ಈ ವ್ಯಾಕ್ಸಿನ್ ಬಳಸಿದ ಯಾವ ಪ್ರದೇಶಗಳಲ್ಲೂ ಇದುವರೆಗೂ ಒಂದೇ ಒಂದು ಕೊರೋನಾ ಕೇಸ್ ಪತ್ತೆಯಾಗಿಲ್ಲ: ಅಷ್ಟಕ್ಕೂ ಈ ಪರಿಣಾಮಕಾರಿ ವ್ಯಾಕ್ಸಿನ್ ಯಾವುದು ಗೊತ್ತಾ?

in Helath-Arogya/Kannada News/News 6,804 views

ಕೊರೋನಾ ಲಸಿಕೆಗಳ ಪರಿಣಾಮದ ತೀವ್ರತೆ ಬಗ್ಗೆ ಈಗಾಗಲೇ ಬಹಳಷ್ಟು ಚರ್ಚೆಯಾಗುತ್ತಿದೆ. ಕೊವ್ಯಾಕ್ಸೀನ್, ಕೊವಿಶೀಲ್ಡ್, ಸ್ಪುಟ್ನಿಕ್, ಅಸ್ಟ್ರಾಜೆನೆಕಾಗಳನ್ನು ಈಗಾಗಲೇ ಬಹಳಷ್ಟು ಜನ ಪಡೆದಾಗಿದೆ.

ಆದರೆ ಇವುಗಳ ಪರಿಣಾಮ ಬಹಳಷ್ಟು ಭಿನ್ನವಾಗಿದೆ. ಪ್ರತಿ ಲಸಿಕೆಯ ಸಾಧ್ಯತೆ, ರೋಗ ಎದುರಿಸುವ ಶಕ್ತಿಯಲ್ಲಿ ವ್ಯತ್ಯಾಸವಿರುತ್ತದೆ. ಇದೀಗ ಸ್ಪುಟ್ನಿಕ್ ಬಹಳ ಪರಿಣಾಮಕಾರಿ ಎಂಬ ಸುದ್ದಿ ಕೇಳಿ ಬಂದಿದೆ.

ಸ್ವತಃ ಸ್ಪುಟ್ನಿಕ್ ಅಧಿಕೃತ ಟ್ವೀಟ್ ಮೂಲಕ ಈ ಬಗ್ಗೆ ಮಾಹಿತಿ ನೀಡಿದೆ. ಸ್ಪುಟ್ನಿಕ್ ಯುರೋಪ್‌ನ ಸ್ಯಾನ್ ಮ್ಯಾರಿನೋವನ್ನು ಕೊರೊನಾ ಮುಕ್ತ ರಾಜ್ಯವಾಗಿಸಿದೆ ಎಂದಿದೆ ಕಂಪನಿ.

ಯುರೋಪ್ ನ ಸ್ಯಾನ್ ಮ್ಯಾರಿನೋ ಕೋವಿಡ್ ಮುಕ್ತ ರಾಜ್ಯ. ಮೇ 4 ರಿಂದ ಈ ತನಕ ಶೂನ್ಯ ಕೇಸ್ ದಾಖಲಾಗಿದೆ. ಎಪ್ರಿಲ್ 27 ರಿಂದ ಒಂದೇ ಒಂದು ಕೊರೋನಾ ಸಾವು ಸಂಭವಿಸಿಲ್ಲ ಎಂದು ಕಂಪನಿ ಟ್ವೀಟ್ ಮಾಡಿದೆ.

ಇದಕ್ಕೆಲ್ಲ ಕಾರಣ ಸ್ಪುಟ್ನಿಕ್ ವಿ ಲಸಿಕೆಯ ಮಹಿಮೆ. ಎರಡೂವರೆ ತಿಂಗಳಿಂದ ಲಸಿಕೆ ನೀಡಲಾಗುತ್ತಿದೆ. ಸದ್ಯ ಒಂದೇ ಒಂದು ಕೇಸ್ ಸಹ ದಾಖಲಾಗಿಲ್ಲ ಅಂತ ಸ್ಪುಟ್ನಿಕ್ ವಿ ಸಂಸ್ಥೆ ಹೇಳಿಕೊಂಡಿದೆ’.

