ಈ ಐದು ರೀತಿಯ ಕೆಲಸಗಳನ್ನ ತಪ್ಪದೇ ಮಾಡಿ ಕೊರೋನಾದಿಂದ ಬಚಾವಾಗಿ ಎಂಬ ಉತ್ತಮ ಸಂದೇಶ ಕೊಟ್ಟ ನಟ ಪುನೀತ್ ರಾಜಕುಮಾರ್: ವಿಡಿಯೋ ನೋಡಿ ನೀವೂ ಪಾಲಿಸಿ

in FILM NEWS/Helath-Arogya/Kannada News/News 150 views

ಬೆಂಗಳೂರು: ಸ್ಯಾಂಡಲ್‍ವುಡ್ ನಟ ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಕೊರೊನಾದಿಂದ ನಮ್ಮನ್ನು ನಾವು ಹೇಗೆ ರಕ್ಷಿಸಿಕೊಳ್ಳಬಹುದು ಎಂಬುವುದಕ್ಕೆ 5 ಸಲಹೆ ನೀಡಿದ್ದಾರೆ.

Advertisement

ಕೊರೊನಾ ಎರಡನೇ ಅಲೆಯಿಂದಾಗಿ ಅನೇಕ ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಹಲವರು ಆರ್ಥಿಕ ಬಿಕ್ಕಟ್ಟನ್ನು ಎದುರಿಸುತ್ತಿದ್ದಾರೆ. ರಾಜ್ಯದಲ್ಲಿ ಕೊರೊನಾ ಲಾಕ್‍ಡೌನ್ ಘೋಷಿಸಿದ್ದರೂ, ದಿನದಿಂದ ದಿನ ಅತೀ ವೇಗವಾಗಿ ಹರಡುತ್ತಿರುವ ಕೊರೊನಾದಿಂದ ಮುಕ್ತಿ ಪಡೆಯಲು ಜನರು ಕೆಲವು ನಿಯಮಗಳನ್ನು ಪಾಲಿಸಬೇಕು ಎಂದು ನಟ ಪುನೀತ್ ರಾಜ್ ಕುಮಾರ್ ವೀಡಿಯೋವೊಂದನ್ನು ತಮ್ಮ ಇನ್‍ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಳ್ಳುವ ಮೂಲಕ ಮನವಿ ಮಾಡಿದ್ದಾರೆ. ಜೊತೆಗೆ ಕೊರೊನಾ ಎರಡನೆ ಅಲೆಯು ಎಲ್ಲರ ಮೇಲೂ ಪರಿಣಾಮ ಬೀರುತ್ತಿದೆ. ಈ ಮಾರಕ ವೈರಸ್ ವಿರುದ್ಧ ಹೋರಾಡಲು ನಾವೆಲ್ಲರೂ ಒಟ್ಟಾಗಿ ಸೇರಬೇಕಾಗಿದೆ. ನಾವು ಸುರಕ್ಷಿತವಾಗಿರೋಣ ಮತ್ತು ನಮ್ಮ ಸುತ್ತಲಿರುವವರನ್ನು ಸುರಕ್ಷಿತವಾಗಿರಿಸೋಣ ಎಂದು ಕ್ಯಾಪ್ಷನ್‍ನಲ್ಲಿ ಬರೆದುಕೊಂಡಿದ್ದಾರೆ.

