ಐಎಎಸ್ ಅಧಿಕಾರಿಯೊಬ್ಬರು ಮುಕ್ತವಾಗಿ ಸಾಮಾಜಿಕ ಜಾಲತಾಣದಲ್ಲಿ ತಮ್ಮ ಪ್ರೇಮಕಥೆ ಹಂಚಿಕೊಂಡಿರುವುದಕ್ಕೆ ನೆಟ್ಟಿಗರು ಕೂಡ ಫಿದಾ ಆಗಿದ್ದಾರೆ.
ಪ್ರೇಮಕಥೆಗಳೆ ಹಾಗೇ ಎಲ್ಲರನ್ನು ಮಂತ್ರ ಮುಗ್ಧರನ್ನಾಗಿಸುತ್ತವೆ. ಅಂತಹ ಅಪರೂಪದ ಐಎಎಸ್ ಅಧಿಕಾರಿಯೊಬ್ಬರ ಪ್ರೇಮಕಥೆ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ. ಉತ್ತರ ತ್ರಿಪುರಾದ ಕಂಚನಪುರ ಸಬ್ ಡಿವಿಶನ್ ಮ್ಯಾಜಿಸ್ಟ್ರೇಟ್ ಚಾಂದನಿ ಚಂದ್ರನ್ ಪ್ರೇಮಕಥೆಗೆ ಜನರು ಮನಸೋತಿದ್ದಾರೆ. ಐಎಎಸ್ ಅಧಿಕಾರಿಯಾಗುವ ಗುರಿಯ ಕನಸಿನೊಂದಿಗೆ ನಡೆದ ಪ್ರೇಮಕಥೆಯನ್ನು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
ಮಳೆ ಹವಾಮಾನ ಕುರಿತು ದಿನಪತ್ರಿಕೆಯಲ್ಲಿ ಪ್ರಕಟವಾಗುವ ಫೋಟೋಗಳಲ್ಲಿ ಸಾಮಾನ್ಯವಾಗಿ ಕೆಲವು ಓದುಗರ ಗಮನಸೆಳೆಯುವಂತೆ ಮಾಡುತ್ತದೆ. ಅದರಲ್ಲೂ ಒಂದೇ ಛತ್ರಿಯಲ್ಲಿ ಇಬ್ಬರು ಜೋಡಿಗಳು ಮಳೆಯಲ್ಲಿ ಸಾಗುವ ಫೋಟೋಗಳು ಬೇಗನೇ ಕಣ್ಣಿಗೆ ಬೀಳುತ್ತವೆ. ಟೈಮ್ಸ್ ಆಫ್ ಇಂಡಿಯಾದಲ್ಲಿ ಕಳೆದ ಐದು ವರ್ಷಗಳ ಹಿಂದೆ ಕಂಡು ಬಂದಿದ್ದ ಈ ಫೋಟೋ ಕೂಡ ಮೆಚ್ಚುಗೆ ಪಡೆದಿತ್ತು. ಅದು ಮತ್ಯಾರ ಫೋಟೋ ಅಲ್ಲ. 2017ರ ಐಎಎಸ್ ಬ್ಯಾಚ್ನ ಅಧಿಕಾರಿ ಚಾಂದಿನಿ ಚಂದ್ರನ್ ಅವರ ಫೋಟೋ. ಈ ಅದ್ಭುತ ಫೋಟೋವನ್ನು ಹಂಚಿಕೊಳ್ಳುವ ಮೂಲಕ ಚಾಂದಿನಿ ತಮ್ಮ ಪ್ರೇಮ್ ಕಹಾನಿ ಹಂಚಿಕೊಂಡಿದ್ದಾರೆ.
May 10, 2016.Results of Civil Service Exam 2015 was expected to be out & I was roaming with @mrarunsudarsan to not stress over it. I didn't make it. Next day newspapers were filled with pics of toppers & @timesofindia
published this pic of us! Arun called ToI & complained (1/3) pic.twitter.com/mYaemtmm5tAdvertisement— Chandni Chandran (@chandni_ias) June 29, 2021
ಐಎಎಸ್ ಅಧಿಕಾರಿಯಾಗಬೇಕೆಂದು ಹಗಲಿರುಳು ಶ್ರಮ ಪಡುತ್ತಿದ್ದ ನಾನು 2015ರಲ್ಲಿ ಪರೀಕ್ಷೆ ಬರೆದಿದ್ದು, 2016ರ ಮೇ 10ರಂದು ಫಲಿತಾಂಶಕ್ಕೆ ಎದುರು ನೋಡುತ್ತಿದ್ದೆ. ಫಲಿತಾಂಶ ಏನಾಗಲಿದೆ ಎಂಬ ಚಿಂತೆಗೆ ಒಳಗಾಗಿದ್ದೆ. ಈ ಒತ್ತಡದಿಂದ ಮುಕ್ತವಾಗಲಿ ನನ್ನ ಬಾಯ್ಫ್ರೆಂಡ್ ಜೊತೆ ಸುತ್ತಾಡಲು ಹೋಗಿದ್ದೆ. ಆ ವೇಳೆ ಸುರಿದ ಮಳೆಯಲ್ಲಿ ಇಬ್ಬರು ಒಂದೇ ಕೊಡೆ ಹಿಡಿದು ಸಾಗುತ್ತಿದ್ದೆವು. ಈ ಫೋಟೋ ಮಾರನೇ ದಿನ ಟೈಮ್ಸ್ ಆಫ್ ಇಂಡಿಯಾ ಪತ್ರಿಕೆಯಲ್ಲಿ ಪ್ರಕಟವಾಗಿತ್ತು.
