ಈ ಆ್ಯಪ್ ಗಳು ನಿಮ್ಮ ಫೊನ್ ನಲ್ಲಿದ್ದರೆ ನಿಮ್ಮ ಬ್ಯಾಂಕ್ ಅಕೌಂಟ್ ನಿಂದ ಖಾಲಿಯಾಗುತ್ತೆ ಹಣ: ಮೊದಲು uninstall ಮಾಡಿ

in Kannada News/News/ಕನ್ನಡ ಮಾಹಿತಿ 249 views

Fake apps may empty your account : ನಕಲಿ ಬ್ಯಾಂಕಿಂಗ್ ಆಪ್‌ಗಳು ನಿಮ್ಮ ಮೊಬೈಲ್ ಫೋನ್ ಬ್ಯಾಟರಿಯನ್ನು ಬೇಗನೆ ಖಾಲಿ ಮಾಡಬಹುದು. ಈ ರೀತಿಯ ಹಲವು ಸಾಧ್ಯತೆಗಳು ನಿಮ್ಮ ಗಮನಕ್ಕೆ ಬಂದರೆ ನಕಲಿ ಆ್ಯಪ್​​ಗಳು ನಿಮ್ಮ ಮೊಬೈಲ್​ನಲ್ಲಿದೆ ಎಂದರ್ಥ.

Advertisement

ಡಿಜಿಟಲ್ ಇಂಡಿಯಾ(Digital India)ದ ಸಮಯದಲ್ಲಿ ಜನ ತಮ್ಮ ಸ್ಮಾರ್ಟ್‌ಫೋನ್‌ಗಳನ್ನು(smartphones) ಬಳಸಿಕೊಂಡು ಮನೆಯಲ್ಲಿ ಕುಳಿತುಕೊಂಡೇ ಬ್ಯಾಂಕ್‌ಗಳಿಗೆ ಸಂಬಂಧಿಸಿದ ಹೆಚ್ಚಿನ ಕೆಲಸವನ್ನು ನಿರ್ವಹಿಸಿದ್ರು. ಅನ್​​ಲೈನ್​​ ಬ್ಯಾಂಕಿಂಗ್​ ಬ್ಯಾಂಕಿಗೆ ಹೋಗುವ ಸಮಯವನ್ನು ಉಳಿಸುತ್ತದೆ ಮತ್ತು ಮನೆಯಲ್ಲಿದ್ದುಕೊಂಡೇ ಎಲ್ಲಾ ಕೆಲಸಗಳು ಮುಗಿಯುತ್ತವೆ. ಆದಾಗ್ಯೂ, ಆನ್‌ಲೈನ್ ಬ್ಯಾಂಕಿಂಗ್ ಸೌಲಭ್ಯಗಳು ಹೆಚ್ಚಾದಾಗಿನಿಂದ, ಸೈಬರ್ ಅಪರಾಧ ಪ್ರಕರಣಗಳು ನಿರಂತರವಾಗಿ ಹೆಚ್ಚುತ್ತಿವೆ. ಇದಕ್ಕೆ ಮುಖ್ಯ ಕಾರಣವೆಂದರೆ ಇನ್ನೂ ಅನೇಕ ಜನರಿಗೆ ಸೈಬರ್ ಅಪರಾಧದ ಬಗ್ಗೆ ಸಾಕಷ್ಟು ಮಾಹಿತಿ ಇಲ್ಲ, ಹೀಗಾಗಿ ಸೈಬರ್ ಅಪರಾಧಿಗಳು ಜನರನ್ನು ಆನ್ಲೈನ್ ​​ಬ್ಯಾಂಕ್ ವಂಚನೆಗೆ ಬಲಿಯಾಗುವಂತೆ ಮಾಡುತ್ತಾರೆ.

ಇತ್ತೀಚಿನ ದಿನಗಳಲ್ಲಿ, ನಕಲಿ ಬ್ಯಾಂಕಿಂಗ್ ಆಪ್‌ಗಳು ಕೂಡ ವಂಚನೆಯ ವಿಧಾನವಾಗಿ ಮಾರ್ಪಟ್ಟಿವೆ. ಈ ಆ್ಯಪ್‌ಗಳನ್ನು ಬಳಸುವ ಜನರು ಕೂಡ ಅವುಗಳನ್ನು ಗುರುತಿಸಲು ಸಾಧ್ಯವಾಗದೇ ಇರುವುದು ಅವುಗಳನ್ನು ಅಪಾಯಕಾರಿಯಾಗಿಸುತ್ತದೆ. ಈ ನಕಲಿ ಬ್ಯಾಂಕಿಂಗ್ ಆಪ್‌ಗಳು ನೈಜ ಬ್ಯಾಂಕಿಂಗ್ ಆಪ್‌ಗಳಂತೆ ಕಾಣುತ್ತವೆ. ಇಂತಹ ಪರಿಸ್ಥಿತಿಯಲ್ಲಿ ಬಳಕೆದಾರರು ಮೋಸ ಹೋಗುತ್ತಾರೆ. ಇದರ ಪರಿಣಾಮವಾಗಿ ಅಪರಾಧಿಗಳು ನಿಮ್ಮ ಬ್ಯಾಂಕ್ ಖಾತೆಯನ್ನು ಖಾಲಿ ಮಾಡುತ್ತಾರೆ. ಅದಕ್ಕಾಗಿಯೇ ನೀವು ಮೋಸವನ್ನು ತಪ್ಪಿಸಲು ನಕಲಿ ಅಪ್ಲಿಕೇಶನ್‌ಗಳನ್ನು ಗುರುತಿಸುವುದು ಬಹಳ ಮುಖ್ಯ. ಸೈಬರ್ ಅಪರಾಧಿಗಳು ಜನರ ಗೌಪ್ಯ ಡೇಟಾ ಅಥವಾ ಆನ್‌ಲೈನ್ ಬ್ಯಾಂಕಿಂಗ್ ಐಡಿ-ಪಾಸ್‌ವರ್ಡ್ ಇತ್ಯಾದಿಗಳ ವಿಚಾರವಾಗಿ ನಕಲಿ ಬ್ಯಾಂಕಿಂಗ್ ಅಪ್ಲಿಕೇಶನ್‌ಗಳ ಮೇಲೆ ಕಣ್ಣಿಡುತ್ತಾರೆ. ನಂತರ ನಿಮ್ಮ ಬ್ಯಾಂಕ್ ಖಾತೆಯಲ್ಲಿರುವ ಎಲ್ಲಾ ಹಣವನ್ನು ದೋಚುತ್ತಾರೆ.

