ಪತ್ರಿಕೆಯ ಪ್ರಕಾರ, “ಈ ಬೆನ್ನುಮೂಳೆಯಿಲ್ಲದ ಸರ್ಕಾರಗಳು ಅವಮಾನ ಮತ್ತು ಅಪರಾಧಕ್ಕೆ ಕೇವಲ ಟೊಳ್ಳಾದ ಖಂಡನೆಯೊಂದಿಗೆ ಪ್ರತಿಕ್ರಿಯಿಸಿದವು ಮತ್ತು ಯಾವುದೇ ನಿರ್ದಿಷ್ಟ ಕ್ರಮಗಳನ್ನ ಕೈಗೊಳ್ಳಲಿಲ್ಲ. ಮತ್ತೊಂದೆಡೆ, ಈ ದೇಶಗಳು ಭಾರತದ ಹಿಂದೂ ನೇತೃತ್ವದ ಸರ್ಕಾರವನ್ನು ಬೆಂಬಲಿಸುವುದನ್ನು ಮುಂದುವರೆಸುತ್ತವೆ ಮತ್ತು ಅವರೊಂದಿಗೆ ವ್ಯಾಪಕವಾದ ರಾಜಕೀಯ, ಆರ್ಥಿಕ ಮತ್ತು ಭದ್ರತಾ ಸಂಬಂಧಗಳನ್ನು ಹೊಂದಿವೆ”
ಪ್ರವಾದಿ ಮೊಹಮ್ಮದ್ ಕುರಿತು ಬಿಜೆಪಿಯ ಮಾಜಿ ವಕ್ತಾರೆ ನೂಪುರ್ ಶರ್ಮಾ ಮಾಡಿದ ಹೇಳಿಕೆಗೆ ಸಂಬಂಧಿಸಿದಂತೆ ಭಯೋತ್ಪಾದಕ ಸಂಘಟನೆ ಅಲ್ ಖೈದಾ ಮತ್ತೊಮ್ಮೆ ಭಾರತವನ್ನು ಟಾರ್ಗೆಟ್ ಮಾಡಿದೆ. ‘ಒನ್ ಉಮ್ಮಾ’ ಹೆಸರಿನ ಪತ್ರಿಕೆಯ ಐದನೇ ಸಂಚಿಕೆಯಲ್ಲಿ, ಭಯೋತ್ಪಾದಕ ಸಂಘಟನೆಯು ಭಾರತ ಮತ್ತು ಭಾರತೀಯ ಉತ್ಪನ್ನಗಳನ್ನು ಬಹಿಷ್ಕರಿಸುವಂತೆ ಎಲ್ಲಾ ಮುಸ್ಲಿಂ ರಾಷ್ಟ್ರಗಳಿಗೆ ಮನವಿ ಮಾಡಿದೆ. ಇದರೊಂದಿಗೆ ಅರಬ್ ರಾಷ್ಟ್ರಗಳಲ್ಲಿ ಕೆಲಸ ಮಾಡುತ್ತಿರುವ ಎಲ್ಲ ಹಿಂದೂಗಳನ್ನು ದೇಶದಿಂದ ಹೊರಹಾಕುವಂತೆ ಭಯೋತ್ಪಾದಕ ಸಂಘಟನೆ ಕರೆ ನೀಡಿದೆ.
ಭಯೋತ್ಪಾದಕ ಸಂಘಟನೆ ‘ಅಸ್-ಸಾಹಬ್’ ನ ಅಧಿಕೃತ ಮಾಧ್ಯಮ ವಿಭಾಗ ಅಥವಾ ಮುಖವಾಣಿ ‘ಒನ್ ಉಮ್ಮಾ’ ತ್ರೈಮಾಸಿಕ ಪತ್ರಿಕೆಯ ಐದನೇ ಆವೃತ್ತಿಯನ್ನು ಬಿಡುಗಡೆ ಮಾಡಿದೆ. ಪತ್ರಿಕೆಯ ಒಂದು ಭಾಗದಲ್ಲಿ ಭಾರತ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರನ್ನು ಗುರಿಯಾಗಿಸಲಾಗಿದೆ. ಅಲ್ಲದೆ, ನೂಪುರ್ ಶರ್ಮಾ ಹೇಳಿಕೆಯನ್ನು ನೆಪವಾಗಿಟ್ಟುಕೊಂಡು ಭಾರತದ ವಿರುದ್ಧ ಮುಸ್ಲಿಮರು ಒಂದಾಗುವಂತೆ ಪತ್ರಿಕೆ ಹೇಳಿದೆ. ಲೇಖನವು ಅವಹೇಳನಕಾರಿ ರೀತಿಯಲ್ಲಿ ಪಾದದ ಮುದ್ರೆಯೊಂದಿಗೆ ಪ್ರಧಾನಿ ಮೋದಿಯವರ ಭಾವಚಿತ್ರವನ್ನು ಹೊಂದಿದೆ.
