ಜಗತ್ತಿನ ಅತೀ ಪುರಾತನವಾದ ಸನಾತನ ಹಿಂದೂ ಧರ್ಮದ ಗಢ್ ಎಂದೆ ಕರೆಸಿಕೊಳ್ಳುವ ಕೇಶರಪಾಲ್ ಎಂಬ ಸ್ಥಳದಲ್ಲಿ ಸಾವಿರಾರು ವರ್ಷಗಳಷ್ಟು ಹಳೆಯ ದೇವರ ವಿಗ್ರಹಗಳನ್ನ ಹುಡುಕುವ ಕೆಲಸ ಮತ್ತೆ ಶುರುವಾಗಿದೆ. ಈಗ ಮನಬೋಧ್ ಯಾದವ್ ಎಂಬ ರೈತನ ಜಮೀನಿನ ಬಾವಿಯ ಹತ್ತಿರ ನಾಲೆಗಾಗಿ ಅಗೆಯುವ ಕೆಲಸ ಶುರುಮಾಡಿದ್ದಾಗ ಭಗವಾನ್ ವಿಷ್ಣುವಿನ ಸಮೇತ ಕಂಕಾಲಿನ್ ಹಾಗು ದಿಕ್ಪಾಲರ ಮೂರ್ತಿಗಳೂ & ಪುರಾತನ ಮಂದಿರದ ಅವಶೇಷಗಳು ಪತ್ತೆಯಾಗಿವೆ.
ಇತ್ತ ಹೊಲದವೊಂದರಲ್ಲಿ ಭಗವಾನ್ ವಿಷ್ಣುವಿನದ್ದೇ ಮತ್ತೊಂದು ಪ್ರಾಚೀನ ವಿಗ್ರಹವೊಂದು ದೊರೆತಿದ್ದು ಗ್ರಾಮಸ್ಥರು ಅದನ್ನ ತಮ್ಮ ಗ್ರಾಮದಲ್ಲಿ ಸುರಕ್ಷಿತವಾಗಿ ಜೀರ್ಣೋದ್ಧಾರ ಮಾಡಲು ಮುಂದಾಗಿದ್ದಾರೆ.
ಕೇಶರಪಾಲ್ ನಲ್ಲಿ ಪುರಾತನ ವಿಗ್ರಹಗಳು ಅದೆಷ್ಟು ಪತ್ತೆಯಾಗಿವೆಯೆಂದರೆ ಅಲ್ಲಿನ ಜನಕ್ಕೆ ಅದು ಹೊಸ ವಿಷಯ ಅಂತ ಅನಿಸೋದೇ ಇಲ್ಲ, ಇದಕ್ಕೆ ಉದಾಹರಣೆಯೆಂದರೆ ಕೇಶರಪಾಲ್ ನ ಜನರು ಶಿಲಾಲೇಖವಿರುವ ಕಲ್ಲೊಂದನ್ನ ತಮ್ಮ ಊರಿನ ಮಧ್ಯದಲ್ಲಿ ಸಾಮಾನ್ಯ ಕಲ್ಲಿನ ಜೊತೆ ಇಟ್ಟುಕೊಂಡಿರೋದನ್ನ ನೋಡಿದರೆ ಆ ಹಳ್ಳಿಗರಿಗೆ ಈ ರೀತಿಯ ಶಿಲಾಶಾಸನಗಳು ಮೂರ್ತಿಗಳು ತಮ್ಮ ಊರಲ್ಲಿ ಸಿಗೋದು ಸರ್ವೇ ಸಾಮಾನ್ಯ ಎಂಬಂತಾಗಿಬಿಟ್ಟಿದೆ.
ಅಷ್ಟಕ್ಕೂ ಇಂತಹ ಅಪರೂಪದ ಸಾವಿರಾರು ವರ್ಷಗಳ ಹಿಂದಿನ ಶಿಲಾಶಾಸನಗಳು, ಪುರಾತನ ಮೂರ್ತಿಗಳು ಸಿಕ್ಕಿರೋದಾದರೂ ಎಲ್ಲಿ ಗೊತ್ತಾ? ಅದು ಛತ್ತಿಸಗಢ್ ಜಿಲ್ಲೆಯಲ್ಲಿ.
