‘ಈದ್ಗಾ ಮಸ್ಜಿದ್’ ನಲ್ಲಿ ಹನುಮಾನ್ ಚಾಲಿಸಾ ಪಠಣ ಮಾಡಿದ ನಾಲ್ಕು ಹಿಂದೂ ಯುವಕರು: ವಿಡಿಯೋ ನೋಡಿ

in Kannada News/News 909 views

Hanuman Chalisa Eidgah:

Advertisement
ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ವೀಡಿಯೋವೊಂದು ವೈರಲ್ ಆಗುತ್ತಿದ್ದು. ವೀಡಿಯೋವನ್ನು ನೋಡಿದ ನಂತರ, ಸಾಮಾಜಿಕ ಮಾಧ್ಯಮ ಬಳಕೆದಾರರು ಅದನ್ನು ತಮ್ಮ ಸ್ನೇಹಿತರು ಮತ್ತು ಸಂಬಂಧಿಕರಲ್ಲಿ ಹೆಚ್ಚೆಚ್ಚು ಶೇರ್ ಮಾಡಿಕೊಳ್ಳುತ್ತಿದ್ದಾರೆ. ಮತ್ತೊಂದೆಡೆ ವಿಡಿಯೋ ನೋಡಿ ಕೆಲವರು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ವಿಡಿಯೋದಲ್ಲಿ ಏನೆಲ್ಲಾ ಇದೆ, ವೀಡಿಯೋ ನೋಡಿದ ಹಿಂದೂ ಸಮಾಜದ ಜನರು ಯಾಕೆ ಖುಷಿ ಪಡುತ್ತಿದ್ದಾರೆ ಎಂಬುದನ್ನು ಈ ಸುದ್ದಿಯ ಮೂಲಕ ನಿಮಗೆ ತಿಳಿಸುತ್ತೇವೆ.  ಈ ವೀಡಿಯೊ ಉತ್ತರ ಪ್ರದೇಶದ ಮಥುರಾದ್ದಾಗಿದೆ. ಬನ್ನಿ ಈ ಸಂಪೂರ್ಣ ಸುದ್ದಿಯನ್ನು ವಿವರವಾಗಿ ನಿಮಗೆ ತಿಳಿಸುತ್ತೇವೆ.

ಗೋವರ್ಧನ ಪ್ರದೇಶದ ಈದ್ಗಾ ಮ ಸೀದಿಯಲ್ಲಿ ಹನುಮಾನ್ ಚಾಲೀಸಾ ಪಠಿಸಿದ ನಾಲ್ವರು ಹಿಂದೂ ಯುವಕರು

ಉತ್ತರ ಪ್ರದೇಶದ ಮಥುರಾದಲ್ಲಿ ಈದ್ಗಾ ಮೈದಾನದಲ್ಲಿ ಮ ಸೀದಿಯೊಂದಿದೆ. ನಾಲ್ವರು ಹಿಂದೂ ಯುವಕರು ಅಲ್ಲಿಗೆ ಹೋಗಿ ಹನುಮಾನ್ ಚಾಲೀಸಾ ಪಠಿಸುತ್ತಿದ್ದರು. ಕಳೆದ ಮಂಗಳವಾರದಿಂದ ಸಾಮಾಜಿಕ ಜಾಲತಾಣಗಳಲ್ಲಿ ಈ ವಿಡಿಯೋ ಮತ್ತೆ ಭಾರೀ ಸದ್ದು ಮಾಡುತ್ತಿದೆ. ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ಪೋಸ್ಟ್ ಆದ ಬಳಿಕ ಸ್ಥಳೀಯ ಪೊಲೀಸರಿಗೆ ಮಾಹಿತಿ ಸಿಕ್ಕಿದೆ. ಪ್ರಕರಣದ ಬಗ್ಗೆ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ ನಂತರ ನಾಲ್ವರೂ ಯುವಕರನ್ನು ಬಂಧಿಸಲಾಗಿದೆ.

ನಾಲ್ವರು ಯುವಕರ ಮೇಲೆ ಪ್ರಕರಣ ದಾಖಲು

ಮಾಧ್ಯಮ ವರದಿಗಳ ಪ್ರಕಾರ, ಹನುಮಾನ್ ಚಾಲೀಸಾವನ್ನು ಪಠಣ ಮಾಡಿದ ಯುವಕರ ಹೆಸರುಗಳು ಸೌರಭ್ ಲಂಬಾರ್ದಾರ್, ರಾಘವ್ ಮಿತ್ತಲ್, ಕನ್ಹಾ ಮತ್ತು ಕೃಷ್ಣ ಠಾಕೂರ್ ಎಂಬುದಾಗಿದೆ. ಈ ನಾಲ್ವರು ಯುವಕರು ಗೋವರ್ಧನ್ ಪ್ರದೇಶದ ನಿವಾಸಿಗಳಾಗಿದ್ದಾರೆ. ಆದರೆ, ಈ ವಿಚಾರದಲ್ಲಿ ಯಾರ ಪರವಾಗಿಯೂ ದೂರು ದಾಖಲಾಗಿಲ್ಲದಿದ್ದರೂ ಈ ನಡುವೆ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ. ಪೊಲೀಸರು ಬಂಧಿಸಿದ ನಂತರ, ನಾಲ್ವರನ್ನು ಚಾಲನ್ ಮಾಡಲಾಗಿದೆ.

ಸಹೋದರತ್ವ ಬೆಳೆಸಲು ಮ ಸ್ಜಿದ್ ನಲ್ಲಿ ಹನುಮಾನ್ ಚಾಲಿಸಾ ಪಠಣ

ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿರುವ ವಿಡಿಯೋದಲ್ಲಿ ನಾಲ್ವರು ಯುವಕರು ಪರಸ್ಪರ ಭಾವೈಕ್ಯತೆಯನ್ನು ಹೆಚ್ಚಿಸಲು ಹನುಮಾನ್ ಚಾಲೀಸಾ ಪಠಿಸುತ್ತಿದ್ದೇವೆ ಎಂದು ಹೇಳುತ್ತಿರುವುದು ಸ್ಪಷ್ಟವಾಗಿ ಕೇಳಿಬರುತ್ತಿದೆ. ಕೆಲವರು ದೇವಸ್ಥಾನಕ್ಕೆ ಹೋಗಿ ನ ಮಾಜ್ ಮಾಡುವ ರೀತಿಯಂತೆ ಇದೂ ಕೂಡ ಎಂದರು. ಹಾಗೆಯೇ ನಾವು ಕೂಡ ಮ ಸೀದಿಗೆ ಹೋಗಿ ಹನುಮಾನ್ ಚಾಲೀಸಾ ಪಠಿಸುತ್ತಿದ್ದೆವು. ಈ ವೀಡಿಯೊ 2020 ರ ನವೆಂಬರ್ ತಿಂಗಳದ್ದಾಗಿದೆ. ಈ ಪ್ರಕರಣವು 3 ನವೆಂಬರ್ 2020 ರದ್ದಾಗಿದೆ. ಸದ್ಯ ನಾಲ್ವರು ಯುವಕರು ತಮ್ಮ ತಮ್ಮ ಮನೆಯಲ್ಲೇ ಇದ್ದಾರೆ.

Advertisement
Share this on...