ಅಲ್-ಕೈದಾ ಲೇಖನದಲ್ಲಿ, “ಭಾರತದ ಹಿಂದೂ ಸರ್ಕಾರವು ಮುಸ್ಲಿಂ ಪ್ರಪಂಚದ ಮೌನದಿಂದ ಉತ್ಸಾಹಿತವಾಗಿತ್ತು ಮತ್ತು ಈ ಬಾರಿ ಮಿತಿಗಳನ್ನು ದಾಟಿ ಪ್ರವಾದಿಯನ್ನು ಅವಮಾನಿಸಿತು” ಎಂದು ಬರೆದುಕೊಂಡಿದೆ. ಇದರೊಂದಿಗೆ ಕಾಶ್ಮೀರ ಕಣಿವೆಯಲ್ಲಿ ಭಯೋತ್ಪಾದಕ ದಾಳಿ ನಡೆಸಲು ಭಯೋತ್ಪಾದಕ ಸಂಘಟನೆ ಮುಸ್ಲಿಂ ರಾಷ್ಟ್ರಗಳ ಸಹಾಯವನ್ನೂ ಕೋರಿದೆ.
ಪತ್ರಿಕೆಯಲ್ಲಿ, “ಅಲ್ಲಾಹನ ಶತ್ರುಗಳು ನಮ್ಮ ಪ್ರವಾದಿ ವಿರುದ್ಧ ಇಂತಹ ಹೇಯ ಅಪರಾಧವನ್ನು ಪುನರಾವರ್ತಿಸಲು ಧೈರ್ಯ ಮಾಡಬಾರದು ಹಾಗು ಈ ಹಿಂದೂ ಸರ್ಕಾರದ ವಿರುದ್ಧ ಒಗ್ಗಟ್ಟಾಗಿ ನಿಲ್ಲಲು ಮತ್ತು ಭಾರತದಲ್ಲಿನ ನಮ್ಮ ಸಹೋದರ ಸಹೋದರಿಯರಿಗೆ ಸಹಾಯ ಮಾಡಲು ನಾವು ನಮ್ಮ ಧರ್ಮನಿಷ್ಠ ಉಮ್ಮಾವನ್ನು ಆಹ್ವಾನಿಸುತ್ತೇವೆ” ಎಂದು ಪ್ರಕಟಿಸಿದೆ.
ಪತ್ರಿಕೆಯ ಪ್ರಕಾರ, “ನಾವು ಎಲ್ಲಾ ಮುಸ್ಲಿಮರಿಗೆ, ವಿಶೇಷವಾಗಿ ಉದ್ಯಮಿಗಳಿಗೆ, ಭಾರತೀಯ ಉತ್ಪನ್ನಗಳನ್ನು ಬಹಿಷ್ಕರಿಸಲು, ಮುಸ್ಲಿಂ ದೇಶಗಳಿಂದ ಹಿಂದೂ ಕಾರ್ಮಿಕರನ್ನು ಹೊರಹಾಕಲು ಕರೆ ನೀಡುತ್ತೇವೆ” ಎಂದು ಬರೆದುಕೊಂಡಿದೆ. ಪತ್ರಿಕೆಯು ಹಿಂದೂಗಳನ್ನು ಯಹೂದಿಗಳಿಗೆ ಹೋಲಿಸಿದೆ ಮತ್ತು ಭಾರತದಲ್ಲಿ ಮುಸ್ಲಿಮರನ್ನು ಟಾರ್ಗೆಟ್ ಮಾಡಲಾಗುತ್ತಿದೆ ಎಂದು ಆರೋಪಿಸಿದೆ.