ಇದನ್ನೂ ಓದಿ: ಸೋಂಕಿರಲಿ ಅಥವ ಇರದೆ ಇದ್ದರೂ ಈ ಮಾತ್ರೆಯನ್ನ ತಪ್ಪದ ತೆಗೆದುಕೊಳ್ಳಿ ಎಂದ ಗೋವಾ ಆರೋಗ್ಯ ಸಚಿವ ರಾಣೆ

ಜ್ವರದ ಸ್ವರೂಪ ತೀವ್ರವಾಗದಂತೆ 18 ವರ್ಷಕ್ಕಿಂತ ಮೇಲ್ಪಟ್ಟ ಎಲ್ಲ ಸೋಂಕಿತರಿಗೆ ಐವರ್ಮೆಕ್ಟಿನ್ ಬಳಕೆಗೆ ಗೋವಾ ಸರ್ಕಾರ ಅನುಮೋದನೆ ನೀಡಿದೆ. ರಾಜ್ಯ ಆರೋಗ್ಯ ಸಚಿವ ವಿಶ್ವಜಿತ್ ರಾಣೆ ಮಾತನಾಡಿ, “ಎಲ್ಲಾ ಆರೋಗ್ಯ ಕೇಂದ್ರಗಳಲ್ಲಿ ಐವರ್ಮೆಕ್ಟಿನ್ ಔಷಧಿ ಲಭ್ಯವಿರುತ್ತದೆ. ಕರೋನದ ಲಕ್ಷಣಗಳು ಇದ್ದರೂ ಇಲ್ಲದಿದ್ದರೂ ಯಾರು ಬೇಕಾದರೂ ಈ ಔಷಧಿಯನ್ನು ತೆಗೆದುಕೊಳ್ಳಬಹುದು” ಎಂದಿದ್ದಾರೆ

ಕರೋನಾ ರೋಗಿಗಳ ಚಿಕಿತ್ಸೆಯಲ್ಲಿ ಐವರ್ಮೆಕ್ಟಿನ್ ಬಳಕೆಯನ್ನು ಗೋವಾ ಸರ್ಕಾರ ಸೋಮವಾರ ಅನುಮೋದಿಸಿದೆ. ಜ್ವರದ ಸ್ವರೂಪ ತೀವ್ರವಾಗದಂತೆ 18 ವರ್ಷಕ್ಕಿಂತ ಮೇಲ್ಪಟ್ಟ ಎಲ್ಲ ಸೋಂಕಿತರಿಗೆ ಈ ಔಷಧಿಯನ್ನು ಬಳಸಲು ಸರ್ಕಾರ ಅನುಮೋದನೆ ನೀಡಿದೆ. ಹೆಚ್ಚಿನ ಅಥವಾ ಸೌಮ್ಯ ಜ್ವರವು ಕರೋನಾ ಸೋಂಕಿನ ಮುಖ್ಯ ಲಕ್ಷಣಗಳಲ್ಲಿ ಒಂದಾಗಿದೆ.