ಜಿಲ್ಲೆಯಿಂದ ಸಮಾರು 60 ಕಿ.ಮೀ ದೂರದಲ್ಲಿರುವ ಮಾರ್ಕಂಡಿ ನದಿಯ ತಟದಲ್ಲಿರುವ ಕೇಶರಪಾಲ್ ಎಂಬ ಹಳ್ಳಿಯ ಒಂದು ಕಿ.ಮೀ. ದೂರದಲ್ಲಿ ಪುರಾತತ್ವ ಇಲಾಖೆಯವರು (Archeological Survey of India) ಅಲ್ಲಿ ಸಿಕ್ಕಿರುವ ಮೂರ್ತಿಗಳು ಹಾಗು ಶಿಲಾಶಾಸನಗಳನ್ನ ಸಂರಕ್ಷಿಸಿಟ್ಟು ಅಲ್ಲಿ ಒಂದು ಕೇಂದ್ರ ಮಾಡಿ ಅಲ್ಲಿ ಅವುಗಳನ್ನಿಟ್ಟಿದ್ದಾರೆ. ಆದರೆ ಗ್ರಾಮದಲ್ಲಿ ಅಲ್ಲಿ ಇಲ್ಲಿ ಬಿದ್ದಿರುವ ಶಿಲಾಶಾಸನಗಳು ಮಾತ್ರ ಇನ್ನೂ ಪುರಾತತ್ವ ಇಲಾಖೆಯ ಗಮನಕ್ಕೆ ಬಂದಿದ್ದರೂ ಅವರು ಅವುಗಳನ್ನ ಸಂರಕ್ಷಿಸಿಡುವ ಕಾರ್ಯದ ದುಸ್ಸಾಹಸಕ್ಕೆ ಕೈ ಹಾಕಿಲ್ಲ. ಅದಕ್ಕೂ ಕಾರಣಗಳಿವೆ.
ಈ ಹಳ್ಳಿಯಲ್ಲಿ ಕೇವಲ ಶಿಲಾಶಾಸನಗಳಷ್ಟೇ ಅಲ್ಲ ಬದಲಿಗೆ ಭವ್ಯ ಮಂದಿರವಿದ್ದ ಹಾಗು ಮೂರ್ತಿಗಳ ಅವಶೇಷಗಳೂ ಪತ್ತೆಯಾಗುತ್ತಿವೆ. ಅಂಚಲ್ ನಲ್ಲಿ ಪುರಾತತ್ವ ವಿಭಾಗದವರು ಸಂರಕ್ಷಿಸಿಟ್ಟಿರುವ ಮೂರ್ತಿಗಳೂ ಕೇಶರಪಾಲ್ ನಲ್ಲಿಸಿಕ್ಕಿರುವ ಮೂರ್ತಿಗಳಷ್ಟೇ ಹಳೆಯದ್ದಾಗಿವೆ ಎಂದೇ ಹೇಳಲಾಗುತ್ತಿದೆ.
ಪುರಾತತ್ವ ಇಲಾಖೆಯ ಉಪ ಸಂಚಾಲಕ ಜೆ.ಆರ್.ಭಗತ್ ತಿಳಿಸುವಂತೆ ಕೇಶರಪಾಲ್ ನ ಗುಢಿಯಾರಿ ಕೆರೆಯ ಸುತ್ತಮುತ್ತ ಹಾಗು ಹಳ್ಳಿಯ ಸುತ್ತ ಮುತ್ತ ಹತ್ತಿರತ್ತಿರ 12 ನೆಯ ಶತಮಾನದಷ್ಟು ಹಳೆಯದಾದ ಮೂರ್ತಿಗಳಿವೆಯಂತೆ.
