“ಈ ಎಲ್ಲ ಸಮಸ್ಯೆ/ಟೆನ್ಶನ್ ಇರೋದೇ ಭಾರತೀಯ ಸೇನೆಯಿಂದ, ಬರೀ ದುಡ್ಡು ಮಾಡಬೇಕಷ್ಟೇ”: ಪಾಕಿಸ್ತಾನದ ಜೊತೆ ಕೆಲಸ ಮಾಡೇ ಮಾಡ್ತೀನಿ ಎಂದ ಬಾಲಿವುಡ್ ನಟ ರಣಬೀರ್ ಕಪೂರ್

in Uncategorized 343 views

ಸೌದಿ ಅರೇಬಿಯಾದಲ್ಲಿ ನಡೆದ ‘ರೆಡ್ ಸೀ ಇಂಟರ್ ನ್ಯಾಷನಲ್ ಫಿಲ್ಮ್ ಫೆಸ್ಟಿವಲ್’ನಲ್ಲಿ ಬಾಲಿವುಡ್ ನಟ ರಣಬೀರ್ ಕಪೂರ್ ಕೂಡ ಭಾಗವಹಿಸಿದ್ದರು. ಈ ಕಾರ್ಯಕ್ರಮದಲ್ಲಿ ಅವರಿಗೆ ‘ವೆರೈಟಿ ಇಂಟರ್‌ನ್ಯಾಶನಲ್ ವ್ಯಾನ್‌ಗಾರ್ಡ್ ಆಕ್ಟರ್ ಅವಾರ್ಡ್’ ನೀಡಲಾಯಿತು. ಈ ವೇಳೆ ಅವರು ಪಾಕಿಸ್ತಾನದ ಬ್ಲಾಕ್‌ಬಸ್ಟರ್‌ ಆಗಿದ್ದ ‘ದಿ ಲೆಜೆಂಡ್‌ ಆಫ್‌ ಮೌಲಾ ಜಟ್‌’ ಚಿತ್ರವನ್ನು ಹೊಗಳಿದರು. ಅಲ್ಲದೆ ಪಾಕಿಸ್ತಾನಿ ಕ್ರೂ ನೊಂದಿಗೆ (ಸಿಬ್ಬಂದಿಯೊಂದಿಗೆ) ಕೆಲಸ ಮಾಡಲು ತುಂಬಾ ಸಂತೋಷವಾಗುತ್ತದೆ ಎಂದು ಹೇಳಿದ್ದಾರೆ.

Advertisement

ವಾಸ್ತವವಾಗಿ, ವರದಿಗಳ ಪ್ರಕಾರ, ಈವೆಂಟ್‌ನಲ್ಲಿದ್ದ ಪ್ರೇಕ್ಷಕರಲ್ಲಿ ಒಬ್ಬರು ಅವರನ್ನು, “ಇಂದು ನಮ್ಮ ಬಳಿ ಸೌದಿ ಅರೇಬಿಯಾದಂತಹ ಪ್ಲ್ಯಾಟಫಾರಂ ಇದ್ದು ನಾವಿಲ್ಲಿ ಚಲನಚಿತ್ರಗಳನ್ನು ಒಟ್ಟಿಗೆ ಮಾಡಬಹುದು. ನನ್ನ ಚಿತ್ರಕ್ಕೆ ನಿಮ್ಮ ಸೈನ್ ಮಾಡಿಸಿ ನನಗೆ ಸಂತೋಷವಾಗುತ್ತದೆ. ಪಾಕಿಸ್ತಾನಿ ತಂಡದೊಂದಿಗೆ ಸೌದಿ ಅರೇಬಿಯಾದಲ್ಲಿ ನಿಮ್ಮ ತಂಡದೊಂದಿಗೆ ಕೆಲಸ ಮಾಡಲು ನೀವು ಬಯಸುವಿರಾ?” ಎಂದು ಕೇಳಿದರು.