ರಾಜ್ಯ ಆರೋಗ್ಯ ಸಚಿವ ವಿಶ್ವಜಿತ್ ರಾಣೆ ಮಾತನಾಡಿ, “ಎಲ್ಲಾ ಆರೋಗ್ಯ ಕೇಂದ್ರಗಳಲ್ಲಿ ಐವರ್ಮೆಕ್ಟಿನ್ ಔಷಧಿ ಲಭ್ಯವಿರುತ್ತದೆ. ಕರೋನದ ಲಕ್ಷಣಗಳಿ ಇರುವವರು ಇರದೆ ಇರುವವರೂ ಈ ಔಷಧಿಯನ್ನು ತೆಗೆದುಕೊಳ್ಳಬೇಕಾಗುತ್ತದೆ. ನಾವು ಈ ಔಷಧಿಯನ್ನು ಪ್ರಿವೆಂಟಿವ್ ಕೇರ್ ಅಂದರೆ ಜನರ ಪ್ರಾಣ ರಕ್ಷಣೆಗಾಗಿ ಬಳಸುತ್ತಿದ್ದೇವೆ. ಎಲ್ಲಾ ರೋಗಿಗಳಿಗೆ ಈ ಔಷಧಿಗಳು ಸರ್ಕಾರಿ ಆರೋಗ್ಯ ಕೇಂದ್ರಗಳಲ್ಲಿ ಲಭ್ಯವಿರುತ್ತವೆ” ಎಂದಿದ್ದಾರೆ.

ಐವರ್ಮೆಕ್ಟಿನ್ 12MG ಔಷಧಿಯನ್ನು ಐದು ದಿನಗಳವರೆಗೆ ಬಳಸಬೇಕು

ಗೋವಾ ಆರೋಗ್ಯ ಸಚಿವರು ಮಾತನಾಡುತ್ತ, “ಐವರ್ಮೆಕ್ಟಿನ್ 12MG ಔಷಧಿಯನ್ನು ಐದು ದಿನಗಳವರೆಗೆ ಬಳಸಬೇಕಾಗುತ್ತದೆ. ಯುಕೆ, ಇಟಲಿ, ಸ್ಪೇನ್ ಮತ್ತು ಜಪಾನ್‌ನ ತಜ್ಞರು ಈ ಔಷಧಿಯನ್ನು ಕರೋನಾ ಮರಣ ಪ್ರಮಾಣವನ್ನು ಕಡಿಮೆ ಮಾಡಲು ಪರಿಣಾಮಕಾರಿ ಎಂದು ಈಗಾಗಲೆ ಹೇಳಿದ್ದಾರೆ. ಇದು ಡೆತ್ ರೇಟ್ ಅಷ್ಟೇ ಅಲ್ಲದೆ ಚೇತರಿಕೆಗೆ ಮತ್ತು ವೈರಲ್ ಲೋಡ್ ಕಡಿಮೆ ಮಾಡಲೂ ಸಹಕಾರಿಯಾಗಿದೆ” ಎಂದರು.

ಈ ಔಷಧಿ ಸೋಂಕನ್ನ ತಡೆಯುವುದಿಲ್ಲ ಆದರೆ ಸೋಂಕನ್ನ ಗಂಭೀರವಾಗದಂತೆ ಕೆಲಸ ಮಾಡುತ್ತದೆ

ಕೋವಿಡ್-19 ಚಿಕಿತ್ಸೆಯ ಪ್ರೋಟೋಕಾಲ್‌ನಲ್ಲಿ ಈ ಔಷಧಿಯನ್ನು ಸೇರಿಸಿದ ದೇಶದ ಮೊದಲ ರಾಜ್ಯ ಗೋವಾ ಎಂದು ರಾಣೆ ಹೇಳಿದರು. ಈ ಔಷಧವು ಕರೋನಾ ಸೋಂಕನ್ನು ತಡೆಯಲು ಸಾಧ್ಯವಿಲ್ಲವಾದರೂ, ರೋಗವು ಗಂಭೀರವಾಗುವುದನ್ನು ತಡೆಯುವಲ್ಲಿ ಇದು ತುಂಬಾ ಪರಿಣಾಮಕಾರಿಯಾಗಿದೆ. ರಾಜ್ಯದ ಎಲ್ಲ ಜನರು ಕರೋನಾ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಸೋಂಕಿನ ಹರಡುವಿಕೆಯನ್ನು ತಡೆಗಟ್ಟಲು, ಕರೋನಾ ನಿಯಮಗಳನ್ನು ಸಡಿಲಗೊಳಿಸದಿರುವುದು ಮುಖ್ಯ ಎಂದರು.