I made it & we got married❣️ Recently I was remnicising about this photo and @mrarunsudarsan being a darling identified and contacted the photographer.@shutterbugnair remembered the photo because of the complaint and graciously sent us the copy. Can't thank you enough😊. (3/3)
— Chandni Chandran (@chandni_ias) June 29, 2021
ಇದನ್ನು ಗಮನಿಸಿದ ನನ್ನ ಬಾಯ್ ಫ್ರೆಂಡ್ ಅರುಣ್ ಸುದರ್ಶನ್ ಪತ್ರಿಕೆಗೆ ಕರೆ ಮಾಡಿ ಚೆನ್ನಾಗಿ ತರಾಟೆ ತೆಗೆದುಕೊಂಡಿದ್ದರು. ಮದುವೆಯಾಗದ ನಮ್ಮ ಫೋಟೋ ಈ ರೀತಿ ಬಂದರೆ ಹೇಗೆ ಎಂದು ಕಿರುಚಾಡಿದ್ದರು. ಆದರೆ, ನಾನು ಮಾತ್ರ ಈ ಫೋಟೋ ನಮ್ಮ ಮುಂದಿನ ಭವಿಷ್ಯದ ಮುನ್ಸೂಚನೆ ಎಂಬುದನ್ನು ಅರಿತಿದೆ. ಈ ಘಟನೆ ನಡೆದ ಐದು ವರ್ಷದ ಬಳಿಕ ನಾವಿಬ್ಬರು ಈಗ ಸತಿಪತಿ ಆಗಿದ್ದೇವೆ. ಈ ಫೋಟೋ ನಿಜಕ್ಕೂ ನನ್ನ ಜೀವನದ ಅವಿಸ್ಮರಣೀಯ ಘಟನೆಯಲ್ಲಿ ಒಂದು. ಐದು ವರ್ಷದ ಬಳಿಕವೂ ಈ ಫೋಟೋದ ಕಾಪಿಯನ್ನು ಫೋಟೋಗ್ರಾಫರ್ ನೀಡಿದ್ದು, ಅವರಿಗೆ ತಮ್ಮ ಹೃದಯ ಪೂರ್ವಕ ಧನ್ಯವಾದ ಎಂದು ತಿಳಿಸಿದ್ದಾರೆ.
2016ರಲ್ಲಿ ಯುಪಿಎಸ್ಸಿ ಪರೀಕ್ಷೆ ಪಾಸ್ ಮಾಡುವಲ್ಲಿ ವಿಫಲವಾದ ಚಾಂದಿನಿ 2017 ಐಎಎಸ್ ಬ್ಯಾಚ್ ಅಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಈ ಫೋಟೋವನ್ನು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ಅವರು ಇದರಲ್ಲಿ ಅಕ್ರಮವೇನು ಇಲ್ಲ. ಈ ಫೋಟೋದಿಂದ ನಮ್ಮ ಮರೆಯದ ನೆನಪುಗಳ ಮಾತುಕತೆ ನಡೆಯುತ್ತಲೇ ಇರುತ್ತದೆ ಎಂದಿದ್ದಾರೆ.
Now, a film has to be made..
Best Wishes to both..
Beautiful turn of life events 👏💐— Dr. M V Rao, IAS (@mvraoforindia) June 30, 2021
May 10, 2016.Results of Civil Service Exam 2015 was expected to be out & I was roaming with @mrarunsudarsan to not stress over it. I didn't make it. Next day newspapers were filled with pics of toppers & @timesofindia published this pic of us! Arun called ToI & complained (1/3) pic.twitter.com/mYaemtmm5t
— Chandni Chandran (@chandni_ias) June 29, 2021
May 10, 2016.Results of Civil Service Exam 2015 was expected to be out & I was roaming with @mrarunsudarsan to not stress over it. I didn't make it. Next day newspapers were filled with pics of toppers & @timesofindia published this pic of us! Arun called ToI & complained (1/3) pic.twitter.com/mYaemtmm5t
— Chandni Chandran (@chandni_ias) June 29, 2021
ಐಎಎಸ್ ಅಧಿಕಾರಿಯೊಬ್ಬರು ಮುಕ್ತವಾಗಿ ಈ ರೀತಿ ತಮ್ಮ ಲವ್ ಕಹಾನಿ ಹಂಚಿಕೊಂಡಿರುವುದಕ್ಕೆ ನೆಟ್ಟಿಗರು ಕೂಡ ಫಿದಾ ಆಗಿದ್ದಾರೆ. ಇತರೆ ಐಎಎಸ್ ಅಧಿಕಾರಿಗಳು ಕೂಡ, ನಿಜಕ್ಕೂ ಅದ್ಭುತ ನಿಮ್ಮ ಲವ್ ಸ್ಟೋರಿ. ಹೀಗೆ ಸದಾ ಖುಷಿಯಿಂದ ಜೀವನ ನಡೆಸಿ ಎಂದು ಹಾರೈಸಿದ್ದಾರೆ.