ಈ ಪ್ರಶ್ನೆಗೆ ಉತ್ತರಿಸಿದ ರಣಬೀರ್ ಕಪೂರ್, “ಖಂಡಿತ ಸರ್. ವಿಶೇಷವಾಗಿ ಕಲೆಯಲ್ಲಿ ಕಲಾವಿದರಿಗೆ ಯಾವುದೇ ಗಡಿಗಳಿಲ್ಲ ಎಂದು ನಾನು ಭಾವಿಸುತ್ತೇನೆ. ದಿ ಲೆಜೆಂಡ್ ಆಫ್ ಮೌಲಾ ಜಟ್‌ಗಾಗಿ ಪಾಕಿಸ್ತಾನಿ ಚಲನಚಿತ್ರೋದ್ಯಮಕ್ಕೆ ಅನೇಕ ಅಭಿನಂದನೆಗಳು. ನಾವು ನೋಡಿದಂತೆ ಇದು ಕಳೆದ ಕೆಲವು ವರ್ಷಗಳಲ್ಲಿ ಅತಿದೊಡ್ಡ ಹಿಟ್ ಆಗಿದೆ. ಖಂಡಿತ ನಾನು ಒಟ್ಟಿಗೆ ಕೆಲಸ ಮಾಡಲು ಸಂತೋಷಪಡುತ್ತೇನೆ” ಎಂದರು.

ಅವರ ಈ ಹೇಳಿಕೆಯ ನಂತರ ಭಾರತೀಯರು ಸಾಮಾಜಿಕ ಜಾಲತಾಣಗಳಲ್ಲಿ ಪ್ರತಿಕ್ರಿಯಿಸುತ್ತಿದ್ದಾರೆ. ಒಬ್ಬ ಯೂಸರ್ ಕೋಪದಿಂದ ಹೀಗೆ ಬರೆದಿದ್ದಾರೆ “ಸೇನೆಯೇ ಎಲ್ಲಾ ಟೆನ್ಶನ್ ಗಳನ್ನೂ ತಮ್ಮ ತಲೆಯ ಮೇಲೆ ತೆಗೆದುಕೊಳ್ಳಬೇಕಾಗಿದೆ. ಈ %$# ಹಣ ಗಳಿಸುತ್ತಾರಷ್ಟೇ. ಉರ್ದುವುಡ್‌ನ ಈ ಅವ್ಯವಸ್ಥೆಯನ್ನು ಜನರು ಸ್ವಚ್ಛಗೊಳಿಸಲೇಬೇಕು”

ಒಬ್ಬ ಯೂಸರ್ ಕಮೆಂಟ್ ಮಾಡುತ್ತ, “ಒಂದು ವೇಳೆ ಈ ವ್ಯಕ್ತಿ ಪಾಕಿಸ್ತಾನದೊಂದಿಗೆ ಕೆಲಸ ಮಾಡಿದರೆ, ಭಾರತದಲ್ಲಿ ಇವನ ಕೆರಿಯರ್ (ವೃತ್ತಿಜೀವನವು) ನಾಶವಾಗುತ್ತದೆ” ಎಂದಿದ್ದಾರೆ.

ಇದೇ ರೀತಿ ಮತ್ತೊಬ್ಬ ಯೂಸರ್, “ದೇಶದ ಗೌರವ ಮತ್ತು ಭದ್ರತೆಯ ವಿಷಯಕ್ಕೆ ಬಂದಾಗ, ‘ಕಲಾವಿದರಿಗೆ ಗಡಿಯಿಲ್ಲ’ ಎಂದು ಹೇಳುವುದು ತಪ್ಪು. ಇದರರ್ಥ ಅವರು ತಮ್ಮನ್ನು ದೇಶದ ಗೌರವಕ್ಕಿಂತ ದೊಡ್ಡವರು ಎಂದು ಪರಿಗಣಿಸುತ್ತಾರೆ. ಒಬ್ಬ ಸೈನಿಕನಿಗೆ ಬೇರೆ ಯಾವುದೇ ದೇಶದೊಂದಿಗೆ ವೈಯಕ್ತಿಕ ದ್ವೇಷವಿಲ್ಲ ಆದರೆ ಅವನು ತನ್ನ ದೇಶದ ಗೌರವ ಮತ್ತು ಭದ್ರತೆಗೆ ಪ್ರಾಮುಖ್ಯತೆ ನೀಡುತ್ತಾನೆ” ಎಂದಿದ್ದಾರೆ.