‘ಒನ್ ಉಮ್ಮಾ’ ಪ್ರಕಾರ, ಭಾರತೀಯ ಆಡಳಿತ ವರ್ಗವು ಯಾವಾಗಲೂ ಇಸ್ಲಾಂ ಬಗ್ಗೆ ಅಗೌರವ ಮತ್ತು ದ್ವೇಷವನ್ನು ವ್ಯಕ್ತಪಡಿಸುವ ಪ್ರವೃತ್ತಿಯನ್ನು ಹೊಂದಿದೆ. ಭಾರತೀಯ ಪ್ರಧಾನಮಂತ್ರಿ ಮುಸ್ಲಿಮರ ಬಲವಂತದ ಸ್ಥಳಾಂತರ, ಅವರನ್ನು ಜೈಲಿಗೆ ಹಾಕುವುದು, ಜೈಲುಗಳಲ್ಲಿ ಚಿತ್ರಹಿಂಸೆ ನೀಡುವುದು ಮತ್ತು ಮುಸ್ಲಿಂ ಸಮುದಾಯಕ್ಕೆ ಮೂಲಭೂತ ಮಾನವ ಹಕ್ಕುಗಳನ್ನು ನಿರಾಕರಿಸಿದ ಕ್ರಿಮಿನಲ್ ದಾಖಲೆಯನ್ನು ಹೊಂದಿದ್ದಾನೆ. ಯಹೂದಿಗಳು ಪ್ಯಾಲೆಸ್ತೀನಿಯರನ್ನು ಅಪರಾಧಿಯಾಗಿ ನಡೆಸಿಕೊಳ್ಳುವ ರೀತಿಯಲ್ಲೇ ಭಾರತವೂ ನಡೆದುಕೊಳ್ಳುತ್ತಿದೆ ಎಂದು ಪತ್ರಿಕೆ ಆರೋಪಿಸಿದೆ.
अल-कायदा का अभियान, भारत के खिलाफ फरमान! #BlackAndWhiteOnAajTak| @sudhirchaudhary
पूरा कार्यक्रम: https://t.co/fBrzcG805Y pic.twitter.com/sqHHkrjUt3— AajTak (@aajtak) December 27, 2022
“ಭಾರತದ ಹಿಂದೂ ಸರ್ಕಾರವು ಮುಸ್ಲಿಂ ರಾಷ್ಟ್ರಗಳ ಮೌನದಿಂದ ಉತ್ತೇಜಿತವಾಯಿತು ಮತ್ತು ಪ್ರವಾದಿ ಮೊಹಮ್ಮದ್ ಅವರನ್ನು ಅವಮಾನಿಸಿತು” ಎಂದೂ ಅದು ಹೇಳುತ್ತದೆ. ನೂಪುರ್ ಶರ್ಮಾ ಅವರ ಆಪಾದಿತ ಟೀಕೆಗಳನ್ನು ಖಂಡಿಸಿದ್ದಕ್ಕಾಗಿ ಮತ್ತು ಭಾರತದ ವಿರುದ್ಧ ಯಾವುದೇ ಕ್ರಮ ತೆಗೆದುಕೊಳ್ಳದಿದ್ದಕ್ಕಾಗಿ ಪತ್ರಿಕೆಯು ಮುಸ್ಲಿಂ ರಾಷ್ಟ್ರಗಳನ್ನು ಟೀಕಿಸಿದೆ.
ಪತ್ರಿಕೆಯ ಪ್ರಕಾರ, “ಈ ಬೆನ್ನುಮೂಳೆಯಿಲ್ಲದ ಸರ್ಕಾರಗಳು ಅವಮಾನ ಮತ್ತು ಅಪರಾಧಕ್ಕೆ ಕೇವಲ ಪೊಳ್ಳು ಖಂಡನೆಯೊಂದಿಗೆ ಪ್ರತಿಕ್ರಿಯಿಸಿದವು ಮತ್ತು ಭಾರತದ ವಿರುದ್ಧ ಯಾವುದೇ ನಿರ್ದಿಷ್ಟ ಕ್ರಮ ಕೈಗೊಳ್ಳಲಿಲ್ಲ. ಮತ್ತೊಂದೆಡೆ, ಈ ದೇಶಗಳು ಹಿಂದೂ ನೇತೃತ್ವದ ಭಾರತ ಸರ್ಕಾರವನ್ನು ಬೆಂಬಲಿಸುವುದನ್ನು ಮುಂದುವರೆಸುತ್ತವೆ ಮತ್ತು ಅವರೊಂದಿಗೆ ವ್ಯಾಪಕವಾದ ರಾಜಕೀಯ, ಆರ್ಥಿಕ ಮತ್ತು ಭದ್ರತಾ ಸಂಬಂಧಗಳನ್ನು ನಿರ್ವಹಿಸುತ್ತವೆ” ಎಂದಿದೆ. ಪತ್ರಿಕೆಯು 9/11 ರಲ್ಲಿ ಪ್ರಾಣ ಕಳೆದುಕೊಂಡ ಭಯೋತ್ಪಾದಕರ ಛಾಯಾಚಿತ್ರಗಳನ್ನು ಹೊಂದಿತ್ತು ಮತ್ತು ಈ ‘ವೀರರನ್ನು’ ಎಂದಿಗೂ ಮರೆಯಬಾರದು ಎಂದು ಮುಸ್ಲಿಮರನ್ನು ಕೇಳಿದೆ.