯಿಂದ QR Code ಅನ್ನು ತೆಗೆದುಹಾಕದಿದ್ದರೆ ಭೀಕರ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂದು ಪೆಪ್ಸಿ ಕಂಪನಿಯ ಟ್ರಕ್ ಚಾಲಕನಿಗೆ ವ್ಯಕ್ತಿ ಬೆದರಿಕೆ ಹಾಕಿದ್ದ.  ಆತ ಯಾರು ಎಂದು ಆತನನ್ನ ಪ್ರಶ್ನಿಸಿದಾಗ, ತನ್ನನ್ನು ತಾನು ಮುಲ್ಲಾ ಎಂದು ಗುರುತಿಸಿಕೊಂಡಿದ್ದ ವ್ಯಕ್ತಿ, QR Code ನ ಮೇಲೆ ವಾಸ್ತವವಾಗಿ ಪ್ರವಾದಿ ಮೊಹಮ್ಮದ್ ಅವರ ಹೆಸರಾಗಿದೆ ಮತ್ತು ಕಂಪನಿಯು ಲೋಗೋವನ್ನು ತೆಗೆದುಹಾಕದಿದ್ದರೆ ಟ್ರಕ್ ಅನ್ನು ಸುಡುವುದಾಗಿ ಧಮಕಿ ಹಾಕಿದ್ದ.

ಪಾಕಿಸ್ತಾನದಲ್ಲಿ ಧರ್ಮ ನಿಂದನೆ

ಪ್ರವಾದಿ ಮುಹಮ್ಮದ್ ಮತ್ತು ಇಸ್ಲಾಂ ವಿರುದ್ಧದ ಧರ್ಮನಿಂದೆಯ ಆರೋಪದ ಮೇಲೆ ಪಾಕಿಸ್ತಾನ ವ್ಯಾಪಕ ಪಂಥೀಯ ಹಿಂಸಾಚಾರ ಮತ್ತು ಗಲಭೆಗಳನ್ನು ಎದುರಿಸುತ್ತಿದೆ. ಪ್ರವಾದಿ ಮೊಹಮ್ಮದ್‌ಗೆ ವಿರುದ್ಧವಾದ ಉಲ್ಲೇಖವನ್ನು ಮಾಡುವುದನ್ನು ‘ನಿಂದನೆ’ ಎಂದು ಕರೆಯಲಾಗುತ್ತದೆ, ಇದನ್ನು ಇಸ್ಲಾಮಿಸ್ಟ್‌ಗಳು ಹೆಚ್ಚಾಗಿ ‘ಮುಸ್ಲಿಮೇತರರ’ ವಿರುದ್ಧ ಹಿಂಸಾಚಾರ ಮತ್ತು ಕೋಮು ಗಲಭೆಗಳಿಗೆ ಕಾರಣವಾಗಿ ಬಳಸುತ್ತಾರೆ.

ಪ್ರವಾದಿ ಮೊಹಮ್ಮದ್ ಅವರ ನಿಂದನೆ ಮತ್ತು ಅವಮಾನದ ಹೆಸರಿನಲ್ಲಿ ಮುಸ್ಲಿಮೇತರರ ವಿರುದ್ಧ ಹಿಂಸಾಚಾರ ಮತ್ತು ವಿಧ್ವಂಸಕ ಕೃತ್ಯಗಳ ಅಸಂಖ್ಯಾತ ವರದಿಗಳಿವೆ. ಧರ್ಮನಿಂದೆಯ ಹೆಸರಿನಲ್ಲಿ ಯಾರನ್ನಾದರೂ ಕೊ-ಲ್ಲು-ವುದು ಅಥವಾ ಜೀವಂತವಾಗಿ ಸು-ಡು-ವುದು ಪಾಕಿಸ್ತಾನದಲ್ಲಿ ಸಾಮಾನ್ಯ ಘಟನೆಯಾಗಿದೆ. ಅಲ್ಲಿನ ನ್ಯಾಯಾಂಗವೂ ಇದರ ಬಗ್ಗೆ ಅಲ್ಲಿ ಏನೂ ಮಾಡಲು ಸಾಧ್ಯವಾಗದ ಪರಿಸ್ಥಿತಿಯಿದೆ.

Advertisement
Share this on...