ಅವಿನಾಶ್ ಝಾ ಎಂಬ ಯೂಸರ್ ಕಮೆಂಟ್ ಮಾಡುತ್ತ, “ಈತನ ಮುತ್ತಜ್ಜ ಪೃಥ್ವಿರಾಜ್ ಕಪೂರ್ ತಮ್ಮ ಜೀವವನ್ನು ಉಳಿಸಿಕೊಂಡು ಪಾಕಿಸ್ತಾನದಿಂದ ಭಾರತಕ್ಕೆ ಬಂದರು. ಈಗ ಪಾಕಿಸ್ತಾನದ ಮೇಲಿನ ಈತನ ಪ್ರೀತಿಯನ್ನು ನೋಡಿ, ಆದರೂ ಜನ ಇವನ ಚಲನಚಿತ್ರವನ್ನು ನೋಡಲು ಹೋಗುತ್ತಾರೆ” ಎಂದಿದ್ದಾರೆ.

ರಣಬೀರ್ ಕಪೂರ್ ಈ ಹಿಂದೆ ಬ್ರಹ್ಮಾಸ್ತ್ರ ಚಿತ್ರದ ಮೂಲಕ ಸಾಕಷ್ಟು ಸುದ್ದಿಯಲ್ಲಿದ್ದರು. ಅವರ ಬೀಫ್ ತಿನ್ನುತ್ತೇನೆ ಎಂಬ ಹೇಳಿಕೆ ವೈರಲ್ ಆದ ನಂತರ ಅವರ ಚಿತ್ರವನ್ನೂ ಬಾಯ್‌ಕಾಟ್ ಮಾಡುವ ಅಭಿಯಾನ ನಡೆದಿದ್ದವು. ಇದಾದ ನಂತರ ಮದುವೆಯಾದ ಕೇವಲ ಆರೇ ತಿಂಗಳ ನಂತರ ತಂದೆಯಾಗುವ ಮೂಲಕ ಮಾಧ್ಯಮಗಳಲ್ಲಿ ಸುದ್ದಿಯಾಗಿದ್ದ ರಣಬೀರ್ ಹಾಗು ಆಲಿಯಾ ಭಟ್ ಇದೀಗ ಮತ್ತೆ ಪಾಕಿಸ್ತಾನದ ಈ ಹೇಳಿಕೆಯ ಬಳಿಕ ಜನರಲ್ಲಿ ಮತ್ತೆ ಚರ್ಚೆಗೆ ಕಾರಣವಾಗಿದ್ದಾರೆ. ರಣಬೀರ್ 2016 ರಲ್ಲಿ ‘ಏ ದಿಲ್ ಹೈ ಮುಷ್ಕಿಲ್’ ಚಿತ್ರದ ಮೂಲಕ ‘ದಿ ಮೌಲಾ ಜಟ್‌’ ಚಿತ್ರದ ನಾಯಕ ಫವಾದ್ ಖಾನ್ ಅವರೊಂದಿಗೆ ಕೊನೆಯ ಚಿತ್ರವನ್ನು ಮಾಡಿದ್ದರು. ಇದಾದ ಬಳಿಕ ಉರಿ ದಾ-ಳಿ-ಯ ನಂತರ, ಭಾರತೀಯ ಜನರು ಪಾಕಿಸ್ತಾನದ ವಿರುದ್ಧ ಆಕ್ರೋಶಿತರಾಗಿದ್ದರು ಮತ್ತು ದೇಶದ ಜನರ ಭಾವನೆಗಳನ್ನ ದೃಷ್ಟಿಯಲ್ಲಿಟ್ಟುಕೊಂಡು ಪಾಕಿಸ್ತಾನಿ ನಟ-ನಟಿಯರೊಂದಿಗಿನ ಚಲನಚಿತ್ರಗಳನ್ನು ನಿಲ್ಲಿಸಿ ಬಿಟ್ಟಿದ್ದರು.

Advertisement
Share this on...