ರಿಸರ್ಚ್ ನಲ್ಲಿ ಈ ಔಷಧಿ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ ಎಂದು ತಿಳಿದುಬಂದಿದೆ

ಕೆಲವು ದಿನಗಳ ಹಿಂದೆ, ಐವರ್ಮೆಕ್ಟಿನ್ ಔಷಧದ ವಿಶ್ವಾದ್ಯಂತ ಬಳಕೆಯು ಕರೋನಾ ಸಾಂಕ್ರಾಮಿಕ ರೋಗವನ್ನು ಕೊನೆಗೊಳಿಸಬಹುದು ಎಂದು ಸಂಶೋಧನೆಯೊಂದು ಹೇಳಿದೆ. ಕರೋನಾ ಚಿಕಿತ್ಸೆಯಲ್ಲಿ ಈ ಔಷಧಿ ಬಹಳ ಪರಿಣಾಮಕಾರಿ ಎಂದು ವಿಜ್ಞಾನಿಗಳು ಹೇಳುತ್ತಾರೆ. ಈ ಔಷಧಿಯನ್ನು ಕರೋನಾ ಚಿಕಿತ್ಸೆಯಲ್ಲಿ ಪವಾಡ ಸೃಷ್ಟಿಸುವಂತಹ ಔಷಧವಾಗಿ ಪ್ರಪಂಚದಾದ್ಯಂತದ ವೈದ್ಯರು ಮತ್ತು ವಿಜ್ಞಾನಿಗಳು ನೋಡುತ್ತಿದ್ದಾರೆ.

 ಮೊನ್ನೆಯಷ್ಟೇ DRDO ಕೂಡ ಘೋಷಿಸಿತ್ತು ಆ್ಯಂಟಿ ಕೋವಿಡ್ ಡ್ರಗ್

ಮಧ್ಯಮದಿಂದ ತೀವ್ರವಾದ ಕೊರೋನಾ ಲಕ್ಷಗಳಿರುವ ರೋಗಿಗಳ ಚಿಕಿತ್ಸೆಗಾಗಿ DRDO (ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ) ಅಭಿವೃದ್ಧಿಪಡಿಸಿದ ಓರಲ್ ಡ್ರಗ್‌ನ ತುರ್ತು ಬಳಕೆಗೆ ರಾಷ್ಟ್ರೀಯ ಔಷಧ ನಿಯಂತ್ರಕ ಡ್ರಗ್ಸ್ ಕಂಟ್ರೋಲರ್ ಜನರಲ್ (Drug Controller General of India DGCI) ಶನಿವಾರ ಅನುಮೋದನೆ ನೀಡಿದೆ.

“2-ಡಿಯೋಕ್ಸಿ-ಡಿ-ಗ್ಲುಕೋಸ್ (2-DG) ಯ ಥೆರಪಿ ಚಿಕಿತ್ಸೆಯನ್ನು ತುರ್ತು ಬಳಕೆಗೆ DGCI ಅನುಮತಿ ನೀಡಿದೆ” ಎಂದು DRDO ತಿಳಿಸಿದೆ.

ಮಿಲಿಟರಿಯ ಸಂಶೋಧನೆ ಮತ್ತು ಅಭಿವೃದ್ಧಿಯ ಹೊಣೆ ಹೊತ್ತಿರುವ ಸರ್ಕಾರಿ ಸಂಸ್ಥೆಯಾದ ಡಿಆರ್‌ಡಿಒ ಹೈದರಾಬಾದ್ ಮೂಲದ ಡಾ.ರೆಡ್ಡೀಸ್ ಲ್ಯಾಬೊರೇಟರೀಸ್‌ನ ಸಹಾಯದಿಂದ 2-DG ಅಭಿವೃದ್ಧಿಪಡಿಸಿದೆ.