ಆದರೆ ಬಾಡಿ ಎಂಬಲ್ಲಿ ದೊರೆತ ಭಗವಾನ್ ವಿಷ್ಣು ಹಾಗು ಅನ್ಯದೇವತೆಗಳ ಮೂರ್ತಿಗಳು ಎಷ್ಟು ಹಳೆಯ ಮೂರ್ತಿಗಳು ಎನ್ನುವ ಮಾಹಿತಿಯೇ ಪುರಾತತ್ವ ಇಲಾಖೆಗೆ ಇನ್ನೂ ಗೊತ್ತಾಗಿಲ್ಲ.
ಕೇಶರಪಾಲ್ ನಲ್ಲಿ ಬಿದ್ದಿರುವ ಶಿಲಾಶಾಸನಗಳು ಮೂರ್ತಿಗಳನ್ನ ಸಂರಕ್ಷಿತ ಪ್ರದೇಶಕ್ಕೆ ತೆಗೆದುಕೊಂಡು ಹೋಗಲು ಪುರಾತತ್ವ ಇಲಾಖೆ ಸಾಕಷ್ಟು ಬಾರಿ ಪ್ರಯತ್ನ ಮಾಡಿದ್ದರೂ ಮೂರ್ತಿಗಳ ಮೇಲಿಮ ಗ್ರಾಮಸ್ಥರ ಶೃದ್ಧೆ ನಂಬಿಕೆಯ ಕಾರಣ ಅವುಗಳನ್ನ ಸ್ಥಳಾಂತರ ಮಾಡಲಾಗಿಲ್ಲ ಎನ್ನುತ್ತಾರೆ ಪುರಾತತ್ವ ಇಲಾಖೆಯ ಅಧಿಕಾರಿಗಳು.
20 ವರ್ಷಗಳ ಹಿಂದೆ ಹೊಲದಲ್ಲಿ ಶೇಷನಾಗನ ಮೇಲೆ ವಿಷ್ಣು ಮಲಗಿರುವ ಮಾದರಿಯ ಭಗವಾನ್ ವಿಷ್ಣುವಿನ ಅತೀ ಪುರಾತನ ಮೂರ್ತಿಯೊಂದು ಸಿಕ್ಕಿತ್ತಂತೆ, ಅದರಲ್ಲಿ ವಿಷ್ಣುವಿನ ಹೊಂಕಳಿನಿಂದ ಹೊರಬಂದಿರುವ ಕಮಲದಲ್ಲಿ ಬ್ರಹ್ಮ ವಿರಾಜಮಾನವಾಗಿರುವಂತೆ ಕೆತ್ತಲಾಗಿತ್ತಂತೆ.
ಇಂತಹ ಅಪರೂಪದ ಮೂರ್ತಿ ಅಲ್ಲಿನ ಸುತ್ತಮುತ್ತಲಿನ ಮತ್ತಾವ ಪ್ರದೇಶಗಳಲ್ಲೂ ದೊರೆತಿಲ್ಲ. ಈ ಮೂರ್ತಿಯನ್ನ ಹಾಗು ಅದರ ಜೊತೆ ಸಿಕ್ಕ ಅನ್ಯ ಮೂರ್ತಿಗಳನ್ನ ಗ್ರಾಮಸ್ಥರು ತಂದು ತಮ್ಮ ಗ್ರಾಮದಲ್ಲೇ ಇಟ್ಟುಕೊಂಡಿದ್ದಾರೆ.