ನಿಮ್ಮ ಬ್ಯಾಂಕ್ ಖಾತೆಯನ್ನು ಸುರಕ್ಷಿತವಾಗಿರಿಸುವುದು ಹೇಗೆ?

ಥರ್ಡ್ ಪಾರ್ಟಿ ಸೈಟ್ ನಿಂದ ನಿಮ್ಮ ಮೊಬೈಲ್ ನಲ್ಲಿ ಯಾವುದೇ ಆಪ್ ಅನ್ನು ಇನ್ ಸ್ಟಾಲ್ ಮಾಡಿಕೊಳ್ಳಬೇಡಿ. ಯಾವಾಗಲೂ ನಿಮ್ಮ ಫೋನ್‌ನ ಪ್ಲೇ ಸ್ಟೋರ್ ಅಥವಾ ಆಪ್ ಸ್ಟೋರ್‌ನಿಂದ ಪರಿಶೀಲಿಸಿದ ಆಪ್‌ಗಳನ್ನು ಮಾತ್ರ ಇರಿಸಿಕೊಳ್ಳಿ. ಇದು ವಂಚನೆಯ ಸಾಧ್ಯತೆಗಳನ್ನು ಕಡಿಮೆ ಮಾಡುತ್ತದೆ.

ನಕಲಿ ಬ್ಯಾಂಕಿಂಗ್ ಆಪ್‌ಗಳನ್ನು ಗುರುತಿಸುವುದು ಹೇಗೆ?

1) ನಕಲಿ ಬ್ಯಾಂಕಿಂಗ್ ಆಪ್‌ಗಳು ನಿಮ್ಮ ಮೊಬೈಲ್ ಫೋನ್ ಬ್ಯಾಟರಿಯನ್ನು ಬೇಗನೆ ಖಾಲಿ ಮಾಡಬಹುದು.

2)ನಿಮ್ಮ ಮೊಬೈಲ್ ಫೋನ್ ಹೊಸದಾಗಿದ್ದರೂ ಕಡಿಮೆ ಸಮಯದಲ್ಲಿ ಬ್ಯಾಟರಿ ಪದೇ ಪದೇ ಕಡಿಮೆಯಾಗುತ್ತಿದ್ದರೆ, ಅದು ಮೊಬೈಲ್ ನಲ್ಲಿ ಮಾಲ್ ವೇರ್ ಅಥವಾ ವೈರಸ್ ಚಿಹ್ನೆಯಾಗಿರಬಹುದು.

3) ಯಾವುದೇ ಆಪ್ ಡೌನ್‌ಲೋಡ್ ಮಾಡುವಾಗ, ಅದರ ಹೆಸರಿನ ಕಾಗುಣಿತಕ್ಕೆ ಗಮನ ಕೊಡಿ. ಅದರಲ್ಲಿ ಏನಾದರೂ ತಪ್ಪಾಗಿದ್ದರೆ, ಅದನ್ನು ಡೌನ್‌ಲೋಡ್ ಮಾಡಬೇಡಿ. ಆಪ್ ಹೆಸರಿನಲ್ಲಿ ಒಂದೇ ಒಂದು ಅಕ್ಷರವನ್ನು ತಪ್ಪಾಗಿ ಬರೆದರೆ, ಅದು ನಕಲಿ ಆಪ್ ಎಂದು ಅರ್ಥೈಸಿಕೊಳ್ಳಿ.

4) ಇಂತಹ ಆಪ್ ನಿಮಗೆ ಮೋಸ ಮಾಡಬಹುದು, ಅಂದರೆ ನಿಮ್ಮ ಬ್ಯಾಂಕ್ ಖಾತೆಯನ್ನು ಖಾಲಿ ಮಾಡಬಹುದು.

5) ಆಪ್ ಡೌನ್‌ಲೋಡ್ ಮಾಡುವಾಗ, ಆ ಆಪ್ ಅನ್ನು ಎಷ್ಟು ಬಾರಿ ಡೌನ್‌ಲೋಡ್ ಮಾಡಲಾಗಿದೆ ಎಂಬುದನ್ನು ಸಹ ಗಮನಿಸಿ.

6) ವಾಸ್ತವವಾಗಿ, ನೀವು ಒಂದೇ ಹೆಸರಿನ ಹಲವು ಆಪ್‌ಗಳನ್ನು ನೋಡಿದರೆ, ನಂತರ ಅವರ ಡೌನ್‌ಲೋಡ್‌ಗಳ ಸಂಖ್ಯೆಯನ್ನು ಖಂಡಿತವಾಗಿ ನೋಡಿ ಏಕೆಂದರೆ ಅದು ನೈಜ ಮತ್ತು ನಕಲಿಯನ್ನೂ ಗುರುತಿಸಬಹುದು.

Advertisement
Share this on...