ಕೊರೊನಾ ಜಾಗೃತಿ ಅಭಿಯಾನಕ್ಕೆ ಕೈ ಜೋಡಿಸಿರುವ ಪುನೀತ್ ರಾಜ್ ಕುಮಾರ್‍ರವರು ಕೆಲವು ಸಾಕ್ಷ್ಯ ಚಿತ್ರಗಳ ಮೂಲಕ 5 ಸೂತ್ರಗಳನ್ನು ತಿಳಿಸಿದ್ದಾರೆ. ವೀಡಿಯೋದಲ್ಲಿ, ಕೊರೊನಾ ಟೆಸ್ಟ್ ರಿಪೋರ್ಟ್‍ಗಾಗಿ ಕಾಯುತ್ತಿದ್ದೀರಾ ಅಥವಾ ಕೊರೊನಾ ಇರುವುದು ದೃಢವಾಗಿದ್ಯಾ? ಹಾಗಾದರೆ ಪ್ರತಿ ಮನೆಯಲ್ಲಿಯೂ ಜೊತೆಯಾಗಿ ಕೊರೊನಾ ಗೆಲ್ಲಿ ಎಂದಿದ್ದಾರೆ. ಈ ವೇಳೆ ಇಬ್ಬರು ಮಕ್ಕಳನ್ನು ಸಂಯಮ ಹಾಗೂ ಎಚ್ಚರದ ಮಾತಿನಂತೆ ಬಿಂಬಿಸಿ 5 ಸೂತ್ರಗಳನ್ನು ತಿಳಿಸಿದ್ದಾರೆ.

* ಜಾಗರೂಕತೆಯಿಂದ ಒಂದು ಪ್ರತ್ಯೇಕ ಕೊಠಡಿಯಲ್ಲಿ ಕನಿಷ್ಠ ಪಕ್ಷ ಒಬ್ಬರೇ ಉಳಿದು ಬಿಡಿ.

* ಸ್ವತಃ ಚಿಕಿತ್ಸೆ ಮಾಡಿಕೊಳ್ಳದೇ ವೈದ್ಯರನ್ನು ಸಂಪರ್ಕಿಸಿ.

* ಮನೆಯಲ್ಲಿರುವವರು ಕಾಲಕಾಲಕ್ಕೆ ಸೋಪಿನಿಂದ ಕೈ ತೋಳಿಯುವಂತೆ ನೋಡಿಕೊಳ್ಳಿ.

* ನೀವು ಕೊರೊನಾ ಸೋಂಕಿತರನ್ನು ಮನೆಯಲ್ಲಿಯೇ ನೋಡಿಕೊಳ್ಳುತ್ತಿದ್ದರೆ, ಮಾಸ್ಕ್‍ನನ್ನು ಮೂಗು ಹಾಗೂ ಬಾಯಿಯನ್ನು ಮುಚ್ಚುವಂತೆ ಸರಿಯಾಗಿ ಧರಿಸಿ.

* ಮುಂದಿನ ಕೆಲವು ದಿನಗಳಲ್ಲಿ ಜ್ವರ ಕಡಿಮೆಯಾಗದಿದ್ದರೆ ಹಾಗೂ ಉಸಿರಾಟದ ತೊಂದರೆಯಾಗುತ್ತಿದ್ದರೆ, ನಿಮ್ಮ ವೈದ್ಯರನ್ನು ಸಂಪರ್ಕಿಸಿ, ವೈದ್ಯರು ಸೂಚಿಸಿದರೆ ಮಾತ್ರ ಹತ್ತಿರ ಆಸ್ಪತ್ರೆಯನ್ನು ಸಂಪರ್ಕಿಸಿ.

ಹೀಗೆ ಸಂಯಮ ಹಾಗೂ ಎಚ್ಚರವನ್ನು ತಿಳಿಸುತ್ತಿರುವ ಈ 5 ಸೂತ್ರಗಳನ್ನು ಪಾಲಿಸಿದರೆ ನಾವು ಖಂಡಿತ ಕೊರೊನಾವನ್ನು ಸೋಲಿಸಬಹುದು. ಪ್ರತಿ ಮನೆಯು ಪಣ ತೊಟ್ಟಿದೆ ಎಂದ ಮೇಲೆ ಕೊರೊನಾ ಖಂಡಿತ ಸೋಲುತ್ತದೆ ಎಂದಿದ್ದಾರೆ.

Advertisement
Share this on...