ಇದೀಗ ಇದೇ ಗ್ರಾಮದ ಹತ್ತಿರದಲ್ಲಿ ನಾಲೆಯೊಂದನ್ನ ತೋಡುತ್ತಿರುವಾಗ ಭಗವಾನ್ ವಿಷ್ಣು, ಕಂಕಾಲಿನ್ ಹಾಗು ದಿಕ್ಪಾಲರ ಮೂರ್ತಿಗಳು ಪತ್ತೆಯಾಗಿವೆ. ಗ್ರಾಮಸ್ಥರಿಂದ ಇದರ ಬಗ್ಗೆ ಸುದ್ದಿ ತಿಳಿಯುತ್ತಲೇ ಸ್ಥಳಕ್ಕೆ ಪುರಾತತ್ವ ಇಲಾಖೆಯ ಅಧಿಕಾರಿಗಳಾದ ರುದ್ರನಾರಾಯಣ ಪಾಣಿಗ್ರಾಹಿ, ಹೇಮಂತ್ ಕಶ್ಯಪ್ ಹಾಗು ರಂಗಕರ್ಮಿ ವಿಕ್ರಮ್ ಸೋನಿ ಯವರಿಗೆ ಗ್ರಾಮಸ್ಥರು ತಮ್ಮ ಗ್ರಾಮದ ಹತ್ತಿರ ಇನ್ನೂ ಹಲವಾರು ರಹಸ್ಯ ಜಾಗಗಳಿದ್ದು ಅಲ್ಲಿ ಉತ್ಖನನ ನಡೆಸಿದರೆ ಅತೀ ಪುರಾತನ ಶಿವಾಲಯ ಹಾಗು ಅನೇಕ ದೇವಸ್ಥಾನಗಳು ಸಿಗಬಹುದು ಎಂದು ಹೇಳುತ್ತಾರೆ ಗ್ರಾಮಸ್ಥರು.
ಆದರೆ ಇವುಗಳ ಮಹತ್ವ ಅರಿಯದ ಗ್ರಾಮಸ್ಥರು ಅಂದರೆ ಆ ಪುರಾತನ ಶಿಲಾಶಾಸನಗಳು, ಮೂರ್ತಿಗಳನ್ನ ಸಂರಕ್ಷಿಸಿಡುವುದರ ಬಗ್ಗೆ ಪುರಾತತ್ವ ಇಲಾಖೆ ನಡೆಸುವ ಅಭಿಯಾನವನ್ನ ಅರಿಯದ ಗ್ರಾಮಸ್ಥರು ತಮ್ಮ ಊರಿನಲ್ಲಿ ಸಿಗುವ ಮೂರ್ತಿಗಳನ್ನ ಹಾಗು ಶಿಲಾಶಾಸನಗಳನ್ನ ತೆಗೆದುಕೊಂಡು ತಮ್ಮ ಹಳ್ಳಿಗಳಲ್ಲಿ ಇಟ್ಟುಕೊಳ್ಳುತ್ತಿದ್ದಾರೆ.
ಸದ್ಯ ಕೇಶರಪಾಲ್ ನಲ್ಲಿ ಸಿಕ್ಕ ಹಾಗು ಅದಕ್ಕೂ ಮುಂಚೆ ಸಿಕ್ಕ ಕೆಲ ಶಿಲಾಶಾಸನಗಳು ಹಾಗು ಮೂರ್ತಿಗಳು ಯಾವ ಕಾಲದ್ದು ಎಂಬುದು ಈಗಲೂ ಪುರಾತತ್ವ ಇಲಾಖೆಯ ವಿಜ್ಞಾನಿಗಳಿಗೆ ಕಂಡು ಹಿಡಿಯದೆ ಒದ್ದಾಡುತ್ತಿದ್ದಾರೆ.
ಸನಾತನ ಧರ್ಮವೆಂದರೆ ಅದು. ಸನಾತನ ಧರ್ಮ ಅಸ್ತಿತ್ವದಲ್ಲಿರುವ ನಿಖರ ಮಾಹಿತಿಯೆ ಇಲ್ಲವೆಂದಾದರೆ ಅತೀ ಪುರಾತನ ವಿಗ್ರಹಗಳ ಮಾಹಿತಿ ಈಗಿನ ವಿಜ್ಞಾನಕ್ಕೆ ಸಿಗೋದು ಕಷ್ಟವೇ ಸರಿ.
ಸನಾತನ ಹಿಂದೂ ಧರ್ಮವನ್ನ ಅಣಕಿಸುವ ಧರ್ಮವಿರೋಧಿಗಳು ಒಮ್ಮೆ ಛತ್ತಿಸಗಢ್ ನ ಕೇಶರಪಾಲ್ ಸ್ಥಳಕ್ಕೊಮ್ಮೆ ಭೇಟಿ ಕೊಟ್ಟರೆ ಬಹುಶಃ ಅವರ ಸೋಗಲಾಡಿತನಕ್ಕೆ ಉತ್ತರ ಸಿಗಬಹುದೇನೋ!!