ಓರಲ್ ಡ್ರಗ್‌ನ್ನ “ಜೆನೆರಿಕ್ ಅಣು (molecule) ಮತ್ತು ಗ್ಲೂಕೋಸ್‌ನ ಎನಲಾಗ್ (analogue) ಆಗಿರುವುದರಿಂದ ಸುಲಭವಾಗಿ ಉತ್ಪಾದಿಸಬಹುದು ಮತ್ತು ಸಾಕಷ್ಟು ಪ್ರಮಾಣದಲ್ಲಿ ಲಭ್ಯವಾಗಬಹುದು” ಎಂದು ಸಂಸ್ಥೆ ಹೇಳಿದೆ.

2-DG ಯೊಂದಿಗೆ ಚಿಕಿತ್ಸೆ ಪಡೆದ ಹೆಚ್ಚಿನ ರೋಗಿಗಳಲ್ಲಿ COVID RT-PCR ರಿಪೋರ್ಟ್ ನಲ್ಲಿ ನೆಗೆಟಿವ್ ಅಂತ ಬಂದಿದೆ ಎಂಬುದು ಸಂಶೋಧನೆ ಹಾಗು ಚಿಕಿತ್ಸೆಯಲ್ಲಿ ಸಾಬೀತಾಗಿದೆ.

ಪರಿಣಾಮಕಾರಿತ್ವದ ಪ್ರವೃತ್ತಿಗಳಲ್ಲಿ, 2-DG ಯೊಂದಿಗೆ ಚಿಕಿತ್ಸೆ ಪಡೆದ ರೋಗಿಗಳು ವಿವಿಧ ಅಂತಿಮ ಬಿಂದುಗಳಲ್ಲಿ ಗುಣಮಟ್ಟದ ಆರೈಕೆ (Standard of Care SoC) ಗಿಂತ ವೇಗವಾಗಿ ರೋಗಲಕ್ಷಣದ ಚಿಕಿತ್ಸೆಯಲ್ಲಿ ಪರಿಣಾಮಕಾರಿಯಾಗಿದೆ ಎಂದು DRDO ತಿಳಿಸಿದೆ.

ಮೆಡಿಕಲ್ ಆಕ್ಸಿಜನ್, ಬೆಡ್ ಗಳು ಮತ್ತು ಕ್ರುಷಿಯಲ್ ಔಷಧಿಗಳ ತೀವ್ರ ಕೊರತೆಯೊಂದಿಗೆ ಅನೇಕ ರಾಜ್ಯಗಳು ಕರೋನವೈರಸ್ ಸೋಂಕಿನ ಎರಡನೇ ಅಲೆಯನ್ನ ಎದುರಿಸುತ್ತಿವೆ. ಇಂತಹ ಸಂದರ್ಭದಲ್ಲಿ ಈ ಔಷಧಿ (Drug) ಪೌಡರ್ ರೂಪದಲ್ಲಿ ಸ್ಯಾಚೆಟ್‌ನಲ್ಲಿ ಬರುತ್ತದೆ, ಇದನ್ನು ನೀರಿನಲ್ಲಿ ಕರಗಿಸಿ ಮೌಖಿಕವಾಗಿ ಕುಡಿಯಲು ನೀಡಲಾಗುತ್ತದೆ. ಇದು ವೈರಸ್-ಸೋಂಕಿತ ಕೋಶಗಳಲ್ಲಿ ಸಂಗ್ರಹಗೊಳ್ಳುತ್ತದೆ ಮತ್ತು ವೈರಲ್ ಸಂಶ್ಲೇಷಣೆ ಮತ್ತು ಶಕ್ತಿಯ ಉತ್ಪಾದನೆಯನ್ನು ನಿಲ್ಲಿಸುವ ಮೂಲಕ ವೈರಸ್ ಬೆಳವಣಿಗೆಯನ್ನು ತಡೆಯುತ್ತದೆ. ಈ ತಿಂಗಳ  ಅಂತ್ಯದವರೆಗೆ ಈ ಔಷಧಿ ಮೆಡಿಕಲ್ ಗಳಲ್ಲಿ ಸಿಗಲಿವೆ.

Advertisement
Share this on...